ಶನಿವಾರ, ಜನವರಿ 24, 2009

ಭಾರತದ ಮಾನ ಹರಾಜು ಹಾಕುತ್ತಿರುವುದು "ಸ್ಲಮ್ ಡಾಗೆ"?
ಳೆದ ಕೆಲವು ದಿನಗಳಿಂದ ಯಾವುದೇ ಪತ್ರಿಕೆ ಕೈಗೆತ್ತಿಕೊಂಡರೂ ಅಲ್ಲಿ ಇತ್ತೀಚಿನ ಹಿಟ್ ಚಿತ್ರ "ಸ್ಲಮ್ ಡಾಗ್ ಮೀಲೆನಿಯರ್" ಕುರಿತು ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಅದಕ್ಕೆ ವಿವಿಧ ಪ್ರಶಸ್ತಿ ಬಂದಿರುವುದು,ಆಸ್ಕರ್ ಗೆ ನಾಮಂಕಿತವಾಗಿರುವುದರಿಂದ ಹಿಡಿದು ಅದನ್ನು ಭಾರತದ "ಮಾನ" ಹರಾಜು ಹಾಕಿದ ಚಿತ್ರ ಎಂದು ತೆಗಳುವವರೆಗೂ ನಡೆದ ಪ್ರತಿ ಘಟನೆ ಅಂತರಾಷ್ಟ್ರೀಯ ಸುದ್ದಿ ಮಾಡಿತು.
ಇಲ್ಲಿ ಪುನ: ಚಿತ್ರದ ಕಥೆ ಹೇಳುವ ಅವಶ್ಯಕಥೆ ಇಲ್ಲ.ಎಲ್ಲರೂ ತೆಗಳುವ ಭರದಲ್ಲಿ ಇದೊಂದು ಸ್ಲಮ್ ಚಿತ್ರ. ಅಲ್ಲಿನ ಯುವಕ ೨೦ ಮಿಲಿಯನ್ ಹಣ ಗೆಲ್ಲುವುದೇ ಚಿತ್ರದ ಕಥಾವಳಿ ಎಂದು, ಅದರಲ್ಲಿ "ಸ್ಲಮ್" "ವ್ಯವಸ್ಥೆ" ಯನ್ನು ಧಾರಾಳವಾಗಿ ತೊರಿಸಿ ಭಾರತದ ಮಾನ ಹರಾಜಿಗೆ ಹಾಕಿದರು ಎಂದು ನುಡಿದರು.ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲನ್ನು ಹತ್ತಲಾಯಿತು.ಅಷ್ಟಕ್ಕೂ ಭಾರತದ ಮಾನ ಈ ಚಿತ್ರದಿಂದಲೇ ಹೋಯಿತೆ?
ಭಾರತಕ್ಕೆಂದು ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಗೂ ಈ ಚಿತ್ರದಲ್ಲಿ ತೊರಿಸಿರುವ ಘಟನಾವಳಿಗಳು ಅನುಭವಕ್ಕೆ ಬರದೇ ಇರದು.ಚಿತ್ರದಲ್ಲಿ Salim ಮತ್ತು Jamal ಭಾರತದ ಹೆಮ್ಮೆಯ ಪ್ರತೀಕವಾದ ತಾಜ್ ಮಹಲ್ ಗೆ ಅನೀರಿಕ್ಷಿತವಾಗಿ ಬರುತ್ತಾರೆ.ಅಲ್ಲೇ ಗೈಡ್ ಗಳು ಹೇಳುತ್ತಿದ್ದನ್ನು ಕೇಳಿ ಅಲ್ಲೇ ನಿಂತಿರುವಾಗ ವಿದೇಶಿಯರು ಬರುತ್ತಾರೆ.ಅವರು ಗೈಡ್ ಮಾಡಿ ಎಂದು ಹಣ ನೀಡುತ್ತಾರೆ.ಈತ "ಇಲ್ಲ ಸಲ್ಲದ ಕಥೆ" ಕಟ್ಟಿ ಹಣ ಗಳಿಸುತ್ತಾರೆ.
