ಶುಕ್ರವಾರ, ಆಗಸ್ಟ್ 28, 2009

"ಭಗತ್ ಸಿಂಗ್ ಅಂಕ ಕೊಡಿ ಎಂದಿದ್ದ,ನೀಟಾಗಿ ಫೇಲಾಗು ಅಂದಿದ್ದೆ!"



“ಬ್ರಿಟಿಷರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದರೂ ದಕ್ಷತೆಯಿಂದ ಆಳಿ,ಕಟ್ಟು ನಿಟ್ಟಿನ ಕಾನೂನು ಮೂಲಕ ರಾಜ್ಯಭಾರ ಮಾಡುತ್ತಿದ್ದರು.ಆಗ ಕಾನೂನನ್ನು ಯಾರೂ ಮೀರುತ್ತಿರಲಿಲ್ಲ.ಆದರೆ ನಮ್ಮದೇ ಆಡಳಿತ ವ್ಯವಸ್ಥೆ ಬಂದ ಮೇಲೆ ಎಲ್ಲರಿಗೂ ಅವರದ್ದೇ ಆದ ಕಾನೂನು ಆಗಿ ಸ್ವಾತಂತ್ರ್ಯ ಎಂಬುದು ಭೋಗ ವಸ್ತುವಾಗಿ ಬಿಟ್ಟಿದೆ”.
ಈ ಮಾತನ್ನು ಪಂಡಿತ ಸುಧಾಕರ ಚತುರ್ವೇದೀ ಹೇಳುವಾಗ ಮನಸ್ಸಿನಲ್ಲಿ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನವಿತ್ತು..೨೧ ಬಾರಿ ಭಾರತ ದೇಶವನ್ನು ಸುತ್ತಿದ ಅನುಭವಿ ಇವರು.
೧೮೯೭ರಲ್ಲಿ ಬೆಂಗಳೂರಿನ ಬಳೆಪೇಟೆಯಲ್ಲಿ ಜನಿಸಿದ ಇವರು ಅಪ್ಪಟ ಕನ್ನಡಿಗ. ೧೩ ನೇ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳ ಅಧ್ಯಯನ ಮಾಡಿ ನಿಜವಾದ ಅರ್ಥದಲ್ಲಿ “ಚತುರ್ವೇದೀ” ಆಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮಕಲು ಪ್ರೇರಣೇಯಾಗಿದ್ದೇ ಈ ವೇದಗಳಿಂದ.
ಮಹಾತ್ಮ ಗಾಂಧಿಯವರೊಂದಿಗಿನ ಒಡನಾಟ,ಇಂದಿನ ರಾಜಕೀಯ ಬೆಳವಣಿಗೆ,ಸ್ವಾತಂತ್ರ್ಯ ಹೋರಾಟದ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.
ಮಾತಿನ ವಿವರ
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಸಹ ಈಗಿನಂತೆ ಪುಂಡು-ಪೋಕರಿಗಳಿದ್ದರು.ಆದರೆ ನೆಹರು,ಸರ್ದಾರ್ ವಲ್ಲಭಾಯಿ ಪಟೇಲ್ ಮುಂತಾದವರ ಎದುರು ಅದು ಮರೆಯಾಗಿ ಮೇಲೆ ಬರಲು ಆಗಲಿಲ್ಲ.ಈಗಿರುವಂತೆ ಪುಂಡರ ರಾಜ್ಯ ಅಥವಾ ಬಡಿದು ತಿನ್ನುವ ಕಾಲವಂತೂ ಆಗಿರಲಿಲ್ಲ.

ಸಾವಿರ ಹೆಣಗಳ ಅಂತ್ಯಸಂಸ್ಕಾರ:
೧೯೧೯ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನೆಸಿಕೊಂದರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ (ಕೋಟೆ) ಅಲ್ಲಿ ೩-೪ ಅಂತಸ್ಥಿನ ಎತ್ತರದ ಗೋಡೆ ಸುತ್ತಲು ಇದ್ದರೆ ಒಂದೇ ಒಂದು ಬಾಗಿಲು.೧೦ಸಾವಿರಕ್ಕೂ ಹೆಚ್ಚು ಜನ ಸೇರುವಂತ ಜಾಗ.ಎಂಟು ಸಾವಿರ ಜನ ಆದರೂ ಸೇರಿದ್ದರು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ.ಆ ಘಟನೆಯಲ್ಲಿ ಸಾವಿರಕ್ಕೂ ಹೆಚ್ಚುಜನ ಸತ್ತಿದ್ದರು. ಆದರೆ ಅಂದಿನ ಬ್ರಿಟಿಷ್ ಸರಕಾರ ಕೇವಲ ೬೭೦ ಜನ ಮಾತ್ರ ಸತ್ತಿದ್ದಾರೆ ಎಂದು ಹೇಳುತ್ತಿದ್ದರು.ಮಂತ್ರ ಬರುತ್ತಿದ್ದರಿಂದ ಗಾಂಧಿಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು.


ಭಗತ್ ಸಿಂಗ್ ಅಂಕ್ ಕೊಡಿ ಎಂದು ಕೇಳಿದ್ದ:
ಲಾಹೋರ್ ನಲ್ಲಿ ನಾನಿದ್ದಾಗ ಭಗತ್ ನನ್ನ ವಿಧ್ಯಾರ್ಥಿ.ಗಣಿತದಲ್ಲಿ ಪಾಸಾಗಲು ೧೫ ಅಂಕ ಬೇಕಿತ್ತು.ನನ್ನ ಹತ್ತೀರ ಅಂಕ ಕೊಡುವಂತೆ ಹೇಳಿದಾಗ ಲಕ್ಷಣವಾಗಿ ಫೇಲಾಗು ಎಂದು ಹೇಳಿದ್ದೆ. ನನ್ನ ಕೈಯಲ್ಲಿ ಇಂಥ ಕೆಲಸ ಅಸಾಧ್ಯ ಎಂದಿದ್ದೆ.ಆ ಮೇಲೆ ಸ್ವಾತಂತ್ರ್ಯಹೋರಾಟಕ್ಕೆ ಸೇರಿದ.ಭಗತ್ ಸಿಂಗ್,ಸುಖದೇವ್ ಮತ್ತೀತರರು ಕ್ರಾಂತಿಕಾರಿ ಮೂಲಕ ಸ್ವಾತಂತ್ರ್ಯ ಪಡೆಯಲು ಪ್ರಯತ್ನ ಪಟ್ಟರೂ ಗಾಂಧಿ ಮತ್ತು ಅವರ ನಡುವೆ ಯಾವುದೇ ಬಿನಾಭಿಪ್ರಾಯವಿರಲಿಲ್ಲ.
ಬದಲಾವಣೆ ಪ್ರಪಂಚದ್ದು:
ಸ್ವಾತಂತ್ರ್ಯ ಸಿಕ್ಕಿದಕ್ಕೇ ಇಷ್ಟೆಲ್ಲಾ ಬದಲಾವಣೆ ಆಗಿದ್ದಲ್ಲ.ನಮ್ಮನ್ನಾಳುವವರು ಸರಿ ಇದ್ದರೆ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬಹುದಿತ್ತು.ಈಗ ಕೇವಲ ಸ್ವಾತಂತ್ರ್ಯದಿಂದ ೨-೩ ಶೇಕಡ ಅಭಿವೃದ್ಧಿಯಾಗಿರಬಹುದು.ಉಳಿದಿದ್ದು ಜಗತ್ತಿನಂತೆ ಮುಂದುವರೆಯುತ್ತಿದೆ ವಿನ: ನಮ್ಮಿಂದಲೇ ಆಗಿದ್ದಲ್ಲ.ಇಂದಿನ ಅಧಿಕಾರದಲ್ಲಿ ಆತ್ಮವಿಲ್ಲ.ಕೇವಲ ಶರೀರ ಮಾತ್ರ ಆಳುತ್ತಿದೆ.

ಗಾಂಧಿ ಒಡನಾಟ:
೧೯೧೫ರಲ್ಲಿ ಗುರುಕುಲಕ್ಕೆ ಗಾಂಧಿ ಬಂದಾಗ ಮೊದಲ ಪರಿಚಯವಾಯಿತು.ನನ್ನ ಹಿಂದಿಯ ಚುರುಕು ನೋಡಿ ಕರ್ನಾಟಕಿಯದವನ ಅಂದಿದ್ದರು.೧೯೧೭-೧೮ರಲ್ಲಿ ಕುಂಭಮೇಳದಲ್ಲಿ ಬ್ರಾಹ್ಮಣರು ಗಾಂಧಿ ಬಳಿ ಜುಟ್ಟು ಏಕೆ ಬಿಟ್ಟಿಲ್ಲ ಕೇಳಿದಾಗ ಬಿಡುವೆ ಎಂದಿದ್ದರು.ಜನಿವಾರ ಇಲ್ಲದಾಗ ಅದಿಲ್ಲದೆ ಎಷ್ಟೋ ಹಿಂದೂಗಳಿಲ್ಲವೇ ಎಂದಿದ್ದರು.ನನಗು ಅವರಿಗು ಜಗಳವೇ ಆಯ್ತು.


ಕಿವಿಮಾತು:
ಹಿರಿಯರು ಕಷ್ಟಪಟ್ಟು ಸ್ವಾತಂತ್ರ್ಯಗಳಿಸಿಕೊಟ್ಟಿದ್ದು ಸ್ವಚ್ಚಂದಕ್ಕಾಗಿ ಅಲ್ಲ.ಇದನ್ನು ಕಿರಿಯರು ಪ್ರಜೆಗಳು ಗಮನಿಸಬೇಕು. ಸ್ವಾತಂತ್ರ್ಯವನ್ನು ಅಭಿವೃದ್ಧಿಗೆ ಬಳಸುವುದರ ಜೊತೆ, ಕಿರಿಯರಿಗೆ,ಸ್ವಾತಂತ್ರ್ಯದ ಮಹತ್ವವನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ.ಇಲ್ಲದಿದ್ದರೆ ಕೇಲವೇ ವರ್ಷಗಳಲ್ಲಿ “ಸ್ವಾತಂತ್ರ್ಯ” ಪದ ಮರೆಯಾಗಿ ಬಿಡುವ ಭಯವಿದೆ. ಇಲ್ಲದಿದ್ದರೆ ಸ್ವಾತಂತ್ರ್ಯ ಬಂದು ಎಷ್ಟೇ ವರ್ಷ ಆದರೂ ಹೀಗೆ ಇರುವುದರಲ್ಲಿ ಸಂಶಯವಿಲ್ಲ. ನೈತಿಕತೆ ಮೂಡಿ ಒಳ್ಳೆಯ ಅಭಿವೃದ್ಧಿ ದೇಶ ನಿರ್ಮಿಸಲು ಎಲ್ಲರೂ ಪಣತೊಡಬೇಕು.

ಬುಧವಾರ, ಆಗಸ್ಟ್ 19, 2009

ಇವರಾ- ಅವರಾ? ಬಂತು ಉತ್ತರ!


ಸಂಸ್ಕೃತ ಉಪನ್ಯಾಸಕ ಗಣಪತಿ ಹೆಗಡೆ ಹೇಳುತ್ತಿದ್ದರು. ಅವರು ನಮಗಿಂತ ಗಟ್ಟಿ ೧೧೦ ವಯಸ್ಸಿಗಿಂತ ಹೆಚ್ಚಾಗಿದೆ. ಅವರ ಕೆಲಸಗಳನ್ನೇಲ್ಲಾ ಅವರೇ ಮಾಡಿಕೊಳ್ಳುತ್ತಾರೆ ಎಂದೆಲ್ಲಾ..ಕೆಲವು ವ್ಯಕ್ತಿಗಳನ್ನು ನೋಡದ ಹೊರತು ಬೇರೆಯವರು ಹೇಳಿದ್ದನ್ನು ನಂಬುವನಲ್ಲ.ಇರಲಿ ಯಾವುದಕ್ಕೂ ನೊಡೋಣ ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿದ್ದಂತೆ ಅವರ ಮನೆ ಎದುರು ಕಾರು ನಿಲ್ಲುತ್ತಿದ್ದಂತೆ ಮನೆಯಿಂದ ವೃದ್ಧರೊಬ್ಬರು ಬಂದು ಬಾಗಿಲು ತೆಗೆದರು.ಗಣಪತಿ ಹೆಗಡೆ ಇವರೇ ಅವರು ಹೇಳಿದಾಗ ನಂಬಲಾಗಲಿಲ್ಲ. ಅವರಿಗೆ ನಮಸ್ಕಾರ ಮಾಡಿ ಒಳಗೆ ಹೋಗಿ ಹರಟೆಗೆ ಕುಂತುಕೊಂಡೆವು.
ಅವರೇ ಸ್ವಾತಂತ್ರ್ಯ ಹೋರಾಟಗಾರ,ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಚರೀತ್ರೆಯಂತಿರುವ ಪಂಡೀತ ಸುಧಾಕರ ಚತುರ್ವೇದೀ.
ಹುಟ್ಟಿದ್ದು ೧೮೯೭ ರಾಮನವಮಿಯಂದು. ಅವರ ಪ್ರಕಾರ ೧೨೨ ನೇ ವರ್ಷ ನಡೆಯುತ್ತಿದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ೧೧೩ ವರ್ಷ. ಸ್ವಲ್ಪ ವಯಸ್ಸಿನಲ್ಲಿ ಗೊಂದಲವಿದ್ದರೂ ಅಂಥ ಮಹತ್ವದ್ದೆನಲ್ಲ.
ಸುಮಾರು ಒಂದು ತಾಸು ಮೂವತ್ತು ನಿಮಿಷ ಮಧ್ಯೆ ಬಿಡುವಿಲ್ಲದೆ ಹಳೆಯ ಘಟನೆಗಳೆಲ್ಲ ಮೆಲುಕು ಹಾಕಿದ್ದಲ್ಲದೇ ಅಂದು ನಡೆದ ಘಟನಾವಳಿಗಳ ದಿನಾಂಕ,ಇಸ್ವಿ ಸಮೇತ ಹೇಳುತ್ತಿದ್ದರೆ ಹೈಸ್ಕೂಲ್ ಲ್ಲಿ ಸಮಾಜ ವಿಷಯದಲ್ಲಿ ದಿನಾಂಕೇ ನೆನಪಿಲ್ಲದೇ ಒದ್ದಾಡಿದ್ದು ನೆನಪು ಸುಳಿದು ಹೋಯಿತು!.
ವಯಸ್ಸು ನೂರಹತ್ತು ದಾಟಿದರೂ ಮಾತಿನಲ್ಲಿ ಇನ್ನೂ ಸ್ಪಷ್ಟವಾದ ಮಾತು ಕೇಳುತ್ತದೆ.ಮಧ್ಯೆ ಎಲ್ಲೂ ನಿಲ್ಲುವುದಿಲ್ಲ. ಅಂದಿನ ಸ್ವಾತಂತ್ರ್ಯಹೋರಾಟದ ನೆನಪು ಇನ್ನೂ ಹಸಿರಸಿರು.ಬೆಳಿಗ್ಗೆ ೩ ಕ್ಕೇ ಎದ್ದು ಧ್ಯಾನ ೬ರವರೆಗೆ.ನಂತರ ನಿತ್ಯ ಕೆಲಸ ಮುಗಿಸಿ ಸಾರ್ವಜನಿಕರಿಗೆ ಭೇಟಿ.ಸಾಯಂಕಾಲ ೮ಕ್ಕೆ ಏಕಾಂತಕ್ಕೆ.೧೨ ಕ್ಕೆ ನಿದ್ರೆ. ಇದು ಅವರ ನಿತ್ಯ ದಿನಚರಿ.
ಬಾಲ್ಯದಲ್ಲಿ ಕಡುಬಡತನದಲ್ಲಿ ಬೆಳೆದ ಇವರಿಗೆ ೩-೪ದಿನ ಹೊಟ್ಟೆಗೆ ಏನು ಇರುತ್ತಿರಲಿಲ್ವಂತೆ.ಒಂದೋಂದು ಸಲ ನೀರು ಸಿಗದೆ ಪರದಾಡಿದ್ದನ್ನು ಹೇಳುವಾಗ ಇಷ್ಟು ವರ್ಷ ಬದುಕಿದ್ದು ಹೆಮ್ಮೆ ಇತ್ತು.ಆಲೂಗಡ್ಡೆಯನ್ನು ಯಾರಾದರೂ ಕೊಟ್ಟರೂ ಬೇಯಿಸಿಕೊಳ್ಳಲು ಸಾಧನ ಇಲ್ಲದೇ ಪರದಾಡಿದ್ದು, ಬ್ರಿಟಿಷರ ಕಟ್ಟುನಿಟ್ಟಿನ ಕಾನೂನು, ಸಾವಿರ ಹೆಣಗಳನ್ನು ಅಂತ್ಯ ಸಂಸ್ಕಾರ ಮಾಡಿದ್ದು, ಗಾಂಧಿಜಿಯೊಂದಿಗಿನ ಬಾಂಧವ್ಯವನ್ನು ಅವರು ಹೇಳುತ್ತಿದ್ದರೆ ನಮಗೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋದ ಅನುಭವ.ಅವರೊಂದಿಗೆ ಮಾತನಾಡಿದ ಕೆಲ ಸ್ಯಾಂಪಲ್ಗಳು ಮುಂದಿನ ಪೋಸ್ಟ್ ಗೆ.

ಗುರುವಾರ, ಆಗಸ್ಟ್ 13, 2009

ಹಿರಿ ಜೀವಕ್ಕೊಂದು ಸಾಷ್ಟಾಂಗ ನಮಸ್ಕಾರ...


ರಾಜ್ಯದ ಹಿರಿಯಜ್ಜ ಎನ್ನಬಹುದೇನೊ.ದಾಖಲೆಗಳು ಸರಿ ಇದ್ದಿದ್ದರೆ ದೇಶದ ಹಿರಿಯಜ್ಜನೇ ಆಗುತ್ತಿದ್ದರು ಈ ಮಹಾನುಭಾವರು.ಇಂತಹ ಮಹಾನ್ ಚೇತನವನ್ನು ಭೇಟಿ ಮಾಡಿದ್ದು ಅದೋಂದು ಅವಿಸ್ಮರಣಿಯ. ಆ ಅನುಭವ ನಿಮ್ಮೊಂದಿಗೆ.ಅವರಿಗೆ ನೂರಹತ್ತು ವರ್ಷದಾಟಿದೆ.ನಾನಿನ್ನೂ ೨೩ ವರ್ಷದ ಚಿರಯುವಕ!.ಇವರಿಬ್ಬರ ಭೇಟಿ ಹೇಗಿದ್ದಿರ ಬಹುದು?!....ಹಾಗಾದರೆ ಅವರಾರು?!

ಮಂಗಳವಾರ, ಜುಲೈ 28, 2009

ಹಳೆಗೂಡಿಂದ,ಹೊಸ ಹುಡುಗರಿಂದ ಬರುತ್ತಿದೆ ಹೊಸ ಐಡಿಯಾಗಳು



ಕಾಲಾನೆ ಹಾಗೆ. ಅದೇ ತನ್ನ ಮಹಿಮೆಯಿಂದ ಬುದ್ದಿ ಕಲಿಸತ್ತೆ.ಯಾವ ಯಾವ ಸಮಯದಲ್ಲಿ ಏನೇನ್ ಆಗಬೇಕೊ ಅದು ಆಗಲೇ ಬೇಕು. ಅದರಲ್ಲಂತೂ ನಮ್ಮ ಮಾಧ್ಯಮದಲ್ಲಿ ಬದಲಾಗಲೇ ಬೇಕು.ದಿನದಿಂದ ದಿನಕ್ಕೆ ಅಪಡೇಟ್ ಆಗುತ್ತ ಇರಲೇ ಬೇಕು.
ಅದೇ ಕಳೆದ ೧೦ ವರ್ಷದ ಹಿಂದಿನದಿಂದ ನಮ್ಮ ರಾಜ್ಯ ಮಟ್ಟದ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಅದಕ್ಕೂ ಜಿಲ್ಲಾ ಕೇಂದ್ರದಿಂದ,ತಾಲೂಕಾ ಕೇಂದ್ರ ದಿಂದ ಪ್ರಕಟವಾಗೊ ಪತ್ರಿಕೆಗಳ ವಿನ್ಯಾಸ ಹೆಚ್ಚು ಕಡಿಮೆ ಒಂದೇ ಇರುತ್ತಿದ್ದವು.ಅದೇ ಈಗ ನೋಡಿ?!, ಪ್ರತಿಯೊಂದು ಪತ್ರಿಕೆಗಳು ಅದೇಷ್ಟು ಚೆಂದವಾಗಿ (ಕೆಲವೊಂದು ಬಿಟ್ಟು!) ಒಪ್ಪವಾಗಿ ಬರಲು ಪ್ರಯತ್ನಿಸುತ್ತಿವೆ.
ಚಿಕ್ಕವನಿಂದ ಪತ್ರಿಕೆಗಳನ್ನು ನೋಡುತ್ತ ಬೆಳೆದ ನನಗೆ ಎಲ್ಲ ಪತ್ರಿಕೆಗಳು ಸಿದ್ಧ ಸೂತ್ರಕ್ಕೆ ಅಂಟಿಕೊಂಡಿದ್ದವು.ಏನೋ ಕಾಟಾಚಾರಕ್ಕೆ ಸುದ್ದಿ ಹಾಕುವಂತೆ,ಪೇಜ್ ತುಂಬಿಸುವಂತೆ ಇರುತ್ತಿತ್ತು.ಹಾಗಂತ ಆಗಿನ ಓದುಗ ವೃಂದಕ್ಕೆ ಹೇಗೆ ಬೇಕೊ ಹಾಗೇ ಕೊಡುತ್ತಿದ್ದರು ಅನ್ನಿ.ಏಕೆಂದರೆ ಸಾಮಾನ್ಯವಾಗಿ ಹಿರಿಯರೇ ಹೆಚ್ಚಿಗೆ ಓದುಗರಾಗಿದ್ದರು.ಪುಟ ವಿನ್ಯಾಸಕ್ಕೆ ಅಷ್ಟೋಂದು ಮಹತ್ವ ಇರಲಿಲ್ಲ ಬಿಡಿ. ಆದರೆ ಈಗ? ಅದೇ ಕಾಲ ಎಷ್ಟು ದಿನ ಅಂತ ಇರತ್ತೆ...ಕಳೆದ ೫ ವರ್ಷಗಳಿಂದಿಚಿಗೆ ಹುಟ ವಿನ್ಯಾಸದ ಸಕ್ಸಸ್ ಕನ್ನಡಪ್ರಭದಷ್ಟು ಬೇರೆ ಯಾವ ಪತ್ರಿಕೆಗಳಿಗೂ ಸಿಕ್ಕಿಲ್ಲ ಎನ್ನಬಹುದೇನೋ!!.ಸಂಪಾದಕರ ಹುದ್ದೆ ಬದಲಾದ ಕೂಡಲೇ ಅಲ್ಪ ಅವಧಿಯಲ್ಲೇ ಸಾಕಷ್ಟು ಬದಲಾವಣೆ ಪುಟದಲ್ಲಿ ಕಾಣತೊಡಗಿತು.ಅದು ಕೇವಲ ನಗರಕ್ಕೆ ಸೀಮಿತ ಗೊಳಿಸದೇ ಜಿಲ್ಲಾ ಪುಟಗಳಲ್ಲಿ ಅಮೂಲಾಗ್ರ ಬದಲಾವಣೆ ತಂದರು.ಪುಟದ ಮಧ್ಯದಲ್ಲಿ ವಿಶೇಷ ಚಿತ್ರಕ್ಕೆ ಅವಕಾಶ ಕಲ್ಪಿಸಿ ವರದಿಗಾರರಿಗೆ ಪ್ರೋತ್ಸಾಹ ಸಿಕ್ಕುವಂತೆ ಮಾಡಿತು. ೨ ಮತ್ತು ೩ ನೇ ಪುಟದ ಮೇಲ್ಗಡೆ ಕಾರ್ಯಕ್ರಮದ ಚಿತ್ರಕ್ಕೆ ಜಾಗ ಒದಗಿಸಿ ಪುಟಕ್ಕೆ ನೀಡಿದ ವಿನ್ಯಾಸ ಮೆಚ್ಚುವಂತದ್ದು.
ಆದರೆ ಹೊಸ ಆವಿಷ್ಕಾರಗಳ ಸಂಗಮ ವಿಜಯಕರ್ನಾಟಕ ಇನ್ನೂವರೆಗೂ ಮುಖಪುಟದ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಿದೆ.ಟೈಮ್ಸ್ ಗೆ ಬಂದ ಮೇಲೆ ಟೈಮ್ಸ್ ಥರಾನೆ ಮಾಡಿ ನಂತರ ಅದನ್ನು ಕೈ ಬಿಟ್ಟು ಮತ್ತೆ ಬದಲಾವಣೆ ಮಾಡಿ ಈಗ ನಿಂತಿದೆ.ಪ್ರಜಾವಾಣಿಯೂ ಸಾಕಷ್ಟು ಬದಲಾವಣೆ ಕಂಡಿದೆ.ಆದರೆ ಎಲ್ಲರೂ ಕನ್ನಡಪ್ರಭ ದಂತೆ ಜಿಲ್ಲಾಪುಟ ವಿನ್ಯಾಸಗೊಳಿಸಲು ಹೋದರೂ ಸಕ್ಸಸ್ ಸಿಗಲಿಲ್ಲ.
ಆದರೆ ಕನ್ನಡದ ಇಷ್ಟೇಲ್ಲಾ ಪತ್ರಿಕೆಗಳು ಬದಲಾವಣೆ ಜಗದ ನಿಯಮ ಎಂದೂ ಗೊತ್ತಿದ್ದರೂ ಸಂಯುಕ್ತ ಕರ್ನಾಟಕ ಮತ್ತು ಉದಯವಾಣಿ ಅದೇಕೊ ಹಾಗೇ ಸುಮ್ಮನೆ ಕುಳಿತು ಬಿಟ್ಟಿದ್ದವು.ಕನ್ನಡ ಪತ್ರಿಕೆಗಳ ಸೀಮಿತ ಮಾರುಕಟ್ಟೆಗೆ ಪತ್ರಿಕೆಗಳ ವಿನ್ಯಾಸ ಮಾಡಿಸುವುದು ಕಷ್ಟ.ಆದರೂ ಕೈಯಲ್ಲಿರೋ ಸುದ್ದಿಯನ್ನು ಜನರಿಗೆ ತಲುಪಿಸಲು ಪ್ರೇಸೆಂಟೆಶನ್ ಮುಖ್ಯ.(ಪ್ರೇಸೆಂಟೆಶನ್ ಬಗ್ಗೆ ಈ ವಾರದ ಮೀಡಿಯಾ ಮಿರ್ಚಿ ನೋಡಿ)
ಇವರಿಬ್ಬರಲ್ಲಿ ಉದಯವಾಣಿ ಬೆಂಗಳೂರುವಿಭಾಗ ಅಲ್ಪ ಬದಲಾವಣೆಕಂಡರೂ ಮೊದಲಿನಿಗಿಂತ ಹೆಚ್ಚೆನೂ ಬದಲಾಗಿಲ್ಲ.ಆದರೆ ಸಂಯುಕ್ತ ಕರ್ನಾಟಕ ಇತ್ತೀಚಿಗೆ ಹೊಸ ಸಂಪಾದಕರನ್ನು ಕಂಡ ಮೇಲೆ ಅದೇಷ್ಟು ಬದಲಾವಣೆ ಕಂಡಿತು ನೋಡಿ!!.ಕನ್ನಡಪ್ರಭ ಮತ್ತು ವಿಜಯ ಕರ್ನಾಟಕದ ಒಳ್ಳೆ ಅಂಶಗಳ ಸಮ್ಮೀಳಿತ ಹೆಚ್ಚಿಗೆ ಕಂಡರೂ ವಿನ್ಯಾಸಕ್ಕೆ ಮಹತ್ವ ನೀಡಿದೆ.'ಬದಲಾವಣೆ ಜಗದ ನಿಯಮ" ಎಂಬ ಪ್ರೊಮೊ ಗಳು ಬರುತ್ತಿವೆ. ಅಗಷ್ಟ್ ಇಂದ ಒಳ ಪುಟಗಳೂ,ಇಡೀ ಸಂಚಿಕೆ ಬದಲಾಗುವ ಸೂಚನೆ ಪತ್ರಿಕೆಯಲ್ಲಿ ಬರುತ್ತಿವೆ.
ಅದೇ ರೀತಿ ಹೊಸದಿಗಂತ ಕೂಡ ಮರು ವಿನ್ಯಾಸದಲ್ಲಿ ಬರಲಿದೆ.
ಅಷ್ಟಕ್ಕೂ ಈ ವಿನ್ಯಾಸ ಏನಕ್ಕೆ? ೧೫ ವರ್ಷಗಳ ಹಿಂದಿನ ಜನಾಂಗ ಇಂದಿನ ಪ್ರಜೆಗಳು!!.ಅದಕ್ಕೇನೊ ಹಿರಿ ಸ್ಥಾನದಲ್ಲಿರುವ ಕಿರಿ (younger)ತಲೆಗಳು ಅರ್ಥ ಮಾಡಿಕೊಳ್ಳುತ್ತಿರುವುದು.!

