ಸೋಮವಾರ, ಜನವರಿ 19, 2009

ಸಾಸಕರ್ನಾ ಹುಡಕಂಡು ಬೆಳಗಾವಿ ಜನ ಗೋವಾ ಬೀಚ್ ಗೆ ಹೋಗಾವ್ರಂತೆ!!


ನ್ಲಾ, ಮಹಾರಾಸ್ಟ್ರಾದ ಗಡಿಯಾಗೆ ಬಸ್ನೆಲ್ಲ ಸುಟ್ಟಾವ್ರಂತೆ. ಆದ್ರೆ ಬೆಳಗಾವ್ಯಾಗೆ ಪಸಂದ ಪಸಂದ ಅಡಿಗೆ ಮಾಡಿ ಹಾಕ್ತ ಇದ್ದಾರಂತಲ್ಲ ಅವ್ರದ್ದು ಹೊಟ್ಟೆನೋ ಹೊಳೆಕೊಡ್ಳೊ ಅಂತ ಗೋತ್ತಗಾಕಿಲ್ಲಪ್ಪ.. ಬೆಳಗಾವಿನ ಉದ್ದಾರ ಮಾಡ್ತಿವಿ ಅಂತ ಬೆಂಗಳುರಿಂದ ಅಲ್ಲಿಗೆ ಎಲ್ಲ್ರನ್ನ ಕಟ್ಟಕಂಡು ಹೋಗೈತೆ ಸರ್ಕಾರ.ಬೆಳಗಾವಿನ ಉದ್ದಾರ ಮಾಡೋದು ಬಿಟ್ಟು ತಮ್ಮ ಉದ್ದಾರಾನ ಮಾಡಕಾತಾ ಇದ್ದಾರಲ್ಲ ಸಿವಾ!!
ಏನಾರು ಒಸಿ ಡೆವಲಪ್ ಮೇಂಟ್ ಆತದೆ, ನಮದು ೨ ನೇ ಕಾಪಿಟಲ್ ಸಿಟಿ ಆಗ್ಬಿಡ್ತದೆ ಅಂತ ಅಲ್ಲಿನ ಜನ ಬಹಿ ಖುಸಿಲಿದ್ರು.ಆದ್ರೆ ಆದ್ರೆ ಅಧಿವೇಸನ ಅಂತ ಅಲ್ಲಿ ಮಾಡ್ತಾ ಇರೋದೆನಪ್ಪ? ಅಲ್ಲಾ, ಆ ರೀತಿ ತಿಂಡಿ ಊಟ ಮೆನು ಇದ್ರೆ ಅದೇಂಗೆ ಸಭೆ -ಸಮಾಲೋಚನೆ ಮಾಡ್ತಾರೆ ಇವ್ರು?ಬೆಳ್ ಬೆಳಗ್ಗೆ ಹಣ್ಣಿನ ರಸ ಕುಡಕಂಡು,ಜೇನುತುಪ್ಪ ನೆಕ್ಕಂಡು ,ಇಡ್ಲಿ-ವಡ,ಪ್ಲೇನ್ ದೋಸ,ಮಸಲ ದೊಸ,ಸೆಟ್ ದೊಸಾ,ಕಾರ್ನ್ ಪರೋಟ,ಉಪ್ಪಿಟ್ಟು,ಬ್ರೇಡ್,ಮೊಟ್ಟೆ,ಆಮ್ಲೇಟ್ ಅಂತ ಅಡಿಗೆಮನೆಲೆ ಕುಂತಕಂಡು ಬಿಟ್ರೆ ಅದೇಂಗೆ ಅಧಿವೇಸನ ಕೊಠಡಿಗೆ ಬರ್ತಾರೆ ಕಣಣ್ಣಾ,ಇದ್ರಲ್ಲಿ ನಮ್ಮ ಸಾಸಕರ ತಪ್ಪೇನು ಇಲ್ಲ ಬಿಡ್ಲಾ . ಪಾಪ ಅಷ್ಟು ದೂರದಿಂದ ಬಂದವ್ರೆ ಇಷ್ಟೇಲ್ಲಾ ಆದರಾತಿಥ್ಯ ಮಾಡದೆ ಇದ್ರೆ ತಪ್ಪಾಗಾಕಿಲ್ವ,ಅತಿಥಿ ದೇವೋ ಭವ ಅಂತದ್ರು ವಿಚಾರ್ಸಿದಕ್ಕೆ ಕೋರೆ ಸಾಹೆಬ್ರು.
