ಶುಕ್ರವಾರ, ಫೆಬ್ರವರಿ 13, 2009

ಪ್ರೀತಿಯ ಜೊತೆ ಜೀವನ ಪಾಠ ಕಲಿಸಿದ್ದೆ!

ಪ್ರೀತಿಯ ಪ್ರೇಮ ದೇವತೆಗೆ.
ನಂಗೆ ಗೋತ್ತು ಕಣೆ. ಇವನೇನಪ್ಪ ಪ್ರೀತೆಯ ಮುದ್ದು,ಚಿನ್ನು,ಬಂಗಾರ,ಗೂಬೆ ಎಂದೆಲ್ಲ ಕರೆಯಿತ್ತಿದ್ದವ ದೇವತೆ ಅಂತ ಕರೆಯುತ್ತಿದ್ದಾನೆ ಅಂಥ ಗಲಿಬಿಲಿಗೆ ಬಿದ್ದಿರುತ್ತಿಯಾ ಅಂತ.ನೀನು ಬಿಟ್ಟು ಹೋಗಿದ್ದಿಯ ಅಂತ ಕಂಡಿತ ಬೇಸರವಿಲ್ಲ ಕಣೆ.ಪ್ರೀತಿಯ ಅರ್ಥೈಸಿದವಳು ನೀನು.ಕೈ ಹಿಡಿದು ಸಾಧ್ಯವಾದಷ್ಟು ಮುನ್ನೇಡಿಸಿದ್ದು ನೀನು.ಇವತ್ತು ಒಮ್ಮೇ ಆದರೂ ನಿನ್ನ ನೆನಪು ಮಾಡಿಕೊಳ್ಳದಿದ್ದರೆ ನೀನು ಕಲಿಸಿದ ಪಾಠಕ್ಕೆ ಅರ್ಥವೇ ಇಲ್ಲ.!

ಹೌದು, ಆ ಮಳೆಯ ರಭಸದಲ್ಲಿ ಇರೋ ೧ ಛತ್ರಿಯಲ್ಲಿ ನಾವು ೪ ಜನ ರಕ್ಷಣೆ ಪಡೆದು ಬಸ್ ಪಾಸ್ ಗೆ ಕ್ಯೂನಲ್ಲಿದ್ದಾಗ ನೀನು ನಿನ್ನ ಗೆಳತಿಯರ ಜೊತೆ ಕ್ಲೋಸಪ್ ಶೈಲಿಯಲ್ಲಿ ನಗುತ್ತ ಬಂದೆ.ಆ ಉದ್ದ ಕ್ಯೂನಲ್ಲಿ ನಿಂತು ನಿಂತು ಬೇಜರಾಗಿದ್ದ ನಮಗೆ ನೀನೆ ಮತ್ತೆ ಜೀವ ತುಂಬಿದ್ದು.ಮನದಲ್ಲೇ ಮಂಡಿಗೆ ತಿನ್ನುವುದು ಕಲಿತಿದ್ದೆ ಆವಾಗ ಕಣೆ!!ಮನುಷ್ಯನ ಆಸೆಗೆ ಮೀತಿ ಇಲ್ಲ.ಇವಳು ನಮ್ಮ ಕ್ಲಾಸ್ ಆಗಿದ್ದರೆ ಅಂಥ ಎಲ್ಲರು ಹೇಳುತ್ತ ನಿನ್ನ ಗುಣಗಾನ ಮಾಡುತ್ತ ಕಾಲೇಜ್ ಗೆ ಬಂದರೆ ಅಲ್ಲಿ ನೀನು ಪ್ರತ್ಯಕ್ಷ! ಆದರೆ ನೀನು ಬಂದು ೨ ತಾಸಿನಲ್ಲಿ ಎಲ್ಲರೂ ನೀನ್ನ ಹಿಂದೆ ಬಿದ್ದಿದ್ದಾರೆ ಅಂತ ಸುದ್ದಿ ಮುಟ್ಟಿತ್ತು.!ಪಾಸ್ ಗೆ ಕಾದಿದಕ್ಕೆ ನೀನ್ನ ಸುದ್ದಿಯನ್ನು ಲೇಟ್ ಆಗಿ ಸಂಗ್ರಹಿಸಿದೆ.ಆಗಗಲೇ ಹುಡುಗರು ನೀನ್ನ ಬಗ್ಗೆ ಮಾಹಿತಿ ಯನ್ನ ಕಲೆಕ್ಟ್ ಮಾಡಿದ್ದರಿಂದ ನನ್ಗೇನು ತೋಂದ್ರೆ ಆಗಲಿಲ್ಲ.