ಬುಧವಾರ, ಜುಲೈ 22, 2009

ಇಂಗ್ಲೀಷ್ ಪೇಪರ್ ಅಲ್ಲಿ ಕನ್ನಡ!




ರಾಜ್ಯಕ್ಕೆ,ದೇಶಕ್ಕೆ ಸೇವೆ ಸಲ್ಲಿಸಿದ ಹೆಸರುವಾಸಿಯಾದ ಹಿರಿ ಜೀವಗಳು ಕಣ್ಮರೆಯಾದರೆ ಮಾಧ್ಯಮಗಳಿಗೆ ಅದೊಂದು ಸವಾಲು.ಪತ್ರಿಕೆಯ ಡಿಸೈನ್ ಇಂದ ಹಿಡಿದು ಆ ವ್ಯಕ್ತಿಗಳ ವಿಶೇಷ ವರದಿ,ಚಿತ್ರಗಳ ಪ್ರೇಸೆಂಟೇಶನ್ ಕ್ರೀಯೆಟಿವ್ ಆಲೋಚನೆಗಳ ಸಂಗಮವಾಗಿರುತ್ತದೆ.ಈಗ ಸಾಮಾನ್ಯ ದಿನಗಳಲ್ಲೇ ಹೊಸ ಹೊಸ ವಿನ್ಯಾಸಗಳು ಬರುತ್ತಿರುವಾಗ ವಿಶೇಷ ಸಂದರ್ಭದಲ್ಲಿ ಸ್ವಾಭಾವಿಕ.





















ಗಂಗೂಬಾಯಿ ಹಾನಗಲ್ ಅವರ ನಿಧನದ ಸುದ್ದಿ ಕೊಡ್ಡುವಲ್ಲಿ,ಅದರ ವಿನ್ಯಾಸದಲ್ಲಿ ನಮ್ಮ ಕನ್ನಡ ಪತ್ರಿಕೆಗಳು ಎಲ್ಲೂ ಹಿಂದೆ ಬಿದ್ದಿಲ್ಲ.ಕನ್ನಡಪ್ರಭ,ವಿಜಯಕರ್ನಾಟಕ ಸಾಮಾನ್ಯ ದಿನದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ತಂದರೆ ಊಳಿದವು ಹಾಗೇ ಉಳಿಸಿಕೊಂಡವು. "ಇನ್ನಿಲ್ಲಾ" ಪದ ಎಲ್ಲಾ ಪತ್ರಿಕೆಗಳ ತಲೆ ಬರಹದಿಂದ ನಾಪತ್ತೆಯಾಗಿ ಬೇರೆ-ಬೇರೆ ರೀತಿಯ ಹೆಡ್ಡಿಂಗ್ ಇಂದ ಸುದ್ದಿಗೆ ಮೆರುಗು ಕೊಟ್ಟುಕೊಂಡವು.
ಇಷ್ಟು ದಿನ ಆಂಗ್ಲದಲ್ಲಿ ಕನ್ನಡ ಬರೆಯುವುದು ಸಾಮಾನ್ಯವಾಗಿತ್ತು. DNA ಯ ಈ ರೀತಿ ಪ್ರಯೋಗ ನನಗಂತೂ ಖುಷಿ ನೀಡಿದೆ.ಕನ್ನಡದಲ್ಲಿ ಇಂಗ್ಲೀಷ್ ಬಳಕೆ ಆದಂತೆ ಅಪರೂಪಕ್ಕೆ ಆಂಗ್ಲ ಮಾಧ್ಯಮದಲ್ಲಿ ಈ ರೀತಿ ಪ್ರಯೋಗ ಮುಂದೆ ಆಗಬಹುದೆ?
ನನಗಂತೂ ಇಂದಿನ ಕನ್ನಡಪ್ರಭ ಮತ್ತು ವಿ.ಕ ದ ಪುಟ ವಿನ್ಯಾಸ ಇಷ್ಟವಾಯಿತು.ನಿಮಗೆ?
(ವಿ.ಕ.ದ ಅಂತರಜಾಲ ಆವೃತ್ತಿ ಇನ್ನೂ ಸಿಕ್ಕುತ್ತಿಲ್ಲ.ಆದ್ದರಿಂದ ಅದರ ಚಿತ್ರ ಹಾಕಲು ಆಗಲಿಲ್ಲ..)

ಶನಿವಾರ, ಜುಲೈ 18, 2009

ಮಿಡಿಯಾ ಮಿರ್ಚಿ Vs ಹದ್ದಿನ ಕಣ್ಣು!


ಕಳೆದ ಭಾನುವಾರದ ವಿ.ಕ.ದ ಸಂಪಾದಕರ ಭಾನುವಾರದ ಅಂಕಣದಿಂದ ಮತ್ತು ನಂತರದ ನಮ್ಮ ಬೆನ್ನು ನಮಗೇ ಕಾಣಿಸುತ್ತದೆ ಎಂಬ ವಾಕ್ಯ ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿತ್ತು.ನಿನ್ನೆ ಬೆನ್ನು ಕಾಣಿಸುವವರು ಯಾರು ಎಂದೂ ಹೇಳಿ ಮೊದಲ ಲೇಖನಕ್ಕೆ ಸತಾಯಿಸಿತ್ತು.ಶನಿವಾರ (ಇಂದು) ೯ ನೇ ಪುಟದಲ್ಲಿ ಪ್ರಕಟವಾಗಿದೆ.ಪತ್ರಿಕೆಗಳಲ್ಲಿನ ಮಡಿವಂತಿಕೆ ಹೊರಡಿಸಿದೆ.
ಇದೇ ರೀತಿ ಮಾಧ್ಯಮದಲ್ಲಿನ ಆಗು-ಹೋಗುಗಳ ವಿಮರ್ಶೆಗೆ ಸಂಯುಕ್ತ ಕರ್ನಾಟಕ ಕೂಡ ಚಾಲನೆ ಕೊಟ್ಟಿದೆ.ಸದ್ದು ಗದ್ದಲವಿಲ್ಲದೇ ಇಂದಿನಿಂದ ಆರಂಭಿಸಿದೆ.
“ಮಿಡಿಯಾ ಮಿರ್ಚಿ”ಯನ್ನು ಬರೆಯಲಾರಂಭಿಸಿರುವವರು ಪತ್ರಕರ್ತ ಜಿ.ಎನ್.ಮೋಹನ್.”ಹದ್ದಿನಕಣ್ಣನ್ನ್ನು” ಖಾದ್ರಿ ಅಚ್ಯುತನ್ ಆರಂಭಿಸಿದ್ದಾರೆ.ಹೊಸ ಪ್ರಯೋಗಗಳಿಗೆ ಮನೆಮಾತಾದ ವಿ.ಕ.ದ ಈ ಪ್ರಯೋಗ ಕೂಡ ಸಾಕಷ್ಟು ಕುಟುಹಲಕ್ಕೆ ಕಾರಣವಾಗಿತ್ತು. ಮೊದಲ ಅಂಕಣದಲ್ಲಿ ನವೀರಾದ ನಿರೂಪಣೆ,ಅಲ್ಲೋಂದು ಇಲ್ಲೋಂದು “ಒಗ್ಗರಣೆ”, ಮಾವಿನ ಕಾಯಿ ಗೊಜ್ಜಿಗೆ ಮೆಣಸಿನಕಾಯಿ ನುರಿಯುವಂತೆ ಮೆಣ್ಸಿನಕಾಯಿ ನುರಿದಿದ್ದಾರೆ ಮೋಹನ್.

ಪತ್ರಿಕೆಗಳಲ್ಲಿ ಬೇರೆ ಪತ್ರಿಕೆ ಹೆಸರು ಹಾಕದೇ ಇರುವುದು ವಾಡಿಕೆ.ವಿ.ಕ.ಹಲವಾರು ಬಾರಿ ಇದನ್ನು ಮುರಿದಿದ್ದು ಇದೆ.ಯಾವ್ಯಾವ ಪತ್ರಿಕೆಯಲ್ಲಿ ಏನೇನಾಗಿತ್ತು ಎಂದು ಮೊದಲ “ಖಾಸ್-ಬಾತ್” ನಲ್ಲಿ ಬಹುತೇಕ ಪತ್ರಿಕೆಗಳ ಹೆಸರನ್ನು ಹಾಕಿ ವಿವರಿಸಿದ್ದಾರೆ ಅಂಕಣಕಾರರು.ಆದರೆ ಟಿ೨೦ ಯಂತೆ ಮೊದಲ ದಿನವೇ ಯರ್ರಾ ಬಿರ್ರಿ ಚಚ್ಚಿಲ್ಲ!. ನಿಧಾನವಾಗಿ ಫೀಲ್ಡ್ ಗೆ ಇಳಿಯುವ ಸೂಚನೆಯಿದೆ.ವಿ.ಕದ ಸ್ಪೇಶಾಲಿಟಿನೆ ಇದು ಬಿಡಿ.

ಅದೇ ಸಂಯುಕ್ತದಲ್ಲಿ ಸಂಪಾದಕಿಯ ಪುಟದಲ್ಲಿ “ಹದ್ದಿನ ಕಣ್ಣಿಗೆ” ಜಾಗ ಕೊಡಲಾಗಿದೆ.ಮೊದಲ ದಿನವೇ ಖಾದ್ರಿ ಅಚ್ಯುತನ್ ಅವರು ಬ್ಯಾಟಿಂಗ್ ಗೆ ಇಳಿದು ವರದಿಗಾರಿಕೆಯ ಬಗ್ಗೆ,ಇಂಟರ್ ನೆಟ್ ಬಗ್ಗೆ ವಿವರಿಸಿ,ಕೊನೆಯಲ್ಲಿ ಹೆಡ್ಡಿಂಗ್ ಬಗ್ಗೆ ಕೊಟ್ಟಿದ್ದಾರೆ.ಆದರೆ ಯಾವ ಪತ್ರಿಕೆಯಲ್ಲಿ ಬಂದಿತ್ತು ಎನ್ನುವುದು ಓದುಗಗರಿಗೆ ಕ್ವೀಜ್ ಇದ್ದಹಾಗೆ!.ಇಲ್ಲಿ ಮಡಿವಂತಿಕೆ ಹಾಗೇ ಇದ್ದು ಬಿಟ್ಟಿತೆನೋ ಅನ್ನಿಸುತ್ತದೆ.

ಸಂಯುಕ್ತ ಕರ್ನಾಟಕ ಇತ್ತೀಚಿಗೆ ತನ್ನ ಪುಟ ವಿನ್ಯಾಸ ಬದಲಾಯಿಸಿಕೊಂಡಿತ್ತು.ವಿಜಯ ಕರ್ನಾಟಕಕ್ಕೆ ಹೆಚ್ಚು ಹೋಲಿಕೆಯಾಗುವಂತೆಯೂ ಇತ್ತು.ಈಗ ವಿ.ಕ.ಆರಂಭಿಸಿದ ಹೊಸ ಅಂಕಣದ ಮೊದಲ ದಿನವೇ ತಾನು ಅದೇ ರೀತಿಯ ಅಂಕಣಕ್ಕೆ ಚಾಲನೆ ನೀಡಿದೆ(ಈ ಮೊದಲೆ ಯೋಜಿಸಿದ್ದರೆ ಕ್ಷಮೆ ಇರಲಿ).೨ ಪತ್ರಿಕೆಗಳು ಒಟ್ಟಿನಲ್ಲಿ ಮಾಧ್ಯಮಗಳ ಆಗು ಹೋಗು ತಿಳಿಸಿಕೊಡುತ್ತದೆ.

ಸುದ್ದಿಮನೆ ನಿಂತನೀರಲ್ಲ…ನಿಧಾನವಾಗಿ ಚಟುವಟಿಕೆಗಳು ಆರಂಭವಾಗುತ್ತಿದೆ!.

ಕೊನೆಯದಾಗಿ ಮಿಡಿಯಾ ಮಿರ್ಚಿಯ ಜಿ.ಎನ್.ಮೋಹನ್ ಮತ್ತು ಹದ್ದಿನಕಣ್ಣಿನ ಖಾದ್ರಿ ಅಚ್ಯುತನ್ ಅವರಿಗೂ ಶುಭಾಶಯಗಳು..

ಭಾನುವಾರ, ಮೇ 17, 2009

ಮೊದಲ ಹುಡುಗಿ, ಮೊದಲ ಮೊಬೈಲ್ ಕಳೆದರೆ ಅದೇಷ್ಟು ನೋವು!

ಹದಿಹರೆಯದಲ್ಲಿ ಆಕೆಯ ಮುಗಳ್ನಗೆ,ಕಿರುನೋಟ ಒಂದು ಮಾತು, ಸಾಕೇ ಸಾಕು ಅವಳಲ್ಲಿ ಅನುರಕ್ತನಾಗಲು!
ಆಕೆ ಈತನಲ್ಲಿ ಸ್ವಲ್ಪ ಸ್ಪೇಶಲ್ ಗೆಳೆತನ ಇಟ್ಟುಕೊಂಡು,ಈತನಿಗೆ ಮಹತ್ವ ಕೊಟ್ಟರೆ ಪಾರವೇ ಇಲ್ಲ.
ಆತನಿಗೆ ಆಕೆಯೂ ಮೊದಲಿಗಳು.ಆಕೆಗೂ ಆತ ಮೊದಲಿಗ.ಇಬ್ಬರಿಗೂ ಜೀವನದ ಏನೇನೊ ಕನಸು.
ಇಬ್ಬರಲ್ಲೂ ಖಂಡಿತ ಪ್ರೀತಿ-ಪ್ರೇಮ ಇರಬೇಕೆಂದಿಲ್ಲ.ಆದರೂ ಇಬ್ಬರಿಗೂ ಅವರದ್ದೇ ಲೋಕ.ಆಕೆ ಆತನ ಮಾತಿಗೆ ತಪ್ಪಿ ನಡೆಯಳು.ಈತನು ಅಷ್ಟೆ ಆಕೆಯ ಮಾತನ್ನು ಮೀರನು.ಅವರ ನಡುವಿನ ಗಾಸೀಪ್,ಹುಡುಗಾಟ,ರೇಗಾಟಾ ಎಲ್ಲಾ ಎಷ್ಟು ಮಜಾ!.ಆಕೆಯ ಸಮಾಧಾನ ಈತನಿಗೆ ಸಾಂತ್ವಾನ.
ಎಷ್ಟಂದರೂ ಹುಡುಗಿಗೆ ಬಹು ಬೇಗ ಮದುವೆ ಗೊತ್ತಾಗುತ್ತದೆ.ಖಂಡಿತ ಇವರು ಬೇರೆ ಬೇರೆ ಆಗುತ್ತಾರೆ.ಇಬ್ಬರಿಗೂ ಆ ಮೊದಲ ನೋಟ ಮತ್ತೆ ಬೇರೆಯವರಿಂದ ಸಿಗದು.ಆಕೆಗಿಂತ ಸುಂದರಾದವಳು, ಸಿಕ್ಕರೂ ಆಕೆಯಲ್ಲಿನ ಸಾಂತ್ವಾನ,ಸಿಗದು.ಆಕೆಗೆ ಮೊಗೆದು ಮೊಗೆದು ಕೊಟ್ಟ ಪ್ರೀತಿ ಈಗ ಕಡಿಮೆಯಾಗಿ ಬಿಡುತ್ತದೆ.
ಮೊದಲ ಮೊಬೈಲ್ ಕೂಡ ಮೊದಲ ಹುಡುಗಿಯಂತೆ.ಅದು ಹೇಗೆ ಇರಲಿ ಅದನ್ನ ಬಿಡಲು ಮನಸ್ಸು ಬರದು.ಅದು ಹೈ ರೇಟ್ ನದಾದರೂ,ಕಡಿಮೆ ರೇಟ್ ನದಾದರೂ ಅದು ಕೈಯಲ್ಲಿ ಇರಲೆ ಬೇಕು. ಬೇರೆ ಸೆಟ್ ಕೈಯಲ್ಲಿ ಓಡಾಡಿದರೆ ಹೃದಯ ಹುಡುಗಿಯನ್ನು ಮಿಸ್ ಮಾಡಿಕೊಂಡಂತೆ ಏನೋ ಮಿಸ್ ಮಾಡಿಕೊಳ್ಳುತ್ತಿರುತ್ತದೆ ಕೈ!.ಬೇರೆ ಸೆಟ್ ತೆಗೆದುಕೊಂಡರೂ ಮೊದಲ ಹುಡುಗಿ ಆಗಾಗ ನೆನಪು ಆಗಿ ಕಾಡಿದ ಹಾಗೆ ಮೊದಲ ಮೊಬೈಲ್ ಹಾಗಿತ್ತು ಅಂಥೆಲ್ಲಾ ಕಾಡದೆ ಇರದು.
ಮೊದಲ ಮೊಬೈಲ್ ನಲ್ಲಿ ಜೀವಿತದ ಕಾಲಕ್ಕೆ ಬೇಕೆಂದು ಸಂಗ್ರಹಿಸಿದ್ದ ಹುಡುಗಿ ಪ್ರಪೋಸ್ ಮಾಡಿದ್ದ ಮೆಸೆಜ್
,ತುಂಬಾ ಕಾಂಟೆಕ್ಟ್ ನಂಬರ್ ಇದ್ದರೆ ಆಕಾಶ ಅರ್ಧ ತಲೆ ಮೇಲೆ ಬಿದ್ದ ಹಾಗೆ!
ಸಿಮ್ ಡುಪ್ಲಿಕೇಟ್ ಆದರೂ ತೆಗೆದುಕೊಳ್ಳಬಹುದು, ಅದರೆ ಆ ಸೆಟ್,ಆ ಹುಡುಗಿ!!!
ಮೊದಲ ೨ ವರ್ಷ ಬಳಸಿದ್ದ ಸೋನಿ ವಾಕ್ ಮನ್ ಸೆಟ್ ಅನ್ನು ನಿನ್ನೆ ಕಳೆದುಕೊಂಡಾಗ ಮತ್ತೆ ನೆನಪಾಗಿದ್ದು ಆ ಸುಂದರ ಮುಗಳ್ನಗೆಯ ಆ ಮೊದಲ ಹುಡುಗಿ!!

ಗುರುವಾರ, ಏಪ್ರಿಲ್ 23, 2009

ಅವರದು ಬೇರೆ ಪಕ್ಷ ಸುಟ್ಟು ಬಿಡೋಣ!! :)


ನಮ್ಮ ಮನೆಯಲ್ಲಿ ಮೊದಲಿನಿಂದಲೂ ಚುನಾವಣೆಯ ಕಾವು ಜೋರು.ಅಪ್ಪ ಸಕ್ರೀಯವಾಗಿ ರಾಜಕೀಯದಲ್ಲಿದ್ದಿದ್ದ್ದಕಾರಣದಿಂದ ನಮಗೂ ಚಿಕ್ಕವರಿದ್ದಗಿಂದಲೇ ಒಂಥರಾ ರಾಜಕೀಯ ಹುಚ್ಚು. ಪ್ರಚಾರಕ್ಕೆಲ್ಲಾ ಹೋಗುವಾಗ ಒಂಥರಾ ಮಜಾ. ಜೀಪ್ ಮೇಲೆ ಬಿಟ್ಟಿ ಟೂರ್ ಆಗಿರೊದು!.
ಕಳೆದ ೨ ಚುನಾವಣೆಯ ಹಿಂದಿನ ಚುನಾವಣೆಯನ್ನೆಲ್ಲ ನೋಡಿದರೆ ಎಷ್ಟು ಮಜಾ ಇರೋದು.!ಪ್ರತಿ ಮನೆಯ ಗೋಡೆಯ ಮೇಲೆ ಕರಪತ್ರಗಳ ಕಾರು ಬಾರು ಇರೋದು.!
ಚುನಾವಣೆ ಬಂತೆಂದರೆ ನಮ್ಮನೆಲಿ ಸಮರಾಧನೆಯೆ ಆಗಿರೋದು. ಚುನಾವಣೆ ಮುಗಿಯುವ ತನಕ ಅಮ್ಮನಿಗೆ ಅಡಿಗೆ ಮಾಡುವುದೇ ಕೆಲಸ ಮನೆಯಲ್ಲಿ.ಮನೆಗೆ ಬಹಳ ಜನ ಬಂದು ಹೋಗುತ್ತಿದ್ದರಿಂದ ಅವರಿಗೆ ಆತಿಥ್ಯ ಮಾಡುವುದು ಸಾಮನ್ಯವಾಗಿತ್ತು.
ಒಮ್ಮೆ ಅಪ್ಪ ಮತ್ತಿತರು ಹೋಗಿದ್ದ ಸ್ಥಳಕ್ಕೆ ವಿರೋಧ ಪಕ್ಷದವರು ಮತಯಾಚನೆಗೆ ಬಂದಿದ್ದರು.ಅಲ್ಲೆ ಮದ್ಯದಲ್ಲೇ ಅವರ ವಾಹನ ಕೆಟ್ಟಿ ಹೋಯಿತು.ಅಪ್ಪನಿಗೆ ಪರಿಚಯ ಇದ್ದಿದ್ದರಿಂದ ಅವರ ವಾಹನದಲ್ಲೆ ಸುಮಾರು ೧೦ ಜನರನ್ನು ಕರೆದುಕೊಂಡು ಊಟಕ್ಕೆ ಮನೆಗೆ ಬಂದರು.ಪಕ್ಷ ಬೇರೆ ಬೇರೆ ಆದರೂ ಎಲ್ಲರೂ ಪರಿಚಯ ಇದ್ದುದ್ದರಿಂದ ಕರೆದುಕೊಂಡು ಬಂದಿದ್ದರು.ಮನೆಗೆ ಇಷ್ಟೇಲ್ಲಾ ಜನ ಬಂದಾಗ ನಮಗೆ ಕುತೂಹಲ.ಬಂದವರೆಲ್ಲ ಊಟಕ್ಕೆ ಹೋದ ಮೇಲೆ ಜಗುಲಿಯ ಟೇಬಲ್ ಮೇಲೆ ಇಟ್ಟುದ್ದ ಕರಮತ್ರ,ಮತಯಚನೆ ಪತ್ರ ನೋಡಿದ ನಮಗೆ ಶೋಕ್!! ಅಲ್ಲಿ ಬೇರೆ ಪಕ್ಷದ್ದು!!. ನಾನು ,ಅಣ್ಣ, ಹಾಗೂ ಪಕ್ಕದ ಮನೆಯ ಹುಡುಗರೆಲ್ಲ ಆಟ ಆಡುತ್ತಿದ್ದವರೆಲ್ಲ ನೋಡಿದ್ದೆ ತಡ ಎಲ್ಲರ ಮೈಯೂ ಊರಿದು ಹೋಯಿತು!.ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧವೇ ಮತ ಯಾಚಿಸುತ್ತಾರೆ ಅವರು.ಅಲ್ಲೇ ತುರ್ತು ಸಭೆ ನಮ್ಮದು.ಇವರಿಗೆ ಏನು ಮಾಡಬೇಕು ಎಂಬ ವಿಷಯದ ಮೇಲೆ.ಏನೇ ಮಾಡುವುದಿದ್ದರೂ ೧೫ ನಿಮೀಷದಲ್ಲಿ ಮಾಡಬೇಕು.ಅವರಿಗೆ ಊಟ ಆಗುವುದರ ಒಳಗೆ.೩ ನಿಮಿಷದಲ್ಲೇ ನಮ್ಮ ಸಭೆ ಒಮ್ಮತದ ನಿರ್ಣಯಕ್ಕೆ ಬಂದಿತ್ತು!. ಆ ಕರಪತ್ರಗಳನ್ನೇಲ್ಲಾ ಸುಟ್ಟು ಬಿಟ್ಟರೆ ಅವರಿಗೆ ಮತಯಾಚಿಸಲು ಆಗದು ಎಂದು.! ತಕ್ಷಣ ಕಾರ್ಯಪ್ರವ್ರೂತ್ತರಾದ ನಮ್ಮಪಡೆ, ಒಬ್ಬ ಮೇಣದ ಬತ್ತಿ ಕತ್ತಿಸಿಕೊಂಡು ಬಂದರೆ,ಒಬ್ಬ ಯಾರದರೂ ಬರುತ್ತಾರಾ ಎಂದು ಕಾಯ್ದ.ಉಳಿದವರು ಸ್ವಲ್ಪ ಕರಪತ್ರ ಬಿಟ್ಟು ಹೆಚ್ಚಿನ ಹೆಚ್ಚಿನ ಭಾಗವನ್ನು ಸುಡಲು ಎತ್ತಾಕಿಕೊಂಡು ಬಂದ ಮತ್ತೊಬ್ಬ.ಮನೆಯ ಪಕ್ಕದಲ್ಲೆ ನಾವು ಹುಡುಗರು ಎಲ್ಲವನ್ನು ಹರಿದು ಮೆಟ್ಟಿ ಒಂದೋಂದು ಕಡೆಯಿಂದ ಬೆಂಕಿ ಹಚ್ಚಿದಿವು!.ಹೋಗೆ ಆದಕೂಡಲೆ ಅಲ್ಲಿಂದ ಜಾಗ ಖಾಲಿ ಮಾಡಿದಾಗ ಒಬ್ಬೊಬ್ಬರೆ ಊಟ ಮುಗಿಸಿಕೊಂಡು ಬರುತ್ತಿದ್ದರು.ನಂತರ ಎಲ್ಲರು ಹೊರಡುವಾಗ ಕರ ಪತ್ರ ಇಲ್ಲವೇ ಇಲ್ಲ!ಎಲ್ಲೆ ಹುಡುಕಿದರು ಸಿಗುತ್ತಿಲ್ಲ.ಆಮೇಲೆ ಅವರಲ್ಲೊಬ್ಬ ಹೆಚ್ಚಾಗಿ ವಾಹನದಲ್ಲೇ ಬಿಟ್ಟಿರ ಬೇಕು ಎಂದಾಗ ಎಲ್ಲ ತಲೆ ಅಲ್ಲಾಡಿಸಿ ಹೋರಟರು.ನಮಗೆಲ್ಲ ಅವರನ್ನು ನೋಡುತ್ತಿದ್ದಾಗ ಮೈ ಎಲ್ಲ ಊರಿಯುತ್ತಿತ್ತು.ಆದರೆ ಕೊನೆಯಲ್ಲಿದ್ದ ಒಬ್ಬ ಮನೆ ಪಕ್ಕಕ್ಕೆ ನೋಡುವಾಗ ಸಣ್ಣ ಹೋಗೆ ಕಂಡು ಅದೇನೆಂದು ಕೇಳೆ ಬಿಟ್ಟ! ಅಪ್ಪನಿಗೂ ಆಶ್ಚರ್ಯ.ಅಮ್ಮನಿಗೆ ಗೋತ್ತಗಿತ್ತು.ಅಷ್ಟರಲ್ಲಿ ಅಮ್ಮ,ಹುಡುಗರು ಆಟವಾಡುವಾಗ ಪೇಪರ್ ಸುಟ್ಟಿರ ಬೇಕು ಏಂದಾಗ ನಮ್ಮ ಮುಖದಲ್ಲಿ ಅದೇನೋ ಸಾಧಿಸಿದ ನಗು ಮಿಂಚುತಿತ್ತು!.