ನಮ್ಮ ದೇಶದ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರವಾಸಿಗರು ಮೋಸ ಹೋಗುತ್ತಿರುವುದು ಸುಳ್ಳೆ?ಅದೇ ರೀತಿ ಬೇಕಾ ಬಿಟ್ಟೆ ಹಣ ಸುಲಿಯುತ್ತಾರಲ್ಲಾ ಅವರ ನಿಯಂತ್ರಣಕ್ಕೆ "ಮಾನ ತಡೆಯಲು" ಯಾರದರೂ ಪ್ರಯತ್ನಿಸಿದ್ದಾರಾ? ದಿನಂಪ್ರತಿ ಲಕ್ಷಾಂತರ ಮಂದಿ ವಿದೇಶಿಗರು ಭಾರತಕ್ಕೆ ಬಂದು ಇಲ್ಲಿನ ಆಟೋ ದಿಂದ ಹಿಡಿದು ಪ್ರತಿಯೊಂದರಲ್ಲೂ ಮೋಸ ಹೋಗುತ್ತಾರೆ. ಅವರಲ್ಲಿ ಬೇಜಾನ್ ಹಣ ಇರಬಹುದು ಧಾರಳವಾಗಿ ಹಣ ಖರ್ಚು ಮಾಡಬಹುದು.ಇದನ್ನು ದುರುಪಯೋಗ ಪಡೆದವರು ಎಂದರೆ ಭಾರತದವರೇ!!.
ಇನ್ನು ಬಂದರೆ ಪೋಲಿಸ್ ವ್ಯವಸ್ಥೆ.ಚಿತ್ರದೂದ್ದಕ್ಕೂ "ಡಾಗ್" ಎನ್ನುತ್ತಿದ್ದರೆ ನಾವು ನಮ್ಮ ಪೋಲಿಸರು ಎಷ್ಟು ಬೇಗ ಸುಧಾರಿಸಿ ಬಿಟ್ಟರಲ್ಲ ಎಂದು ಖುಷಿಪಡಬೇಕು!!."ಡಾಗ್" ಎನ್ನುವುದು ಅವರಿಗೆ ನಾವು-ನೀವು ಹಾಯ್ ಎಂದ ಹಾಗೆ!! ಮೊನ್ನೆ ಅಷ್ಟೆ ನನ್ನ ಗೆಳತಿ ಒಬ್ಬಳು ಪಾಸ್ ಪೊರ್ಟ್ ಮಾಡಿಸುವ ಸಲುವಾಗಿ ಪೋಲಿಸ್ ಕಚೇರಿಗೆ ಹೋದವಳು ಅಲ್ಲಿನ ಶಬ್ದ ಕೇಳಿ ಅಳುವುದೊಂದೆ ಬಾಕಿ ಅದು ಅವಳ ಅಪ್ಪನ ಜೊತೆ ಹೋಗಿದ್ದರೂ..!!. ಪ್ರತಿಯೋಂದರಲ್ಲೂ ಹುಳಕನ್ನು ತುಂಬಿಕೊಂಡಿರುವ ನಾವು ಅದರ ಬಗ್ಗೆ ಪುಸ್ತಕ ಪ್ರಕಟಿಸಿದರೆ ಜರಿಯುತ್ತೇವೆ.ಸಿನೇಮಾ ಮಾಡಿದರೆ ಉಗಿಯುತ್ತೇವೆ.
ಹೌದು,ನಮ್ಮ ದೇಶದ ಮೇಲೆ ಪ್ರೀತಿ ಬೇಕು.ಕೀಳಾಗಿ ತೋರಿಸಿದರೆ,ಅದನ್ನೆ ನಿಜ ಎಂದು ವಿಶ್ವರೂಪ ದರ್ಶನ ಮಾಡಿಸಿದರೆ ಜರಿಯೋಣ.ಆದರೆ ನಾವು ಅವರಿಗೆ ಇಂಥ ಚಿತ್ರ ಮಾಡ ಬೇಡಿ,ಪುಸ್ತಕ ರೂಪದಲ್ಲಿ ತರ ಬೇಡಿ ಎಂದು ಮನವಿ ಮಾಡಿಕೊಳ್ಳುವುದರಲ್ಲೂ ನಿಯತ್ತು ಬೇಡವಾ? ನಾವು ಇಂಥಿಂತ ಕ್ರಮ ತೆಗೆದು ಕೊಂಡು ಡೆವಲಪ್ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳುವ ಧೈರ್ಯ ಯಾರಿಗಾದರೂ ಇದೆಯ?ಎಲ್ಲಾ ಬಕಾಸುರನ ಹೊಟ್ಟೆಗೆ ಯೋಜನೆ ಹಣ ಹೋದರೆ ಇನ್ನು ಡೆವಲಪ್ ಮೆಂಟ್ ಮಾತೆಲ್ಲಿ ಬಂತು.
ಹೀಗೆ ಪ್ರತಿಯೊಂದು ವಿಷಯದಲ್ಲೂ ಭಾರತದ ಮಾನ ನಗ್ನವಾಗಿ ವಿದೇಶಿಯರಿಗೆ ಗೋಚರಿಸುತ್ತಿರುವಾಗ ಅದರ ಬಗ್ಗೆ ಯಾರು ಮಾತನಾಡುವುದಿಲ್ಲ.ಆಗ ಭಾರತದ "ಮಾನ" ಹಾಳಾದರೂ ಪರವಾಗಿಲ್ಲ.ಯಾವುದೇ ಚಿತ್ರದಿಂದ ಹಾಳಾಗಬಾರದು ಅಷ್ಟೆ.

