ಶನಿವಾರ, ಜುಲೈ 18, 2009

ಮಿಡಿಯಾ ಮಿರ್ಚಿ Vs ಹದ್ದಿನ ಕಣ್ಣು!


ಕಳೆದ ಭಾನುವಾರದ ವಿ.ಕ.ದ ಸಂಪಾದಕರ ಭಾನುವಾರದ ಅಂಕಣದಿಂದ ಮತ್ತು ನಂತರದ ನಮ್ಮ ಬೆನ್ನು ನಮಗೇ ಕಾಣಿಸುತ್ತದೆ ಎಂಬ ವಾಕ್ಯ ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿತ್ತು.ನಿನ್ನೆ ಬೆನ್ನು ಕಾಣಿಸುವವರು ಯಾರು ಎಂದೂ ಹೇಳಿ ಮೊದಲ ಲೇಖನಕ್ಕೆ ಸತಾಯಿಸಿತ್ತು.ಶನಿವಾರ (ಇಂದು) ೯ ನೇ ಪುಟದಲ್ಲಿ ಪ್ರಕಟವಾಗಿದೆ.ಪತ್ರಿಕೆಗಳಲ್ಲಿನ ಮಡಿವಂತಿಕೆ ಹೊರಡಿಸಿದೆ.
ಇದೇ ರೀತಿ ಮಾಧ್ಯಮದಲ್ಲಿನ ಆಗು-ಹೋಗುಗಳ ವಿಮರ್ಶೆಗೆ ಸಂಯುಕ್ತ ಕರ್ನಾಟಕ ಕೂಡ ಚಾಲನೆ ಕೊಟ್ಟಿದೆ.ಸದ್ದು ಗದ್ದಲವಿಲ್ಲದೇ ಇಂದಿನಿಂದ ಆರಂಭಿಸಿದೆ.
“ಮಿಡಿಯಾ ಮಿರ್ಚಿ”ಯನ್ನು ಬರೆಯಲಾರಂಭಿಸಿರುವವರು ಪತ್ರಕರ್ತ ಜಿ.ಎನ್.ಮೋಹನ್.”ಹದ್ದಿನಕಣ್ಣನ್ನ್ನು” ಖಾದ್ರಿ ಅಚ್ಯುತನ್ ಆರಂಭಿಸಿದ್ದಾರೆ.ಹೊಸ ಪ್ರಯೋಗಗಳಿಗೆ ಮನೆಮಾತಾದ ವಿ.ಕ.ದ ಈ ಪ್ರಯೋಗ ಕೂಡ ಸಾಕಷ್ಟು ಕುಟುಹಲಕ್ಕೆ ಕಾರಣವಾಗಿತ್ತು. ಮೊದಲ ಅಂಕಣದಲ್ಲಿ ನವೀರಾದ ನಿರೂಪಣೆ,ಅಲ್ಲೋಂದು ಇಲ್ಲೋಂದು “ಒಗ್ಗರಣೆ”, ಮಾವಿನ ಕಾಯಿ ಗೊಜ್ಜಿಗೆ ಮೆಣಸಿನಕಾಯಿ ನುರಿಯುವಂತೆ ಮೆಣ್ಸಿನಕಾಯಿ ನುರಿದಿದ್ದಾರೆ ಮೋಹನ್.

ಪತ್ರಿಕೆಗಳಲ್ಲಿ ಬೇರೆ ಪತ್ರಿಕೆ ಹೆಸರು ಹಾಕದೇ ಇರುವುದು ವಾಡಿಕೆ.ವಿ.ಕ.ಹಲವಾರು ಬಾರಿ ಇದನ್ನು ಮುರಿದಿದ್ದು ಇದೆ.ಯಾವ್ಯಾವ ಪತ್ರಿಕೆಯಲ್ಲಿ ಏನೇನಾಗಿತ್ತು ಎಂದು ಮೊದಲ “ಖಾಸ್-ಬಾತ್” ನಲ್ಲಿ ಬಹುತೇಕ ಪತ್ರಿಕೆಗಳ ಹೆಸರನ್ನು ಹಾಕಿ ವಿವರಿಸಿದ್ದಾರೆ ಅಂಕಣಕಾರರು.ಆದರೆ ಟಿ೨೦ ಯಂತೆ ಮೊದಲ ದಿನವೇ ಯರ್ರಾ ಬಿರ್ರಿ ಚಚ್ಚಿಲ್ಲ!. ನಿಧಾನವಾಗಿ ಫೀಲ್ಡ್ ಗೆ ಇಳಿಯುವ ಸೂಚನೆಯಿದೆ.ವಿ.ಕದ ಸ್ಪೇಶಾಲಿಟಿನೆ ಇದು ಬಿಡಿ.