****************************************************************************
ಅಂದು ಮತಯಾಚನೆ ಪತ್ರವನ್ನೇ ಸುಟ್ಟಿದ್ದ ನನ್ಗೆ ಇಂದು ಮೊದಲ ಸಲ ಮತದಾನ ಮಾಡಿದ ಚುನಾವಣೆ.ಆಗ ಅಷ್ಟು ಚಿಕ್ಕವರಿದ್ದಾಗ ಕ್ರೀಯಾಶೀಲತೆಯಿಂದ ಇದ್ದ ನನ್ಗೆ ಏಳುವಾಗ ಯಾರು ವೋಟ್ ಹಾಕಲು ಹೋಗುತ್ತಾರೆ ಎಂಬ ಭಾವನೆ ಇತ್ತು.ಆದರೆ ಯಾವುದಕ್ಕೂ ಮೊದಲ ಚುನಾವಣೆ ಹಾಕೋಣ ಎಂದು ಹೋದೆ.ರೋಡ್ ಪಕ್ಕದಲ್ಲೆ ಟೆಬಲ್ ಹಾಕೊಂಡು ಕುಳಿತಿದ್ದರು ಕಾಂಗ್ರೆಸ್ ನವರು!.ನನ್ನ ನಂಬರ್ ಹುಡುಕುವಾಗ ಪಕ್ಕದಲ್ಲಿದ್ದವರಿಗೆ ಅಲ್ಲಿನ ಆಂಟಿ ಒಬ್ಬಳು ನಮ್ಮ ಕಾಂಗ್ರೆಸ್ ಗೆ ವೋಟ್ ಹಾಕಿ ಹೇಳುತ್ತಿದ್ದರಿಂದ ಗೊತ್ತಾಯಿತು.! (ನನಗೆ ಹೇಳಲಿಲ್ಲ.ನಾನು ಆ ಪಕ್ಷಕ್ಕೆ ಹಾಕಲಿಲ್ಲ ಬಿಡಿ!) ನನಗೆ ನನ್ನ ಹೆಸರು ಇದ್ದರೆ ಸಾಕಿತ್ತು!ಇಂಟರ್ ನೆಟ್ ಲಿ ಹುಡುಕಿದರು ಸಿಗದೆ ಇದ್ದಿದ್ದರಿಂದ ಬಂದಿಲ್ಲವೆ ಎಂಬ ಅನುಮಾನ ಬೇರೆ.ಕೊನೆಗು ಸಿಕ್ಕಾಗ ಖುಷಿ.ಸಿದಾ ಹೋದವನೆ ಕ್ಯೂದಲ್ಲಿ ನಿಂತೆ.ಅಲ್ಲಿ ಒಂದು ಕಡೆ ಮಾತ್ರ ದೊಡ್ಡ ಸಾಲಿತ್ತು ಅಲ್ಲೆ ನಿಂತೆ. ೫ ನಿಮಿಷ ಆದ ಮೇಲೆ ಅಲ್ಲೆ ಪಕ್ಕದಲ್ಲಿ ಸಣ್ಣ ಸಾಲು ಕಾಣಿಸಿತು.ಮುಂದಿದ್ದವರ ಬಳಿ ವಿಚಾರಿಸಿದೆ.ಬೂತ್ ಪ್ರಕಾರ ನಿಮ್ಮದು ಅಲ್ಲಿ ಬರತ್ತೆ ಖಾಲಿ ಇದೆ ಹೋಗಿ ಅಂದರು.ಸಿದಾ ಹೋದವನೆ ಎಲ್ಲ ಪ್ರಕ್ರೀಯೆ ಮುಗಿಸಿ ಇಂಕ್ ಹಾಕಿಸಿಕೊಳ್ಳುವಾಗ ಬಲ ಗೈ ನೀಡಿದೆ! ಚುನಾವಣಾಧಿಕಾರಿಗೆ ಅನುಭವ ಇದ್ದಿರ ಬೇಕು! ನಗೆಯಾಡುತ್ತಲೆ ಎಡಗೈ ನೀಡಿ ಸರ್ ಎಂದಾಗ ಎಡಗೈ ನ ಎಲ್ಲ ಬೆಟ್ಟು ಗಳನ್ನು ಆತನ ಟೇಬಲ್ ಮೇಲೆ ಇಟ್ಟೆ.! ಆತ ತೋರು ಬೆರಳಿಗೆ ಮಾತ್ರ ಇಂಕ್ ಹಾಕಿದ!

ಮತ ಹಾಕುವಾಗಲೂ ಎಷ್ಟೋಂದು ಮಜ ಬರತ್ತೆ ಅಲ್ವಾ ಅಂತ ಅನ್ನಿಸಿದ್ದು ಸುಳ್ಳಲ್ಲಾ!!. ಈ ಚುನಾವಣೆ ಅದೆಷ್ಟು ವಿಸ್ಮಯಗಳ ಸಂಗತಿ ಅಂಥ ಈಗ ಅನ್ನಿಸುತ್ತಿದೆ!

ಶನಿವಾರ, ಏಪ್ರಿಲ್ 4, 2009

ಜನರ ಉತ್ಸಾಹಕ್ಕೆ ತಡೆಯಾದ ವ್ಯವಸ್ಥೆ





ಚುನಾವಣಾ ಆಯೋಗ ಇದೇ ಮೊದಲ ಸಲ ವಿಧಾನಸಭ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೋದು ಮತದಾರ ಸೇವಾ ಕೇಂದ್ರ ತೆರೆದು ಮತದಾರರಿಗೆ ಒಂದೇ ಸೂರಿನಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿ,ಸಾಕಷ್ಟು ಪ್ರಚಾರ ಕೊಟ್ಟರೂ ಅಲ್ಲಿನ ವ್ಯವಸ್ಥೆಯ ಲೋಪದಿಂದ ಚುನಾವಣಾ ಆಯೋಗಕ್ಕೆ ಬಂದ ಹೋಗಳಿಕೆಯೂ ಮುಚ್ಚಿ ಹೋಯಿತು.



ನಿಜ, ಇಂಥದೊಂದು ವ್ಯವಸ್ಥೆ ಬೇಕಿತ್ತು.
ಜನ ಸಾಮಾನ್ಯರು ತಮ್ಮ ಕೆಲಸ ಎಲ್ಲ ಬಿಟ್ಟು ಮತದಾರರ ಗುರುತಿನ ಪತ್ರ ಪಡೆಯಲೂ ಖಂಡಿತ ಹೋಗಲಾರ.ಆದಷ್ಟು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಮತ್ತು ಎಲ್ಲರೂ ಚುನಾವಣಾ ಗುರುತು ಪತ್ರ ಹೊಂದುವುದರಿಂದ ಅಕ್ರಮ ಮತದಾನ ತಡೆಗಟ್ಟಬಹುದು ಎಂಬ ಮಹತ್ವಕಾಂಕ್ಷೆಯಿಂದ ಆರಂಭಿಸಿದ್ದ “ಮತದಾರರ ಸೇವಾ ಕೇಂದ್ರ” ಸಮರ್ಥವಾಗಿ ಕೆಲಸ ಮಾಡಿದವೆ?
ಚುನಾವಣಾ ಆಯೋಗ ಏನೋ ಜಾಹೀರಾತು ಮೂಲಕ ಜನರಲ್ಲಿ ಇದರ ಸದುಪಯೋಗ ಪಡೆಯುವಂತೆ ಜಾಗೃತಿ ಏನೋ ಮೂಡಿಸಿತು.ಜನ ಸಾಮಾನ್ಯರರಿಗೆ ಅನುಕೂಲವಾಗುವ ಸಮಯ,ಭಾನುವಾರವೂ ತೆರೆದಿದ್ದರಿಂದ ಬಹಳಷ್ಟು ಮಂದಿ ಇದರ ಸದುಪಯೋಗ ಪಡೆದುಕೊಂಡರು. ಇಂಥದೊಂದು ವ್ಯವಸ್ಥೆ ಮಾಡಿ ಜನ ಸಾಮಾನ್ಯರಿಗೆ ಸಾಕಷ್ಟು ಹತ್ತಿರವಾದರೂ ಮತದಾರರ ಸೇವ ಕೇಂದ್ರಗಳಲ್ಲಿನ ಕೆಲವೊಂದು ವ್ಯವಸ್ಥೆ ಜನರಿಂದ ಬಂದ ಹೋಗಳಿಕೆಯೂ ಕೇಳದಂತೆ ಮಾಡಿ ಬಿಟ್ಟಿತು.
ಈ ಹಿಂದೆ ಚುನಾವಣಾ ಸಮಯದಲ್ಲಿ ನೂತನ ಅರ್ಜಿ ಭರ್ತಿ,ಹೆಸರು,ವಿಳಾಸ ಬದಲಾವಣೆ ಗೆ ಹೀಗೆ ನಾನಾ ಸಲ ಓಡಾಡ ಬೇಕಿತ್ತು.ನಂತರ ಅರ್ಜಿಯಲ್ಲಿ ಪರಿಶಿಲಿಸಿ ಹೆಸರು ಬಂದ ಮೇಲೆ ಫೋಟೊ ತೆಗೆಸಿಕೊಂಡು ಕೈ ಗೆ ಗುರುತಿನ ಚಿಟಿ ಬಂದರೆ ಏನೋ ಪಡೆದ ಸಂತೋಷ. ಆದರೆ ಮತದಾರ ಸೇವಾ ಕೇಂದ್ರದಲ್ಲಿ ನೀವು ಒಮ್ಮೆ ಅರ್ಜಿ ತುಂಬಿ ಕೊಟ್ಟರೆ, ಒಂದುವಾರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಬಂದಿರುತ್ತದೆ.ಸೀದಾ ಫೋಟೊ ತೆಗೆಸಿಕೊಂಡು, ೫ ನಿಮಿಷ ಕಾಯ್ದರೆ ಕೈಯಲ್ಲಿ ಮತದಾರರ ಗುರುತಿನ ಪತ್ರ ಹಾಜರ್!!. ಇಂಥದೊಂದು ಮಹತ್ವಕಾಂಕ್ಷೆಯೋಂದಿಗೆ ಚುನಾವಣಾ ಅಯೋಗ ಆರಂಭಿಸಿತ್ತು ಈ “ಮತದಾರರ ಸೇವಾ ಕೇಂದ್ರ” ವನ್ನು.
ಆದರೆ ಈ ಮತದಾರರ ಸೇವಾ ಕೇಂದ್ರಗಳು ಮೊದಲಿಗೆ ಹೆಸರು ಮಾಡಿದರೂ ನಂತರ ಬರೀ ತೆಗಳಿಕೆಗೆ ಸೀಮಿತವಾಗಿಬಿಟ್ಟವು.ಮೊದ ಮೊದಲು ಜನರ ಸಂಖ್ಯೆಯೂ ಕಡಿಮೆ ಇತ್ತು.ಅಲ್ಲಿನ ಸೀಮಿತ ಸಿಬ್ಬಂಧಿಗಳ ಅನುಗುಣವಾಗೆ ಜನರು ಬರುತ್ತಿದ್ದರಿಂದ ಎಲ್ಲವೂ ನಿಗದಿ ಮಾಡಿದಂತೆ ಕೆಲಸ ಕಾರ್ಯ ನಡೆಯುತ್ತಿತ್ತು.ಪ್ರಚಾರ ಸಿಕ್ಕಂತೆ ಮತ್ತು ಕೊನೆಯ ದಿನ ಹತ್ತಿರ ಬಂದಂತೆ ಜನರ ಹರಿವು ಹೆಚ್ಚಿತು.ಇಲ್ಲೇ ಚುನಾವಣಾ ಆಯೋಗ ಹಾದಿ ತಪ್ಪಿದ್ದು. ಫೇ್ಬ್ರವರಿ ೧೮ ರಿಂದಲೇ ಸಾಕಷ್ಟು ಜನರು ಬರುತ್ತಿದ್ದರೂ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲಿಲ್ಲ.[ಮಾರ್ಚ ೩೧ ಕೊನೆಯ ದಿನಾಂಕ ಆಗಿತ್ತು.].
ತಂತ್ರಜ್ನಾನ ಸಾಕಷ್ಟು ಬೆಳೆಯುತ್ತಿದ್ದರೂ ಚುನಾವಣಾ ಆಯೋಗ ಇದರ ಬಗ್ಗೆ ತಲೆನೆ ಕೆಡಿಸಿಕೊಳ್ಳದೇ ಇದ್ದಿದ್ದು ಸಾಕಷ್ಟು ಪ್ರಮಾದಕ್ಕೆ ಕಾರಣವಾಯಿತು.ಇದರ ಬಿಸಿ ನೇರವಾಗಿ ಅನುಭವಿಸಿದ್ದು ಮತದಾರರ ಸೇವಾ ಕೇಂದ್ರದ ಅಧಿಕಾರಿಗಳು!!.
ಜನರಿಂದ ಅರ್ಜಿ ತೆಗೆದುಕೊಂಡ ಮೇಲೆ ಅದನ್ನು ಪರಿಶೀಲಿಸಿ ,ಸಲ್ಲಿಸಿದ ದಾಖಲೆ ಸರಿಯಾಗಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಬರುತ್ತದೆ.ಅಲ್ಲಿ ಹೆಸರು ಬಂದ ಮೇಲೆ ಅಲ್ಲಿನ ಸೀರಿಯಲ್ ನಂಬರ್ ತೆಗೆದುಕೊಂಡು ಫೋಟೊ ತೆಗೆಸಿಕೊಳ್ಳ ಬೇಕು.ಅಲ್ಲಿನ ಅಧಿಕಾರಿಗಳು ಒಂದು ವಾರ ಬಿಟ್ಟು ಬಂದು ಪಟ್ಟಿಯನ್ನು ಪರಿಶೀಲಿಸಿ ಎಂದು ಹೇಳುತ್ತಿದ್ದರು.ಆದರೆ ವಾರದ ಬಳಿಕ ಹೋದರೆ ಬಹಳಷ್ಟು ಜನರ ಹೆಸರೆ ಬಂದಿರುತ್ತಿರಲಿಲ್ಲ.ಮತ್ತೆ ೪ ದಿನ ಬಿಟ್ಟು ಬನ್ನಿ ಎಂಬ ಉತ್ತರ.ಆಮೇಲೂ ಬಂದೇ ಬರುತ್ತಿತ್ತು ಎಂಬುದು ಗ್ಯಾರಂಟಿ ಇಲ್ಲ. ಆಮೇಲೆ ಮತ್ತೋಮ್ಮೆ ಅರ್ಜಿ ಸಲ್ಲಿಸಿ ಎಂಬ ಸಿದ್ಧ ಉತ್ತರ ಬರುತ್ತಿತ್ತು. ಅಲ್ಲಿನ ಅಧಿಕಾರಿಗಳು ಪ್ರಿಂಟ್ ಔಟ್ ತೆಗೆದ ಕಾಗದದಲಿ ಲೀಸ್ಟ್ ನಲ್ಲಿ ಹೆಸರು ಬಂದಿದೆಯೋ ಇಲ್ಲವೋ ಎಂದು ಹುಡುಕುತ್ತಿದ್ದರು.ಸಾವಿರಾರು ಹೆಸರಿರುವ ಲೀಸ್ಟ್ ನಲ್ಲಿ ಒಬ್ಬೋಬ್ಬರದ್ದೆ ಹುಡುಕುತಾ ಹೋದರೆ ಎಲ್ಲರದ್ದೂ ಹುಡುಕಲು ಅದೇಷ್ಟು ಸಮಯ ಬೇಕಾಗ ಬಹುದು? ಅದೇ ಯಾವುದಾದರೂ ಸಾಫ್ಟ್ ವೇರ್ ಬಳಿಸಿದ್ದರೆ ಮತದಾರರ ಹೆಸರು ಟೈಪ್ ಮಾಡಿದ ಕೂಡಲೆ ಅದರ ವಿವರ ಕೊಡುವಂತಿದ್ದರೆ ಜನರ ಸಮಯವೂ ಉಳಿತಾಯವಾಗುತ್ತಿತ್ತು.ಉರಿಬಿಸಿಲಿನಲ್ಲಿ ಲೈನ್ ನಲ್ಲಿ ಇದ ಜನ, ತಮ್ಮೇಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದರೆ ಇಲ್ಲಿನ ಹಳೆಯ ವ್ಯವಸ್ಥೆಗೆ ಬಲಿ ಆದರೆ ಸುಮ್ಮನಿರುತ್ತರೆಯೇ? ಕೆಲ ಸೇವಾ ಕೇಂದ್ರಗಳಿಗೆ ಕಲ್ಲನ್ನು ಹೋಡೆದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವೆಡೆ ವಿಳಾಸ ಬದಲಾದರೆ, ಚಿತ್ರವೂ ಬದಲಾಯಿತು.ಇಲ್ಲಿ ಜನರು ತಪ್ಪಿದರೆನೊ ಎಂಬ ಅನುಮಾನ.ಫೊಟೊ ತೆಗೆಯುವಾಗ ಕಂಪ್ಯೂಟರ್ ನಲ್ಲಿ ನಮ್ಮ ವಿವರ ಎಲ್ಲ ಇರುತ್ತದೆ. ಅಲ್ಲಿ ಪರಿಶಿಲಿಸಿದ್ದರೆ ಜನರು ಈ ಕಷ್ಟದಿಂದ ಪಾರಾಗಬಹುದಿತ್ತೆನೋ?!

ಮುಂದಿನ ಸಲವಾದರೂ ಎಲ್ಲ ಕಷ್ಟಕೋಟಲೆ ಗಳನ್ನು ಮೀರಿ ಮತದಾರರ ಗುರುತಿನ ಪತ್ರ ಎಲ್ಲರ ಬಳಿ ಅವರದ್ದೇ ಇರಲಿ ಎಂದು ಆಶಿಸೋಣವೆ?!

ಬುಧವಾರ, ಮಾರ್ಚ್ 25, 2009

ಮರೆತರೂ ಮರೆಯಲಾಗದ ಆ ಕಣ್ಣೀರ ಹನಿಯ ಪತ್ರ!

