ಭಾನುವಾರ, ಫೆಬ್ರವರಿ 13, 2011

ಅಂಥದೊಂದು ಮಗಳು ಮತ್ತೆ ಬರುತ್ತಾಳಾ?


ನಮ್ಮ ಮನೆಯಲ್ಲಿ ಆಕೆಯನ್ನು ಕರೆಯುತ್ತಿದ್ದಿದ್ದೆ ಮಗಳೆಂದು!! ಆಕೆ ನಮ್ಮನೆಯ ಸದಸ್ಯಳಾಗಿ ಕಳೆದ ೭ ವರ್ಷಗಳಿಂದ ಜೊತೆಯಲ್ಲಿದ್ದ ನಮ್ಮನೆಯ ಮುದ್ದಿನ ಬೆಕ್ಕು "ಕಾಮಿ". ಮೂರು ಬಣ್ಣಗಳನ್ನು ಮೈಗೂಡಿಸಿಕೊಂಡಿದ್ದ ಆ ಬೆಕ್ಕು ನಮ್ಮನೆಯವರಿಗಷ್ಟೆ ಅಲ್ಲದೆ ಅಕ್ಕ-ಪಕ್ಕದ ಮನೆಯವರಿಗೂ ಮುದ್ದಿನ ಬೆಕ್ಕು.