ಸ್ಲಮ್ ಡಾಗ್ ಚಿತ್ರದಲ್ಲಿ ಒಬ್ಬ ಅಮಾಯಕ ಬಡವ ಸ್ಲಮ್ ಇಂದ ಬಂದವನು ಸಮಾಜದಲ್ಲಿ ಒಳಗಾಗುವ ಕಹಿ ಘಟನೆಯನ್ನು ಬಿಚ್ಚಿಡುತ್ತದೆ.ಅಲ್ಲಿ Azharuddin Mohammed Ismail [Youngest Salim] ಮತ್ತು Ayush Mahesh Khedekar [Youngest Jamal] ಅಭಿನಯ ಮನಸಲ್ಲೇ ಉಳಿಯುವಂತದ್ದು."ಜಾತಿ ಯುದ್ದ"ದಿಂದ ತಾಯಿ ಎಲ್ಲರನ್ನು ಕಳೆದುಕೊಂಡಾಗ ಇವರು ಇನ್ನೂ ೧೨ ವರ್ಷದವರು.ನಂತರ ಕಸದ ರಾಶಿಯಲ್ಲ್ಲೇ ವಾಸ.ಜೊತೆಯಲ್ಲಿ ಅನಾಥವಾದ ಹುಡುಗಿಗೂ[ Latika] ತಮ್ಮ ನಡುವೆ ಸ್ಥಾನ ಕೊಡುತ್ತಾರೆ.ಇವರನ್ನು ಮಕ್ಕಳನ್ನು ಹಿಡಿದುಕೊಂಡು ಹೋಗುವ "ಭೀಕ್ಷಾಟಣೆ" ಕೇಂದ್ರದವರು ಹಿಡಿದುಕೊಂಡು ಭೀಕ್ಷಾಚಣೆಗೆ ಬಿಡುತ್ತಾರೆ.ಅಲ್ಲಿ ಕಣ್ಣು ತೆಗೆಯಲಾಗುತ್ತದೆ.ಅಲ್ಲಿಂದ ಈ ಮೂವರು ತಪ್ಪಿಸಿಕೊಂಡು ಬರುವುದೇ ಕಥೆಯ ಹಂದರ.ಸಲೀಮ್ ಮತ್ತು ಜಮಾಲ್ ಅಣ್ಣ ತಮ್ಮಂದಿರು.ಜಲೀಮ್ ಗೆ ಸಹನುಭೂತಿ ಇದ್ದರೆ, ಸಲೀಮ್ ಗೆ ಅದಿರುವುದಿಲ್ಲ.Latika ಮೇಲೆ ಕನಿಕರದಿಂದ ಆರಂಭವಾದ ಸ್ನೇಹ ಜಮಾಲ್ ಗೆ ಪ್ರೀತಿಯತ್ತ ಕರೆದುಕೊಂಡುಹೋಗುತ್ತದೆ.ಪ್ರೀತಿಯ ನೋಟ,ಅವಳಪಡೆಯ ಬೇಕೆಂಬ ಬಯಕೆ ,ಜೀವನದಲ್ಲಾದ ಕಹಿ ಘಟನೆಗಳು "ಮಿಲೇನಿಯರ್" ಆಗಲು ನೆರವಾಗುತ್ತದೆ."ಕೌನ್ ಬನೇಗಾ ಮೀಲೆನಿಯರ್ ಪತಿಯಲ್ಲಿ" ಗೆಲ್ಲುತ್ತಾನೆ ಈ ಸ್ಲಮ್ ಹುಡುಗ.ಅದರ ಮೂಲಕ "ಸ್ಲಮ್" ಗೆ ಕೀರ್ತಿ ತರುತ್ತಾನೆ.ಒಂದು ಮುಖ ಸ್ಲಮ್ ಜನರ ಕಪ್ಪು ಚುಕ್ಕೆ ತೋರಿಸಿದರೆ ಮತ್ತೊಂದರಲ್ಲಿ ಅವರ ಮಾನವಿಯತೆ ತೋರಿಸುತ್ತದೆ. ಕೊನೆಗೂ ಪ್ರೀತಿ ಗೆಲ್ಲುತ್ತದೆ!!.