ಹಾಯ್ ಕೆಟ್ಟಹುಡುಗ,
ಇದೇನು? ಇಷ್ಟು ಪುಟ್ಟ ಡೈರಿ ಕೊಟ್ಟು ಆಟೋಗ್ರಾಫ್ ಬರಿ ಅಂತಿಯಲ್ಲ?ನಮ್ಮ ಗೆಳೆತನ ೨ ವರ್ಷದ್ದಾದರೂ ನಮ್ಮ ೨೦ ವರ್ಷಗಳ ಭಾವನೆಗಳನ್ನು,ಹಳೆಯ ಘಟನೆಗಳನ್ನು ,ಮನದ ಮಾತನ್ನುಹಂಚಿಕೊಂಡಿದ್ದೆವಲ್ಲ ಅದನ್ನೇಲ್ಲಾ ಈ ಪುಟ್ಟ ಡೈರಿಯಲ್ಲಿ ಹೇಗೆ ಇಳಿಸಲೋ?ನಿನ್ನ ಈ ಡೈರಿಯ ಮುಖಪುಟದಲ್ಲಿ ನಿನ್ನ ಮುದ್ದಾದ ಅಕ್ಷರದಲ್ಲಿ ಆಟೋಗ್ರಾಫ್ ಅನ್ನೋದು ಮೆಮೊರಿಚಿಪ್ ನಂತೆ ಬೇಕಾದಾಗ ಓದಿ ಮೆಲುಕು ಹಾಕಬಹುದು ಅಂತ ಬರೆದಿದ್ದಿಯಲ್ಲ ,ನಮ್ಮ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರೆ ನಿನಗೆ ಸಿಗುವುದು ಸಂತೋಷಕ್ಕಿಂತ ಹೆಚ್ಚು ನೋವು.
ಅಂದು ೧-೦೭-೨೦೦೪ ಡಿಗ್ರಿಯಲ್ಲಿನ ಮೊದಲ ದಿನ.ನಾನು,ಅನುಪಮ ಬಸ್ ಸ್ಟ್ಯಾಂಡ್ ಗೆ ಬಸ್ ಪಾಸ್ ತೆಗೆದುಕೊಳ್ಳಲು ಬಂದಾಗ ನೀನು ಕೊಟ್ಟ ಸ್ವೀಟ್ ಸ್ಮೈಲ್ ಇಂದೂ ನೆನಪಿದೆ.ಮುಂದೆ ಈ ಹುಡುಗ [ಅಪರಿಚಿತ?] ನನ್ನ ಜೀವನದಲ್ಲಿ ಇಷ್ಟೋಂದು ಸಂತೋಷ,ಪ್ರೀತಿ,ಸ್ನೇಹ,ಆತ್ಮಿಯತೆ ಅಷ್ಟೇ ನೋವನ್ನು ಕೊಡುತ್ತಾನೆಂದು ಎಂದಿಗೂ ಭಾವಿಸಿರಲಿಲ್ಲ.ಬೇಜಾರಾಗಬೇಡ,ಅತ್ಯಂತ ಫ್ರಾಂಕ್ ಆಗಿ ಬರಿತಿದ್ದಿನಿ.ನಾನಂತೂ ಯಾರೊಂದಿಗೂ ಹಂಚಿಕೊಳ್ಳಲಾಗದಂಥ ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಂಡಿದ್ದೆನೆ.ನಂಗೆ ನನ್ನ ಫ್ಯಾಮಿಲಿ ಬಿಟ್ಟರೆ ನನ್ನ ಲೈಫ ನಲ್ಲಿ ನಿನಗೆ ೨ ನೆ ಸ್ಥಾನ ಅಂಥ ಹೇಳಿದ್ದೆ.ಇಗಲೂ ಇದೆ.ಮುಂದೆಯೂ ಇರುವುದು.
ಡಿಯರ್ ಪುಟ್ಟ,
ನನಗೆ ಜೀವನದಲ್ಲಿ ಸ್ನೇಹದ ಬಗ್ಗೆ ನಂಬಿಕೆನೆ ಇರಲಿಲ್ಲ.ನಮ್ಮ ಜೀವನದಲ್ಲಿ ನಮಗೆ ನಾವೇ ಎನ್ನುವಂಥ ಭಾವ ಇತ್ತು.ಆದರೆ ನನಗೆ ಕಷ್ಟ ಬಂದಾಗ ನಾನು ಅಸಹಾಯಕತೆಯಿಂದ ಕೆಲವೊಮ್ಮೆ ಕಣ್ಣಿರಿಟ್ಟಾಗ ,ನನ್ನ ಕಣ್ಣಿರನ್ನು ತಡೆದು ಸಾಂತ್ವನ ಹೇಳಿದ ನೀನು ನನ್ನಲ್ಲಿ ಮತ್ತೆ ಗೆಳೆತನ ಎಂಬ ಶಬ್ದಕ್ಕೆ ಹೊಸ ಅರ್ಥ ನೀಡಿದೆ.ನಾನು ಜೀವನದಲ್ಲಿ ಇಟ್ಟುಕೊಂಡಿರುವ ಗುರಿ ಹಾಗೂ ಅದಕ್ಕಿರುವ ಅಡೆತಡೆಗಳನ್ನು ನಿನಗೆ ತಿಳಿಸಿದಾಗ ನನ್ನಲ್ಲಿ ಧೈರ್ಯ ತುಂಬಿ ಕಾನ್ಫಿಡೆನ್ಸ್ ಎನ್ನುವ ಸ್ಪೂರ್ಥಿ ನೀಡಿದೆ.
ಆದರೆ ಇದು ಎಷ್ಟು ದಿನ ಅಂಥ ಗೊತ್ತಿಲ್ಲ.ನಿನಗೆ ಗೊತ್ತಲ್ಲ ನಮ್ಮಲ್ಲಿ ಆಗಾಗ ಒಂದಲ್ಲ ಒಂದು ಕಾರಣಕ್ಕೆ ಏನಾದರೂ ಭಿನ್ನಾಭಿಪ್ರಾಯ ಬರತ್ತೆ ಅಥವಾ ಕಾರಣವೇ ಇಲ್ಲದೇ ದೂರ ಆಗ್ತಿವಿ. [ಈಗಿರುವ ಹಾಗೆ]
Our Friendship is not like a Pesi
“Yeh dil maange more”
Not like wills
“Made for each other”
But its Like LIC
“Zindagee ke saath bhi”
Zindagee ke baad bhi”
ಎಂದವ ನೀನು ಈಗೆಕೆ ನನ್ನಿಂದ ದೂರ ಹೋಗ್ತಿದ್ದಿಯಾ?ಗೊತ್ತಿಲ್ಲ.ನನ್ನಿಂದ ಏನೇ ತಪ್ಪಾದರೂI am extremely sorry ಪುಟ್ಟ.Please dnt avoid .ಮಾತಲ್ಲದಿದ್ದರೂ ಸರಿ ಒಂದು ಸ್ಮೈಲ್ ಕೊಡು.
Frankly speaking ನನಗೆ ನಿನ್ನ ಮೇಲೆ ಬಹಳ ಬೇಜಾರಾಗಿದೆ.ಇಷ್ಟೋಂದು?? ಆಗಿರೋ ನೀನು ಕಾಲೇಜಿನ ಎನ್.ಎಸ್.ಎಸ್. ಕ್ಯಾಂಪ್ ನಲ್ಲಿ ಒಂದು ಸಣ್ಣ [?] ಕಾರಣಕ್ಕಾಗಿ ನನ್ನನ್ನು ದ್ವೇಷಿಸುತ್ತಿದ್ದಿಯಲ್ಲ? ಒಂದು ಕಾಲದಲ್ಲಿ ನೀನು ಕಂಡರೆ ಆಕ್ಸಿಜನ್ ಸಿಕ್ಕ ಜೀವಿಯಂತೆ ಹಿರಿ ಹಿರಿ ಹಿಗ್ಗುತ್ತೇನೆ ಎಂದವ ,ಈಗ ನನ್ನನ್ನು ಕಂಡರೆ ಉಸಿರು ಕಟ್ಟಿ ಸಾಯುತ್ತೇನೋ ಎಂಬಂತೆ ದೂರ ಓಡ್ತಿಯಲ್ಲ,ನನ್ನನ್ನು ಅಷ್ಟೋಂದು ದ್ವೇಷಿಸುತ್ತಿಯಾ?ಡಿಯರ್ at least ಇದಕ್ಕೆ ಕಾರಣನಾದ್ರು ಹೇಳು.ನೀನೊಬ್ಬನೇ ನನಗೆ ಈ ವರ್ಷ ಹೊಸ ವರ್ಷಕ್ಕೆ ವಿಶ್ ಮಾಡದೆ ಇದ್ದವ.ನೀನೊಬ್ಬನೇ ಸಂಕ್ರಾಂತಿಗೆ ಸಿಹಿ ಕೊಡದವ.ಯಾಕೋ ಹುಡುಗ ನನ್ನ ಮೇಲೆ ಇಷ್ಟು ಸಿಟ್ಟು.?ನಾನು ಕೇವಲ ತಮಾಶೆಗೆಂದು ಹೇಳಿದ ಮಾತನ್ನು ನೀನು ಇಷ್ಟು ಸೀರಿಯಸ್ ಆಗಿ ತಗೋತಿಯ ಅಂತ ಗೊತ್ತಿರಲಿಲ್ಲ.ನನಗೂ ಬೇಜಾರಾಗಿದೆ ಯಾಕಂದ್ರೆ ಯಾರೇ ನನ್ನಿಂದ ದೂರ ಆದರೂ ನನ್ನ ಜೊತೆಗೆ ನನ್ನ ಪುಟ್ಟ ಇರುತ್ತಾನೆ ಎಂಬ ಭರವಸೆ ಇತ್ತು.ಯಾವಗ ನೀನು ನನ್ನನ್ನು ಗ್ರೂಪ್ ನಿಂದ ದೂರ ಮಾಡಿದ್ದಿಯೊ ಆಗ ನನಗೆ ಸಹಿಸಲಾಗಲಿಲ್ಲ.ಅದಕ್ಕಾಗಿ ಹಾಗೆ ಮಾತಾಡಿದ್ದೆ.
I am extremely sorry
ಮತ್ತೆ ಅದೇ ಹಳೆ ಕಥೆ ಕೊರಿತಿದ್ದಿನಿ ಅಂಥ ಅನ್ಕೊ ಬೇಡ.ನೀನೆ ಹೇಳಿದ್ದೆ ಹಳೆಯ ಘಟನೆಗಳನ್ನು ಮೆಲುಕು ಹಾಕಲು ಆಟೋಗ್ರಾಫ ಬೇಕು ಎಂದು.ಈ ಘಟನೆಯನ್ನು ನಾನೆಂದು ಮರೆಯಲ್ಲ.ಅದೇ ೨೮,೩೧ ಡಿಸೆಂಬರ್ ೨೦೦೬.My last day with you. ಅದರ ನಂತರ ನಿನ್ನಲ್ಲಿರುವ ನನ್ನ ಸ್ಥಾನವನ್ನು ನಾನು ಕಳಕೊಂಡೆನೆನೊ ಅನ್ಸತ್ತೆ.ಅದೇನೇ ಇರಲಿ ನಾನು ಬರೆದಿದ್ದು ಲೆಟರ್ ಅಂಥ ತಿಲ್ಕೋಬೇಡ,ನನ್ನ ನೆನಪಾದಾಗ ಓದು. ಬರೀ ಕಹಿ ಘಟನೆ ಬರೆದಿದ್ದೇನೆ ಅಂದ್ಕೊ ಬೇಡ.ನಿನ್ನೊಂದಿಗೆ ಮರೆಯಲಾಗದ ಸಂದರ್ಭಗಳನು ಕಳೆದಿದ್ದೆನೆ.ನನ್ನ ಎಲ್ಲ ಸುಖ ದು:ಖಗಳನ್ನು ಹಂಚಿಕೊಂಡಿದ್ದೆನೆ.ನಿನಗೆ ಇಷ್ಟ ಇತ್ತೋ ಇಲ್ಲವೋ ನನ್ನ ಎಲ್ಲ ಖಾಸಗಿ ವಿಷಯಗಳನ್ನು share ಮಾಡಿದ್ದೆನೆ. ನಿನಗೆ ಕೊರೆತ ಅನ್ನಿಸಬಹುದು.ಇರಲಿ ೨ ವರ್ಷಗಳ ಕಾಲ ಈ ಕೊರೆತ ಸಹಿಸಿಕೊಂಡಿದ್ದೀಯಲ್ಲ ಥ್ಯಾಂಕ್ಸ್ ಅ ಲೊಟ್.ನೀನು ನನಗೆ ಅನೇಕ ವಿಷಯಗಳಲ್ಲಿ ಬಹಳಷ್ಟು ಸಹಾಯ ಮಾಡಿದ್ದಿಯ.ನಾನಿಲ್ಲ ಅಂದರೆ ನನ್ನ ಮನೆಯಲ್ಲಿನವರ ಜೊತೆ ಸಂಭಂದ ಕಳೆದುಕೊಳ್ಳ ಬೇಡ.ನಿನ್ನ ಪ್ರೀತಿಯ ಅಮ್ಮ,ತಂಗಿ ನಿನಗೆ ಇದ್ದಾರೆ.ನಿನ್ನ ಸ್ನೇಹ ನನಗೆ ಅಪೂರ್ವ ಅನುಭವ ನೀಡಿತು.ನಿನ್ನಂತಹ ಸ್ನೇಹ ,ಪ್ರೀತಿ ಆತ್ಮಿಯತೆ ಎಲ್ಲರಿಗೂ ಸಿಗಲಿ ಅಂಥ ಬೇಡಿಕೊಳ್ಳುತ್ತೆನೆ.ನಿನ್ನೊಂದಿಗೆ ನಿನ್ನ ಅಮ್ಮನನ್ನೂ ಹಂಚಿಕೊಂಡೀದ್ದೆಯಲ್ಲ,ಇದಕ್ಕೆ ನಾನು ಆಭಾರಿಯಾಗಿದ್ದೆನೆ.ನ್ನಗು ನಿನಗು ಜಗಳ ಆಗಿ ಮಾತು ಬಿಟ್ಟು ೨-೩ ದಿನ ನಂತರ ಇನ್ನೂ ಕಂಟ್ರೋಲ್ ಮಾಡಲು ಆಗಲು ಸಾಧ್ಯವೇ ಇಲ್ಲ ಎಂದಾಗ ಅಮ್ಮನ ಹತ್ತಿರ “ಆಂಟಿ ನನ್ನೋಂದೊಗೆ ಮಾತಾಡೊದಿಲ್ಲ” ಅಂಥ ಕಂಪ್ಲೇಂಟ್ ಮಾಡಿದಾಗ ಅವರು ನನ್ಗೆ ಹೇಳಿದ ಸಮಾಧಾನ ಈಗಿನಂಥ ಸಂದರ್ಭದಲ್ಲಿ ನಾನೇ ನೆನೆಸಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೆನೆ.ನಾನು ಅತ್ಯಂತ ಗೌರವ ಕೊಡುವ ಅಮ್ಮಂದಿರಲ್ಲಿ ಅವರೂ ಒಬ್ಬರೂ.ಅವರ ಮನಸ್ಸನ್ನು ಎಂದಿಗೂ ನೋಯಿಸ ಬೇಡ.
ಇನ್ನೂ ಬರೀತಾ ಹೊದರೆ ಬೇಕಾದಷ್ಟು ವಿಷಯಗಳಿವೆ.ಅದೇ ಹೇಳಿದೆನಲ್ಲ,ಈ ಹರಿದುಹೋಗುವ ಹಾಳೆಯಲ್ಲಾಗಲಿ ನಿನ್ನ ಪುಟ್ಟ ಡೈರಿಯಲ್ಲಾಗಲಿ ಈ ಭಾವನೆಗಳನ್ನು ಹಂಚಿಕೊಳ್ಳಲು ಅಸಾಧ್ಯ.
ಸ್ನೇಹಿತರ ಸುವರ್ಣಾಕ್ಷರ ಹೊತ್ತ ಪುಸ್ತಕಕ್ಕೆ ಅದೆಂಥಾ ಮಾಂತ್ರಿಕ ಶಕ್ತಿ.ದು:ಖವಾದಾಗ ಮರುಗದಿರು ಮನವೇ,ನೋವಾದಾಗ ನಾ ಇರುವೆ ನಿನಗೆ ಎಂಬ ಸಾಂತ್ವನ .ಅಶಾಂತಿಯಿಂದ ಪ್ರಕ್ಷುಬ್ದ ಗೊಂಡ ಮನಕ್ಕೆ ತಂಗಾಳಿ,ನಿರಾಸೆಯ ಮಡುವಲ್ಲಿದ್ದಾಗ ಎಚ್ಚರವಾಣಿ.ಆತಂಕ ಗೊಂಡಾಗ ಒಂದಿಷ್ಟು ಭರವಸೆ,ಬಾಳು ಕಹಿಎನಿಸಿದಾಗ ಡಬ್ಬದಿಂದ ತೆಗೆದು ಚಪ್ಪರಿಸುವಂತೆ ಹಾಳೆಯಲ್ಲಿ ಬಚ್ಚಿಟ್ಟ ಸಿಹಿಗಳ ಸವಿ.ಇದೇ ಆಟೋಗ್ರಾಫ್.
ಡಿಯರ್ ,ಇಷ್ಟೋಂದು ಕಹಿಯಾಗಿ ಬರೆದಿದ್ದೇನೆ ಅಂದ್ಕೋ ಬೇಡ. ಸಣ್ಣ ಪುಟ್ಟ ವಿಷಯಗಳು ಜೀವನದಲ್ಲಿ ಅತೀವ ನೋವನ್ನುಂಟು ಮಾಡುತ್ತದೆ.ಉ.ದಾ:ಒಬ್ಬ ವ್ಯಕ್ತಿ ಗುಡ್ಡದ ಮೇಲೆ ಕುಳಿತುಕೊಳ್ಳಬಹುದು ಆದರೆ ಸೂಜಿಯ ಮೇಲಲ್ಲ.
ನೆನಪಿರಲಿ,ನಿನ್ನ ಜೀವನದ ಯಶಸ್ಸು ನಿನ್ನದಾಗಲಿ.ಮನಸ್ಸು ಸಂತೋಷದಿಂದಿರುವಾಗ ,ದು:ಖದಲ್ಲಿರುವಾಗ ನಿನ್ನ ಸುಖ ಮತ್ತು ದು:ಖವನ್ನು ಹಂಚಿಕೊಳ್ಳಲು ಸದಾ ಈ ಗೆಳತಿ ನಿನ್ನೊಂದಿಗೆ ಇರುವಳು ಎಂಬುದು ನೆನಪಿರಲಿ.ಪ್ರತಿಯೊಂದು ಫ್ರೇಂಡ್ ಶಿಪ್ ಡೆ ಮತ್ತು ಬರ್ತ್ ಡೆ ವಿಶ್ ಸ್ ಗೋಸ್ಕರ ಕಾಯಿತ್ತಿರು
ಕೇವಲ ೫ ಕಣ್ಣಿರು ಹನಿಗಳೊಂದಿಗೆ
ನಿನ್ನ ಅಂತರಂಗದ ಗೆಳತಿ
..........

ಮಂಗಳವಾರ, ಮಾರ್ಚ್ 24, 2009

ಅಂದು ಸಗಣಿ ಬಾಚಿದ್ದ ಬಂಗಾರಪ್ಪಗೆ ಈಗ ವಾಸನೆ ಬರುತ್ತಿದೆ!


ಮುಪ್ಪಿನ ಕಾಲದಲ್ಲಿ ಮನುಷ್ಯನಿಗೆ ತಾನು ಏನು ಮಾಡುತ್ತೆನೆ ಎಂದು ತಿಳಿಯುವುದಿಲ್ಲವಂತೆ.ತನಗೆ ವಯಸ್ಸು ೭೫ ದಾಟಿದರೂ ತಾನಿನ್ನೂ ಇಪ್ಪತ್ತೈದರ ಹುಡುಗ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗುವ ಬಂಗಾರಪ್ಪನವರಿಗೆ ಮುಪ್ಪಿನ ಕಾಲದಲ್ಲಿ ಬುದ್ದಿ ಭ್ರಮಣೆ ಆಗಿದೆಯೇ ಎಂದು ಜನರು ಆಡಿಕೊಳ್ಳುವಂತೆ ವರ್ತಿಸುತ್ತಿರುವುದು ಅವರ ಬಗ್ಗೆಯೇ ಜನರಲ್ಲಿ ಸಂಶಯ ಮೂಡುತ್ತಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ,೭ ಬಾರಿ ಎಂ.ಎಲ್.ಎ ಆಗಿ,೨ ಬಾರಿ ಲೋಕಸಭಾ ಸದಸ್ಯರಾಗಿ ರಾಜಕೀಯದ ಸಮಾಜಸೇವೆಯ ಮುಖವಾಡ ಹೊತ್ತಿರುವ ಬಂಗಾರಪ್ಪ ತಾವು ಸೇವೆ ಸಲ್ಲಿಸಿರುವ ಖುರ್ಚಿಗಾದರೂ ಗೌರವ ಸಲ್ಲಿಸಬಹುದಿತ್ತು.ಅದನ್ನ ಬಿಟ್ಟು ಮಂಗಗಳ ರೀತಿ ತನ್ನ ಲಾಭಕ್ಕೆ ಒಂದೊಂದು ಪಕ್ಷವನ್ನು ಅಪ್ಪಿಕೊಳ್ಳುವ ಬಂಗಾರಪ್ಪನವರಿಗೆ ಅದು ಎಲ್ಲಿಂದ ಬರ ಬೇಕು?
ರಾಜಕೀಯದಲ್ಲಿರುವವರೆಲ್ಲರೂ ಏನು ಸಾಚಾ ಅಲ್ಲವೇ ಅಲ್ಲ.ಆದರು ಮನಸಲ್ಲಿ ನಿಯತ್ತು ಎನ್ನುವ ಭಾವ ಇದ್ದರೆ ನಾವು ಮಾಡುವ ಕೆಲಸಕ್ಕೊಂದು ಅರ್ಥ. ಕೇವಲ ೫ ವರ್ಷಗಳಹಿಂದೆ ಬಂಗಾರಪ್ಪ ಎಲ್ಲಿ ಎಂದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಎಂದು ಎಲ್ಲ ಜನ ಹೇಳುತ್ತಿದ್ದರು!!.ಬಿ.ಜೆ.ಪಿ ಯಿಂದ ಸಮಾಜವಾದಿ ಪಕ್ಷಕ್ಕೆ ಬಂದಾಗ ಚುನಾವಾಣಾ ಸಮಯದಲ್ಲೂ ಸರಿ ಇದ್ದ ಬಂಗಾರಪ್ಪ, ನಂತರ ಮಠಕ್ಕೆ ಬಿ,ಜೆ.ಪಿ. ಜೆ.ಡಿ.ಎಸ್. ಮುಖಂಡರೂ ಬಂದ ಮೇಲೆ ಮಠದ ವಿರುದ್ದ ಸಿಟ್ಟೆದ್ದರು.ಇದೋಂದೆ ಕಾರಣವಲ್ಲ,ಸಾಗರ,ಸೊರಬ,ಶಿಕಾರಿಪುರ ಮುಂತಾದ ಕಡೆ [ಶಿವಮೊಗ್ಗದಲ್ಲಿ ೭ ರಲ್ಲಿ ೬ ಬಿ.ಜೆ.ಪಿ] ಬಿ.ಜೆ.ಪಿ. ಮೇಲುಗೈ ಸಾಧಿಸಲು ಮಠವೇ ಕಾರಣ, ತನಗೆ ಸಪೋರ್ಟ್ ಇಲ್ಲ,ಮಖಾಡೆ ಮಲಗಲು ಮಠವೇ ಕಾರಣ ಎಂಬುದು ಬಂಗಾರಪ್ಪ ಮಠದ ಮೇಲೆ ಸಿಟ್ಟಾಗಲು ಕಾರಣ.ರಾಜಕೀಯದಲ್ಲಿ ಸೋತಾಗ ಸಿಟ್ಟು ಸ್ವಾಭಾವಿಕ ಬಿಡಿ!!.
೪ ಗೊಡ್ಡು ಆಕಳು ಎಮ್ಮೆ,ಕರು ಸಾಕಿಕೊಂಡು ಫೋಟೊ ತೆಗೆಸಿಕೊಳ್ಳುವ ಸ್ವಾಮಿ ಎನ್ನುವ ಬಂಗಾರಪ್ಪ, ಅದೇ ಶ್ರೀಗಳಿಂದ ಇಂದು ಪ್ರತಿಯೊಬ್ಬನ ಬಾಯಿಯಲ್ಲಿ ಗೋವಿನ ಹೆಸರು ಬರುತ್ತಿರುವುದು ಮರೆತರೆ?ಭಾರತೀಯ ಗೋವಂಶ ಇದೇ ಎಂಬುದನ್ನೇ ಮರೆತ್ತಿದ್ದ ನಮಗೆ ನಮ್ಮಲ್ಲೂ ಅನೇಕ ಭಾರತೀಯ ತಳಿಗಳು ಇವೆ ಎಂದು ತೋರಿಸಿ,ಅದನ್ನು ಸಂರಕ್ಷಿಸಲು ಪ್ರೇರೆಪೀಸಿ,ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳು ಶ್ರೀಮಠದಲ್ಲಿ ಇರುವ ಸಾವಿರ ಗೋವಿನ ಸಗಣಿ ಬಾಚುತ್ತ ಇರಲು ಸಾಧ್ಯವೆ?ಕೆಲವೇ ವರ್ಷಗಳ ಹಿಂದೆ ಅದೇ ಹಸುಗಳನ್ನು ಮೈದಡವಿ ಮಾತಾಡಿಸುತ್ತಿದ್ದ ಬಂಗಾರಪ್ಪನವರಿಗೆ ಈಗ ಅದೇ ಹಸುಗಳು ಗೊಡ್ಡಿನ ತರ ಕಾಣಿಸುತ್ತಿರುವುದು ವಿಪರ್ಯಾಸ.
ರಾಮಚಂದ್ರಾಪುರ ಮಠದ ಸ್ವಾಮಿಜಿ ಕೈಲಿ ವೊಟಿಲ್ಲ, ಅಲ್ಲಿ ಕೋಟಿಗಟ್ಟಲೆ ಹಣ ಏನಕ್ಕೆ ಕೊಟ್ಟಿರಿ ಎಂದು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಳುವ ಮಾತೆ?ನಿವೇನೋ ವೋಟಿಗಾಗೇ ನಿಮ್ಮ ಕಾಲದಲ್ಲಿ ದುಡ್ಡು ಹೆಂಡ ಹಂಚಿರಬಹುದು,ಎಲ್ಲವೂ ನಿಮ್ಮತರನೇ ಆಗ ಬೇಕೆಂದರೆ ಹೇಗೆ?
ಮಠ,ಸ್ವಾಮಿಜಿ,ಜಾತಿ ಹೀಗೆ ಯಾವುದಾದರೊಂದು ವಿವಾದ ಹೇಳಿಕೆ ನೀಡಿ ತಾವಿನ್ನೂ ಬದುಕಿದ್ದೇವೆ ಎಂದು ಜನರ ತಲುಪುವ ಮಾಧ್ಯಮ ಬಿಟ್ಟು ಒಳ್ಳೆ ಕೆಲಸದಿಂದ ದಿನ ನೆನೆಯುವಂತಾದರೆ ಜೀವನ ಸಾರ್ಥಕ ತಾನೆ?

ಅಷ್ಟಕ್ಕೂ ಈಗ ಜನ ಬದಲಾಗುತ್ತಿದ್ದಾರೆ.ಎಲ್ಲ ಜಾತಿಯ ವೋಟು ಅವರ ಜಾತಿಗೆ ಮಾತ್ರ ಬರದೇ ಇರುವುದು ಹೆಚ್ಚುತ್ತಿರುವುದು ಶಿಕ್ಷಿತರಲ್ಲಿ ಹೆಚ್ಚುತ್ತಿದೆ.ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳ ಮೇಲಾದರೂ ಬಡತನವನ್ನು ಸಾಕಿ ತಮ್ಮ ವೋಟ್ ಬ್ಯಾಂಕ ಮಾಡಿಕೊಂಡಿರುವ ರಾಜಕಾರಣಿಗಳಿಂದ ಬಡವರು ಇನ್ನೂ ನರಕಯಾತನೆಯಲ್ಲೇ ಕೊಳೆಯುತ್ತಿದ್ದಾರೆ.ಗೋವಿನ ಸಗಣಿಯನ್ನಾದರೂ ತೆಗೆದು ಜೀವನ ಸವೆಸುತ್ತಿರುವ ಶೂದ್ರರು ಅದರಿಂದಾದರೂ ಜೀವನ ಮಾಡುತ್ತಿರುವುದು ಬಂಗಾರಪ್ಪನವರಿಗೆ ನೋಡಲು ಸಾಧ್ಯವಿಲ್ಲವೆನೋ?

ಮುಗಿಸುವ ಮುನ್ನ:
"ತಾಕತ್ತಿದ್ದರೆ ರಾಮಚಂದ್ರಾಪುರ ಮಠದ ಶ್ರೀಗಳು ನನಗೆ ಟಿಕೇಟ್ ತಪ್ಪಿಸಲಿ-ಬಂಗಾರಪ್ಪ"
ಟಿಕೇಟ್ ನಿಮಗೆ ಸಿಗಬೇಕು;ನಿಮ್ಮನ್ನ ಮಕಾಡೆ ಕೆಡಗಿ ಮಜಾ ತಗೋ ಬೇಕು ಕಣ್ಲಾ ಅಂದ್ರಂತೆ ಶಿವಮೊಗ್ಗದ ಜನ!.

ಮಂಗಳವಾರ, ಮಾರ್ಚ್ 10, 2009

ಪಕ್ಷವೇ ಮರೆತು ಹೋಗಿದೆ.. ನೆನಪಿಸಿಕೊಡಿ ಪ್ಲೀಸ್!