ನಮ್ಮ ನಾಡು ಆದರಾತಿಥ್ಯಕ್ಕೆ ಮೆಸರಾಗೈತೆ ಮಾಡ್ಲಿ ಬಿಡಣ್ಣ.ಇಷ್ಟೇಲ್ಲಾ ಆಗೋ ಹೊತ್ತಿಗೆ ೧೨.೩೦ ಕ್ಕೆ ಊಟ ರೇಡಿ ಆಗಿರ್ತೈತೆ.ದಾಲ್,ಚಿಕನ್,ದೊಸಾ ಕಿ ಪಪ್ಪು,ತಂದೂರಿ ರೊಟ್ಟಿ,ವೆಜ್ ಬಿರ್ಯಾನಿ ಅಬ್ಬಬ್ಬಾ ಲೀಸ್ಟ್ ಮಾಡಿ ಮುಗ್ಯಾಕಿಲ್ಲ ಬಿಡು. ಇಷ್ಟೇಲ್ಲಾ ತಿಂದ ಮೇಲೆ ಅವ್ರೆಂಗೆ ಕೇಳಬೇಕಾದ ಸಮಸ್ಯೆನ ಅಧಿವೇಸನದಾಗೆ ಕೇಳ್ತಾರಣ್ನ ಅಂತದ್ದ ಉಗ್ರಪ್ಪ. ರಾತ್ರೆ ಮಂಚೂರಿ ಸೂಪ್,ಕಡಾಯಿ ಪನ್ನಿರ್,ಮಿಕ್ಸ್ ವೆಜ್ ರೈತಾ,ರುಮಾಲಿ ರೊಟಿ,ಪ್ಲೆನ್ ರೈಸ್,ಚಾಕ್ಲೇಟ್ ಕೇಕ್,ಐಸ್ ಕ್ರೀಮ್, ಎಕ್ಸಟ್ರಾ ಎಕ್ಸಟ್ರಾ... ತಿಂದ ಮೇಲೆ ಅದೇಂಗೆ ಕರ್ಗ್ತೈತೆ ಕಣ್ಳಾ, ಅದಕ್ಕೆ ಸಾಣೆ ಒಸಿ ಇರ್ಲಿ ಅಂತ ಬೆಳಂಬೆಳಗ್ಗೆ ಜಾಗಿಂಗ್ ,ಯೋಗಾಸನ,ಜೀಮ್-ಪಮ್ಮು, ಎಲ್ಲಾ ಮಾಡ್ತಾ ಅವ್ರೆ.ಹೇಂಗಾವ್ರು ನಾವು ಬರ್ತಿವಿ ಅಂತ ಮಾಡವ್ರೆ ಒಸಿ ಪುಕ್ಕಟೆ ಸಿಕ್ಕದಾಗ ನಾವು ನೋಡೋಣ ಅಂತ ಅಂದಕಂಡಾವ್ರೆ ಕಾಣ ತದೆ.ಅಲ್ಲಾ ಕಣ್ಲಾ ನಮ್ಮ ಸಾಸಕರ ಬಾಡಿ ನೋಡಿದ್ರೆ ಯಾವಗಾದ್ರು ಜೀಮ್ ಮಾಡ್ದಂಗೆ ಕಾಣ್ತದ ?ಅಧಿವೇಸನ ಮುಗ್ದ ಮ್ಯಾಕೆ ಗೌರ್ವಮೇಂಟ್ ಅದನ್ನ ರೀಪೇರಿಗೆ ೨ ಕೋಟಿ ಕೋಡ್ತಾವ್ರ ನೋಡ್ ಬೇಕು.. ಅದೇ ನಮ್ಮ ಪೇಪರ್ನಾರು ಅದೇ ಸುದ್ದಿ ಮಾಡಾಕೆ ಬೆಳಗಾವಿಗೆ ಹೋಗರಲ್ಲ ಪಾಪ ಅವ್ರಿಗು ಸುದ್ದಿ ಇಲ್ಲ.ಏನೋ ಸಾಸಕರ ಸಂಗಡ ಕ್ರೀಕಿಟ್ಟು ಆಡಾಕೆ ಹೋಗಿ ಸೋತಕಂಡು ಬಂದವ್ರಲ್ಲ.!! ಅವ್ರದ್ದು ಏನ್ ಕಥೆ ಅಂತ ಗೋತ್ತಾಗಾಕಿಲ್ಲಪ್ಪ.