ಕೇವಲ ಯಾವುದೇ ಚಿತ್ರದಲ್ಲಿ,ಸಿನೇಮಾದಲ್ಲಿ,ಪುಸ್ತಕದಲ್ಲಿ ತೋರಿಸಿದಾಕ್ಷಣ ,ಬರೆದಾಕ್ಷಣ ದೇಶದ ಮಾನ ಹೋದಂತೆ ಅಲ್ಲ.ಇನ್ನೂ ನಾವು ದೇಶದ ಮಾನ ಕಾಪಾಡುವಲ್ಲಿ ಹೆಜ್ಜೆ ಇಡುತ್ತಿಲ್ಲ.ಕೇವಲ ಸ್ವೀಸ್ ಬ್ಯಾಂಕ್ ನ ಖಾತೆಯಲ್ಲಿ ಬ್ಯಾಲೇನ್ಸ್ ಅನ್ನು ಹೆಚ್ಚು ಮಾಡುವತ್ತ ಇರುವಲ್ಲಿ ಬೊಟ್ಟು ಮಾಡಿ ತೋರಿಸುತ್ತದೆ.ಆದರೆ ಒಂದು ಸಿನೇಮಾವನ್ನು ತೆಗಳುವ ಭರದಲ್ಲಿ ನಮ್ಮಲ್ಲಿರುವ ತಪ್ಪನ್ನಾದರೂ ಒಂದು ಕ್ಷಣ ಅವಲೋಕಿಸಿಕೊಳ್ಳುವುದು ಒಳಿತು.
ಅದರಿಂದಾದರೂ ಭಾರತದ"ನಗ್ನ" ದರ್ಶನ ನಿಲ್ಲುವಂತಾಗುತ್ತದೆ. ಏಕೆಂದರೆ ಸಿನೇಮಾ ಇವತ್ತು ಬಂದು ನಾಳೆ ಹೋಗುತ್ತದೆ. ಆದರೆ ವಿದೇಶದಿಂದ ಬರುವ ಜನ? ದಿನವೂ ಬರುತ್ತಿರುತ್ತಾರೆ.!!