ಮ್ಮ ರಾಜಕೀಯ ನಾಯಕರೆನಿಸಿಕೊಂಡವರು ತಮ್ಮ ಅನುಕೂಲಕ್ಕೆ ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಹಾರುತ್ತ ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ತಾವು ಯಾವ ಪಕ್ಷದಲ್ಲಾದರೂ ಇದ್ದೇವೆ?ಅದರ ತತ್ವ ಸಿದ್ದಾಂತ ಏನು ಏನ್ನುವುದನ್ನು ಮರೆಯುತ್ತಿದ್ದಾರೆಯೇ?

ರಾಜಕೀಯ ಚದುರಂಗದಾಟದಲ್ಲಿ ಪಕ್ಷಾಂತರಕ್ಕೆ ಅಡೆತಡೆ ಇದ್ದರೂ ರಂಗೋಲಿ ಕೆಳಗೇ ನುಸುಳುವ ಅಭ್ಯಾಸ ಇರುವ ಮುಖಂಡರಿಗೆ ಅಧಿಕಾರ ಮತ್ತು ಪ್ರಚಾರ ಇಲ್ಲದಿದ್ದರೆ ಹಲ್ಲಿಲ್ಲದ ಹಾವು!.
ತಾವು ಹುಟ್ಟಿನಿಂದ ಒಂದು ಸಿದ್ಧಾಂತದಲ್ಲಿ ಬೆಳೆದು,ಅದರಲ್ಲಿ ಯಾವುದೇ ಲಾಭವಿಲ್ಲ ಎಂದು ಮತ್ತೊಂದು ಬೇರೆ ಸಿದ್ಧಾಂತ ಇರುವ ಪಕ್ಷಕ್ಕೆ ಹಾರುವ,ಅಲ್ಲೂ ಅದೇ ರೀತಿ ಆದರೆ ಮತ್ತೆ ಬೇರೆದಕ್ಕೆ ಹಾರುವ ಖ್ಯಾತಿ ನಮ್ಮ "ಮುಖಂಡರದ್ದು" ತಾವಿಟ್ಟಿರುವ ಸಿದ್ಧಾಂತದಲ್ಲೇ ಅವರಿಗೆ ನಂಬಿಕೆ ಇಲ್ಲ ಅಂದ ಮೇಲೆ ಅವರು ಯಾರ ಮೇಲೆ ತಾನೆ ಸಂಬಿಕೆ ಇಡ ಬಲ್ಲರು?
ತನಗೆ ಅಧಿಕಾರ ನೀಡಲಿಲ್ಲ,ಮೂಲೆಗುಂಪು ಮಾಡಿದರು ಎಂದೆಲ್ಲ ರಂಪ ಮಾಡಿದ ಸಿದ್ದರಾಮಯ್ಯನವರ ಉದಾಹರಣೆಯನ್ನೇ ತೆಗೆದುಕೊಂಡರೆ ನೀನ್ನೆ [೯/೦೩/೨೦೦೯] ಮೈಸೂರಿನಲ್ಲಿ ಕಾಂಗ್ರೆಸ್ ಪರ್ ಬಹಳ ದಿನದ ನಂತರ ಪ್ರಚಾರಕ್ಕೆ ಬಂದಾಗ ನೆರೆದ ಮತದಾರರೆದುರು ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಸೋಲಿಸಿ ಅಂದು ಬಿಟ್ಟರು!!. ನಂತರ ಎಲ್ಲರೂ ಗೊಳ್ಳ್ ಎಂದು ನಕ್ಕಾಗ ತಮ್ಮ ತಪ್ಪು ಅರಿವಾಗಿ ಬಿ.ಜೆ.ಪಿಯನ್ನು ಸೋಲಿಸಿ ಎಂದು ಪುನ: ನುಡಿದರು.ಈ ಹಿಂದೆ ಬೇರೆ ಬೇರೆ ಪಕ್ಷದಲ್ಲಿ ಇದ್ದಾಗ ಹೀಗೆ ಹೇಳುತ್ತಿದ್ದುದ್ದು ಬಾಯಿ ಪಾಠವಾಗಿ ಬಿಟ್ಟಿದೆ ಎಂದ ಒಗ್ಗರಣೆ ಅವರ ಬಾಯಲ್ಲೆ!.

ತಾವು ಯಾವ ಪಕ್ಷದಲ್ಲಿ ಇದ್ದೇವೆ ಎನ್ನುವಷ್ಟು ಮರೆತು ಬಿಡುವಾಗ ಅವರು ಏನಕ್ಕೆ ಬೇರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದೇ ಚಿಂತೆಗಿಡುಮಾದುತ್ತದೆ.

ಇದು ಕೇವಲ ಸಿದ್ದರಾಮಯ್ಯ ಅವರೊಂದೆ ಅಲ್ಲ.ತಾವು ಮತ್ತೋಂದು ಪಕ್ಷದಲ್ಲಿದ್ದಾಗ ಬೇರೆ ಪಕ್ಷವನ್ನು ಬೈಯುವುದು ಸಾಮಾನ್ಯ.ಆದರೆ ನಾವು ಕೆಕ್ಕರಿಸಿ ಉಗಿದ ಮನೆಗೆ ಆಶ್ರಯಕ್ಕೆ ಹೋಗುತ್ತೆವೆ ಅಂದರೆ ನಮ್ಮಲ್ಲಿ ನೈತಿಕತೆಯೇ ಇಲ್ಲ ಎಂದರ್ಥ ಅಲ್ಲವೆ?

ಮತ್ತೆ ಲೋಕಸಭಾ ಚುನಾವಣೆ ಬಂದಿದೆ.ನಿದ್ರೆಯಿಂದ ಎಳುತ್ತಿದ್ದಾರೆ ನಮ್ಮ ಮುಖಂಡರು.ನೈತಿಕತೆ ಇಲ್ಲದ ರಾಜಕೀಯದಲ್ಲಿರುವ ನಮ್ಮ ರಾಜಕಾರಣಿಗಳಿಗೆ ನೈತಿಕತೆ ಅವಶ್ಯಕತೆ ಇಲ್ಲ ಬಿಡಿ.

ಬುಧವಾರ, ಫೆಬ್ರವರಿ 25, 2009

ಶೋಭಾ ಯಡ್ಡಿಯ ಹಸ್ತ ಮುಟ್ಟಲು ಹೋಗಿರಲಿಲ್ಲ!!ಆದರೆ...


ದಿನಾಂಕ ೨೪ ರ ದಿನ ಪತ್ರಿಕೆ ಓದಿದವರಿಗೆ ಖಂಡಿತ ಶಾಕ್ ಹೊಡೆಸಿಕೊಳ್ಳದೆ ಇದ್ದವರು ಕಡಿಮೆ!!.ಕಾರಣ ಗೋಕರ್ಣ ಶ್ರೀ ಮಹಾಭಲೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶೋಭಾ.. ಹಿಂದೂ ಸಂಪ್ರದಾಯದಲ್ಲಿ ಗಂಡ ಪೂಜೆ ಮಾಡುವಾಗ ಅದರ ಪಾಲು ತನಗೂ ಸಿಗಲಿ ಎಂದು ಹಸ್ತ ಮುಟ್ಟಿಕೊಳ್ಳುತ್ತಾಳೆ ಹೆಂಡತಿ.!ಫೋಟೊ ತೆಗೆಯುವಾಗಿನ "ಆ ಸೆಕೆಂಡಿಗೆ" ಸಿಕ್ಕಿ ಹಾಕಿಕೊಂಡ [?!] ಶೋಭಾ ಯಡಿಯೂರಪ್ಪನವರ ಹಸ್ತ ಮುಟ್ಟಲು ಹೋಗಿದ್ದು ಜಗಜ್ಜಾಹೀರಾಯಿತು!!

ಯಡಿಯೂರಪ್ಪನವರ ಪಕ್ಕ ಇದ್ದ ಶೋಭಾ ಆ ಗಂಗ ಜಲದ ಪಾತ್ರೆಯನ್ನು ಇತರರಂತೆ ಮುಟ್ಟಿ ಪಾವನ ಆಗಲು ಕೈ ಹಾಕಿದರು. ಕುಮಾರಿ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಎಂದರೆ ಎಲ್ಲರೂ ಏನೋ ಗುಸು ಗುಸು ಆರಂಭಿಸುತ್ತಾರೆ.ಆಗಾಗ ನಡೆಯುವ ವಿದ್ಯಮಾನಗಳು ಇದಕ್ಕೆ ಸಾಕ್ಷಿ ಒದಗಿಸಿರುತ್ತದೆ."ಏನಿಲ್ಲಾ... ಏನಿಲ್ಲಾ... ನಮ್ಮಿಬ್ಬರ ನಡುವೆ ಏನಿಲ್ಲ "ಎಂದು ಕಾಮೇಂಟ್ ಕೊಟ್ಟರೂ ಅಲ್ಲೊಂದು ಇಲ್ಲೊಂದು ನಿದರ್ಶನಗಳು ಸಿಗುತ್ತಲೆ ಇರುತ್ತದೆ.ಅವರಲ್ಲಿ ಅಂಥ ಭಾವನೆ ಇರದಿದ್ದರೂ ನೋಡುಗರ ಕಣ್ಣಿಗೆ ಹಾಗೆ ಕಾಣುತ್ತಾರೆ.!
ಇರ್ಲಿ ಬಿಡಿ ನೋಡಿ ನಮಗೂ ಅಭ್ಯಾಸ,ಕೇಳಿಸಿಕೊಂಡು ಅವರಿಗೂ ಅಭ್ಯಾಸವಾಗಿ ಬಿಟ್ಟಿದೆ!.ನಿನ್ನೆ ಆಗಿದ್ದು ಅದೇ.. ಪಾಪ ಶೋಭಾ ಕರಂದ್ಲಾಜೆ ಗೋಕರ್ಣದ ಮಹಾಬಲೇಶ್ವರನಿಗೆ ಯಡಿಯೂರಪ್ಪ ಇತರರು ಪೂಜೆ ಸಲ್ಲಿಸುತ್ತಿದ್ದಾಗ ಆತ್ಮ ಲಿಂಗಕ್ಕೆ ಗಂಗಾ ಜಲವನ್ನು ಅಭಿಷೇಕ ಮಾಡುವಾಗ ಯಡಿಯೂರಪ್ಪನವರ ಪಕ್ಕ ಇದ್ದ ಶೋಭಾ ಆ ಗಂಗ ಜಲದ ಪಾತ್ರೆಯನ್ನು ಇತರರಂತೆ ಮುಟ್ಟಿ ಪಾವನ ಆಗಲು ಕೈ ಹಾಕಿದರು.ಆದರೆ ಪೋಟೋ ಸ್ವಲ್ಪ ಬೇಗ ತೆಗೆದಿದ್ದರಿಂದ ಅಥವಾ ಅದೇ ಟೈಮ್ ಗೆ "ಕೈ" ಹಾಕಿದ್ದರಿಂದ ಯಡಿಯೂರಪ್ಪನವರ ಹಸ್ತ ಮುಟ್ಟಿದಂತೆ ಕಾಣಿಸಿಕೊಂಡಿತು!! ಬೆಳ್ ಬೆಳಿಗ್ಗೆ ಪೇಪರ್ ಓದಿದವರೆಲ್ಲಾ ನೋಡಿ ಏನೇನೊ ಹೇಳಿಕೊಂಡು ನಕ್ಕಿದ್ದು ಸುಳ್ಳಲ್ಲ!!

ಸೋಮವಾರ, ಫೆಬ್ರವರಿ 23, 2009

ನೋಡಿ ಮಾಡರ್ನ್ ಮಂಗಗಳು!

ಮಂ ನಿಂದ ಮಾನವ ಎಂದು ನಮ್ಮ ವಿಜ್ನಾನ ಸಾರಿ ಸಾರಿ ಹೇಳಿದರೆ,ಅದನ್ನು ಯಥಾವತ್ತಾಗಿ ನಿರೂಪಿಸಿತ್ತಿರುವವರು ನಾವು!!.ಮಂಗನಚೇಷ್ಟೆ ಯನ್ನು ಕೆಲವು ಬಾರಿ ನಾವೇ ಮಂಗಗಳಿಗಿಂತ ಚೆನ್ನಾಗಿ ಅಭಿನಯಿಸುತ್ತೆವೆನೋ!!

ಕಾಲಚಕ್ರ ಉರುಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ.ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಹಳೆಯ ಗಾದೆ ಕಾಲಚಕ್ರ ಉರುಳುವಿಕೆಗೆ ಸಾಕ್ಷಿ!!.ಅದಕ್ಕೇನೋ ಮಾಡರ್ನ್ ಮಂಗಗಳು ಮನುಷ್ಯನಿಗೆ ಸಾಕಷ್ಟು ಸಡ್ಡು ಹೊಡೆಯುತ್ತಿದೆ. ಪ್ರಾಣಿ ಸಂಗ್ರಾಹಾಲಯ,ಪ್ರವಾಸಿತಾಣಗಳಲ್ಲಿ ಮನುಷ್ಯನ ಕೀಟಲೆಗಳನ್ನು ಮೀರಿ ಸಾಕಷ್ಟು ಬೆಳೆದು ಬಿಟ್ಟಿದೆ ಮಂಗಗಳು.
ದಿನಕಳೆದಂತೆ ಮನುಷ್ಯ ರೇಡಿಮೇಡ್ ಸಾಮಗ್ರಿಗೆ ಅಂಟು ಕೊಂಡಿದ್ದರೆ ಮಂಗಗಳು ಅದರ ರುಚಿ ನೋಡಿ ಬಿಟ್ಟಿವೆ!! ಅವುಗಳಿಗೂ ಅದೂ ರುಚಿಸಿ ಅದೇ ಬೇಕು ಎಂದು ಹಟ ಮಾಡುತ್ತವೆ!!ಾವುಗಳಿಗು ಫಂಟಾ,ಯಾಪ್ಪಿ ಕೋಳ್ಡ್ ಡ್ರೀಂಕ್ಸ್ ಸಿಕ್ಕರೆ ಅವುಗಳ ಜೀವಕ್ಕೆ ಪಾರವೇ ಇಲ್ಲ! ಅದರ ಕೆಲವು ಸ್ಯಾಂಪಲ್ ನಿಮಗಾಗಿ!!




















  • ನಿತಿನ್
  • ಭರತ್ ಹೆಗಡೆ

ಶುಕ್ರವಾರ, ಫೆಬ್ರವರಿ 13, 2009

ಪ್ರೀತಿಯ ಜೊತೆ ಜೀವನ ಪಾಠ ಕಲಿಸಿದ್ದೆ!

ಪ್ರೀತಿಯ ಪ್ರೇಮ ದೇವತೆಗೆ.
ನಂಗೆ ಗೋತ್ತು ಕಣೆ. ಇವನೇನಪ್ಪ ಪ್ರೀತೆಯ ಮುದ್ದು,ಚಿನ್ನು,ಬಂಗಾರ,ಗೂಬೆ ಎಂದೆಲ್ಲ ಕರೆಯಿತ್ತಿದ್ದವ ದೇವತೆ ಅಂತ ಕರೆಯುತ್ತಿದ್ದಾನೆ ಅಂಥ ಗಲಿಬಿಲಿಗೆ ಬಿದ್ದಿರುತ್ತಿಯಾ ಅಂತ.ನೀನು ಬಿಟ್ಟು ಹೋಗಿದ್ದಿಯ ಅಂತ ಕಂಡಿತ ಬೇಸರವಿಲ್ಲ ಕಣೆ.ಪ್ರೀತಿಯ ಅರ್ಥೈಸಿದವಳು ನೀನು.ಕೈ ಹಿಡಿದು ಸಾಧ್ಯವಾದಷ್ಟು ಮುನ್ನೇಡಿಸಿದ್ದು ನೀನು.ಇವತ್ತು ಒಮ್ಮೇ ಆದರೂ ನಿನ್ನ ನೆನಪು ಮಾಡಿಕೊಳ್ಳದಿದ್ದರೆ ನೀನು ಕಲಿಸಿದ ಪಾಠಕ್ಕೆ ಅರ್ಥವೇ ಇಲ್ಲ.!

ಹೌದು, ಆ ಮಳೆಯ ರಭಸದಲ್ಲಿ ಇರೋ ೧ ಛತ್ರಿಯಲ್ಲಿ ನಾವು ೪ ಜನ ರಕ್ಷಣೆ ಪಡೆದು ಬಸ್ ಪಾಸ್ ಗೆ ಕ್ಯೂನಲ್ಲಿದ್ದಾಗ ನೀನು ನಿನ್ನ ಗೆಳತಿಯರ ಜೊತೆ ಕ್ಲೋಸಪ್ ಶೈಲಿಯಲ್ಲಿ ನಗುತ್ತ ಬಂದೆ.ಆ ಉದ್ದ ಕ್ಯೂನಲ್ಲಿ ನಿಂತು ನಿಂತು ಬೇಜರಾಗಿದ್ದ ನಮಗೆ ನೀನೆ ಮತ್ತೆ ಜೀವ ತುಂಬಿದ್ದು.ಮನದಲ್ಲೇ ಮಂಡಿಗೆ ತಿನ್ನುವುದು ಕಲಿತಿದ್ದೆ ಆವಾಗ ಕಣೆ!!ಮನುಷ್ಯನ ಆಸೆಗೆ ಮೀತಿ ಇಲ್ಲ.ಇವಳು ನಮ್ಮ ಕ್ಲಾಸ್ ಆಗಿದ್ದರೆ ಅಂಥ ಎಲ್ಲರು ಹೇಳುತ್ತ ನಿನ್ನ ಗುಣಗಾನ ಮಾಡುತ್ತ ಕಾಲೇಜ್ ಗೆ ಬಂದರೆ ಅಲ್ಲಿ ನೀನು ಪ್ರತ್ಯಕ್ಷ! ಆದರೆ ನೀನು ಬಂದು ೨ ತಾಸಿನಲ್ಲಿ ಎಲ್ಲರೂ ನೀನ್ನ ಹಿಂದೆ ಬಿದ್ದಿದ್ದಾರೆ ಅಂತ ಸುದ್ದಿ ಮುಟ್ಟಿತ್ತು.!ಪಾಸ್ ಗೆ ಕಾದಿದಕ್ಕೆ ನೀನ್ನ ಸುದ್ದಿಯನ್ನು ಲೇಟ್ ಆಗಿ ಸಂಗ್ರಹಿಸಿದೆ.ಆಗಗಲೇ ಹುಡುಗರು ನೀನ್ನ ಬಗ್ಗೆ ಮಾಹಿತಿ ಯನ್ನ ಕಲೆಕ್ಟ್ ಮಾಡಿದ್ದರಿಂದ ನನ್ಗೇನು ತೋಂದ್ರೆ ಆಗಲಿಲ್ಲ.

ಆದ್ರೆ ಮಾತನಾಡಿಸುವುದು ಹೇಗೆ? ಮನದಲ್ಲೇಲ್ಲೋ ಸಣ್ಣ ಅಹಂ. ಹುಡುಗಿಯರನ್ನ ನಾವಾಗೇ ಮಾತಡಿಸ ಬಾರದು ಅಂತ.ಆದರೆ ನೀನ್ನ ಮಾತನಾಡಿಸುವುದು ಸುಲಭವಾಗಿರಲಿಲ್ಲ.ನಾನು ಮೊದಲ ಬೇಂಚ್ ನ ಹುಡುಗ.ಆದ್ರೆ ನೀನು ಕುಳಿತುಕೊಳ್ಳುತ್ತಿದ್ದಿದ್ದು ಮಾತ್ರ ಕೊನೆ ಸಾಲಿನಲ್ಲಿ.ಆದ್ರೆ ನಾನು ಹಿಂದೆ ತಿರುಗಿದರೆ ಕಾಣುತ್ತಿದ್ದಿದ್ದೆ ನೀನು!!ಅದಕ್ಕೆನೊ ನನ್ನ ಹಿಂದಿರುವ ಹುಡುಗರು ನನ್ನ ಸ್ನೇಹಿತರಾಗಿದ್ದು ನಾನು ಹಿಂದೆ ತಿರುಗುತ್ತಿದ್ದರಿಂದ!!

ನೀನು ಆಗಾಗ ಸ್ಮೈಲ್ ಕೊಡ್ತಿದ್ದೆ.ನಾನು ಇಷ್ಟಗಲ ಮುಖ ಅರಳಿಸಿ ಕೊಡ್ತಿದ್ದೆ.ಆದ್ರೆ ಮಾತು? ಇಬ್ರೂ ತುಟಿ ಬಿಚ್ತಿರಲಿಲ್ಲ.!ಆದ್ರೆ ಇಬ್ರೂ ಸ್ಮೈಲ್ ಕೊಡ್ತಿರುವಾಗ ಹಾಳಾದ ಇಂಟರ್ನಲ್ ಎಕ್ಸಾಮ್ ಬಂತಲ್ಲಾ! ಆ ಕಂಪ್ಯೂಟರ್ ಪ್ರೋಗ್ರಾಮ್ಸೆ ಏನು ಬರಲ್ಲಾಗಿತ್ತು.ಆದ್ರೆ ಲ್ಯಾಬ್ ನಲ್ಲಿ ನೀನು ನನ್ನ ಪಕ್ಕ ಇದ್ದೆ.ಧೈರ್ಯ ಮಾಡಿ [ಇಂಟರ್ನಲ್ ಮಾರ್ಕ್ಸ್ ಗಾಗಿ!] ನೀನ್ನ ಹತ್ರ ಪ್ರೋಗ್ರಾಮ್ ಕೇಳಿದ್ದೆ.ನೀನು ಹೇಳಿದ್ದೆ!! ಇದು ನಮ್ಮೀಬ್ಬರ ಮೊದಲ ಮಾತುಕಥೆ!

ಅದಾಗಿ ಸ್ವಲ್ಪ ದಿನಕ್ಕೆ ನಿನ್ನಿಂದ ಫೋನ್ ನಂಬರ್ ತಗೊಂಡೆ. ಕಾಲ್ ಮಾಡಿದೆ ಮಾತಾಡಿದೆ.ಇದೇ ನಿತ್ಯ ದಿನಚರಿ ಆಗೋಯ್ತು! ಆದ್ರೆ ಇಬ್ರೂ ಮಾತಾಡುತ್ತಿದ್ದುದ್ದು ಮಾತ್ರ ಲ್ಯಾಂಡ್ ಲೈನ್ ಲಿ!! ಅದು ಮನೆಯವರ ಮುಂದೆ!!ಇಬ್ರಲ್ಲೂ ಅಂಥಾ ಕದ್ದು ಮುಚ್ಚಿ ಮಾಡೋ ಪ್ರೀತಿ ಪ್ರೇಮ ಇರ್ಲಿಲ್ಲ ಬಿಡು.

ಆದ್ರೆ ಒಂದು ದಿನ ೧ ಪತ್ರ ಬರೆದಿದ್ದೆ.ಆಗಿನ ಕಾಲದಲ್ಲಿ ನಮ್ಮ ಹತ್ರ ಎಲ್ಲಿಂದ ಮೊಬೈಲ್ ಬರಬೇಕು ಹೇಳು?ಅದ್ರಲ್ಲಿ ೧ ಎಸ್.ಎಂ.ಎಸ್. ಜೋಕ್ ಬರೆದಿದ್ದೆ!! ಗೋರಿಲ್ಲ ಅಂಥ! ಅದು ನಿನಗೆ ಎಷ್ಟು ಇಷ್ಟವಾಯಿತು ಅಂದ್ರೆ ನೀನು ವಾಪಸ್ ಪತ್ರ ಬರೆದಿದ್ದೆ ತಿಮಿಂಗಿಲ ಅಂಥ!!ಆಮೇಲೆ ಬರೆದು ಕೊಂಡ ಪತ್ರಕ್ಕೆ ಲೆಕ್ಕವೇ ಇಲ್ಲ ಬಿಡು!!ಕ್ಲಾಸ್ ನಡೆಯುತ್ತಿದ್ದಾಗ್ಲೇ ಎಸೆದುಕೊಳ್ಳುತ್ತಿದ್ದಿದ್ದು,ಅದನ್ನು ನೋಡಿ ಉಳಿದವರು ನಿನ್ನ ಹಿಂದೆ ಬಿದ್ದ ಅವರು ನಿನ್ನಿಂದ ದೂರ ಆಗಿ ನನ್ನ ಬಗ್ಗೆ ಕೋಪಿಸಿಕೊಂಡರು.!ನೀನು ಮಾತ್ರ ಯಾವುದಕ್ಕೂ ಅಂಜದೇ ಇರುತ್ತಿದ್ದೆ.

ದಿನ ನನ್ನ ಹತ್ರ ಫೋನ್ ನಲ್ಲಿ ಮಾತಾಡದಿದ್ದರೇ ಮರುದಿನ ಕೋಪಿಸಿಕೊಳ್ಳುತ್ತಿದ್ದೆ.ಆ ಕೋಪ ಮಾತ್ರ ನಿನ್ನ ಬೆಳ್ಳನೆ ಕೆನ್ನೆಯನ್ನು ಕೆಂಪಗೆ ಮಾಡಿ ಮತ್ತಷ್ಟೂ ಚೆಂದುಳ್ಳೆ ಚೆಲುವೆಯನ್ನಾಗಿ ಮಾಡುತ್ತಿತ್ತು!!ಆ ಚೆಲುವನ್ನು ನೋಡಲು ಆಗಾಗ ನೀನ್ನ ಜೊತೆ ಜಗಳ ಮಾಡುತ್ತಿದ್ದಿದ್ದು!!.ಆದ್ರೆ ಅದೇ ಜಗಳ ಎನ್.ಎಸ್.ಎಸ್. ನಲ್ಲಿ ರಂಪ ಆಗಿ ೧ ತಿಂಗಳು ಅಮೋಘವಾಗಿ ಮಾತು ಬಿಟ್ಟು ಇಬ್ಬರ ಅಹಂ ಅಡ್ಡ ಬಂದು ಆಮೇಲೆ ಒಂದಾಗಿದ್ದು ಇದನ್ನೇಲ್ಲಾ ನೆನಪು ಮಾಡಿಕೊಂಡರೆ ಎಷ್ಟು ನಗು ಬರತ್ತೆ!!

