ಗುರುವಾರ, ಏಪ್ರಿಲ್ 23, 2009

ಅವರದು ಬೇರೆ ಪಕ್ಷ ಸುಟ್ಟು ಬಿಡೋಣ!! :)


ನಮ್ಮ ಮನೆಯಲ್ಲಿ ಮೊದಲಿನಿಂದಲೂ ಚುನಾವಣೆಯ ಕಾವು ಜೋರು.ಅಪ್ಪ ಸಕ್ರೀಯವಾಗಿ ರಾಜಕೀಯದಲ್ಲಿದ್ದಿದ್ದ್ದಕಾರಣದಿಂದ ನಮಗೂ ಚಿಕ್ಕವರಿದ್ದಗಿಂದಲೇ ಒಂಥರಾ ರಾಜಕೀಯ ಹುಚ್ಚು. ಪ್ರಚಾರಕ್ಕೆಲ್ಲಾ ಹೋಗುವಾಗ ಒಂಥರಾ ಮಜಾ. ಜೀಪ್ ಮೇಲೆ ಬಿಟ್ಟಿ ಟೂರ್ ಆಗಿರೊದು!.
ಕಳೆದ ೨ ಚುನಾವಣೆಯ ಹಿಂದಿನ ಚುನಾವಣೆಯನ್ನೆಲ್ಲ ನೋಡಿದರೆ ಎಷ್ಟು ಮಜಾ ಇರೋದು.!ಪ್ರತಿ ಮನೆಯ ಗೋಡೆಯ ಮೇಲೆ ಕರಪತ್ರಗಳ ಕಾರು ಬಾರು ಇರೋದು.!
ಚುನಾವಣೆ ಬಂತೆಂದರೆ ನಮ್ಮನೆಲಿ ಸಮರಾಧನೆಯೆ ಆಗಿರೋದು. ಚುನಾವಣೆ ಮುಗಿಯುವ ತನಕ ಅಮ್ಮನಿಗೆ ಅಡಿಗೆ ಮಾಡುವುದೇ ಕೆಲಸ ಮನೆಯಲ್ಲಿ.ಮನೆಗೆ ಬಹಳ ಜನ ಬಂದು ಹೋಗುತ್ತಿದ್ದರಿಂದ ಅವರಿಗೆ ಆತಿಥ್ಯ ಮಾಡುವುದು ಸಾಮನ್ಯವಾಗಿತ್ತು.
ಒಮ್ಮೆ ಅಪ್ಪ ಮತ್ತಿತರು ಹೋಗಿದ್ದ ಸ್ಥಳಕ್ಕೆ ವಿರೋಧ ಪಕ್ಷದವರು ಮತಯಾಚನೆಗೆ ಬಂದಿದ್ದರು.ಅಲ್ಲೆ ಮದ್ಯದಲ್ಲೇ ಅವರ ವಾಹನ ಕೆಟ್ಟಿ ಹೋಯಿತು.ಅಪ್ಪನಿಗೆ ಪರಿಚಯ ಇದ್ದಿದ್ದರಿಂದ ಅವರ ವಾಹನದಲ್ಲೆ ಸುಮಾರು ೧೦ ಜನರನ್ನು ಕರೆದುಕೊಂಡು ಊಟಕ್ಕೆ ಮನೆಗೆ ಬಂದರು.ಪಕ್ಷ ಬೇರೆ ಬೇರೆ ಆದರೂ ಎಲ್ಲರೂ ಪರಿಚಯ ಇದ್ದುದ್ದರಿಂದ ಕರೆದುಕೊಂಡು ಬಂದಿದ್ದರು.ಮನೆಗೆ ಇಷ್ಟೇಲ್ಲಾ ಜನ ಬಂದಾಗ ನಮಗೆ ಕುತೂಹಲ.ಬಂದವರೆಲ್ಲ ಊಟಕ್ಕೆ ಹೋದ ಮೇಲೆ ಜಗುಲಿಯ ಟೇಬಲ್ ಮೇಲೆ ಇಟ್ಟುದ್ದ ಕರಮತ್ರ,ಮತಯಚನೆ ಪತ್ರ ನೋಡಿದ ನಮಗೆ ಶೋಕ್!! ಅಲ್ಲಿ ಬೇರೆ ಪಕ್ಷದ್ದು!!. ನಾನು ,ಅಣ್ಣ, ಹಾಗೂ ಪಕ್ಕದ ಮನೆಯ ಹುಡುಗರೆಲ್ಲ ಆಟ ಆಡುತ್ತಿದ್ದವರೆಲ್ಲ ನೋಡಿದ್ದೆ ತಡ ಎಲ್ಲರ ಮೈಯೂ ಊರಿದು ಹೋಯಿತು!.ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧವೇ ಮತ ಯಾಚಿಸುತ್ತಾರೆ ಅವರು.ಅಲ್ಲೇ ತುರ್ತು ಸಭೆ ನಮ್ಮದು.ಇವರಿಗೆ ಏನು ಮಾಡಬೇಕು ಎಂಬ ವಿಷಯದ ಮೇಲೆ.ಏನೇ ಮಾಡುವುದಿದ್ದರೂ ೧೫ ನಿಮೀಷದಲ್ಲಿ ಮಾಡಬೇಕು.ಅವರಿಗೆ ಊಟ ಆಗುವುದರ ಒಳಗೆ.೩ ನಿಮಿಷದಲ್ಲೇ ನಮ್ಮ ಸಭೆ ಒಮ್ಮತದ ನಿರ್ಣಯಕ್ಕೆ ಬಂದಿತ್ತು!. ಆ ಕರಪತ್ರಗಳನ್ನೇಲ್ಲಾ ಸುಟ್ಟು ಬಿಟ್ಟರೆ ಅವರಿಗೆ ಮತಯಾಚಿಸಲು ಆಗದು ಎಂದು.! ತಕ್ಷಣ ಕಾರ್ಯಪ್ರವ್ರೂತ್ತರಾದ ನಮ್ಮಪಡೆ, ಒಬ್ಬ ಮೇಣದ ಬತ್ತಿ ಕತ್ತಿಸಿಕೊಂಡು ಬಂದರೆ,ಒಬ್ಬ ಯಾರದರೂ ಬರುತ್ತಾರಾ ಎಂದು ಕಾಯ್ದ.ಉಳಿದವರು ಸ್ವಲ್ಪ ಕರಪತ್ರ ಬಿಟ್ಟು ಹೆಚ್ಚಿನ ಹೆಚ್ಚಿನ ಭಾಗವನ್ನು ಸುಡಲು ಎತ್ತಾಕಿಕೊಂಡು ಬಂದ ಮತ್ತೊಬ್ಬ.ಮನೆಯ ಪಕ್ಕದಲ್ಲೆ ನಾವು ಹುಡುಗರು ಎಲ್ಲವನ್ನು ಹರಿದು ಮೆಟ್ಟಿ ಒಂದೋಂದು ಕಡೆಯಿಂದ ಬೆಂಕಿ ಹಚ್ಚಿದಿವು!.ಹೋಗೆ ಆದಕೂಡಲೆ ಅಲ್ಲಿಂದ ಜಾಗ ಖಾಲಿ ಮಾಡಿದಾಗ ಒಬ್ಬೊಬ್ಬರೆ ಊಟ ಮುಗಿಸಿಕೊಂಡು ಬರುತ್ತಿದ್ದರು.ನಂತರ ಎಲ್ಲರು ಹೊರಡುವಾಗ ಕರ ಪತ್ರ ಇಲ್ಲವೇ ಇಲ್ಲ!ಎಲ್ಲೆ ಹುಡುಕಿದರು ಸಿಗುತ್ತಿಲ್ಲ.ಆಮೇಲೆ ಅವರಲ್ಲೊಬ್ಬ ಹೆಚ್ಚಾಗಿ ವಾಹನದಲ್ಲೇ ಬಿಟ್ಟಿರ ಬೇಕು ಎಂದಾಗ ಎಲ್ಲ ತಲೆ ಅಲ್ಲಾಡಿಸಿ ಹೋರಟರು.ನಮಗೆಲ್ಲ ಅವರನ್ನು ನೋಡುತ್ತಿದ್ದಾಗ ಮೈ ಎಲ್ಲ ಊರಿಯುತ್ತಿತ್ತು.ಆದರೆ ಕೊನೆಯಲ್ಲಿದ್ದ ಒಬ್ಬ ಮನೆ ಪಕ್ಕಕ್ಕೆ ನೋಡುವಾಗ ಸಣ್ಣ ಹೋಗೆ ಕಂಡು ಅದೇನೆಂದು ಕೇಳೆ ಬಿಟ್ಟ! ಅಪ್ಪನಿಗೂ ಆಶ್ಚರ್ಯ.ಅಮ್ಮನಿಗೆ ಗೋತ್ತಗಿತ್ತು.ಅಷ್ಟರಲ್ಲಿ ಅಮ್ಮ,ಹುಡುಗರು ಆಟವಾಡುವಾಗ ಪೇಪರ್ ಸುಟ್ಟಿರ ಬೇಕು ಏಂದಾಗ ನಮ್ಮ ಮುಖದಲ್ಲಿ ಅದೇನೋ ಸಾಧಿಸಿದ ನಗು ಮಿಂಚುತಿತ್ತು!.

****************************************************************************
ಅಂದು ಮತಯಾಚನೆ ಪತ್ರವನ್ನೇ ಸುಟ್ಟಿದ್ದ ನನ್ಗೆ ಇಂದು ಮೊದಲ ಸಲ ಮತದಾನ ಮಾಡಿದ ಚುನಾವಣೆ.ಆಗ ಅಷ್ಟು ಚಿಕ್ಕವರಿದ್ದಾಗ ಕ್ರೀಯಾಶೀಲತೆಯಿಂದ ಇದ್ದ ನನ್ಗೆ ಏಳುವಾಗ ಯಾರು ವೋಟ್ ಹಾಕಲು ಹೋಗುತ್ತಾರೆ ಎಂಬ ಭಾವನೆ ಇತ್ತು.ಆದರೆ ಯಾವುದಕ್ಕೂ ಮೊದಲ ಚುನಾವಣೆ ಹಾಕೋಣ ಎಂದು ಹೋದೆ.ರೋಡ್ ಪಕ್ಕದಲ್ಲೆ ಟೆಬಲ್ ಹಾಕೊಂಡು ಕುಳಿತಿದ್ದರು ಕಾಂಗ್ರೆಸ್ ನವರು!.ನನ್ನ ನಂಬರ್ ಹುಡುಕುವಾಗ ಪಕ್ಕದಲ್ಲಿದ್ದವರಿಗೆ ಅಲ್ಲಿನ ಆಂಟಿ ಒಬ್ಬಳು ನಮ್ಮ ಕಾಂಗ್ರೆಸ್ ಗೆ ವೋಟ್ ಹಾಕಿ ಹೇಳುತ್ತಿದ್ದರಿಂದ ಗೊತ್ತಾಯಿತು.! (ನನಗೆ ಹೇಳಲಿಲ್ಲ.ನಾನು ಆ ಪಕ್ಷಕ್ಕೆ ಹಾಕಲಿಲ್ಲ ಬಿಡಿ!) ನನಗೆ ನನ್ನ ಹೆಸರು ಇದ್ದರೆ ಸಾಕಿತ್ತು!ಇಂಟರ್ ನೆಟ್ ಲಿ ಹುಡುಕಿದರು ಸಿಗದೆ ಇದ್ದಿದ್ದರಿಂದ ಬಂದಿಲ್ಲವೆ ಎಂಬ ಅನುಮಾನ ಬೇರೆ.ಕೊನೆಗು ಸಿಕ್ಕಾಗ ಖುಷಿ.ಸಿದಾ ಹೋದವನೆ ಕ್ಯೂದಲ್ಲಿ ನಿಂತೆ.ಅಲ್ಲಿ ಒಂದು ಕಡೆ ಮಾತ್ರ ದೊಡ್ಡ ಸಾಲಿತ್ತು ಅಲ್ಲೆ ನಿಂತೆ. ೫ ನಿಮಿಷ ಆದ ಮೇಲೆ ಅಲ್ಲೆ ಪಕ್ಕದಲ್ಲಿ ಸಣ್ಣ ಸಾಲು ಕಾಣಿಸಿತು.ಮುಂದಿದ್ದವರ ಬಳಿ ವಿಚಾರಿಸಿದೆ.ಬೂತ್ ಪ್ರಕಾರ ನಿಮ್ಮದು ಅಲ್ಲಿ ಬರತ್ತೆ ಖಾಲಿ ಇದೆ ಹೋಗಿ ಅಂದರು.ಸಿದಾ ಹೋದವನೆ ಎಲ್ಲ ಪ್ರಕ್ರೀಯೆ ಮುಗಿಸಿ ಇಂಕ್ ಹಾಕಿಸಿಕೊಳ್ಳುವಾಗ ಬಲ ಗೈ ನೀಡಿದೆ! ಚುನಾವಣಾಧಿಕಾರಿಗೆ ಅನುಭವ ಇದ್ದಿರ ಬೇಕು! ನಗೆಯಾಡುತ್ತಲೆ ಎಡಗೈ ನೀಡಿ ಸರ್ ಎಂದಾಗ ಎಡಗೈ ನ ಎಲ್ಲ ಬೆಟ್ಟು ಗಳನ್ನು ಆತನ ಟೇಬಲ್ ಮೇಲೆ ಇಟ್ಟೆ.! ಆತ ತೋರು ಬೆರಳಿಗೆ ಮಾತ್ರ ಇಂಕ್ ಹಾಕಿದ!