ಕೇವಲ ಕಥೆ ಇಂದಲೇ ಚಿತ್ರ ಹಿಟ್ಟಾಗದು ಅಥವಾ ಪ್ರಶಸ್ತಿ ಬಾರದು.ಅಲ್ಲಿನ ತಾಂತ್ರಿಕ ವರ್ಗ,ನಿರ್ದೇಶನ,ಕ್ಯಾಮರ ಕೈಚಳಕ ಮ್ಯೂಸಿಕ್ ಎಲ್ಲವನ್ನೂ ಒಳಗೊಂಡಿರುತ್ತದೆ.ಸ್ಲಮ್ ಡಾಗ್ ಚಿತ್ರ ಕೇವಲ ಕಥೆಗೆ ಮಾತ್ರ ಪ್ರಶಸ್ತಿ ಪಡೆಯುತ್ತಿಲ್ಲ.ಜೊತೆಗೆ ಇತರ ಬಹುತೇಕ ವಿಭಾಗಗಳಲ್ಲೂ ಪ್ರಶಸ್ತಿ ಪಡೆಯುತ್ತಿದೆ.ಇದು ಅವರ ಶ್ರಮವನ್ನು ತೋರಿಸುತ್ತದೆ ವಿನ: ಭಾರತದ ಮಾನ ಹಾಕಿ ಪಡೆದ ಪ್ರತಿಫಲ ಅಂತೂ ಖಂಡಿತ ಅಲ್ಲ.

ಸ್ಲಮ್ ಡಾಗ್ ದಿನದಿಂದ ದಿನಕ್ಕೆ ಪ್ರಶಸ್ತಿ ಪಡೆಯುತ್ತಿದೆ. ಮತ್ತಷ್ಟು ಮೀಲೆನಿಯರ್ ಆಗುತ್ತಿದೆ.ತೆಗಳುವ ಭರದಲ್ಲಿ ನಮ್ಮ ಸ್ತೀತಿಯನ್ನೇ ಮರೆತು ಜವಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯೇ?

6 ಕಾಮೆಂಟ್‌ಗಳು:

Rising Indian ಹೇಳಿದರು...