ಅತ್ಲಾಗಿ ಮರಾಠಿ ಸರಕಾರ ಬೆಳಗಾವಿಗೆ ಸೇರಿದ್ದು ಅಲ್ಲಿ ನಾವು ನಿಮ್ಮಂಗೆ ವಿಸೇಸ ಅಧಿವೇಸನ ಮಾಡ್ತಿವಿ . ಇಗೇಂಗಾದ್ರು ಕೋಟಿ ಗಟ್ಲೆ ಖರ್ಚು ಮಾಡಿ ಕರ್ನಾಟಕ ಸರಕಾರ ಬುಲ್ಡಿಂಗ್ ರೇಡಿ ಮಾಡೈತೆ. ಮಹಾರಾಷ್ಟ್ರ ಸರಕಾರದವ್ರು ಅಧಿವೆಸನ ಮಾಡದು ಹೌದು. ಮತ್ತೆ ಜಾಗ ಹುಡಕ್ ಬೇಕು. ಅದಕ್ಕಿಂತ ನಾವು ನಿಮಗೆ ಒಂದೈದು ಕೋಟಿ ಕೊಡ್ತಿವಿ ನಮಗು ೧೦ ದಿನಕ್ಕೆ ಆ ಬುಲ್ಡಿಂಗ್ ಯಥಾ ಸ್ಥಿತಿಲಿ ಕೊಡ್ರಣ್ಣಾ ಅಂತ ಮಹಾರಾಷ್ಟ್ರಾದ ಇಂಧನ ಸಚಿವ ವಿನಯ ಕೊರೆ ಬೆಳಗಾವಿ ತನಕ ಬಾಯಿ ಬಾಯಿ ಬಡಕಂಡು ಯಡಿಯೂರಪ್ಪನ ಕಿವಿ ತಾವ ಕಮಲದ ಹೂವು ಸಿಕ್ಸಿ ಹೋಗವ್ರಾಂತೆ.ಯಡ್ಡಿ ಅಧಿವೇಸನದಾಗೆ ಚರ್ಚೆ ಮಾಡಿ ಏನು ಅಂತ ಸೋಭಕ್ಕನ ತಾವ ಹೇಳ್ ಇಡ್ತಿನಿ ಕೇಳ್ಕಳಪ್ಪಾ ಅಂತೇಳಿ ಬೆಂಗಳೂರ್ನಾಗೆ ನಡೆದ ರಕ್ಷಣ ವೇದಿಕೆ ಕಾರ್ಯಕ್ರಮ ಕ್ಕೆ ಬಂದ್ರು.
ಒಟ್ನಲ್ಲಿ ಇನೈದು ದಿನಕ ಎಲ್ಲಾ ಗಂಟು ಮೂಟೆ ಕಟ್ತಾರ.ಆಮೇಲೆ ಸಾಸಕರಿಗೆ ರೊಟ್ಟಿ ಊಟ ನೆನಪಾಯ್ತದ್ಯಾ? ಈ ಕಡೆ ತಲೆ ಹಾಕಿ ಮಲ್ಕಾತಾರ ಅಂತಾ ಅಲ್ಲಿನ ಜನ ಸಾಸಕರ್ನಾ ಗೋವಾ ಬೀಚ್ ನಲ್ಲಿ ಮೀಟ್ ಮಾಡಿ ಕೇಳ್ತಾವ್ರಂತೆ...!

ಕಾಮೆಂಟ್‌ಗಳಿಲ್ಲ: