ನಂಗೆ ಗೋತ್ತು ಕಣೆ. ಇವನೇನಪ್ಪ ಪ್ರೀತೆಯ ಮುದ್ದು,ಚಿನ್ನು,ಬಂಗಾರ,ಗೂಬೆ ಎಂದೆಲ್ಲ ಕರೆಯಿತ್ತಿದ್ದವ ದೇವತೆ ಅಂತ ಕರೆಯುತ್ತಿದ್ದಾನೆ ಅಂಥ ಗಲಿಬಿಲಿಗೆ ಬಿದ್ದಿರುತ್ತಿಯಾ ಅಂತ.ನೀನು ಬಿಟ್ಟು ಹೋಗಿದ್ದಿಯ ಅಂತ ಕಂಡಿತ ಬೇಸರವಿಲ್ಲ ಕಣೆ.ಪ್ರೀತಿಯ ಅರ್ಥೈಸಿದವಳು ನೀನು.ಕೈ ಹಿಡಿದು ಸಾಧ್ಯವಾದಷ್ಟು ಮುನ್ನೇಡಿಸಿದ್ದು ನೀನು.ಇವತ್ತು ಒಮ್ಮೇ ಆದರೂ ನಿನ್ನ ನೆನಪು ಮಾಡಿಕೊಳ್ಳದಿದ್ದರೆ ನೀನು ಕಲಿಸಿದ ಪಾಠಕ್ಕೆ ಅರ್ಥವೇ ಇಲ್ಲ.!
ಹೌದು, ಆ ಮಳೆಯ ರಭಸದಲ್ಲಿ ಇರೋ ೧ ಛತ್ರಿಯಲ್ಲಿ ನಾವು ೪ ಜನ ರಕ್ಷಣೆ ಪಡೆದು ಬಸ್ ಪಾಸ್ ಗೆ ಕ್ಯೂನಲ್ಲಿದ್ದಾಗ ನೀನು ನಿನ್ನ ಗೆಳತಿಯರ ಜೊತೆ ಕ್ಲೋಸಪ್ ಶೈಲಿಯಲ್ಲಿ ನಗುತ್ತ ಬಂದೆ.ಆ ಉದ್ದ ಕ್ಯೂನಲ್ಲಿ ನಿಂತು ನಿಂತು ಬೇಜರಾಗಿದ್ದ ನಮಗೆ ನೀನೆ ಮತ್ತೆ ಜೀವ ತುಂಬಿದ್ದು.ಮನದಲ್ಲೇ ಮಂಡಿಗೆ ತಿನ್ನುವುದು ಕಲಿತಿದ್ದೆ ಆವಾಗ ಕಣೆ!!ಮನುಷ್ಯನ ಆಸೆಗೆ ಮೀತಿ ಇಲ್ಲ.ಇವಳು ನಮ್ಮ ಕ್ಲಾಸ್ ಆಗಿದ್ದರೆ ಅಂಥ ಎಲ್ಲರು ಹೇಳುತ್ತ ನಿನ್ನ ಗುಣಗಾನ ಮಾಡುತ್ತ ಕಾಲೇಜ್ ಗೆ ಬಂದರೆ ಅಲ್ಲಿ ನೀನು ಪ್ರತ್ಯಕ್ಷ! ಆದರೆ ನೀನು ಬಂದು ೨ ತಾಸಿನಲ್ಲಿ ಎಲ್ಲರೂ ನೀನ್ನ ಹಿಂದೆ ಬಿದ್ದಿದ್ದಾರೆ ಅಂತ ಸುದ್ದಿ ಮುಟ್ಟಿತ್ತು.!ಪಾಸ್ ಗೆ ಕಾದಿದಕ್ಕೆ ನೀನ್ನ ಸುದ್ದಿಯನ್ನು ಲೇಟ್ ಆಗಿ ಸಂಗ್ರಹಿಸಿದೆ.ಆಗಗಲೇ ಹುಡುಗರು ನೀನ್ನ ಬಗ್ಗೆ ಮಾಹಿತಿ ಯನ್ನ ಕಲೆಕ್ಟ್ ಮಾಡಿದ್ದರಿಂದ ನನ್ಗೇನು ತೋಂದ್ರೆ ಆಗಲಿಲ್ಲ.
