ಗುರುವಾರ, ಜನವರಿ 22, 2009

ನೀನು ಜೊತೆ ಇರಲು
ನಿನ್ನೋಂದಿಗೆ ಇರಲು...
ನೀನು ಜೊತೆ ಇರಲು ಯಾವ ಗಳಿಗೆಗಳು ಬೇಡ
ಅನಿಸದು ನೀ ಉಣ್ಣಿಸಲು ಹಸಿವೆಯೇ ನೀಗದು
ನೀನ್ನ ತೋಳಲ್ಲಿ ಇರಲು ಬೆಳಗೆ ಆಗದು
ನಿನ್ನ ನಗು ನೋಡಲು ಕಣ್ಣು ಮಿಟುಕದು
ನೀ ಮುದ್ದಾಗಿ ಮಲಗಿರಲು ಸದ್ದಾಯಿತೆಂದು
ಉಸಿರ ಬೀಗಿ ಹಿಡಿಯುವೆ
ನೀ ಸನೀಹ ಬರಲು ಪ್ರೀತಿಯ ಭವ್ಯತೆಯಲ್ಲಿ ನಾ ಕರಗದೆ ಹೋಗೆನು
ಕಾಡಿಸಲು ನಾ ಕಾಡದಿ ಸೋಲ್ವೆನು ಸಹಜತೆಯಲಿ ಒಂದಾಗಿ.

************************************************

ಉಪಾಯ

ಒಂದು ಮುತ್ತು,ಎರಡು ಮುತ್ತು
ತುಂಬಾ ಮುತ್ತು ಕೊಟ್ಟೆ.
ಮತ್ತೇರುವುದನ್ನು ಕಂಡು
ಮುತ್ತಿನ ಹಾರ ಕೊಡಿಸಿ ಅಂದೆ
ಮೆತ್ತಗೆ ಮಲಗಿಬಿಟ್ಟರು !!

********************************************
ಜಾಮೀನು

ನನ್ನ ಪ್ರಿಇತಿಯಿಂದ ಸಿಗದು ಜಾಮೀನು
ಅದನ್ನು ಸಪ್ತಪದಿಯೆಂಬ
ಏಳು ಸುತ್ತಿನ ಕೋಟೆಯಲ್ಲಿಟ್ಟಿರುವೇನು. !

******************************************
ಹೀಗೊಂದು ಮಿಲನ

ಪ್ರೀಯಕರ ದೂರ ಇದ್ದರೆನಂತೆ
ವಿರಹದ ಜೊತೆ
ಭಾವನೆಗಳ ಸರಸ ಸಂವೇಧನೆ ಇದೆಯಲ್ಲಾ!

*****************************************************
-ನಿತಿನ್ ಜೊತೆ ಪ್ರತ್ಯುಷಾ :)

2 ಕಾಮೆಂಟ್‌ಗಳು:

Ranjita ಹೇಳಿದರು...

hi nitinvre nimma " ninnodige iralu " hanikavite nange tumba ista aatu .. :)

NiTiN Muttige ಹೇಳಿದರು...

ತುಂಬಾ ಸಂತೋಷ.. :)