ಆದ್ರೆ ಮಾತನಾಡಿಸುವುದು ಹೇಗೆ? ಮನದಲ್ಲೇಲ್ಲೋ ಸಣ್ಣ ಅಹಂ. ಹುಡುಗಿಯರನ್ನ ನಾವಾಗೇ ಮಾತಡಿಸ ಬಾರದು ಅಂತ.ಆದರೆ ನೀನ್ನ ಮಾತನಾಡಿಸುವುದು ಸುಲಭವಾಗಿರಲಿಲ್ಲ.ನಾನು ಮೊದಲ ಬೇಂಚ್ ನ ಹುಡುಗ.ಆದ್ರೆ ನೀನು ಕುಳಿತುಕೊಳ್ಳುತ್ತಿದ್ದಿದ್ದು ಮಾತ್ರ ಕೊನೆ ಸಾಲಿನಲ್ಲಿ.ಆದ್ರೆ ನಾನು ಹಿಂದೆ ತಿರುಗಿದರೆ ಕಾಣುತ್ತಿದ್ದಿದ್ದೆ ನೀನು!!ಅದಕ್ಕೆನೊ ನನ್ನ ಹಿಂದಿರುವ ಹುಡುಗರು ನನ್ನ ಸ್ನೇಹಿತರಾಗಿದ್ದು ನಾನು ಹಿಂದೆ ತಿರುಗುತ್ತಿದ್ದರಿಂದ!!

ನೀನು ಆಗಾಗ ಸ್ಮೈಲ್ ಕೊಡ್ತಿದ್ದೆ.ನಾನು ಇಷ್ಟಗಲ ಮುಖ ಅರಳಿಸಿ ಕೊಡ್ತಿದ್ದೆ.ಆದ್ರೆ ಮಾತು? ಇಬ್ರೂ ತುಟಿ ಬಿಚ್ತಿರಲಿಲ್ಲ.!ಆದ್ರೆ ಇಬ್ರೂ ಸ್ಮೈಲ್ ಕೊಡ್ತಿರುವಾಗ ಹಾಳಾದ ಇಂಟರ್ನಲ್ ಎಕ್ಸಾಮ್ ಬಂತಲ್ಲಾ! ಆ ಕಂಪ್ಯೂಟರ್ ಪ್ರೋಗ್ರಾಮ್ಸೆ ಏನು ಬರಲ್ಲಾಗಿತ್ತು.ಆದ್ರೆ ಲ್ಯಾಬ್ ನಲ್ಲಿ ನೀನು ನನ್ನ ಪಕ್ಕ ಇದ್ದೆ.ಧೈರ್ಯ ಮಾಡಿ [ಇಂಟರ್ನಲ್ ಮಾರ್ಕ್ಸ್ ಗಾಗಿ!] ನೀನ್ನ ಹತ್ರ ಪ್ರೋಗ್ರಾಮ್ ಕೇಳಿದ್ದೆ.ನೀನು ಹೇಳಿದ್ದೆ!! ಇದು ನಮ್ಮೀಬ್ಬರ ಮೊದಲ ಮಾತುಕಥೆ!