ಆದ್ರೆ ಮಾತನಾಡಿಸುವುದು ಹೇಗೆ? ಮನದಲ್ಲೇಲ್ಲೋ ಸಣ್ಣ ಅಹಂ. ಹುಡುಗಿಯರನ್ನ ನಾವಾಗೇ ಮಾತಡಿಸ ಬಾರದು ಅಂತ.ಆದರೆ ನೀನ್ನ ಮಾತನಾಡಿಸುವುದು ಸುಲಭವಾಗಿರಲಿಲ್ಲ.ನಾನು ಮೊದಲ ಬೇಂಚ್ ನ ಹುಡುಗ.ಆದ್ರೆ ನೀನು ಕುಳಿತುಕೊಳ್ಳುತ್ತಿದ್ದಿದ್ದು ಮಾತ್ರ ಕೊನೆ ಸಾಲಿನಲ್ಲಿ.ಆದ್ರೆ ನಾನು ಹಿಂದೆ ತಿರುಗಿದರೆ ಕಾಣುತ್ತಿದ್ದಿದ್ದೆ ನೀನು!!ಅದಕ್ಕೆನೊ ನನ್ನ ಹಿಂದಿರುವ ಹುಡುಗರು ನನ್ನ ಸ್ನೇಹಿತರಾಗಿದ್ದು ನಾನು ಹಿಂದೆ ತಿರುಗುತ್ತಿದ್ದರಿಂದ!!
ನೀನು ಆಗಾಗ ಸ್ಮೈಲ್ ಕೊಡ್ತಿದ್ದೆ.ನಾನು ಇಷ್ಟಗಲ ಮುಖ ಅರಳಿಸಿ ಕೊಡ್ತಿದ್ದೆ.ಆದ್ರೆ ಮಾತು? ಇಬ್ರೂ ತುಟಿ ಬಿಚ್ತಿರಲಿಲ್ಲ.!ಆದ್ರೆ ಇಬ್ರೂ ಸ್ಮೈಲ್ ಕೊಡ್ತಿರುವಾಗ ಹಾಳಾದ ಇಂಟರ್ನಲ್ ಎಕ್ಸಾಮ್ ಬಂತಲ್ಲಾ! ಆ ಕಂಪ್ಯೂಟರ್ ಪ್ರೋಗ್ರಾಮ್ಸೆ ಏನು ಬರಲ್ಲಾಗಿತ್ತು.ಆದ್ರೆ ಲ್ಯಾಬ್ ನಲ್ಲಿ ನೀನು ನನ್ನ ಪಕ್ಕ ಇದ್ದೆ.ಧೈರ್ಯ ಮಾಡಿ [ಇಂಟರ್ನಲ್ ಮಾರ್ಕ್ಸ್ ಗಾಗಿ!] ನೀನ್ನ ಹತ್ರ ಪ್ರೋಗ್ರಾಮ್ ಕೇಳಿದ್ದೆ.ನೀನು ಹೇಳಿದ್ದೆ!! ಇದು ನಮ್ಮೀಬ್ಬರ ಮೊದಲ ಮಾತುಕಥೆ!
ಅದಾಗಿ ಸ್ವಲ್ಪ ದಿನಕ್ಕೆ ನಿನ್ನಿಂದ ಫೋನ್ ನಂಬರ್ ತಗೊಂಡೆ. ಕಾಲ್ ಮಾಡಿದೆ ಮಾತಾಡಿದೆ.ಇದೇ ನಿತ್ಯ ದಿನಚರಿ ಆಗೋಯ್ತು! ಆದ್ರೆ ಇಬ್ರೂ ಮಾತಾಡುತ್ತಿದ್ದುದ್ದು ಮಾತ್ರ ಲ್ಯಾಂಡ್ ಲೈನ್ ಲಿ!! ಅದು ಮನೆಯವರ ಮುಂದೆ!!ಇಬ್ರಲ್ಲೂ ಅಂಥಾ ಕದ್ದು ಮುಚ್ಚಿ ಮಾಡೋ ಪ್ರೀತಿ ಪ್ರೇಮ ಇರ್ಲಿಲ್ಲ ಬಿಡು.