ಆದ್ರೆ ನಮ್ಮಿಬ್ಬರಲ್ಲಿ ಪ್ರೀತಿ ನೀಡುವ ಸ್ನೇಹವಿತ್ತು.ಭವಿಷ್ಯದ ಬಗ್ಗೆ ಸ್ಪಷ್ಟತೆ ಇತ್ತು.ಹಾಗಾಗಿ ಎಲ್ಲೂ ಪ್ರೇಮ ಎಂಬ ಮಾಯೆಯನ್ನು ಸೋಕಿಸಲು ಇಬ್ಬರೂ ಬಿಡಲಿಲ್ಲ .ಅದಕ್ಕೇನೋ ನೀನು ಚಿರಕಾಲ ನನ್ನೋಂದಿಗೆ ಇರುತ್ತಿರುವುದು?
ಆ ಸ್ನೇಹದಲ್ಲಿ ಪ್ರೀತಿಯನ್ನು ಬೊಗಸೆ ತುಂಬುವಷ್ಟು ಮೊಗೆದು ಮೊಗೆದು ಕೋಡಿತ್ತಿದ್ದೆ.ಅದನ್ನು ಸ್ವೀಕರಿಸಿದ ನಾನೇ ಧನ್ಯ!ನೀನು ಕೊಟ್ಟ ಮೇಲೆ ನಾನು ಕೊಡ ಬೇಕು ತಾನೆ? ನಾನು ಕೈ ತುಂಬ ಪ್ರೀತಿ ಕೊಟ್ಟೆ.
ನೀನು ಆ ೩ ವರ್ಷದಲ್ಲಿ ಜೀವನದ ಪಾಠ ಕಲಿಸಿದ್ದೆ.ಹೆಣ್ಣೀನ ಸಂಕಟ ತೋರಿಸಿದ್ದೆ.ಹೆಣ್ಣಿನ ಹೃದಯಾಂಗಳದ ಪ್ರೀತಿ ಬಿಚ್ಚಿಟ್ಟಿದ್ದೆ.ನನ್ನ ಜೀವನಕ್ಕೊಂದು ದಾರಿ ದೀಪ ತೋರಿಸಿದ್ದೆ.

ಇಂದು ನೀನು ಕಲಿಸಿದ ದಾರಿ ದೀಪದಲ್ಲೇ ಸಾಗುತ್ತಿರುವೆ.ಇಂದು "ನನ್ನವಳು" ಅಂತ ಒಬ್ಬಳು ಸಿಕ್ಕಿದ್ದಾಳೆ.ನೀನು ಕಲಿಸಿದ ಪಾಠ ಅವಳಿಗೂ ಹೇಳಿ ಕೊಡುತ್ತಿರುವೆ.ಆ ಮೌಲ್ಯದ ಪಾಠವನು ಹೇಗೆ ಮರೆಯಲಿ ಹೇಳು?ಅದಕ್ಕೆ ಹೇಳಿದ್ದು ನೀನು ದೇವತೆ ಅಂಥ.

ಗುರುವಾರ, ಫೆಬ್ರವರಿ 12, 2009

ಆ ಮಧುರ ಅನುಭೂತಿಗೆ ಹಾತೋರೆದು ಕಾಯುವ ಕ್ಷಣವೇ ಪ್ರೀತಿಯೇ?!




ವ್ಯಾಲೇಂಟೈನ್ಸ್ ಡೇ!
ಈ ಶಬ್ದ ಹದಿಹರಯದ ಹುಡುಗರಿಂದ ಹಿಡಿದು ವಯಸ್ಸಿನ ಅಜ್ಜ,ಅಜ್ಜಿ ತನಕದವರೆಗೂ ತಕ್ಷಣ ರೋಮಾಂಚನಗೊಳಿಸುತ್ತದೆ.!. ರಾಧಾ ಕೃಷ್ಣ,ದುಷ್ಯಂತ ಶಕುಂತಲಾ,ನಳ ದಮಯಂತಿ ಪ್ರೇಮದಿಂದ ಹಿಡಿದು ಪ್ರೀತಿ ಪ್ರೇಮ ಇಂದು ಚಡ್ಡಿ ತನಕ ಬಂದಿದೆ!!ಪ್ರೇಮವನ್ನು ಪವಿತ್ರದಿಂದ ಕಾಣುವ ಭಾರತೀಯರಿಗೆ ಈ ಚಡ್ಡಿ ಪ್ರೇಮ ಬೇಕೆ?

ಯಾವುದೇ ಕಾಲೇಜಿನ ಹುಡುಗ ಹುಡುಗಿ ಕಾಲೇಜಿನ ಮೆಟ್ಟಿಲನ್ನ ಹತ್ತುವಾಗಲೇ ಪ್ರೀತಿ-ಪ್ರೇಮದ ಬಲೆಯಲ್ಲಿ ತಾವು ಸಿಲುಕಬಾರದು ಎಂದೇ ಪ್ರತಿಜ್ನೆ ಗೈದಿರುತ್ತಾರೆ.ಆದರೆ ಮುಂದೆ ಅವರೇ ಅದರ ಬಲೆಯಲ್ಲಿ ಬಿದ್ದಿರುತ್ತಾರೆ!!ಹಿಂದೆ ಮನೆಯಲ್ಲೂ ಅಷ್ಟೆ ಈ ಪ್ರೀತಿ-ಪ್ರೇಮ ಎಂದರೆ ಹೌಹಾರುತ್ತಿದ್ದರು.ಹುಡುಗ-ಹುಡುಗಿ ಒಬ್ಬರೊಬ್ಬರು ಮಾತನಾಡುತ್ತಿದ್ದರೆ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದ್ದರು.ಆದರೆ ದಿನ ಕಳೆದಂತೆ ನೋಡುವ ದೃಷ್ಟಿ ಬದಲಾಗುತ್ತಿದೆ.ಟಿನೇಜ್ ಗೆ ಸ್ವಾತಂತ್ರ್ಯ ಸಿಗುತ್ತಿದೆ.ಮನೆಯವರೂ ಅಷ್ಟೆ ನಾವು ಹುಡುಕುವ ಬದಲು ಅವರವರ ಅಭಿರುಚಿಗೆ ತಕ್ಕಂತೆ ಅವರೇ ಹುಡುಕಿಕೊಂಡರೆ ತೋಂದರೆ ಇಲ್ಲ ಎಂಬಲ್ಲಿಗೆ ಬಂದರೆ,ಅತ್ತ ಹುಡುಗಿಯರ ಸಂಖ್ಯೆ ಕಡಿಮೆ ಆದ್ದರಿಂದ ಅದು ಒಂದು ಕಾರಣವಿರಬಹುದೆ ಮನೆಯವರ ಸಮ್ಮತಿಗೆ?!!

ಹಾಗೆ ಸುಮ್ಮನೆ ನಮ್ಮ ಮನೆಯಲ್ಲಿನ ಅಜ್ಜ-ಅಜ್ಜಿಯನ್ನೇ ನೋಡಿ.ಪಾಪ ಅಂದಿನ ಗಂಡು ಹೆಣ್ಣು ಪ್ರೀತಿ ಪ್ರೇಮ ಅರ್ಥವಾಗುವುದರೊಳಗೆ ಮದುವೆ ಆಗಿ ೨ ಮಕ್ಕಳಾಗಿರುತ್ತಿತ್ತು.!.೧೨-೧೩ ವರ್ಷಕ್ಕೆಲ್ಲಾ ಹಸೆಮಣೆಗೆರುತಿದ್ದ ಅವರು ಅಂದಿನ ಸಂಪ್ರದಾಯ ಅಥವಾ ಸಾಮಾಜಿಕ ಪರಿಸ್ಥಿತಿಯಿಂದ ಇಂಥ ಪ್ರೇಮ-ಪ್ರೀತಿ ದೂರವೇ ಉಳಿದಿತು!!.

ಈಗ ಇಂಥ ಪರಿಸ್ಥಿತಿ ಕಂಡಿತ ಇಲ್ಲ.ಪ್ರೀತಿಗೆ ಬೇಕಾದ ಕಮ್ಯೂನಿಕೆಶನ್ ಸುಲಭದಲ್ಲಿ ಲಭ್ಯ. ಅಂಗೈಯಲ್ಲಿನ ಮೊಬೈಲ್ ಕ್ಷಣಾರ್ಧದಲ್ಲಿ ತನ್ನ ಪ್ರೀಯಕರನ್ನು ಹುಡುಕಿಕೊಂಡು ಮೆಸೆಜ್ ಹೊಗುತ್ತದೆ.ಇನ್ನು ಕರೆ ದರ ಸಂಪೂರ್ಣ ನೆಲಕಚ್ಚಿದೆ!!ನಿಮಷಕ್ಕೆ ೨೦ ಪೈಸೆಯಂತೆಯೂ ಕರೆ ಮಾಡಬಹುದು.! ಇದು ಇಂದು ದೂರವಿದ್ದರೂ ಹತ್ತಿರ ಸೇರಿಸಲು ಸಹಕಾರಿ.ಕ್ಲೊಸ್ ಆದಮೇಲೆ ಅವರೊಡನೆ ಜೀವನ ನಡೆಸೋಣ ಎಂಬ ಮನಸ್ಸಿನ ದ್ವಂದ್ವ.ಇಬ್ಬರ ಮನಸ್ಸು ಬೇರೆತ ಮೇಲೆ ಲೋಕಕ್ಕೆ ಹೆದರುವುದುಂಟೆ?......

ವಿದೇಶದಲ್ಲಿ ಕಾಮನೆಗಳಿಗೆ ಮುಕ್ತ ಅವಕಾಶವಿದೆ.ಆದರೆ ನಮ್ಮ ಸಂಸ್ಕೃತಿ ನೇ ಬೇರೆ.ಎಲ್ಲವೂ ಕಾಮದಲ್ಲೇ ಅಂತ್ಯವಾದರೂ ಅದಕ್ಕೆ ಕೊನೆಯ ಪ್ರಾಮುಖ್ಯ.ಕಾಮಸೂತ್ರವನ್ನು ಹೇಳಿಕೊಟ್ಟಿದ್ದೇ ನಮ್ಮ ಪುರಾತನದವರು.ಅವರಿಗೂ ಗೊತ್ತಿತ್ತು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಕಾಮ ಇರಬೇಕೆಂದು ಅವರು ತಿಳಿದಿದ್ದರು. ಶ್ರೀಕೃಷ್ಣ ಅಷ್ಟೋಂದು ಫ್ಲರ್ಟ್ ಮಾಡುತ್ತಿಂದ ಎಂದು ಓದಿದರೂ ಪೂಜ್ಯ ಸ್ಥಾನದಲ್ಲಿ ನಿಲ್ಲುತ್ತಾನೆ.ಅವರ ಕಥೆಯೆಲ್ಲ ನಮ್ಮ ಸಂಸ್ಕೃತಿಯೊಳಗೆ ಧೈವತ್ವ ತೊರಿಸುತ್ತದೆ. ನಮ್ಮಲ್ಲಿ ಇನ್ನೂ ಒಂದು ನಂಬಿಕೆ ಇದೆ.ಪ್ರೀತಿ ಪ್ರೇಮ ಎಂದರೆ ಹುಡುಗ/ಹುಡುಗಿ ತುಂಬಾ ಮುಂದುವರೆದಿರುತ್ತರೆ ಎಂದು.ಇನ್ನೂ ಪ್ರೌಢಾವಸ್ಥೆಗೆ ಬರುವುದರೊಳಗೇ ಪ್ರೀತಿ-ಪ್ರೇಮಕ್ಕೆ ಬಿದ್ದು ಜೀವನ ಗೊತ್ತಾಗುವುದರೊಳಗೆ ಜೀವನ ಸಾಕಪ್ಪ ಸಾಕು ಅನಿಸುವಂತೆ ನಮ್ಮ ಯುವ ಜನಾಂಗ ಮಾಡುತ್ತಿರುವುದು ಸುಳ್ಳಲ್ಲ.ನಗರ ಪ್ರದೇಶದಲ್ಲಿ ಸುತ್ತಾಡಿದಷ್ಟು ಜೋಡಿಗಳ ದರ್ಶನ ಸಿಕ್ಕೇಸಿಕ್ಕುತ್ತದೆ.ಇಂದು ಪ್ರೀತಿ ಎನ್ನುವುದು ಸಾರ್ವಜನಿಕವಾಗಿ ಬಂದು ಬಿಟ್ಟಿದೆ.ಆಕೆಯ ಕಂಕುಳಲ್ಲಿ ಇತನ ಕೈ ಇದ್ದರೆ ಈಕೆಯ ಕೈ ಕೂಡ ಆತನ ಸೊಂಟದ ಮೇಲೆ ಇರುತ್ತದೆ.ಬಸ್ ನಲ್ಲಂತೂ ಜೋಡಿಗಳು ಬಂದು ಬಿಟ್ಟರೆ ಅದು ಅವರ ಮನೆಯ ಸ್ವತಂತ್ರ ಜಾಗ ಎಮ್ಬಂತೆ ವರ್ತಿಸುವುದು ಸುಳ್ಳಲ್ಲ.ಪ್ರೀತಿ ಪ್ರೇಮ ಬೇಕು.ಅದು ಜೀವನದ ಅಂಗ.ಆಕೆಯ ಮೌನ,ಈತನ ಕೋಪ,ಆಕೆಯ ನೋಟಕ್ಕೆ ಕಾದು ಸುಸ್ತಾದವನಿಗೆ ಅಮೃತಸಿಂಚನ ಸಿಂಪಡಿಸುವ ಆಕೆಯ ಭೇಟಿ,ರೋಮಾಂಚನದ ಒಗ್ಗರಣೆಗೆ ಹಾಗೆ ಸುಮ್ಮನೆ ಒಂದು ಸುಮ್ಮನೆ ಸ್ಪರ್ಶ ಇದೇಲ್ಲ ಬೇಕು.ಆದರೆ ನಮ್ಮ ಪ್ರೀತಿಯನ್ನು ಇಡೀ ಸಾರ್ವಜನಕಿವಾಗಿ ತೋರಿಸುತ್ತ ಹೋದರೆ ಅಸಹ್ಯಕ್ಕೆ ಒಳಗಾಗುವುದು ನಾವು ಮತ್ತು ನಮ್ಮ ಪ್ರೀತಿ ಅಲ್ಲವೇ? ಅದಕ್ಕೇನೊ ನಮ್ಮ ಹಿರಿಯರು ಪ್ರೀತಿ ಅಂದರೆ ಅದೇಕೊ ತಪ್ಪು ಅರ್ಥಮಾಡಿಕೊಳ್ಳುತ್ತಿರುವುದು.

ಇಂದು ಪ್ರೇಮಿಗಳ ದಿನ ಕ್ಕೆ ವಿಶೇಷ ಅರ್ಥ ಬಂದು ಬಿಟ್ಟಿದೆ.ಅದಕ್ಕೆ ಕಾರಣವಾಗಿದ್ದು ಶ್ರೀರಾಮ ಸೇನೆ!. ಮಂಗಳೂರಿನ ಪಬ್ ದಾಳಿ ನಂತರ ಮತ್ತಷ್ಟು ಕೆಂಡಮುಂಡಾಲಾಗಿರುವ ಅದು ಪ್ರೇಮಿಗಳ ದಿನಾಚರಣೆಯಂದು ಶುದ್ಧ ಪ್ರೇಮಕ್ಕೆ ಕಂಕಣಬದ್ಧವಾಗಿ ಆಚರಿಸಲು ಕರೆ ನೀಡಿದರೆ,ನಿಮ್ಮಗಿಷ್ಟ ಬಂದಂತೆ ಆಚರಿಸಿ ನಿಮ್ಮ ಬೆಂಬಲಕ್ಕೆ ನಾವಿದ್ದೆವೆ ಎಂದು ಇನ್ನೋಂದು ಗುಂಪು "ಕಾಲ್ ಸೆಂಟರ್" ತೆರೆದು ಅನುಕೂಲ ಮಾಡಿಕೊಡುತ್ತಿದೆ.
ಅಷ್ಟೆ ಅಲ್ಲ.
ಮುತಾಲಿಕ್ ಗೆ ಮತ್ತು ಶ್ರೀರಾಮ ಸೇನೆಗೆ ಹೆಂಗಳೆಯರು ತೊಡುವ ಒಳಉಡುಪನ್ನು [ಚಡ್ಡಿ] ಉಡುಗೊರೆಯಾಗಿ ನೀಡಲು ಹೆಂಗಳೆಯರ ಗುಂಪು ರೇಡಿಯಾಗಿದೆ.ನಮ್ಮ ಭಾರತೀಯರ ಶುದ್ಧ ಪ್ರೀತಿ ಚಡ್ಡಿ ತನಕ ಬಂದಿದೆ.!!

ಆದರೂ ಮನಸಲ್ಲಿ ಪ್ರೀತಿ ಎಂದರೆ ಇಷ್ಟೇನಾ ಎಂಬ ಪ್ರಶ್ನೆ ಉಳಿದು ಬಿಡುತ್ತದೆ.ಆಕೆಯ ಮುಗ್ದ ನಗು,ಬೊಗಸೆ ತುಂಬ ಪ್ರೀತಿ,ಅವಳೋಂದಿಗಿನ ವಿರಸದ ಗಳಿಗೆ,ಅವಳ ಮೇಲಿನ ಹುಸಿಗೋಪ ಹೀಗೆ ಪ್ರೀತಿಯ ಮಧುರ ಅನುಭೂತಿ ಜೀವನ ತುಂಬ ಉಳಿದು ಬಿಡುತ್ತದೆ.
ಪ್ರೀತಿಗೆ ಉತ್ತರ ಕೊಡುವವರಾರು?

ಮಂಗಳವಾರ, ಫೆಬ್ರವರಿ 3, 2009

ಶಂಭು ಹೆಗಡೆ ಇನ್ನಿಲ್ಲ;ಕಲಾವಿದನಿಗೆ ಇಂಥ ಸಾವು ಸಿಗುವುದೇ?


ರಾಜ್ಯದ ಹೆಮ್ಮೆಯ ಯಕ್ಷಗಾನ ಕಲಾವಿದ ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಬೆಳಗಿನ ಜಾವ ತವರು ಜಿಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ನಿಧನರಾದರು.
ಯಕ್ಷಗಾನ ಸಾರಸ್ವತ ಲೋಕಕ್ಕೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದ ಶಂಭು ಹೆಗಡೆ ಅವರು,ತಮ್ಮ ನಿಧನದಲ್ಲೂ ಯಕ್ಷಗಾನ ಬಿಡಲಿಲ್ಲ.ದೇವರಿಗೂ ಅವರನ್ನು ಹಾಗೆ ಕರೆದುಕೊಂಡು ಹೋಗಲು ಮನಸಿರಲಿಲ್ಲವೇನೊ?. ನಿನ್ನೆ ರಥ ಸಪ್ತಮಿಯ ಅಂಗವಾಗಿ ತಮ್ಮ ಹುಟ್ಟೂರಿನ ಸನಿಹ ವಿರುವ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರೆ ನಡೆದ ಅವರದ್ದೇ ಮೇಳದ [ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ] ಯಕ್ಷಗಾನದಲ್ಲಿ ಪಾತ್ರ ಹಾಕಿ, ಯಕ್ಷಗಾನ ಕುಣಿಯುತ್ತಿದ್ದಾಗಲೇ ಕುಸಿದು ಬಿದ್ದು ತಮ್ಮ ಬದುಕಿಗೆ ಇತಿಶ್ರೀ ಹಾಡಿದರು.ಒಬ್ಬ ಕಲಾವಿದ ಇಂಥ ಸಾವನ್ನೇ ಅಲ್ಲವೇ ಅಪೇಕ್ಷೀಸುವುದು?ತಮ್ಮ ಜೀವವನ್ನೇ ಮುಡುಪಾಗಿಟ್ಟ ಕ್ಷೇತ್ರದಲ್ಲಿ ತನ್ಮಯತೆ ಯಿಂದ ಕೆಲ್ಸ ಮಾಡುತ್ತಿದ್ದಾಗ ಅದೇಷ್ಟು ಜನರಿಗೆ ಇಂಥ ಭಾಗ್ಯ ಸಿಕ್ಕಿತೊ?

ನಿನ್ನೆ ರಾತ್ರೆ ಇಡಗುಂಜಿಯಲ್ಲಿ ನಡೆದ ಯಕ್ಷಗಾನದಲ್ಲಿ "ಲವ-ಕುಶರ ಕಾಳಗ" ದಲ್ಲಿ ರಾಮನ ಪಾತ್ರವನ್ನು ಹಾಕಿದ್ದ ಅವರು ಕೊನೆಯ ೧೦ ನಿಮೀಷದಲ್ಲಿ ಪ್ರದರ್ಶನ ಮುಗಿಯ ಬೇಕೆಂದಾಗ ನಿಧನರಾದರು.ವಾಲ್ಮಿಕಿ ಯ ಪ್ರವೇಶವಾಗಿ, ರಾಮ ಲವ-ಕುಶರು ತನ್ನ ಮಕ್ಕಳು ,ಅವರ ಸಾಹಸ ಕೌಶಲ್ಯವನ್ನು ಬಣ್ಣಿಸುವಾಗ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು

ಶಂಬು ಹೆಗಡೆ ಅವರಿಗೆ ಯಕ್ಷಗಾನದ ಗೀಳು ರಕ್ತಗತವಾಗೇ ಬಂದಿದ್ದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಕೆರೆಮನೆಯಲ್ಲಿ ಜನನ.ಅವರ ತಂದೆ ಶಿವರಾಮ ಹೆಗಡೆ ಇಡಗುಂಜಿ ಮೆಳ ಕಟ್ಟಿ ಯಕ್ಷಗಾನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭದ್ರಬುನಾದಿ ಹಾಕಿದರು.
ಕಳೆದವರ್ಷದವರೆಗೂ ಯಕ್ಷಗಾನ ಮತ್ತು ಜಾನಪದ ರಾಜ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಇವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ,೨೦೦೧-೦೨ ರಲ್ಲಿ ಪರ್ವ ಚಲನಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮುಂತಾದ ಪ್ರಶಸ್ತಿ ಬಂದಿತ್ತು.ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಯಕ್ಷಗಾನ ಜನರಿಂದ ದೂರವಾಗುತ್ತಿದ್ದ ಸಂದರ್ಭದಲ್ಲಿ ಸಾಂಪ್ರದಾಯಕತೆಯನ್ನು ಬಿಡದೆ ಯಕ್ಷಗಾನ ಜನರಿಗೆ ಮತ್ತೆ ರುಚಿಸುವಂತೆ ಮಾಡಿದ್ದರು.

ಯಕ್ಷಗಾನದ ಮತ್ತೊಂದು ಶ್ರೀಮಂತ ಕೊಂಡಿ ಕಳಚಿದೆ.ಕೌರವ,ಕಿಚಕ,ನಳ,ಬಲರಾಮ,ಜರಸಂಧ,ದುರ್ಯೋಧನ
ಸಂಧಾನ ಕ್ರುಷ್ಣ ಪಾತ್ರಗಳಲ್ಲಿ ಸಾಟಿ ಇಲ್ಲದ ಅಭಿನಯ ಇವರದಾಗಿತ್ತು.ಅದೇಕೊ ಶಂಭು ಹೆಗಡೆ ಅವರು ಇಲ್ಲದ ಯಕ್ಷಗಾನ ಬಡವಾಗಿದೆ.

ಶನಿವಾರ, ಜನವರಿ 31, 2009

ಗ್ರಾಹಕರಾಗಿ ನಿಮ್ಮ ಹಕ್ಕು ನಿಮಗೆ ಗೊತ್ತಿಲ್ಲವೇ?ಹಾಗಾದರೆ ಓದಿ





ಸಾಗರದ ಬಳಕೆದಾರರ ವೇದಿಕೆಯು ಹೊಸದೊಂದು ಪುಸ್ತಕವನ್ನುಪ್ರಕಟಿಸಿದೆ. ಅದನ್ನು ಓದಿದ ನೀವು ಇಷ್ಟೊಂದು ಮಾಹಿತಿಇದರಲ್ಲಿದೆಯಲ್ಲಾ ! ಎಂದು ಉದ್ಗರಿಸದಿದ್ದರೆ, ಕೇಳಿ.

* ಗ್ರಾಹಕ ಕಾಯ್ದೆ, ಮಾಹಿತಿ ಹಕ್ಕಿನ ಕಾಯ್ದೆ, ಬ್ಯಾಂಕಿಂಗ್ ಒಂಬುಡ್ಸ್‌ಮನ್, ಸರ್ಕಾರಿ ಇಲಾಖೆಗಳು, ದೂರವಾಣಿ, ವಿದ್ಯುತ್ - ಹೀಗೆ ಕಾನೂನು-ನಿಯಮಗಳ ಲೆಕ್ಕದಲ್ಲಿ ಇದು ವಿವರಗಳ ಖಜಾನೆ.
* ಪುಸ್ತಕದಲ್ಲಿ ಮಾಹಿತಿ ಕೇಳಲು ಅರ್ಜಿ ಸಲ್ಲಿಸಬೇಕು, ಬಳಕೆದಾರರ ನ್ಯಾಯಾಲಯಕ್ಕೆ ದೂರು ನೀಡಬೇಕು, ಒಂಬುಡ್ಸ್‌ಮನ್ ವಿಳಾಸ, ದೂರವಾಣಿ ದೂರು ಸ್ವೀಕಾರಕ್ಕಿರುವ ಅಧಿಕಾರಗಳ ವಿಳಾಸ; ದೂರವಾಣಿ ಸಂಖ್ಯೆ ; ಅತ್ಯಗತ್ಯವಾಗಿ ಬೇಕಾದ ಅರ್ಜಿ ಫಾರಂಗಳ ನಕಲುಗಳ, ವಿಳಾಸಗಳು, ಫೋನ್ ನಂಬರುಗಳು ಇದರಲ್ಲಿ ಲಭ್ಯ.

* ವಿಶೇಷ ಆಕಾರದ ೬೮ ಪುಟಗಳ ಹೆಸರೇ ಚೆಂದ ’ದೂರಿಗೊಂದು ದಾಟುಗೋಲು’

* ಈ ಪುಸ್ತಕ ಆಸಕ್ತರಿಗೂ ಖರೀದಿಗೆ ಸಿಗುತ್ತದೆ. ಪ್ರತಿಯೊಂದರ ಬೆಲೆ ಕೇವಲ ೪೦ ರೂಪಾಯಿ. ಆಸಕ್ತರು ಮನಿಯಾರ್ಡರ್, ಡಿಡಿ ಮೂಲಕ ಹಣ ಪಾವತಿಸಿದರೆ ಪುಸ್ತಕವನ್ನು ಕಳಿಸುವ ಜವಾಬ್ದಾರಿ ಸಾಗರದ ಬಳಕೆದಾರರ ವೇದಿಕೆಯದು. ಹಣವನ್ನು ಬಳಕೆದಾರರ ವೇದಿಕೆ(ರಿ), ಬ್ರಾಸಂ, ನೆಹರೂ ಮೈದಾನ, ಸಾಗರ . ೫೭೭೪೦೧ ವಿಳಾಸಕ್ಕೆ ಕಳುಹಿಸಿ.

ಅದರ ಒಂದು ಲೇಖನ ಇಲ್ಲಿ ನಿಮಗಾಗಿ.
---------------------------------------------------------------------------------------------
ಸ್ವತಂತ್ರ ಮತ್ತು ಸ್ವಾಯತ್ತ ಸ್ಥಾನಮಾನಗಳಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಗ್ರಾಹಕರ ಬಹುದಿನದ ಬೇಡಿಕೆಯಾಗಿದ್ದ ದೂರು ಪರಿಹಾರ ನಿಯಮಾವಳಿಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ. ಇದು ೨೦೦೮ರ ಮೇ ೪ರಿಂದ ಅನುಷ್ಠಾನಗೊಂಡಿದೆ.
ಟೆಲಿಕಾಂ ಗ್ರಾಹಕರಿಗೆ ತಮಗೇನಾದರೂ ಸಮಸ್ಯೆಯಾದರೆ ಗ್ರಾಹಕ ನ್ಯಾಯಾಲಯವನ್ನು ಆಶ್ರಯಿಸುವುದನ್ನು ಬಿಟ್ಟು ಈವರೆಗೆ ಬೇರೆ ಮಾರ್ಗವಿರಲಿಲ್ಲ. ದೂರವಾಣಿ ವಲಯಕ್ಕೇ ಪ್ರತ್ಯೇಕವಾದ ದೂರು ಪರಿಹಾರ ವ್ಯವಸ್ಥೆಯಾಗಲಿ, ನ್ಯಾಯ ನೀಡುವ ವೇದಿಕೆಯಾಗಲಿ ಇರಲಿಲ್ಲ. ಈ ಗಂಭೀರ ಲೋಪದ ಬಗ್ಗೆ ದೇಶದ ಪ್ರಮುಖ ಗ್ರಾಹಕ ಸಂಘಟನೆಗಳು ಟ್ರಾಯ್ ಗಮನ ಸೆಳೆದಿದ್ದರು, ಅಂತಹ ಒಂದು ವ್ಯವಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದ್ದವು. ಇದೀಗ ಅವುಗಳ ಒತ್ತಾಯ ಫಲ ನೀಡಿದೆ. ಅಂತಹ ಒಂದು ವ್ಯವಸ್ಥೆಯನ್ನು ಟ್ರಾಯ್ ತಡವಾಗಿಯಾದರೂ ಜಾರಿಗೆ ತಂದು ದೂರಿ ನಿಂದ ಸಂತ್ರಸ್ಥಗೊಂಡ ಗ್ರಾಹಕರ ನೆರವಿಗೆ ಬಂದಿದೆ.

ದೂರು ನಿವಾರಣೆಗೆ ಕಾಲ್ ಸೆಂಟರ್
ದೇಶದೊಳಗೆ ಕಾರ್ಯನಿರತವಾಗಿರುವ ಎಲ್ಲಾ ದೂರವಾಣಿ ಕಂಪೆನಿಗಳು ಕಾಲ್ ಸೆಂಟರ್‌ನ್ನು ಸ್ಥಾಪಿಸಲೇಬೇಕು. ಅದು ಈಗ ಕಡ್ಡಾಯ. ಹಾಗೆಂದು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಿಯಮ ಮಾಡಿ ಜಾರಿಗೆ ತಂದಿದೆ. ಈ ಕಾಲ್‌ಸೆಂಟರುಗಳ ಕೆಲಸ ಗ್ರಾಹಕರ ದೂರು ಸ್ವೀಕರಿಸಿ, ನಿರ್ದಿಷ್ಟ ಕಾಲಮಿತಿಯಲ್ಲಿ ಬಗೆಹರಿಸುವುದು. ಈ ನಿಯಮದ ಪೂರ್ಣ ಮಾಹಿತಿ ಇಂತಿದೆ.
೧. ಪ್ರತಿ ಟೆಲಿಕಾಂ ಸೇವೆ ಪೂರೈಕೆದಾರನೂ ತನ್ನ ಗ್ರಾಹಕರ ದೂರು ನಿವಾರಣೆಗೆ ಕಾಲ್‌ಸೆಂಟರ್‌ನ್ನು ಸ್ಥಾಪಿಸಬೇಕು. ಈ ಕಾಲ್‌ಸೆಂಟರ್ ಗ್ರಾಹಕರಿಗೆ ೩೬೫ ದಿನದ ೨೪ ಗಂಟೆಯೂ ಲಭ್ಯವಾಗುವಂತಿರಬೇಕು.
೨. ಇಲ್ಲಿ ಟೆಲಿಕಾಂ ಸೇವೆ ಪೂರೈಕೆದಾರರೆಂದರೆ ಕೆಳಕಂಡ ಸೇವೆ ಕೊಡುವವರು ಬರುತ್ತಾರೆ;
ಎ) ಸ್ಥಿರ ದೂರವಾಣಿ ಕಂಪೆನಿಗಳು
ಬಿ) ಯುನಿಫೈಡ್ ಅಕ್ಸೆಸ್ ಸೇವಾದಾರರು
ಸಿ) ಮೊಬೈಲ್ ಕಂಪೆನಿಗಳು
ಡಿ) ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳು (ಆದರೆ ಕಂಪೆನಿಯೊಂದರ ಬ್ರಾಡ್ ಬ್ಯಾಂಡ್ ಕಂಪೆನಿಗಳ ಸಂಖ್ಯೆ೧೦ ಸಾವಿರದೊಳಗಿದ್ದರೆ ಈ ನಿಯಮ ಅನ್ವಯವಾಗದು.)
ಇ) ೫ ಕೋಟಿ ರೂ.ಗಳಿಗಿಂತ ಜಾಸ್ತಿ ಆರ್ಥಿಕ ವಹಿವಾಟಿರುವ ಇಂಟರ್‌ನೆಟ್ ಸೇವಾ ಪೂರೈಕೆ ಕಂಪೆನಿಗಳು.
೩. ಟೆಲಿಕಾಂ ಸೇವೆ ಕೊಡುತ್ತಿರುವ ಕಂಪೆನಿಗಳ ಪಟ್ಟಿಯಲ್ಲಿ ಖಾಸಗಿ ಕಂಪೆನಿಗಳ ಜೊತೆಗೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳು ಕೂಡಾ ಸೇರುತ್ತವೆ.
೪. ಒಂದೇ ಕಂಪೆನಿ ಬೇರೆ ಬೇರೆ ತರಹದ ಸೇವೆ - ಅಂದರೆ ಇಂಟರ್‌ನೆಟ್, ಮೊಬೈಲ್ ಇತ್ಯಾದಿ ಕೊಡುತ್ತಿದ್ದರೆ ಆಯಾಯ ಸೇವೆಗೆ ಪ್ರತ್ಯೇಕವಾಗಿ ಒಂದೊಂದು ಕಾಲ್‌ಸೆಂಟರ್ ಸ್ಥಾಪಿಸಬಹುದು.
೫. ಟೆಲಿಕಾಂ ಕಂಪೆನಿ ಹೀಗೆ ಸ್ಥಾಪಿಸುವ ಕಾಲ್‌ಸೆಂಟರ್‌ನಲ್ಲಿ ಕೆಳಕಂಡ ಸವಲತ್ತುಗಳಿರಲೇಬೇಕು;
ಅ. ತಕ್ಕ ಸಿಬ್ಬಂದಿ ಮತ್ತು ಮೂಲಸೌಕರ್ಯ.
ಆ. ಉಚಿತ ದೂರವಾಣಿ ಸೌಲಭ್ಯ- ಅಂದರೆ ಸಂತ್ರಸ್ಥ ಗ್ರಾಹಕರು ಕರೆ ಮಾಡಿದರೆ ಆ ಕರೆಯ ಶುಲ್ಕ ಅವನಿಗೆ ಬೀಳದಂತಿರುವ ದೂರವಾಣಿ ನಂಬರ್ ಕೊಡಬೇಕು.
ಇ. ಸೇವಾ ಗುಣಮಟ್ಟ ಕುರಿತು ಟ್ರಾಯ್ ಹೊರತಂದಿರುವ ನಿಯಮಕ್ಕೆ ಅನುಗುಣವಾಗಿ ದೂರು ತರುವ ಗ್ರಾಹಕನಿಗೆ ಸ್ಪಂದಿಸಬೇಕು.
ಈ. ಕಾಲ್ ಸೆಂಟರ್‌ಗೆ ಸಂಪರ್ಕಿಸುವ ಯಾವುದೇ ಕರೆ ಯಾ ಷಾರ್ಟ್‌ಮೆಸೇಜ್ ಸರ್ವಿಸ್ (ಎಸ್‌ಎಂಎಸ್)ಗಳಿಗೆ ಶುಲ್ಕ ಬೀಳದಂತೆ ನೋಡಿಕೊಳ್ಳಬೇಕು.
ಉ. ಪ್ರತಿಯೊಬ್ಬ ಸೇವಾ ಪೂರೈಕೆದಾರನು ಗ್ರಾಹಕರಿಗೆ ನೆರವೀಯುವ ಕಾಲ್‌ಸೆಂಟರ್ ಸ್ಥಾಪಿಸಿದ ನಂತರ ಸದರಿ ಸುದ್ದಿಯನ್ನು ಆತ ಸೇವೆ ಒದಗಿಸು ತ್ತಿರುವ ಪ್ರದೇಶದಲ್ಲಿ ಪ್ರಕಟವಾಗುತ್ತಿರುವ ಒಂದು ಇಂಗ್ಲಿಷ್ ಹಾಗೂ ಒಂದು ಕನ್ನಡ ಸುದ್ದಿ ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮೂಲಕ ಜನರ ಗಮನಕ್ಕೆ ತರತಕ್ಕದ್ದು. ಆ ಜಾಹಿರಾತಿನಲ್ಲಿ ಉಚಿತ ದೂರವಾಣಿ ನಂಬರನ್ನು ಸಹ ಕೊಡಬೇಕು. ಕಾಲಕ್ರಮದಲ್ಲಿ ಈ ಸಂಖ್ಯೆ ಬದಲಾದರೆ ಅದನ್ನು ಸಹ ಸಾರ್ವಜನಿಕರ ಗಮನಕ್ಕೆ ತರತಕ್ಕದ್ದು.
ಸಾರ್ವಜನಿಕ ದೂರುಗಳನ್ನು ಕಾಲ್ ಸೆಂಟರ್ ನಿರ್ವಹಿಸುವ ಬಗೆ
ಮೊದಲಲ್ಲಿ ಹೇಳಿದ ಸ್ಥಿರ, ಮೊಬೈಲ್ ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಸೇವಾಪೂರೈಕೆದಾರರು ಕೆಳಕಂಡ ರೀತಿಯಲ್ಲಿ ದೂರುಗಳನ್ನು ನಿರ್ವಹಿಸಬೇಕು,
೧. ಗ್ರಾಹಕರು ಕೊಟ್ಟ ದೂರನ್ನು ದಾಖಲಿಸಿಕೊಳ್ಳಬೇಕು. ಹಾಗೆ ದಾಖಲಿಸಿಕೊಳ್ಳುವಾಗ ಪ್ರತಿ ದೂರಿಗೆ ಡಾಕೆಟ್ ನಂಬರ್ ಕೊಡಬೇಕು. ದೂರು ಬರೆದುಕೊಳ್ಳುವಾಗ, ಈ ಡಾಕೆಟ್ ನಂಬರನ್ನು ತಾರೀಕು, ಸಮಯದ ಸಹಿತ ದೂರುದಾರ ಗ್ರಾಹಕನಿಗೆ ತಿಳಿಸಬೇಕು. ಆ ದೂರಿಗೆ ಸಂಬಂಧಿಸಿದ ದಾಖಲೆ ಕೇಳಬೇಕು.
ಗ್ರಾಹಕನಿಗೆ ತಿಳಿಸಬೇಕಾದದ್ದು:
ಅ) ದೂರನ್ನು ನಿರ್ವಹಿಸುವ ನೋಡಲ್ ಆಫೀಸರ್‌ನ ಹೆಸರು, ವಿಳಾಸ, ದೂರವಾಣಿ ನಂಬರ್
ಆ) ದೂರಿನ ಬಗ್ಗೆ ತೆಗೆದುಕೊಂಡ ತೀರ್ಮಾನ.
ಹಾಗೆ ತಿಳಿಸುವಾಗ :
ಎ) ದೂರವಾಣಿ/ ಇಂಟರ್‌ನೆಟ್ ಮುಖೇನ ದೂರುದಾರರನ್ನು ಸಂಪರ್ಕಿಸಬೇಕು.
ಬಿ) ದೂರು ನಿರ್ವಹಣೆಯ ಸಮಯ ಹೇಳಬೇಕು.
ಅವಧಿ ೨೦೦೫ ಜುಲೈ ೧ರಂದು ಟ್ರಾಯ್ ಹೊರಡಿಸಿದ ನಿಯಮದಲ್ಲಿ ಇಲ್ಲದ ಸೇವಾ ವೈಫಲ್ಯಗಳಿಗೆ ಅನ್ವಯಿಸುತ್ತದೆ.
೨. ಯಾವುದೇ ನಿಯಮದಲ್ಲಿ ಕಾಣದ ಸೇವಾದೋಷಗಳಿಗೆ ಸಂಬಂಧಿಸಿದ ದೂರನ್ನು ೭ ದಿನಗಳಲ್ಲಿ ಇತ್ಯರ್ಥ ಪಡಿಸಬೇಕು.
೩. ಬೇರಾವುದೇ ಕಾನೂನು ಯಾ ನಿಯಮದಲ್ಲಿ ದೂರು ಪರಿಹಾರಕ್ಕೆ ಸಮಯ ಮಿತಿ ಇದ್ದಲ್ಲಿ ಆ ಅವಧಿಯಲ್ಲಿ ಅಂತಹ ದೂರನ್ನು ಬಗೆಹರಿಸ ಬೇಕು.

ನೋಡಲ್ ಆಫೀಸರ್‌ಗಳು ದೂರು ಬಗೆಹರಿಸುವ ವಿಧಾನ

೧. ನೋಡಲ್ ಆಫೀಸರ್‌ಗಳ ನೇಮಕಾತಿ :
ಪ್ರತಿ ಸೇವಾ ವಲಯದಲ್ಲಿ ಎಲ್ಲಾ ಸೇವಾ ಪೂರೈಕೆದಾರರು ನೋಡಲ್ ಆಫೀಸರ್‌ಗಳನ್ನು ನೇಮಿಸಬೇಕು. ಸೇವೆ ಪೂರೈಸುವ ಕಂಪನಿಗಳು ತಮ್ಮ ಸೇವೆಯ ಸ್ವರೂಪಕ್ಕೆ (ಅಂದರೆ ಸ್ಥಿರ ದೂರವಾಣಿ ಯಾ ಮೊಬೈಲ್ ದೂರವಾಣಿ ಯಾ ಇಂಟರ್‌ನೆಟ್ ಇತ್ಯಾದಿ) ಅನುಗುಣವಾಗಿ ಪ್ರತ್ಯೇಕ ನೋಡಲ್ ಆಫೀಸರ್‌ರನ್ನು ನೇಮಿಸಬಹುದು ಅಥವಾ ಒಬ್ಬರನ್ನೇ ಎಲ್ಲದರ ದೂರು ವಿಚಾರಣೆಗೆ ನೇಮಿಸಬಹುದು.
ಹಾಗೆ ನೇಮಿಸಿಯಾದ ಮೇಲೆ ಪ್ರತಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಸುದ್ದಿಪತ್ರಿಕೆಗಳಲ್ಲಿ ಜಾಹಿರಾತು ಕೊಡುವ ಮೂಲಕ ತಮ್ಮ ನೋಡಲ್ ಆಫೀಸರ್‌ನ ಹೆಸರು, ವಿಳಾಸ, ಸಂಪರ್ಕ, ದೂರವಾಣಿ ನಂಬರ್‌ಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ನೋಡಲ್ ಆಫೀಸರ್ ಬದಲಾವಣೆಯಾದರೆ ಅದನ್ನೂ ಪತ್ರಿಕೆಗಳ ಮೂಲಕ ಜನರಿಗೆ ತಿಳಿಸಬೇಕು.
ಪ್ರತಿ ಸೇವಾ ಪೂರೈಕೆದಾರರು ತಮ್ಮ ಎಲ್ಲಾ ಕಛೇರಿಗಳಲ್ಲಿ ನೋಡಲ್ ಆಫೀಸರ್‌ನ ಮೇಲ್ಕಂಡ ವಿವರಗಳನ್ನು ಬೋರ್ಡ್ ಹಾಕಿ ಗ್ರಾಹಕರ ಗಮನಕ್ಕೆ ತರತಕ್ಕದ್ದು.
೨. ಕಾಲ್‌ಸೆಂಟರಿನಲ್ಲಿ ಕೊಟ್ಟ ದೂರು ಇತ್ಯರ್ಥವಾಗದಿದ್ದಲ್ಲಿ ಸಂತ್ರಸ್ಥ ಗ್ರಾಹಕರು ದೂರವಾಣಿ, ಪತ್ರ, ಇ-ಮೇಲ್, ಎಸ್‌ಎಂಎಸ್ ಮುಂತಾದ ರೂಪದಲ್ಲಿ ನೋಡಲ್ ಆಫೀಸರ್ ಬಳಿ ದೂರಬಹುದು.
ತುರ್ತು ಸಂದರ್ಭದಲ್ಲಿ ಕಾಲ್ ಸೆಂಟರ್ ಬಿಟ್ಟು ನೇರವಾಗಿ ನೋಡಲ್ ಆಫೀಸರ್‌ರಲ್ಲಿ ದೂರಬಹುದು.
೩. ನೋಡಲ್ ಆಫೀಸರ್ ಕೆಳಗಿನಂತೆ ಕಡ್ಡಾಯವಾಗಿ ಮಾಡಲೇಬೇಕು:
ಅ. ಸಾರ್ವಜನಿಕರಿಗೆ ಮೇಲ್ಕಂಡಂತೆ ತಿಳಿಸಿದ ವಿಳಾಸದಲ್ಲಿ ಲಭ್ಯವಿರಬೇಕು.
ಆ.ದೂರಿತ್ತವರ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.
ಇ. ದೂರುಕೊಟ್ಟ ೩ ದಿನಗಳೊಳಗೆ ದೂರು ನಂಬರನ್ನು ಗ್ರಾಹಕನಿಗೆ ತಿಳಿಸಬೇಕು.
ಈ. ನಿರ್ದಿಷ್ಟ ಸಮಯ ಮಿತಿಯಲ್ಲಿ ಅಂದರೆ ೩ ರಿಂದ ೧೦ ದಿನಗಳಲ್ಲಿ ದೂರು ಪರಿಹಾರಕ್ಕೆ ಕ್ರಮ ಕೈಗೊಂಡು ಅದನ್ನು ದೂರಿತ್ತ ಗ್ರಾಹಕನಿಗೆ ತಿಳಿಸಬೇಕು.

ಉ. ಸಮಯ ಮಿತಿ : ಸೇವಾ ವ್ಯತ್ಯಯ ಮತ್ತು ಸಂಪರ್ಕ ಕಡಿತ ಕುರಿತ ದೂರುಗಳನ್ನು ದೂರು ನೋಂದಾಯಿಸಿದ ೩ ದಿನಗಳಲ್ಲಿ ಬಗೆಹರಿಸಬೇಕು. ಇತರೆ ದೂರುಗಳನ್ನು ೧೦ ದಿನಗಳೊಳಗೆ ಪರಿಹರಿಸಬೇಕು.
ಮೇಲ್ಮನವಿ ಪ್ರಾಧಿಕಾರ
ಸೇವಾ ಪೂರೈಕೆದಾರನಡಿ ಇರುವ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವ ಬಗೆ :
ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಮುಂತಾದ ಸೇವೆ ಒದಗಿಸುತ್ತಿರುವ ಸೇವಾ ಕಂಪನಿಗಳು ‘ಟೆಲಿಕಾಂ ಗ್ರಾಹಕರ ದೂರು ಪರಿಹಾರ ನಿಯಮ’ ಜಾರಿಗೆ ಬಂದ ೩ ತಿಂಗಳೊಳಗೆ ತಾವು ಕಾರ್‍ಯ ನಿರ್ವಹಿಸುತ್ತಿರುವ ಪ್ರತಿ ಸೇವಾ ವಲಯದಲ್ಲಿ (ಅಂದರೆ ರಾಜ್ಯಕ್ಕೊಂದರಂತೆ) ಕನಿಷ್ಠ ಪಕ್ಷ ಒಂದಾದರೂ ಮೇಲ್ಮನವಿ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಈ ಸಂಬಂಧ ಕೇಂದ್ರ ಟೆಲಿಕಾಂ ಇಲಾಖೆ ೨೦೦೫ ಸೆಪ್ಟೆಂಬರ್ ೨೨ರಂದು ಹೊರಡಿಸಿದ ಸುತ್ತೋಲೆಯಂತೆ ಸ್ಥಾಪಿತವಾದ ಮೇಲ್ಮನವಿ ಪ್ರಾಧಿಕಾರಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೆ, ಮತ್ತೆ ಹೊಸ ಮೇಲ್ಮನವಿ ಪ್ರಾಧಿಕಾರ ನೇಮಿಸುವ ಅಗತ್ಯವಿಲ್ಲ. ಹೊಸದಾಗಿ ಶುರುವಾದ ಕಂಪನಿಗಳು ತಮ್ಮ ಇನ್ನಿತರ ಚಟುವಟಿಕೆಗಳ ಜೊತೆ ಇಂತಹ ಮೇಲ್ಮನವಿ ಪ್ರಾಧಿಕಾರಗಳನ್ನು ಚಾಲೂ ಮಾಡತಕ್ಕದ್ದು.
ಒಂದು ವೇಳೆ ಒಂದೇ ಕಂಪನಿ ವಿವಿಧ ಸೇವೆ ಕೊಡುತ್ತಿದ್ದರೆ ಅವೆಲ್ಲದಕ್ಕೆ ಪ್ರತ್ಯೇಕ ಅಥವಾ ಎಲ್ಲದರಿಂದ ಒಂದೇ ಮೆಲ್ಮನವಿ ಪ್ರಾಧಿಕಾರ ಸ್ಥಾಪಿಸಬಹುದು.
ಸೇವಾಪೂರೈಕೆದಾರರು ಮೇಲೆ ಹೇಳಿದ ದೂರು ಇತ್ಯರ್ಥಪಡಿಸುವ ಮೇಲ್ಮನವಿ ಪ್ರಾಧಿಕಾರ ನೇಮಿಸಿದ ನಂತರ ಕೆಳಕಂಡ ಕ್ರಮ ಅನುಸರಿಸತಕ್ಕದ್ದು.
೧. ಒಂದು ಇಂಗ್ಲೀಷ್ ಅಥವಾ ಹಿಂದಿ ಮತ್ತು ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮುಖೇನ ಹಾಗೂ ದೂರವಾಣಿ ಬಿಲ್‌ಗಳಲ್ಲಿ ಮುದ್ರಿಸುವ ಮುಖೇನ ಮೇಲ್ಮನವಿ ಪ್ರಾಧಿಕಾರ ಸ್ಥಾಪಿಸಿದ ವಿಚಾರವನ್ನು ಗ್ರಾಹಕರಿಗೆ ತಿಳಿಸಬೇಕು. ಆ ಜಾಹಿರಾತಿನಲ್ಲಿ ಮೇಲ್ಮನವಿ ಪ್ರಾಧಿಕಾರದ ವಿಳಾಸ, ಫೋನ್ ನಂಬರ್, ಇ ಮೇಲ್ ಐಡಿ ಇತ್ಯಾದಿಗಳಲ್ಲದೆ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ವಿಧಾನವನ್ನು ತಿಳಿಸಬೇಕು. ಈ ತರಹದ ಜಾಹಿರಾತನ್ನು ವರ್ಷಕ್ಕೊಂದು ಸಾರಿ ಪುನರಾವರ್ತಿಸಬೇಕು.
೨. ಸೇವಾ ಪೂರೈಕೆದಾರನ ಕಛೇರಿ, ಕಾಲ್‌ಸೆಂಟರ್, ಸಹಾಯ ಕೇಂದ್ರ, ಮಾರಾಟ ಮಳಿಗೆ, ವೆಬ್‌ಸೈಟ್ ಮುಂತಾದ ಕಡೆ ಬೋರ್ಡ್ ಹಾಕಿ ಮೇಲ್ಮನವಿ ಪ್ರಾಧಿಕಾರದ ಹೆಸರು, ವಿಳಾಸ ಮತ್ತು ಇನ್ನಿತರ ವಿವರಗಳನ್ನು ಪ್ರಚುರಪಡಿಸಬೇಕು.