ಅದೇನೇ ಇದ್ದರೂ ಜಾಗತಿಕ ಶಕ್ತಿಯಾಗಿ ಉದಯಿಸುತ್ತಿರುವ ಭಾರತದ ಬಗ್ಗೆ ಇನ್ನೂ ಏನೋ ಒಂಥರದ ತಾತ್ಸಾರ ಪಾಶ್ಚಾತ್ಯ ಜಗತ್ತಿನಲ್ಲಿದೆ. ಹಾಗಾಗೆ ಭಾರತವನ್ನು ಸ್ಲಂ ದೇಶ, ಹಾವಾಡಿಗರ ದೇಶ, ವೇಶ್ಯಾವಾಟಿಕೆಯ ರಾಷ್ಟ್ರ ಎಂಬಿತ್ಯಾದಿಯಾಗಿ ಬಿಂಬಿಸಿದವರಿಗೆಲ್ಲ ಅವಾರ್ಡ್ ಸಿಗುತ್ತಿರುವಿದು. ಸ್ಲಮ್ ಡಾಗ್ ಪಕ್ಕ ಒಂದು ಬಾಲಿವುಡ್ ಮಸಾಲ ಚಿತ್ರವಷ್ಟೇ. ಅದರಲ್ಲಿ ಏನಾದರು ವೈಶಿಷ್ಟ್ಯ ಕಂಡರೆ ಅದು ಕುರುಡು ಕಣ್ಣೇ. ರಾಜ್ಯ ಪ್ರಶಸ್ತಿಯೂ ಪಡೆಯಲನರ್ಹ ಚಿತ್ರಕ್ಕೆ ಯಾಕೆ ಅಂಥ ಅವಾರ್ಡ್? ಸ್ಲಮ್ ಡಾಗ್ ಅದ್ಯಾವ ರೀತಿಯಲ್ಲಿ ತಾರೆ ಜಮೀನ್ ಪರ್, ಲಗಾನ್ ಗಳಿಗಿಂತ ಉತ್ಕೃಷ್ಟ ಚಿತ್ರ? ಅವುಗಳಿಗೆಲ್ಲ ಸಿಗದ ಮನ್ನಣೆ ಇದಕ್ಯಾಕೆ? ಪಾಶ್ಚಾತ್ಯರ ದಬ್ಬಾಳಿಕೆ ವಿರುಧ್ಧ ತೊಳೆರಿಸಿದ ಲಗಾನ್ ಅವರಿಗೆ ಹೇಗೆ ಸರಿ ಕಂಡೀತು? ಅದೆಲ್ಲ ಇರಲಿ.. ನಮ್ಮ ಅರ್ ಕೆ ನಾರಾಯಣನ್ ಅವರಿಗೆ ಯಾಕೆ ಒಂದು ಅಂಥ ಅವಾರ್ಡ್ ಬರಲಿಲ್ಲ? ಅದೇ ಅದ್ಯಾವುದೋ ವೈಟ್ ಟೈಗರ್ ಬರೆದು ನೆಗೆಟಿವ್ ಭಾರತ ತೋರಿಸಿದ್ದಕ್ಕೆ ಅರವಿಂದ್ ಅಡಿಗಗೆ ಪ್ರಶಸ್ತಿ! ಭಾರತದ ಹಿಂದೂ ಉಗ್ರವಾದಿಗಳು ಎನ್ನುತ್ತಾ ಮುಂಬೈ ಘಟನೆಯನ್ನೇ ಪ್ರಶ್ನಿಸುವ ಅರುಂಧತಿಗೆ ಕಿರೀಟ! ಗಾಂಧಿಗಿಂತ ಶಾಂತಿ ಪ್ರತಿಪಾದಕರು ಬೇರೆ ಯಾರಿದ್ದಾರೆ? ಆದರು ನೊಬೆಲ್ ಶಾಂತಿ ಪ್ರಶಸ್ತಿ ಯಾಕೆ ಬರಲಿಲ್ಲ? ಅದೇ ತೆರೆಸಾಗೆ ಯಾಕೆ ಬಂತು?
ನನ್ನ ಭಾರತ ಆ ಚಿತ್ರದಲ್ಲಿ ಇರುವಷ್ಟು ಕೆಟ್ಟದಾಗೆನಿಲ್ಲ. ಬ್ರಿಟನ್ನಲ್ಲಿ ಸಲಿಂಗ ಕಾಮಿಗಳು ಮಾಡುವೆ ಅದ್ರು ಅಂದ್ರೆ ಇಡೀ ಬ್ರಿಟನ್ ದೇಶಾನೇ ಸಲಿಂಗ ಕಾಮಿಗಳ ದೇಶ ಅಂತ ಚಿತ್ರಿಸಿ ಒಂದಿ ಫಿಲ್ಮ್ ಮಾಡಿದ್ರೆ ಹೇಗೆ? ಮುಂಬೈಲಿ ಸ್ಲಮ್ ಇದ್ರೆ ದೇಶಾನೇ ಸ್ಲಮ್ ದೇಶ ಅಂದ್ರೆ?

NiTiN Muttige ಹೇಳಿದರು...