ಆದ್ರೆ ಒಂದು ದಿನ ೧ ಪತ್ರ ಬರೆದಿದ್ದೆ.ಆಗಿನ ಕಾಲದಲ್ಲಿ ನಮ್ಮ ಹತ್ರ ಎಲ್ಲಿಂದ ಮೊಬೈಲ್ ಬರಬೇಕು ಹೇಳು?ಅದ್ರಲ್ಲಿ ೧ ಎಸ್.ಎಂ.ಎಸ್. ಜೋಕ್ ಬರೆದಿದ್ದೆ!! ಗೋರಿಲ್ಲ ಅಂಥ! ಅದು ನಿನಗೆ ಎಷ್ಟು ಇಷ್ಟವಾಯಿತು ಅಂದ್ರೆ ನೀನು ವಾಪಸ್ ಪತ್ರ ಬರೆದಿದ್ದೆ ತಿಮಿಂಗಿಲ ಅಂಥ!!ಆಮೇಲೆ ಬರೆದು ಕೊಂಡ ಪತ್ರಕ್ಕೆ ಲೆಕ್ಕವೇ ಇಲ್ಲ ಬಿಡು!!ಕ್ಲಾಸ್ ನಡೆಯುತ್ತಿದ್ದಾಗ್ಲೇ ಎಸೆದುಕೊಳ್ಳುತ್ತಿದ್ದಿದ್ದು,ಅದನ್ನು ನೋಡಿ ಉಳಿದವರು ನಿನ್ನ ಹಿಂದೆ ಬಿದ್ದ ಅವರು ನಿನ್ನಿಂದ ದೂರ ಆಗಿ ನನ್ನ ಬಗ್ಗೆ ಕೋಪಿಸಿಕೊಂಡರು.!ನೀನು ಮಾತ್ರ ಯಾವುದಕ್ಕೂ ಅಂಜದೇ ಇರುತ್ತಿದ್ದೆ.
ದಿನ ನನ್ನ ಹತ್ರ ಫೋನ್ ನಲ್ಲಿ ಮಾತಾಡದಿದ್ದರೇ ಮರುದಿನ ಕೋಪಿಸಿಕೊಳ್ಳುತ್ತಿದ್ದೆ.ಆ ಕೋಪ ಮಾತ್ರ ನಿನ್ನ ಬೆಳ್ಳನೆ ಕೆನ್ನೆಯನ್ನು ಕೆಂಪಗೆ ಮಾಡಿ ಮತ್ತಷ್ಟೂ ಚೆಂದುಳ್ಳೆ ಚೆಲುವೆಯನ್ನಾಗಿ ಮಾಡುತ್ತಿತ್ತು!!ಆ ಚೆಲುವನ್ನು ನೋಡಲು ಆಗಾಗ ನೀನ್ನ ಜೊತೆ ಜಗಳ ಮಾಡುತ್ತಿದ್ದಿದ್ದು!!.ಆದ್ರೆ ಅದೇ ಜಗಳ ಎನ್.ಎಸ್.ಎಸ್. ನಲ್ಲಿ ರಂಪ ಆಗಿ ೧ ತಿಂಗಳು ಅಮೋಘವಾಗಿ ಮಾತು ಬಿಟ್ಟು ಇಬ್ಬರ ಅಹಂ ಅಡ್ಡ ಬಂದು ಆಮೇಲೆ ಒಂದಾಗಿದ್ದು ಇದನ್ನೇಲ್ಲಾ ನೆನಪು ಮಾಡಿಕೊಂಡರೆ ಎಷ್ಟು ನಗು ಬರತ್ತೆ!!
ಆದ್ರೆ ನಮ್ಮಿಬ್ಬರಲ್ಲಿ ಪ್ರೀತಿ ನೀಡುವ ಸ್ನೇಹವಿತ್ತು.ಭವಿಷ್ಯದ ಬಗ್ಗೆ ಸ್ಪಷ್ಟತೆ ಇತ್ತು.ಹಾಗಾಗಿ ಎಲ್ಲೂ ಪ್ರೇಮ ಎಂಬ ಮಾಯೆಯನ್ನು ಸೋಕಿಸಲು ಇಬ್ಬರೂ ಬಿಡಲಿಲ್ಲ .ಅದಕ್ಕೇನೋ ನೀನು ಚಿರಕಾಲ ನನ್ನೋಂದಿಗೆ ಇರುತ್ತಿರುವುದು?
ಆ ಸ್ನೇಹದಲ್ಲಿ ಪ್ರೀತಿಯನ್ನು ಬೊಗಸೆ ತುಂಬುವಷ್ಟು ಮೊಗೆದು ಮೊಗೆದು ಕೋಡಿತ್ತಿದ್ದೆ.ಅದನ್ನು ಸ್ವೀಕರಿಸಿದ ನಾನೇ ಧನ್ಯ!ನೀನು ಕೊಟ್ಟ ಮೇಲೆ ನಾನು ಕೊಡ ಬೇಕು ತಾನೆ? ನಾನು ಕೈ ತುಂಬ ಪ್ರೀತಿ ಕೊಟ್ಟೆ.
ನೀನು ಆ ೩ ವರ್ಷದಲ್ಲಿ ಜೀವನದ ಪಾಠ ಕಲಿಸಿದ್ದೆ.ಹೆಣ್ಣೀನ ಸಂಕಟ ತೋರಿಸಿದ್ದೆ.ಹೆಣ್ಣಿನ ಹೃದಯಾಂಗಳದ ಪ್ರೀತಿ ಬಿಚ್ಚಿಟ್ಟಿದ್ದೆ.ನನ್ನ ಜೀವನಕ್ಕೊಂದು ದಾರಿ ದೀಪ ತೋರಿಸಿದ್ದೆ.
4 ಕಾಮೆಂಟ್‌ಗಳು:
ನಿತಿನ್,
ನಿಮ್ಮ ಲೇಖನ ತುಂಬಾ ಕುತೂಹಲವಾಗಿ ಓದಿಸಿಕೊಂಡು ಹೋಗುತ್ತದೆ...ಮತ್ತೆ ನನ್ನ ಕಾಲೇಜಿನ ದಿನಗಳನ್ನು ನೆನಪಿಸಿತು....ಎಲ್ಲವನ್ನೂ ಮೀರಿದ ಸಂಭಂದದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರಿ...ಅಂತ್ಯ ನನಗೆ ಇಷ್ಟವಾಯಿತು....ಹೀಗೆ ಬರೆಯುತ್ತಿರಿ....ಥ್ಯಾಂಕ್ಸ್...
ಮಿತಿನ್...
ಬಹಳ ಚಂದದ ಬರವಣಿಗೆ ನಿಮ್ಮದು..
ಆಪ್ತವಾಗಿರುತ್ತದೆ..
ಇದು ನಮ್ಮದೇ ಘಟನೆಯೇನೋ ಅನ್ನುವಷ್ಟು...
ಅಭಿನಂದನೆಗಳು...
ake yaru namgu helipa
ನಿತಿನ್ ನಿಮ್ಮ ಬರಹ ಇಷ್ಟವಾಯ್ತು...
ಸ್ನೇಹ ಮತ್ತು ಪ್ರೀತಿ ನಡುವಿನ ತೆಳು ಪರದೆಯನ್ನು ತಾಕಿಬರೆದಿರುವಿರಿ. ತುಂಬಾ ಚೆನ್ನಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