ಮಂಗಳವಾರ, ಮಾರ್ಚ್ 24, 2009

ಅಂದು ಸಗಣಿ ಬಾಚಿದ್ದ ಬಂಗಾರಪ್ಪಗೆ ಈಗ ವಾಸನೆ ಬರುತ್ತಿದೆ!


ಮುಪ್ಪಿನ ಕಾಲದಲ್ಲಿ ಮನುಷ್ಯನಿಗೆ ತಾನು ಏನು ಮಾಡುತ್ತೆನೆ ಎಂದು ತಿಳಿಯುವುದಿಲ್ಲವಂತೆ.ತನಗೆ ವಯಸ್ಸು ೭೫ ದಾಟಿದರೂ ತಾನಿನ್ನೂ ಇಪ್ಪತ್ತೈದರ ಹುಡುಗ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗುವ ಬಂಗಾರಪ್ಪನವರಿಗೆ ಮುಪ್ಪಿನ ಕಾಲದಲ್ಲಿ ಬುದ್ದಿ ಭ್ರಮಣೆ ಆಗಿದೆಯೇ ಎಂದು ಜನರು ಆಡಿಕೊಳ್ಳುವಂತೆ ವರ್ತಿಸುತ್ತಿರುವುದು ಅವರ ಬಗ್ಗೆಯೇ ಜನರಲ್ಲಿ ಸಂಶಯ ಮೂಡುತ್ತಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ,೭ ಬಾರಿ ಎಂ.ಎಲ್.ಎ ಆಗಿ,೨ ಬಾರಿ ಲೋಕಸಭಾ ಸದಸ್ಯರಾಗಿ ರಾಜಕೀಯದ ಸಮಾಜಸೇವೆಯ ಮುಖವಾಡ ಹೊತ್ತಿರುವ ಬಂಗಾರಪ್ಪ ತಾವು ಸೇವೆ ಸಲ್ಲಿಸಿರುವ ಖುರ್ಚಿಗಾದರೂ ಗೌರವ ಸಲ್ಲಿಸಬಹುದಿತ್ತು.ಅದನ್ನ ಬಿಟ್ಟು ಮಂಗಗಳ ರೀತಿ ತನ್ನ ಲಾಭಕ್ಕೆ ಒಂದೊಂದು ಪಕ್ಷವನ್ನು ಅಪ್ಪಿಕೊಳ್ಳುವ ಬಂಗಾರಪ್ಪನವರಿಗೆ ಅದು ಎಲ್ಲಿಂದ ಬರ ಬೇಕು?
ರಾಜಕೀಯದಲ್ಲಿರುವವರೆಲ್ಲರೂ ಏನು ಸಾಚಾ ಅಲ್ಲವೇ ಅಲ್ಲ.ಆದರು ಮನಸಲ್ಲಿ ನಿಯತ್ತು ಎನ್ನುವ ಭಾವ ಇದ್ದರೆ ನಾವು ಮಾಡುವ ಕೆಲಸಕ್ಕೊಂದು ಅರ್ಥ. ಕೇವಲ ೫ ವರ್ಷಗಳಹಿಂದೆ ಬಂಗಾರಪ್ಪ ಎಲ್ಲಿ ಎಂದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಎಂದು ಎಲ್ಲ ಜನ ಹೇಳುತ್ತಿದ್ದರು!!.ಬಿ.ಜೆ.ಪಿ ಯಿಂದ ಸಮಾಜವಾದಿ ಪಕ್ಷಕ್ಕೆ ಬಂದಾಗ ಚುನಾವಾಣಾ ಸಮಯದಲ್ಲೂ ಸರಿ ಇದ್ದ ಬಂಗಾರಪ್ಪ, ನಂತರ ಮಠಕ್ಕೆ ಬಿ,ಜೆ.ಪಿ. ಜೆ.ಡಿ.ಎಸ್. ಮುಖಂಡರೂ ಬಂದ ಮೇಲೆ ಮಠದ ವಿರುದ್ದ ಸಿಟ್ಟೆದ್ದರು.ಇದೋಂದೆ ಕಾರಣವಲ್ಲ,ಸಾಗರ,ಸೊರಬ,ಶಿಕಾರಿಪುರ ಮುಂತಾದ ಕಡೆ [ಶಿವಮೊಗ್ಗದಲ್ಲಿ ೭ ರಲ್ಲಿ ೬ ಬಿ.ಜೆ.ಪಿ] ಬಿ.ಜೆ.ಪಿ. ಮೇಲುಗೈ ಸಾಧಿಸಲು ಮಠವೇ ಕಾರಣ, ತನಗೆ ಸಪೋರ್ಟ್ ಇಲ್ಲ,ಮಖಾಡೆ ಮಲಗಲು ಮಠವೇ ಕಾರಣ ಎಂಬುದು ಬಂಗಾರಪ್ಪ ಮಠದ ಮೇಲೆ ಸಿಟ್ಟಾಗಲು ಕಾರಣ.ರಾಜಕೀಯದಲ್ಲಿ ಸೋತಾಗ ಸಿಟ್ಟು ಸ್ವಾಭಾವಿಕ ಬಿಡಿ!!.
೪ ಗೊಡ್ಡು ಆಕಳು ಎಮ್ಮೆ,ಕರು ಸಾಕಿಕೊಂಡು ಫೋಟೊ ತೆಗೆಸಿಕೊಳ್ಳುವ ಸ್ವಾಮಿ ಎನ್ನುವ ಬಂಗಾರಪ್ಪ, ಅದೇ ಶ್ರೀಗಳಿಂದ ಇಂದು ಪ್ರತಿಯೊಬ್ಬನ ಬಾಯಿಯಲ್ಲಿ ಗೋವಿನ ಹೆಸರು ಬರುತ್ತಿರುವುದು ಮರೆತರೆ?ಭಾರತೀಯ ಗೋವಂಶ ಇದೇ ಎಂಬುದನ್ನೇ ಮರೆತ್ತಿದ್ದ ನಮಗೆ ನಮ್ಮಲ್ಲೂ ಅನೇಕ ಭಾರತೀಯ ತಳಿಗಳು ಇವೆ ಎಂದು ತೋರಿಸಿ,ಅದನ್ನು ಸಂರಕ್ಷಿಸಲು ಪ್ರೇರೆಪೀಸಿ,ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳು ಶ್ರೀಮಠದಲ್ಲಿ ಇರುವ ಸಾವಿರ ಗೋವಿನ ಸಗಣಿ ಬಾಚುತ್ತ ಇರಲು ಸಾಧ್ಯವೆ?ಕೆಲವೇ ವರ್ಷಗಳ ಹಿಂದೆ ಅದೇ ಹಸುಗಳನ್ನು ಮೈದಡವಿ ಮಾತಾಡಿಸುತ್ತಿದ್ದ ಬಂಗಾರಪ್ಪನವರಿಗೆ ಈಗ ಅದೇ ಹಸುಗಳು ಗೊಡ್ಡಿನ ತರ ಕಾಣಿಸುತ್ತಿರುವುದು ವಿಪರ್ಯಾಸ.
ರಾಮಚಂದ್ರಾಪುರ ಮಠದ ಸ್ವಾಮಿಜಿ ಕೈಲಿ ವೊಟಿಲ್ಲ, ಅಲ್ಲಿ ಕೋಟಿಗಟ್ಟಲೆ ಹಣ ಏನಕ್ಕೆ ಕೊಟ್ಟಿರಿ ಎಂದು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಳುವ ಮಾತೆ?ನಿವೇನೋ ವೋಟಿಗಾಗೇ ನಿಮ್ಮ ಕಾಲದಲ್ಲಿ ದುಡ್ಡು ಹೆಂಡ ಹಂಚಿರಬಹುದು,ಎಲ್ಲವೂ ನಿಮ್ಮತರನೇ ಆಗ ಬೇಕೆಂದರೆ ಹೇಗೆ?
ಮಠ,ಸ್ವಾಮಿಜಿ,ಜಾತಿ ಹೀಗೆ ಯಾವುದಾದರೊಂದು ವಿವಾದ ಹೇಳಿಕೆ ನೀಡಿ ತಾವಿನ್ನೂ ಬದುಕಿದ್ದೇವೆ ಎಂದು ಜನರ ತಲುಪುವ ಮಾಧ್ಯಮ ಬಿಟ್ಟು ಒಳ್ಳೆ ಕೆಲಸದಿಂದ ದಿನ ನೆನೆಯುವಂತಾದರೆ ಜೀವನ ಸಾರ್ಥಕ ತಾನೆ?