ಕಾಮಿ ನಮ್ಮನೆಗೆ ಬಂದಿದ್ದು ಆಕಸ್ಮಿಕ. ಸುಮಾರು ೭ ವರ್ಷಗಳ ಹಿಂದೆ ಬೆಳಿಗ್ಗೆ ಎದ್ದು ದನ ಕರೆಯಲು ಕೊಟ್ಟಿಗೆಗೆ ಹೋದಾಗ ಒಂದು ತಿಂಗಳೂ ತುಂಬಿರದ ಬೆಕ್ಕಿನ ಮರಿ ಅಲ್ಲಿನ ಹುಲ್ಲು ಹಾಸಿನ ಮೇಲೆ ಮಲಗಿತ್ತು.ನನಗೆ ಅಪ್ಪನಿಗೆ ಆಶ್ಚರ್ಯ.ಇಂಥ ಮುದ್ದಾದ ಬೆಕ್ಕನ್ನು ನೋಡಿ ಅಯ್ಯೊ ಅನಿಸಿತು.ಇನ್ನೂ ತಾಯಿಯ ಹಾಲನ್ನು ಕುಡಿದು ತಾಯಿಯ ತೆಕ್ಕೆಯಲ್ಲಿ ಇರಬೇಕಾದ ಕೂಸು ಅದು. ನೋಡಿ ಹೆದರಿ ಸಂಧಿ ಯಲ್ಲಿ ಅಡಗಿ ಕೊಂಡು ಮರೆಯಲ್ಲೆ ನೋಡುತ್ತಾ ನಡುಗುತ್ತಾ ಕಣ್ಣನ್ನು ಪಿಳಿ ಪಿಳಿಗುಡಿಸುತ್ತಾ ಇದ್ದಾಗ ಅಪ್ಪ ಹೋಗಿ ಹಿಡಿದು ಕೋಂಡಾಗ ಅದಕ್ಕೆ ಏನೋ ಸಂಕಟ. ಹಾಲು ಕರೆದಾದ ಮೇಲೆ ಅದಕ್ಕೆ ಚಮಚದಲ್ಲಿ ಹಾಲು ಕುಡಿಸುತ್ತಿದ್ದರೆ ನಮ್ಮನ್ನೆ ಹೆದರಿಕೆಯಿಂದ ನೋಡುತ್ತಿತ್ತು. ಹಾಲು ಕುಡಿದಾದ ಮೇಲೆ ನಮ್ಮಮೇಲೆ ಸ್ವಲ್ಪ ನಂಬಿಕೆ ಬಂದಹಾಗೆ ಕಾಣಿಸಿತು. ನಾನು ಅಪ್ಪ ಬೆಕ್ಕನ್ನು ಉಪಚರಿಸುತ್ತಿದ್ದರೆ ಅಮ್ಮ ಒಳಗೊಳಗೆ ಬೈದು ಕೊಳ್ಳುತ್ತಿದ್ದರು.ಇದಕ್ಕೆ ಕಾರಣ ಮೊದಲಿದ್ದ ಬೆಕ್ಕು "ಗಾಂಚಾಳಿ" ಹೆಚ್ಚಿಗೆನೆ ಮಾಡಿತ್ತು!!. ಆದರೆ ನನಗೆ ಅಪ್ಪನಿಗೆ ಬೆಕ್ಕನ್ನು ಬಿಡಲು ಮನಸ್ಸಿರಲಿಲ್ಲ.ಅಮ್ಮ ಬೇಡ ಅಂದರೂ,ಬೈಗುಳ ತಿಂದರೂ ಇದನ್ನು ಇಟ್ಟುಕೊಳ್ಳಲೇ ಬೇಕು ಎಂದು ತೀರ್ಮಾನಿಸಿದೆವು.
ಮೂರು ದಿನಗಳಿಗೆಲ್ಲ ನನಗೆ ಅಪ್ಪನಿಗೆ ಹೊಂದಿಕೊಂಡ ಬೆಕ್ಕು ನಾವು ಹೋದಲೆಲ್ಲಾ ಸುತ್ತುಹರಿಯುತ್ತಿತ್ತು.ಅದಕ್ಕೆ ಹೆಸರಿಡಬೇಕಾದಗ ನಮ್ಮನೆಯಲ್ಲೇ ೧೦ ವರ್ಷಗಳ ಹಿಂದೆ ಇದ್ದ ನಮ್ಮನೆ ಅಜ್ಜಿಯ ಪ್ರೀತಿಯ ಬೆಕ್ಕಿನ ಹೆಸರೇ ಇದಕ್ಕೆ ಇಟ್ಟು "ಕಾಮಿ" ಎಂದು ನಾಮಕರಣವೂ ಆಯಿತು.ಈ ಪುಟ್ಟ ಬೆಕ್ಕಿಗೆ ಸ್ವಲ್ಪ ಹೆಚ್ಚೆ ಮುದ್ದನ್ನು ನಾನು ಮಾಡುತ್ತಿದ್ದರಿಂದ ರಾತ್ರೆ ಎಲ್ಲ ನನ್ನ ಹಾಸಿಗೆ ತುದಿಯಲ್ಲಿ ಬಂದು ಮಲಗಿ ಬೆಳಗ್ಗೆ ೫ಕ್ಕೆಲ್ಲಾ ಎದ್ದ್ದು ತನ್ನ ಕೆಲಸಕ್ಕೆ ಹೋಗಿಬಿಡುತ್ತಿತ್ತು.ಹೀಗೆ ಕೆಲವೇ ದಿನಗಳಲ್ಲಿ ತನ್ನ ಪರಾಕ್ರಮ ತೋರಿಸಿದ ಬೆಕ್ಕಿನಿಂದ ಇಲಿ ಗಳ ಕಾಟ ಇಲ್ಲವಾಗಿ ಅಮ್ಮನಿಗೂ ಮುದ್ದಿನ ಬೆಕ್ಕು ಇಷ್ಟವಾಯಿತುಆಮ್ಮನಿಗೆ ಅದೋಂದೆ ಕಾರಣಕ್ಕೆ ಇಷ್ಟವಾಗಿದೆ, ಅಡಿಗೆ ಮನೆಯಲ್ಲಿ ಏನೆ ಇಟ್ಟರೂ ಮೂಸಿ ಕೂಡ ನೋಡಲು ಹೋಗುತ್ತಿರಲಿಲ್ಲ.ಇದರಿಂದ ಎಲ್ಲರಿಗೂ ಇಷ್ಟವಾಗಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿ ಮನೆಯ ಸದಸ್ಯೆಯಾಗಿ ಎಲ್ಲರ ಮುದ್ದಿನ ಮಗಳಾಗಿ ಇದ್ದ ಆಕೆ ,ಸುಮಾರು ೨ ನೇ ವರ್ಷಕ್ಕೆ ಕಾಲಿಟ್ಟಾಗ ಚಳಿಯಿಂದ ಆರೋಗ್ಯ ಸರಿ ಇಲ್ಲದೇ ಇನ್ನು "ಹೋಗೆ ಬಿಟ್ಟಿತು" ಎನ್ನುವಾಗ "ಅಮೃತಾಂಜನ" ಹಚ್ಚಿ ಉಪಚರಿಸಿದಾಗ ಒಂದೇ ದಿನದಲ್ಲಿ ಚಿಗುರು ಮೀಸೆ ಹೊತ್ತು ಕೊಂಡು ತಿರುಗಿ "ಅಮೃತಾಂಜನ" ದ ಬಗ್ಗೇ ಅಚ್ಚರಿ ಮೂಡಿಸಿತ್ತು!!.ಮನೆಯಲ್ಲಿ ಅಪ್ಪ-ಅಮ್ಮನಿಗೆ ನಾವೆಲ್ಲಾ ಬೆಂಗಳೂರಿಗೆ ಬಂದ ಮೇಲೆ ಸಾಥ್ ಕೊಟ್ಟು ಮಕ್ಕಳ ಕೊರತೆ ತುಂಬುವಂತೆ ಮಾಡಿದ್ದು ಬೆಕ್ಕು. ಫೋನಿನಲ್ಲೂ ಮಾತನಾಡುತ್ತಿದ್ದ ಈಕೆ (ಬೆಕ್ಕಿನ ಭಾಷೆಯಲ್ಲಿ!) ಕಳೆದ ೩ ವರ್ಷಗಳ ಹಿಂದೆ ಬೆಂಗಳೂರಿಗೆಂದು ಮನೆ ಬಿಟ್ಟಾಗ ಬಸ್ ನಿಲ್ದಾಣದವರೆಗೂ ಬಿಳ್ಕೋಟ್ಟರೆ, ಆಗಾಗ ಮನೆಗೆ ಹೋದಾಗ ಮುದ್ದಿನಿಂದ ಮೈದೊನೆಯುತ್ತಾ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ ಕೂಸು ಮೊನ್ನೆ ೪ ಮಕ್ಕಳಿಗೆ ಜನ್ಮ ಕೊಟ್ಟಿದ್ದಳು. ಆಕೆ ೨೦ ದಿನಗಳ ನಂತರ ಇದ್ದಕ್ಕಿದ್ದ ಹಾಗೆ ಇಹಲೋಕ ತ್ಯಜಿಸಿದಳು. ಇನ್ನು "ನಮ್ಮನೆಯ ಮಗಳು" ನೆನಪಷ್ಟೆ.