ಹೆಚ್ಚಿನ ಮಾಹಿತಿಗೆ ನೋಡಬಹುದು. ಇಂದಿನ ಕನ್ನಡಪ್ರಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

http://www.kannadaprabha.com/NewsItems.asp?ID=KP420090124053242&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=1/25/2009&Dist=0


http://www.kannadaprabha.com/NewsItems.asp?ID=KP420090124053330&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=1/25/2009&Dist=0

Rising Indian ಹೇಳಿದರು...

ಇದಕ್ಕಿಂತ ಒಳ್ಳೆ ಲೇಖನ ವಿಜಯ ಕರ್ನಾಟಕದಲ್ಲಿ ಜೋಶಿ ಅವರು ಬರೆದಿದ್ದಾರೆ.
ಅಲ್ರೀ ಕನ್ನಡ ಪ್ರಭದಲ್ಲಿ ಬರೆದಂತೆ ಭಾರತ ಸಿಕ್ಕಾಪಟ್ಟೆ ಒಳ್ಳೆ ದೇಶ ಅಲ್ಲ ಅಂತ ಅಂದರೂ ಯಾವುದೇ ಲಿಸ್ಟ್ ತೆಗೆದರೂ ನಾವು ಹಿಂದಂತೂ ಇಲ್ಲ. ಹಾಗೇನಾದರೂ ಕಂಡರೆ ಅದು ದೃಷ್ಟಿ ವೈಫಲ್ಯ. ನಿವೆನೆನ್ದುಕೊಲ್ಲುವಿರೊ ಅದೇ ತಾನೆ ಕಾಣುವುದು. ಸಮಸ್ಯೆ ಇದ್ದರೆ ಸಮಸ್ಯೆ ಎತ್ತಿತೊರಿಸುವುದನ್ನು ಬಿಟ್ಟು ಉತ್ತರ ಹುಡುಕುವ ಕೆಲಸ ಮಾಡಿ.
ಒಂದು ನೈತಿಕತೆಯ ಪ್ರಶ್ನೆ: ಭಾರತ ನಮ್ಮ ಮನೆ. ಮನೆಯ ಹುಡುಗಿಯೊಬ್ಬಳಿಗೆ ಮಾನಭಂಗ ಆಯಿತೆಂದರೆ ಲೇಖಕರು ಮಸಾಲ ಕಥೆ ಬರೆದು ಅತ್ಯುತ್ತಮ ಮಸಾಲ/ಕ್ರೈಂ ಕಥೆ ಅಂತ ಪ್ರಶಸ್ತಿ ಪಡೆಯಲು ನೋಡುತ್ತಾರೋ? ಇದೇನು ನ್ಯಾಯ ಒದಗಿಸುವ ರೀತಿಯೇ? ಮನೆ ಸರಿ ಮಾಡಲು ಬೇಕಾದಷ್ಟು ದಾರಿ ಇದೆ. ಅದನ್ನು ನೋಡಿ. "ನಮ್ಮ ಮನೆ ಮಗಳ ರೇಪ್" ಅಂತ ಕಥೆ ಬರೆದು ಪ್ರೈಜ್ ಗೆಲ್ಲುವುದು ತರವಲ್ಲ. ನಿಮ್ಮಿಷ್ಟ. ಪ್ರಜಾಪ್ರಭುತ್ವ.

NiTiN Muttige ಹೇಳಿದರು...

ಎಲ್ಲೂ ಯಾರೂ ನಮ್ಮ ದೇಶ ಹಿಂದೆ ಇದೆ ಅಂತ ಹೇಳಿಲ್ಲ. ಮೂಲಭೂತ ಪ್ರಶ್ನೆ ಇರುವುದು "ಸ್ಲಮ್ ಡಾಗ್....." ಭಾರತದ ವಿರೋಧಿ ಎಂದು. ಮನೆ ಮಗಳು ರೇಪ್ ಆದರೂ ಬಾಯಿ ಮುಚ್ಛುಕೊಂಡು ಕೂತರೆ ನಾಳೆ ಪಕ್ಕದ ಮನೆಯವಳನ್ನು ರೇಪ್ ಮಾಡಿದರೆ ಏನು ಮಾಡುತ್ತಿರಿ?