ಅಷ್ಟಕ್ಕೂ ಈಗ ಜನ ಬದಲಾಗುತ್ತಿದ್ದಾರೆ.ಎಲ್ಲ ಜಾತಿಯ ವೋಟು ಅವರ ಜಾತಿಗೆ ಮಾತ್ರ ಬರದೇ ಇರುವುದು ಹೆಚ್ಚುತ್ತಿರುವುದು ಶಿಕ್ಷಿತರಲ್ಲಿ ಹೆಚ್ಚುತ್ತಿದೆ.ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳ ಮೇಲಾದರೂ ಬಡತನವನ್ನು ಸಾಕಿ ತಮ್ಮ ವೋಟ್ ಬ್ಯಾಂಕ ಮಾಡಿಕೊಂಡಿರುವ ರಾಜಕಾರಣಿಗಳಿಂದ ಬಡವರು ಇನ್ನೂ ನರಕಯಾತನೆಯಲ್ಲೇ ಕೊಳೆಯುತ್ತಿದ್ದಾರೆ.ಗೋವಿನ ಸಗಣಿಯನ್ನಾದರೂ ತೆಗೆದು ಜೀವನ ಸವೆಸುತ್ತಿರುವ ಶೂದ್ರರು ಅದರಿಂದಾದರೂ ಜೀವನ ಮಾಡುತ್ತಿರುವುದು ಬಂಗಾರಪ್ಪನವರಿಗೆ ನೋಡಲು ಸಾಧ್ಯವಿಲ್ಲವೆನೋ?