ಅದಾಗಿ ಸ್ವಲ್ಪ ದಿನಕ್ಕೆ ನಿನ್ನಿಂದ ಫೋನ್ ನಂಬರ್ ತಗೊಂಡೆ. ಕಾಲ್ ಮಾಡಿದೆ ಮಾತಾಡಿದೆ.ಇದೇ ನಿತ್ಯ ದಿನಚರಿ ಆಗೋಯ್ತು! ಆದ್ರೆ ಇಬ್ರೂ ಮಾತಾಡುತ್ತಿದ್ದುದ್ದು ಮಾತ್ರ ಲ್ಯಾಂಡ್ ಲೈನ್ ಲಿ!! ಅದು ಮನೆಯವರ ಮುಂದೆ!!ಇಬ್ರಲ್ಲೂ ಅಂಥಾ ಕದ್ದು ಮುಚ್ಚಿ ಮಾಡೋ ಪ್ರೀತಿ ಪ್ರೇಮ ಇರ್ಲಿಲ್ಲ ಬಿಡು.

ಆದ್ರೆ ಒಂದು ದಿನ ೧ ಪತ್ರ ಬರೆದಿದ್ದೆ.ಆಗಿನ ಕಾಲದಲ್ಲಿ ನಮ್ಮ ಹತ್ರ ಎಲ್ಲಿಂದ ಮೊಬೈಲ್ ಬರಬೇಕು ಹೇಳು?ಅದ್ರಲ್ಲಿ ೧ ಎಸ್.ಎಂ.ಎಸ್. ಜೋಕ್ ಬರೆದಿದ್ದೆ!! ಗೋರಿಲ್ಲ ಅಂಥ! ಅದು ನಿನಗೆ ಎಷ್ಟು ಇಷ್ಟವಾಯಿತು ಅಂದ್ರೆ ನೀನು ವಾಪಸ್ ಪತ್ರ ಬರೆದಿದ್ದೆ ತಿಮಿಂಗಿಲ ಅಂಥ!!ಆಮೇಲೆ ಬರೆದು ಕೊಂಡ ಪತ್ರಕ್ಕೆ ಲೆಕ್ಕವೇ ಇಲ್ಲ ಬಿಡು!!ಕ್ಲಾಸ್ ನಡೆಯುತ್ತಿದ್ದಾಗ್ಲೇ ಎಸೆದುಕೊಳ್ಳುತ್ತಿದ್ದಿದ್ದು,ಅದನ್ನು ನೋಡಿ ಉಳಿದವರು ನಿನ್ನ ಹಿಂದೆ ಬಿದ್ದ ಅವರು ನಿನ್ನಿಂದ ದೂರ ಆಗಿ ನನ್ನ ಬಗ್ಗೆ ಕೋಪಿಸಿಕೊಂಡರು.!ನೀನು ಮಾತ್ರ ಯಾವುದಕ್ಕೂ ಅಂಜದೇ ಇರುತ್ತಿದ್ದೆ.

ದಿನ ನನ್ನ ಹತ್ರ ಫೋನ್ ನಲ್ಲಿ ಮಾತಾಡದಿದ್ದರೇ ಮರುದಿನ ಕೋಪಿಸಿಕೊಳ್ಳುತ್ತಿದ್ದೆ.ಆ ಕೋಪ ಮಾತ್ರ ನಿನ್ನ ಬೆಳ್ಳನೆ ಕೆನ್ನೆಯನ್ನು ಕೆಂಪಗೆ ಮಾಡಿ ಮತ್ತಷ್ಟೂ ಚೆಂದುಳ್ಳೆ ಚೆಲುವೆಯನ್ನಾಗಿ ಮಾಡುತ್ತಿತ್ತು!!ಆ ಚೆಲುವನ್ನು ನೋಡಲು ಆಗಾಗ ನೀನ್ನ ಜೊತೆ ಜಗಳ ಮಾಡುತ್ತಿದ್ದಿದ್ದು!!.ಆದ್ರೆ ಅದೇ ಜಗಳ ಎನ್.ಎಸ್.ಎಸ್. ನಲ್ಲಿ ರಂಪ ಆಗಿ ೧ ತಿಂಗಳು ಅಮೋಘವಾಗಿ ಮಾತು ಬಿಟ್ಟು ಇಬ್ಬರ ಅಹಂ ಅಡ್ಡ ಬಂದು ಆಮೇಲೆ ಒಂದಾಗಿದ್ದು ಇದನ್ನೇಲ್ಲಾ ನೆನಪು ಮಾಡಿಕೊಂಡರೆ ಎಷ್ಟು ನಗು ಬರತ್ತೆ!!