ಕನ್ನಡಪ್ರಭದಲ್ಲಿ ನಮ್ಮ ದೇಶವನ್ನೂ ಎಲ್ಲಿ ಒಳ್ಳೆಯದೇಶವಲ್ಲ ಅಂಥ ಹೇಳಿದ್ದು"? ಅಲ್ಲೂ ಅಷ್ಟೆ, ಅದು ಹೇಗೆ ಭಾರತದ ವಿರೋಧಿ ಆಗಲು ಸಾಧ್ಯ ಎಂದು ಕೆಳಿರುವುದು.
ಚಿತ್ರ ಅಥವಾ ಓದುವಿಕೆಯಲ್ಲಿ ಎರಡು ವಿಧ. ನಾವು ನೆಗೆಟಿವ್ ಥಿಂಕ ನಿಂದ ನೋಡಿದರೆ ಎಲ್ಲವೂ ನೆಗೆಟಿವ್ ಆಗೆ ಕಾಣುತ್ತದೆ. ಸಮಸ್ಯೆ ಇರುವುದನ್ನು ತೋರಿಸದೇ ಯರದರ ಗಮನಕ್ಕೆ ಬರುತ್ತದೆಯೇ? ಇಷ್ಟಕ್ಕೂ ಗಮನಕ್ಕೆ ಬಂದ ಸಮಸ್ಯೆಗಳಿಗೆಲ್ಲ ಉತ್ತರ ದೊರೆತಿದೆಯೆ?

ಚಿತ್ರದ ಕಥೆ ಬಗ್ಗೆ ಹೆಳಿದ್ದಿರ.ಅದು ಹೇಗೆ ತಾರೆ...,ಲಗನ್ ಗಿಂತ ಶ್ರೇಷ್ಟ ಎಂದು. ನಮ್ಮ ದೇಶದಲ್ಲಿ ಅವುಗಳಿಗೆ ಎಷ್ಟು ಪ್ರಶಸ್ತಿ ಬಂತು? ಭಾರತದಲ್ಲೂ ಸ್ಲಮ್ ಡಾಗ್.. ಗೆ ಪ್ರಶಸ್ತಿ ನೀಡಲಾಗುತ್ತದೆಯೇ? ಖಂಡಿತಾ ಕೊಡುವುದಿಲ್ಲ. ಅದೇ ರೀತಿ ಸ್ಲಮ್ ಡಾಗ್ ನ ಕಥೆ ವಿದೇಶಿಯರಿಗೆ ಕಂಡಿರಬಹುದು.
ನಮ್ಮ ಮನೆಯಲ್ಲಿ ತುಂಬಿ ನಾರುತ್ತಿರುವ ಕೊಳಚೆ ಇದ್ದರೂ ಬೇರೆಯವ್ರು ನೋಡಬಾರದು ಅಂದರೆ ಹೇಗೆ ಸ್ವಾಮಿ?

hEmAsHrEe ಹೇಳಿದರು...

review is good.
http://saangatya.wordpress.com/ ನಲ್ಲಿ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಯವಿದ್ದಲ್ಲಿ ನೋಡಿ.
- ಹೇಮಶ್ರೀ

ಅನಾಮಧೇಯ ಹೇಳಿದರು...

Nitin, the review by you abt the film is very good. When i saw the movie even i didnt feel anything wrong. mostly movies depict the situations in a larger scale. More over the controversies on the movies which are successful have become a habit to our people. But again I am of the opinion that all of us have 'the right to express' and let all excercise that right!!!

Keep the good work going!!