ಮುಗಿಸುವ ಮುನ್ನ:
"ತಾಕತ್ತಿದ್ದರೆ ರಾಮಚಂದ್ರಾಪುರ ಮಠದ ಶ್ರೀಗಳು ನನಗೆ ಟಿಕೇಟ್ ತಪ್ಪಿಸಲಿ-ಬಂಗಾರಪ್ಪ"
ಟಿಕೇಟ್ ನಿಮಗೆ ಸಿಗಬೇಕು;ನಿಮ್ಮನ್ನ ಮಕಾಡೆ ಕೆಡಗಿ ಮಜಾ ತಗೋ ಬೇಕು ಕಣ್ಲಾ ಅಂದ್ರಂತೆ ಶಿವಮೊಗ್ಗದ ಜನ!.

3 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಿತಿನ್
ಸಕಾಲಿಕ ಲೇಖನ, ಬ೦ಗಾರಪ್ಪ ತಾನು ಸೋಲಿಲ್ಲದ ಸರದಾರ ಎ೦ದು ಬಗೆದು ಬಾಯಿಗೆ ಬ೦ದ೦ತೆ ಬಡಬಡಿಸುತ್ತಿದ್ದಾರೆ. ಇನ್ನೇನು ಚುನಾವಣಾ ಬ೦ದೇಬಿಡ್ತಲ್ಲ, ಜನ ಅವರಿಗೆ ತಕ್ಕ ಪಾಠ ಕಲಿಸ್ತಾರೆ.

ಯಜ್ಞೇಶ್ (yajnesh) ಹೇಳಿದರು...

ನಿತಿನ್,

ಲೇಖನ ತುಂಬಾ ಸುಂದರವಾಗಿ ಬಂದಿದೆ. ಯಾವುದೇ ಸಿದ್ದಾಂತವಿಲ್ಲದೇ ಅದಿಕಾರದ ಆಸೆಗಾಗಿ ದಿನಕ್ಕೊಂದು ಪಕ್ಷ ಸೇರುತ್ತಿರುವ "ಬಂ" ಗೆ ಜನ ಸರಿಯಾದ ಪಾಠ ಕಲಿಸಬೇಕು. ಕಾಲ ಬದಲಾಗಿದೆ, ಹಿಂದಿನ ಕಾಲದ ಹಾಗೆ ಜನ ಸಮ್ಮೋಹನಕ್ಕೊಳಗಾದ ಹಾಗೇ ಒಂದೇ ಪಕ್ಷಕ್ಕೆ ಜನ ಓಟು ಮಾಡುವುದಿಲ್ಲ. ಹಿಂದೆಲ್ಲಾ ಇಂದಿರಾಗಾಂದಿಯೊಬ್ಬರೇ ನಾಯಕರಾಗಿದ್ದರು. ಆಧುನಿಕ ಜಗದಲ್ಲಿ ಪ್ರತಿಯೊಬ್ಬ ರಾಜಕಾರಣಿಗಳ ನೈಜ ಬಣ್ಣ ಬಯಲಾಗುತ್ತಿದೆ.

ಈ ಸಲ "ಹಾರೇಗೊಪ್ಪ ಬಂ" ಭವಿಷ್ಯ ಎಲ್ಲರಿಗೂ ತಿಳಿಯಲಿ

ಸಿರಿರಮಣ ಹೇಳಿದರು...

ಇನ್ನೂ ಸ್ವಲ್ಪ ಅಡಿಕೆ ಸುಣ್ಣ ಹಾಕಿ ಉಗಿಯಬೇಕಿತ್ತು ತಮ್ಮಾ !!