ಅದೇ ಸಂಯುಕ್ತದಲ್ಲಿ ಸಂಪಾದಕಿಯ ಪುಟದಲ್ಲಿ “ಹದ್ದಿನ ಕಣ್ಣಿಗೆ” ಜಾಗ ಕೊಡಲಾಗಿದೆ.ಮೊದಲ ದಿನವೇ ಖಾದ್ರಿ ಅಚ್ಯುತನ್ ಅವರು ಬ್ಯಾಟಿಂಗ್ ಗೆ ಇಳಿದು ವರದಿಗಾರಿಕೆಯ ಬಗ್ಗೆ,ಇಂಟರ್ ನೆಟ್ ಬಗ್ಗೆ ವಿವರಿಸಿ,ಕೊನೆಯಲ್ಲಿ ಹೆಡ್ಡಿಂಗ್ ಬಗ್ಗೆ ಕೊಟ್ಟಿದ್ದಾರೆ.ಆದರೆ ಯಾವ ಪತ್ರಿಕೆಯಲ್ಲಿ ಬಂದಿತ್ತು ಎನ್ನುವುದು ಓದುಗಗರಿಗೆ ಕ್ವೀಜ್ ಇದ್ದಹಾಗೆ!.ಇಲ್ಲಿ ಮಡಿವಂತಿಕೆ ಹಾಗೇ ಇದ್ದು ಬಿಟ್ಟಿತೆನೋ ಅನ್ನಿಸುತ್ತದೆ.

ಸಂಯುಕ್ತ ಕರ್ನಾಟಕ ಇತ್ತೀಚಿಗೆ ತನ್ನ ಪುಟ ವಿನ್ಯಾಸ ಬದಲಾಯಿಸಿಕೊಂಡಿತ್ತು.ವಿಜಯ ಕರ್ನಾಟಕಕ್ಕೆ ಹೆಚ್ಚು ಹೋಲಿಕೆಯಾಗುವಂತೆಯೂ ಇತ್ತು.ಈಗ ವಿ.ಕ.ಆರಂಭಿಸಿದ ಹೊಸ ಅಂಕಣದ ಮೊದಲ ದಿನವೇ ತಾನು ಅದೇ ರೀತಿಯ ಅಂಕಣಕ್ಕೆ ಚಾಲನೆ ನೀಡಿದೆ(ಈ ಮೊದಲೆ ಯೋಜಿಸಿದ್ದರೆ ಕ್ಷಮೆ ಇರಲಿ).೨ ಪತ್ರಿಕೆಗಳು ಒಟ್ಟಿನಲ್ಲಿ ಮಾಧ್ಯಮಗಳ ಆಗು ಹೋಗು ತಿಳಿಸಿಕೊಡುತ್ತದೆ.

ಸುದ್ದಿಮನೆ ನಿಂತನೀರಲ್ಲ…ನಿಧಾನವಾಗಿ ಚಟುವಟಿಕೆಗಳು ಆರಂಭವಾಗುತ್ತಿದೆ!.

ಕೊನೆಯದಾಗಿ ಮಿಡಿಯಾ ಮಿರ್ಚಿಯ ಜಿ.ಎನ್.ಮೋಹನ್ ಮತ್ತು ಹದ್ದಿನಕಣ್ಣಿನ ಖಾದ್ರಿ ಅಚ್ಯುತನ್ ಅವರಿಗೂ ಶುಭಾಶಯಗಳು..