ಮತ ಹಾಕುವಾಗಲೂ ಎಷ್ಟೋಂದು ಮಜ ಬರತ್ತೆ ಅಲ್ವಾ ಅಂತ ಅನ್ನಿಸಿದ್ದು ಸುಳ್ಳಲ್ಲಾ!!. ಈ ಚುನಾವಣೆ ಅದೆಷ್ಟು ವಿಸ್ಮಯಗಳ ಸಂಗತಿ ಅಂಥ ಈಗ ಅನ್ನಿಸುತ್ತಿದೆ!

3 ಕಾಮೆಂಟ್‌ಗಳು:

shivu.k ಹೇಳಿದರು...

ನಿತಿನ್,

ನಿಮಗೂ ಮತ ಹಾಕುವ ವಯಸ್ಸಾಯ್ತಲ್ಲ...ಗುಡ್...

ಮತದಾನದ ಇನ್ನಷ್ಟು ಮಜಗಳನ್ನು ಮುಂದೆ ಅನುಭವಿಸಿ..

Ittigecement ಹೇಳಿದರು...

ನಿತಿನ್.....

ಮೊದಲಬಾರಿಗೆ ವೋಟ್ ಹಾಕಿದ ಅನುಭವ ಚೆನ್ನಾಗಿದೆ......
ನನಗೂ ಹೀಗೆ ಖುಷಿಯಾಗಿತ್ತು
ಆದರೆ...
ನಾನು ಇದುವರೆಗೆ..
ಈ ಸಾರಿಯೂ...
ವೋಟ್ ಹಾಕಿದ ಒಬ್ಬರೂ ಗೆಲ್ಲಲಿಲ್ಲ.....!!

ನಾನು ಮೊದಲು ವೋಟ್ ಹಾಕಿದ್ದು..
ನನ್ನ ನೆಚ್ಚಿನ ಅಜ್ಜ...
ಕಾರಂತಜ್ಜ....
ಅವರೂ ಸೋತರು...........

NiTiN Muttige ಹೇಳಿದರು...

ಪ್ರಕಾಶ್ ಆದರೆ ನಂದು ಉಲ್ಟಾ ಕೇಸ್!!