೩.ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವಿಕೆ
೧. ದೂರವಾಣಿ, ಇಂಟರ್‌ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯ ಕುರಿತು ನೋಡಲ್ ಆಫೀಸರ್‌ಗೆ ಕೊಟ್ಟ ದೂರು ಇತ್ಯರ್ಥವಾಗದಿದ್ದರೆ, ಉತ್ತರ ಬರದಿದ್ದರೆ ಅಥವಾ ಅವರು ಕೊಟ್ಟ ತೀರ್‍ಮಾನ ದೂರಿತ್ತ ಗ್ರಾಹಕನಿಗೆ ಸಮಾಧಾನ ತರದಿದ್ದರೆ ಅಂತಹ ಗ್ರಾಹಕರು ಮೇಲ್ಮನವಿ ಪ್ರಾಧಿಕಾರಕ್ಕೆ ಲಿಖಿತ ದೂರು ಕೊಡಬಹುದು.
೨. ಮೇಲ್ಮನವಿಯಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸುವ ಆಪೀಲು ದ್ವಿಪ್ರತಿಯಲ್ಲಿರಬೇಕು ಮತ್ತು ನಿಗದಿತ ಅರ್ಜಿ ನಮೂನೆಯಲ್ಲಿರಬೇಕು. (ಅರ್ಜಿ ನಮೂನೆಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ)
೩. ನೋಡಲ್ ಆಫೀಸರ್‌ಗೆ ದೂರಿಕೊಂಡು ೧೦ ದಿನಗಳಾದರೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಆ ೧೦ ದಿನಗಳ ನಂತರ ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸಬೇಕು.
೪. ಎಲ್ಲಾ ಸೇವಾ ಪೂರೈಕೆದಾರರು ಸಂತ್ರಸ್ಥ ಗ್ರಾಹಕರಿಗೆ ಆಪೀಲು ಸಲ್ಲಿಸಲು ಅಗತ್ಯವಿರುವ ಅರ್ಜಿ ನಮೂನೆಯನ್ನು ಉಚಿತವಾಗಿ ಕೊಡಬೇಕು. ಸದರಿ ಅರ್ಜಿ ನಮೂನೆಗಳು ಸೇವಾ ಪೂರೈಕೆದಾರರ ಎಲ್ಲಾ ಕಛೇರಿ, ಮಾರಾಟ ಮಳಿಗೆ, ನೋಡಲ್ ಆಫೀಸರ್ ಕಛೇರಿಗಳಲ್ಲಿ ಲಭ್ಯವಿರಬೇಕು. ಅಲ್ಲದೇ ವೆಬ್‌ಸೈಟ್‌ನಲ್ಲೂ ಸಿಗುವಂತಿದ್ದು ಡೌನ್‌ಲೋಡ್ ಮಾಡಲು ಬರುವಂತಿರಬೇಕು.
ಅಪೀಲು ನಿರ್ವಹಿಸುವ ವಿಧಾನ
# ಮೇಲ್ಮನವಿ ಪ್ರಾಧಿಕಾರವು ತನಗೆ ಬರುವ ದೂರನ್ನು ದಾಖಲಿಸಿಕೊಂಡು, ಮೂರು ದಿನಗಳಲ್ಲಿ ಹಾಗೆ ದಾಖಲಿಸಿಕೊಂಡ ದೂರು ನಂಬರ್ ಸಹಿತ ಗ್ರಾಹಕನಿಗೆ ರಶೀದಿ ಕಳಿಸಬೇಕು.
# ಅಪೀಲು ದಾಖಲಿಸಿಕೊಂಡಾದ ಆರು ದಿನಗಳಲ್ಲಿ ದೂರು ಬರಲು ಕಾರಣವಾದ ಟೆಲಿಕಾಂ ಕಂಪನಿಗೆ ಅಪೀಲಿನ ಪ್ರತಿ ಕಳಿಸಿ ಪ್ರತಿಕ್ರಿಯೆ ಕೊಡಲು ಹೇಳಬೇಕು.
# ಸೇವಾ ಪೂರೈಕೆದಾರನು ಅಪೀಲಿನ ಪ್ರತಿ ಸ್ವೀಕೃತವಾದ ೧೫ ದಿನಗಳಲ್ಲಿ ತನ್ನ ಉತ್ತರ ಕೊಡಬೇಕು. ಇಲ್ಲಿ ಉತ್ತರ ಕೊಡುವುದೆಂದರೆ ಸಮಸ್ಯೆ ಪರಿಹರಿಸುವುದೂ ಸೇರುತ್ತದೆ.
# ಒಂದು ಪಕ್ಷ ಸೇವಾ ಪೂರೈಕೆದಾರನು ೧೫ ದಿನಗಳಲ್ಲಿ ಉತ್ತರಿಸದಿದ್ದಲ್ಲಿ, ಮೇಲ್ಮನವಿ ಪ್ರಾಧಿಕಾರವು ಆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಪ್ರಕರಣವನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಯಾವುದೇ ಮಾಹಿತಿ, ದಾಖಲೆಗಳನ್ನು ಮೇಲ್ಮನವಿ ಪ್ರಾಧಿಕಾರವು ಸೇವಾ ಕಂಪನಿಯಿಂದ ಯಾ ಗ್ರಾಹಕನಿಂದ ಕೇಳಿ ಪಡೆಯಲು ಅಧಿಕಾರ ಹೊಂದಿದೆ.
# ಒಂದು ವೇಳೆ ಸೇವಾ ಕಂಪನಿಯು ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಒದಗಿಸದಿದ್ದರೆ ಪ್ರಕರಣದ ಯೋಗ್ಯತೆ ಅನುಸರಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಹುದು.
# ಸೇವಾಲೋಪ ಎಸಗಿದ ಕಂಪನಿಯಿಂದ ಉತ್ತರ ಬಂದ ನಂತರ ಹಾಗೂ ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಬಂದ ನಂತರ ಪ್ರಾಧಿಕಾರವು ಸೂಕ್ತಕಂಡ ತನಿಖೆ ನಡೆಸಬಹುದು. ವಿಚಾರಣೆ ನಡೆಸುವಾಗ ಟೆಲಿಕಾಂ ಕಂಪನಿ ಮತ್ತು ಗ್ರಾಹಕನಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು. ತದನಂತರ ಪ್ರಕರಣದ ಅರ್ಹತೆ ಮೇಲೆ ನ್ಯಾಯ ತೀರ್‍ಮಾನ ಕೊಡಬೇಕು. ತೀರ್‍ಮಾನವನ್ನು ಬರವಣಿಗೆಯಲ್ಲಿ ಕಾರಣಸಹಿತವಾಗಿ ನೀಡಬೇಕು.
# ದೂರುದಾರ ಗ್ರಾಹಕನು ವಿಚಾರಣೆಗೆ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
# ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥಪಡಿಸಬಹುದು.
# ಅಪೀಲು ದಾಖಲಿಸಿದ ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಅಪೀಲು ಇತ್ಯರ್ಥವಾದ ಏಳು ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
# ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು, ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
# ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಮೇಲ್ಮನವಿ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ಅರ್ಜಿ ನಮೂನೆ
ಟೆಲಿಕಾಂ ಗ್ರಾಹಕರ ಹಿತರಕ್ಷಣೆ ಮತ್ತು ದೂರು ಪರಿಹಾರ ನಿಯಮ, ೨೦೦೭ರಂತೆ....... (ಇಲ್ಲಿ ದೂರು ಹುಟ್ಟಲು ಕಾರಣವಾದ ಟೆಲಿಕಾಂ ಕಂಪೆನಿಯ ಹೆಸರು ಮತ್ತು ವಿಳಾಸ ಬರೆಯಬೇಕು) ಕಂಪನಿ ನೇಮಿಸಿರುವ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸುತ್ತಿರುವ ದೂರು
ಅ. ಅಪೀಲುದಾರರ ಹೆಸರು, ವಿಳಾಸ, ಫೋನ್ ನಂಬರ್, ಇ ಮೇಲ್ ವಿವರ
ಆ. ಅಪೀಲು ಹಾಕಲು ಕಾರಣವಾದ ಸ್ಥಿರ ದೂರವಾಣಿ ನಂಬರ್ ಅಥವಾ ಮೊಬೈಲ್ ನಂಬರ್, ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರುತು
ಇ. ದೂರು ಇರುವ ಪ್ರದೇಶದ ವಿವರ
ಈ. ದೂರು ಹುಟ್ಟಿರುವ ರಾಜ್ಯ ಅಥವಾ ಸೇವಾ ವಲಯದ ಹೆಸರು
ಉ. ದೂರಿನ ವಿವರವಾದ ಸ್ವರೂಪ (ದೂರು ಯಾವುದಕ್ಕೆ ಸಂಬಂಧಿಸಿದ್ದು ಬರೆಯಿರಿ. ಅಂದರೆ ಸಂಪರ್ಕ/ಆಕ್ಟಿವೇಶನ್ / ಬಿಲ್ಲಿಂಗ್ / ಕೆಟ್ಟಿರುವ ಫೋನ್ ರಿಪೇರಿ/ಸೇವಾಲೋಪ/ ಸಂಪರ್ಕ ಕಡಿತ/ಮೌಲ್ಯ ವರ್ಧಿತ ಸೇವೆ/ ದೂರವಾಣಿ ಸಂಪರ್ಕ ಸ್ಥಗಿತ-ಇತ್ಯಾದಿಗಳಲ್ಲಿ ಯಾವುದೆಂದು ಹೇಳಿ)
ಊ. ದೂರನ್ನು ಮೊದಲಬಾರಿ ಕಾಲ್ ಸೆಂಟರ್‌ನಲ್ಲಿ ದಾಖಲಿಸಿದಾಗ ಅಲ್ಲಿ ಕೊಟ್ಟ ನಂಬರ್, ದಿನಾಂಕ ಸಹಿತ
ಎ. ಎರಡನೇ ಹಂತದಲ್ಲಿ ದೂರನ್ನು ನೋಡಲ್ ಆಫೀಸರ್‌ಗೆ ಕೊಟ್ಟಾಗ ಅವರು ಕೊಟ್ಟಿರುವ ದೂರು ಸಂಖ್ಯೆ, ದಿನಾಂಕದೊಂದಿಗೆ ಏ. ನೋಡಲ್ ಆಫೀಸರ್ ತೀರ್‍ಮಾನ ಕೊಟ್ಟಿದ್ದರೆ ಅದರ ವಿವರ ಮತ್ತು ಆದೇಶದ ಪ್ರತಿ. ಕೊಟ್ಟಿಲ್ಲದಿದ್ದಲ್ಲಿ ಅದನ್ನೂ ಕಾಣಿಸಬೇಕು
ಐ. ದೂರಿನ ಅಥವಾ ಅಪೀಲಿಗೆ ಕಾರಣವಾಗುವ ವಿಷಯಗಳು.
ಒ. ಅಪೀಲಿಗೇನು ಕಾರಣ-ವಿಷಯದ ಪೂರ್ತಿ ವಿವರ, ದಾಖಲೆಗಳ ಪೊಟೊ ಪ್ರತಿ ಸಹಿತ
ಓ. ಕೇಳುವ ಪರಿಹಾರವೇನು?(ಅಗತ್ಯಬಿದ್ದರೆ ಪ್ರತ್ಯೇಕ ಹಾಳೆಯಲ್ಲಿಯೂ ಬರೆಯ ಬಹುದು)
ಔ. ಸದರಿ ದೂರು ಯಾ ಆಪೀಲು ಬೇರಾವುದೇ ನ್ಯಾಯಾಲಯದಲ್ಲಿ ದಾಖಲಾಗಿಲ್ಲವೆಂಬ ಬಗ್ಗೆ ಹೇಳಿಕೆ
ಅಂ. ಇನ್ನಿತರ ಮಾಹಿತಿ ಯಾ ದಾಖಲೆಗಳು
ಅಃ. ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿದರೆ ಅದನ್ನು ಬರೆಯಬೇಕು.

ಈ ಅರ್ಜಿ ನಮೂನೆ ಜೊತೆಗೆ ಸತ್ಯ ಮಾಪನಾ ಹೇಳಿಕೆಯನ್ನೂ ಲಗತ್ತಿಸಬೇಕು.
೧. ಗ್ರಾಹಕ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
೨. ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥ ಪಡಿಸಬಹುದು.
೩. ಅಪೀಲು ದಾಖಲಿಸಿದ ೩ ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
೪. ಅಪೀಲು ಇತ್ಯರ್ಥವಾದ ೭ ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
೫. ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು, ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
೬. ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಅಪೀಲಿನ ಬಗ್ಗೆ ಮಾಹಿತಿ
ಟೆಲಿಕಾಂ ಕಂಪನಿಗಳು ತಮ್ಮ ವ್ಯಾಪ್ತಿಯ ಮೇಲ್ಮನವಿ ಪ್ರಾಧಿಕಾರದಡಿ ಇರುವ ಅಪೀಲುಗಳ ಸಂಖ್ಯೆ, ಇತ್ಯರ್ಥವಾದವು, ಇನ್ನೂ ವಿಚಾರಣೆ ನಡೆಯುತ್ತಿರುವುದು, ಅಪೀಲು ನಿರ್ವಹಣೆಯಲ್ಲಿ ಕಾಲಮಿತಿ ಅನುಸರಿಸಿದ ವಿವರ- ಇತ್ಯಾದಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಹಾಕಿ ಸಾರ್ವಜನಿಕರ ಗಮನಕ್ಕೆ ತರಬೇಕು.

ಗ್ರಾಹಕ ದೂರುಗಳನ್ನು ಟ್ರಾಯ್ ಸಹಾ ನಿರ್ವಹಿಸುತ್ತದೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಗ್ರಾಹಕರ ದೂರುಗಳನ್ನು, ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳಿಗೆ ಇತ್ಯರ್ಥಕ್ಕಾಗಿ ಕಳುಹಿಸಬಹುದು. ಅವುಗಳ ವಿವರ ಹೀಗಿದೆ.
೧. ಟ್ರಾಯ್ ಕಾಯ್ದೆ ಅಥವಾ ಟ್ರಾಯ್ ಕೊಟ್ಟಿರುವ ಆದೇಶ, ನಿಯಮ ಅಥವಾ ನಿರ್ದೇಶನದ ಉಲ್ಲಂಘನೆ ಕುರಿತ ದೂರುಗಳನ್ನು ಕಳಿಸಬಹುದು.
೨. ಗ್ರಾಹಕರ ಸಾಮೂಹಿಕ ದೂರುಗಳು.
೩. ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳು ಅನುಸರಿಸುತ್ತಿರುವ ಕಾರ್ಯ ವಿಧಾನ ಅಥವಾ ಪದ್ದತಿಗಳು ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವಂತಿದ್ದರೆ ಅಂತಹ ದೂರುಗಳು.
೪. ಮೇಲಿನ ದೂರುಗಳನ್ನು ಟ್ರಾಯ್‌ನಿಂದ ಪಡೆದ ಒಂದು ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ದೂರಿನ ಬಗ್ಗೆ ತನಿಖೆ ನಡೆಸಿ ಅವನ್ನು ಬಗೆಹರಿಸಬೇಕು.
೫. ಹಾಗೆ ಬಗೆಹರಿಸಿದ್ದನ್ನು ಗ್ರಾಹಕರಿಗೆ ಮತ್ತು ಟ್ರಾಯ್‌ಗೆ ಒಂದು ತಿಂಗಳೊಳಗೆ ತಿಳಿಸಬೇಕು.
೬. ಟ್ರಾಯ್‌ನಿಂದ ಕಳಿಸಲ್ಪಟ್ಟ ದೂರುಗಳು ಟೆಲಿಕಾಂ ಕಂಪನಿಯ ಅಧಕ್ಷತೆ, ಕಾರ್ಯವಿಧಾನದ ಲೋಪದೋಷ, ವ್ಯವಸ್ಥೆಯ ವೈಫಲ್ಯ ಮುಂತಾವುದನ್ನು ಸೂಚಿಸುವಂತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡು ಟ್ರಾಯ್‌ಗೆ ಮತ್ತು ದೂರಿತ್ತ ಗ್ರಾಹಕರಿಗೆ ತಿಳಿಸಬೇಕು.
ಶೆಡ್ಯೂಲ್
(ನಿಯಮ ೫ ನೋಡಿ)
ಕಾಲ್ ಸೆಂಟರ್‌ಗಳು ಟೆಲಿಕಾಂ ಗ್ರಾಹಕರ ದೂರು ನಿವಾರಿಸುವಾಗ ಅನುಸರಿಸಬೇಕಾದ ಸೇವಾ ಮಾನದಂಡಗಳು ಮತ್ತು ಸಮಯ ಮಿತಿ

ಅ. ಸ್ಥಿರ ದೂರವಾಣಿ ಸೇವೆ
ಸೇವಾ ಮಾನದಂಡ ಸಮಯ ಮಿತಿ
೧. ದೂರವಾಣಿ ಸಂಪರ್ಕ ಒದಗಿಸುವುದು ೭ ದಿನಗಳಲ್ಲಿ (ತಾಂತ್ರಿಕ ಸಂಭವನೀಯತೆಗೆ ಒಳಪಟ್ಟು)
೨. ಕೆಟ್ಟಿರುವ ಫೋನ್ ರಿಪೇರಿ ೩ ದಿನಗಳಲ್ಲಿ
೩. ಟೆಲಿಫೋನ್ ವರ್ಗಾವಣೆ ೩ ದಿನಗಳಲ್ಲಿ
೪. ಟೆಲಿಫೋನ್ ಸಂಪರ್ಕ ತೆಗೆಸುವುದು ೨೪ ಗಂಟೆಗಳೊಳಗೆ
೫. ೪ ವಾರಗಳೊಳಗೆ ಇತ್ಯರ್ಥಗೊಳ್ಳುವ ಎಲ್ಲ ಬಿಲ್ಲಿಂಗ್ ದೂರುಗಳು
ಬಿಲ್ಲಿಂಗ್ ದೂರುಗಳ ಶೇಕಡಾವಾರು ೪ ವಾರಗಳಲ್ಲಿ ಬಗೆಹರಿಯಬೇಕು
೬. ದೂರವಾಣಿ ಸಂಪರ್ಕ ಕಡಿತಗೊಳಿಸಿದ ಎಲ್ಲಾ ಠೇವಣಿಗಳನ್ನು ೬೦
ನಂತರ ಠೇವಣಿ ವಾಪಸ್ಸಾತಿ ದಿನಗಳೊಳಗೆ ಮರಳಿಸಬೇಕು.


ಆ. ಸ್ಥಿರ, ಡಬ್ಲುಎಲ್‌ಎಲ್ ಮತ್ತು ಸೆಲ್ಯುಲಾರ್ ಮೊಬೈಲ್ ದೂರವಾಣಿ ಸೇವೆ
ಸೇವಾ ಮಾನದಂಡ ಸಮಯ ಮಿತಿ
ಬಿಲ್ಲಿಂಗ್ ದಕ್ಷತೆ
ಅ. ೪ ವಾರಗಳೊಳಗೆ ಇತ್ಯರ್ಥಗೊಳ್ಳಬೇಕಾದ ಎಲ್ಲಾ ದೂರುಗಳು
ಬಿಲ್ಲಿಂಗ್ ದೂರುಗಳ ಶೇಕಡಾವಾರು ೪ ವಾರಗಳಲ್ಲಿ ಬಗೆಹರಿಯಬೇಕು.
ಆ. ದೂರು ಬಗೆಹರಿದ ದಿನದಿಂದ ಗ್ರಾಹಕರಿಗೆ ಎಲ್ಲಾ ಹಣ ಪಾವತಿ ಮತ್ತು ಠೇವಣಿ ಮರುಪಾವತಿಗಳು
ಪಾವ್ತಿಯಾಗಬೇಕಾದ ಹಣ ಮತ್ತು ಇನ್ನಿತರ ೪ ವಾರಗಳಲ್ಲಿ ಪರಿಹಾರವಾಗಬೇಕು.
ಠೇವಣಿಗಳ ವಾಪಸ್ಸಾತಿ

ಇ. ಬ್ರಾಡ್‌ಬ್ಯಾಂಡ್ ಸೇವೆ
ಸೇವಾ ಮಾನದಂಡ ಸಮಯ ಮಿತಿ
೧. ಸೇವೆ ಒದಗಿಸುವುದು ಮತ್ತು ಆಕ್ಟಿವೇಶನ್ ಸಮಯ ೧೫ ದಿನಗಳೊಳಗೆ (ತಾಂತ್ರಿಕ ಸಂಭ್ಯಾವತೆಗೆ ಒಳಪಟ್ಟು)
೨. ರಿಪೇರಿ ಹಾಗೂ ಪುನರ್ ಸಂಪರ್ಕ ೩ ದಿನಗಳೊಳಗೆ
೩. ಬಿಲ್ಲಿಂಗ್ ದೂರುಗಳು ಅ. ಬಿಲ್ಲಿಂಗ್ ತಕರಾರು ೪ ವಾರಗಳಲ್ಲಿ
ಆ. ಠೇವಣಿ ವಾಪಸ್ಸಾತಿ ೬೦ ದಿನಗಳೊಳಗೆ


ಬಿಎಸ್‌ಎನ್‌ಎಲ್ - ಕರ್ನಾಟಕ ಟೆಲಿಕಾಂ ಸರ್ಕಲ್
ಮೊದಲ ಹಂತ : ಕಾಲ್‌ಸೆಂಟರ್‌ಗಳು
ಸ್ಥಿರ ದೂರವಾಣಿ/ಬ್ರಾಡ್‌ಬ್ಯಾಂಡ್ - ೧೫೦೦
ಜಿಎಸ್‌ಎಂ ಮೊಬೈಲ್ - ೯೪೦೦೦೨೪೩೬೫
ಬ್ರಾಡ್‌ಬ್ಯಾಂಡ್/ ಇಂಟರ್‌ನೆಟ್ ಸೇವೆ - ೧೮೦೦೪೨೪೧೬೦೦
MPLS ಮತ್ತಿತರ ಡಾಟಾ ಸೇವೆಗಳು - ೧೮೦೦ ೪೨೫ ೧೯೫೭
(ಈ ಎಲ್ಲಾ ದೂರವಾಣಿಗಳು ಉಚಿತ ಸೇವೆ)

ಎರಡನೇ ಹಂತ : ನೋಡಲ್ ಆಫೀಸರ್
ಸರ್ವೀಸ್ - ಏರಿಯಾ ನೋಡಲ್ ಆಫೀಸರ್ ವಿವರ
ಕರ್ನಾಟಕ ಟೆಲಿಕಾಂ ಎ.ಪಿ.ಭಟ್ ಡಿಜಿಎಂ (ಆ)

ಸರ್ಕಲ್‌ನ ಮುಖ್ಯ ಕಛೇರಿ ಸಿಜಿಎಂಟಿ ಕಚೇರಿ ಬೆಂಗಳೂರು ೦೮೦ - ೨೫೫೯೫೫೯೯
ಫ್ಯಾಕ್ಸ -೦೮೦-೨೫೫೧೧೨೭೭
ಮೊಬೈಲ್ ಸರ್ವೀಸ್ (ಒ) ಬಿ.ಎಸ್.ಕೃಷ್ಣಮೂರ್ತಿ ಡಿಇ(ಟಿಟಿ)
ಜಿಎರಿ ಕಚೇರಿ-ಮೊಬೈಲ್ ಸೇವೆ ಬೆಂಗಳೂರು
ಫೋನ್ - ೦೮೦-೨೨೩೫೬೨೨೨
ಮೊಬೈಲ್ ಸರ್ವೀಸ್ (ಡಿ) ರವಿಕುಮಾರ್ ಡಿಜಿಎಂ(ಇನ್ಸ್‌ಟಲೇಶನ್)
ಜಿಎಂ ಕಛೇರಿ - ಮೊಬೈಲ್ ಸೇವೆ ಬೆಂಗಳೂರು
ಪೋನ್ -೦೮೦-೨೫೫೫೨೮೧೬, ಫ್ಯಾಕ್ಸ್ - ೦೮೦-೨೫೫೫೨೮೧೭

ಮೂರನೇ ಹಂತ : ಮೇಲ್ಮನವಿ ಪ್ರಾಧಿಕಾರ

ಎ. ಸುಬ್ರಹ್ಮಣ್ಯನ್ ಜಿಎಂ (ಆ)
ಸಿಜಿಎಂಟಿ ಕಚೇರಿ,
ದೂರ ಸಂಪರ್ಕ ಭವನ, ಹಲ್ಸೂರು,
ಬೆಂಗಳೂರು - ೫೬೦೦೦೮
ಪೋನ್ -೦೮೦-೨೫೫೭೬೫೭೭
ಫ್ಯಾಕ್ಸ್ -೦೮೦-೨೫೫೬೨೬೦೨


[ಮಾವೆಂಸ ಎನ್ನುವ ಹೆಸರು ಅಚ್ಚಾಗದ ಪತ್ರಿಕೆಯೇ ಇಲ್ಲ ಎನ್ನಬಹುದು.ಕ್ರಷಿಕರಾಗಿ ಬರಹಗಾರರಾಗಿ ತೊಡಗಿಸಿಕೊಂಡಿರುವ ಅವರು ಅನೇಕ ಮಾಹಿತಿಯ ಕಣಜ. ದಿನ ನಿತ್ಯ ದೂರವಾಣಿ,ಬ್ರಾಡ್ ಬ್ಯಾಂಡ್ ,ಮೊಬೈಲ್ ಸೇರಿದಂತೆ ಇತರ ಸೇವೆ ಬಳಸಿದರೂ ಅದರ ಸೇವೆಯಲ್ಲಾದ ವ್ಯತ್ಯಯ ಬಗ್ಗೆ ಕ್ರಮ ಜರುಗಿಸಲು ನಮಗೆ ಮಾಹಿತಿ ಕೊರತೆ ಇರಬಹುದು.ಕಾನೂನು ರೀತ್ಯಾ ನಾವು ಸೇವೆಯಲ್ಲಾದ ಲೋಪದ ಪರಿಹಾರವನ್ನು ಪಡೆಯಬಹುದು ಎಂದು ಮಾವೆಂಸ ಅವರು ತಮ್ಮ ಬ್ಲಾಗ್ ನಲ್ಲಿ ವಿವರಿಸಿದ್ದಾರೆ.ಪ್ರತಿಯೊಬ್ಬ ಗ್ರಾಹಕನು ನೋಡಲೇ ಬೇಕಾದ ಬರಹ ಅಲ್ಲಿವೆ ಒಮ್ಮೆ ಕಣ್ಣಾಡಿಸಿ. ಮಾವೆಂಸ ಬ್ಲಾಗ್ ಗೆ ಕ್ಲಿಕ್ ಮಾಡಿ - ನಿತಿನ್ ]