ಆದ್ರೆ ನಮ್ಮಿಬ್ಬರಲ್ಲಿ ಪ್ರೀತಿ ನೀಡುವ ಸ್ನೇಹವಿತ್ತು.ಭವಿಷ್ಯದ ಬಗ್ಗೆ ಸ್ಪಷ್ಟತೆ ಇತ್ತು.ಹಾಗಾಗಿ ಎಲ್ಲೂ ಪ್ರೇಮ ಎಂಬ ಮಾಯೆಯನ್ನು ಸೋಕಿಸಲು ಇಬ್ಬರೂ ಬಿಡಲಿಲ್ಲ .ಅದಕ್ಕೇನೋ ನೀನು ಚಿರಕಾಲ ನನ್ನೋಂದಿಗೆ ಇರುತ್ತಿರುವುದು?
ಆ ಸ್ನೇಹದಲ್ಲಿ ಪ್ರೀತಿಯನ್ನು ಬೊಗಸೆ ತುಂಬುವಷ್ಟು ಮೊಗೆದು ಮೊಗೆದು ಕೋಡಿತ್ತಿದ್ದೆ.ಅದನ್ನು ಸ್ವೀಕರಿಸಿದ ನಾನೇ ಧನ್ಯ!ನೀನು ಕೊಟ್ಟ ಮೇಲೆ ನಾನು ಕೊಡ ಬೇಕು ತಾನೆ? ನಾನು ಕೈ ತುಂಬ ಪ್ರೀತಿ ಕೊಟ್ಟೆ.
ನೀನು ಆ ೩ ವರ್ಷದಲ್ಲಿ ಜೀವನದ ಪಾಠ ಕಲಿಸಿದ್ದೆ.ಹೆಣ್ಣೀನ ಸಂಕಟ ತೋರಿಸಿದ್ದೆ.ಹೆಣ್ಣಿನ ಹೃದಯಾಂಗಳದ ಪ್ರೀತಿ ಬಿಚ್ಚಿಟ್ಟಿದ್ದೆ.ನನ್ನ ಜೀವನಕ್ಕೊಂದು ದಾರಿ ದೀಪ ತೋರಿಸಿದ್ದೆ.

ಇಂದು ನೀನು ಕಲಿಸಿದ ದಾರಿ ದೀಪದಲ್ಲೇ ಸಾಗುತ್ತಿರುವೆ.ಇಂದು "ನನ್ನವಳು" ಅಂತ ಒಬ್ಬಳು ಸಿಕ್ಕಿದ್ದಾಳೆ.ನೀನು ಕಲಿಸಿದ ಪಾಠ ಅವಳಿಗೂ ಹೇಳಿ ಕೊಡುತ್ತಿರುವೆ.ಆ ಮೌಲ್ಯದ ಪಾಠವನು ಹೇಗೆ ಮರೆಯಲಿ ಹೇಳು?ಅದಕ್ಕೆ ಹೇಳಿದ್ದು ನೀನು ದೇವತೆ ಅಂಥ.

ಗುರುವಾರ, ಫೆಬ್ರವರಿ 12, 2009

ಆ ಮಧುರ ಅನುಭೂತಿಗೆ ಹಾತೋರೆದು ಕಾಯುವ ಕ್ಷಣವೇ ಪ್ರೀತಿಯೇ?!




ವ್ಯಾಲೇಂಟೈನ್ಸ್ ಡೇ!
ಈ ಶಬ್ದ ಹದಿಹರಯದ ಹುಡುಗರಿಂದ ಹಿಡಿದು ವಯಸ್ಸಿನ ಅಜ್ಜ,ಅಜ್ಜಿ ತನಕದವರೆಗೂ ತಕ್ಷಣ ರೋಮಾಂಚನಗೊಳಿಸುತ್ತದೆ.!. ರಾಧಾ ಕೃಷ್ಣ,ದುಷ್ಯಂತ ಶಕುಂತಲಾ,ನಳ ದಮಯಂತಿ ಪ್ರೇಮದಿಂದ ಹಿಡಿದು ಪ್ರೀತಿ ಪ್ರೇಮ ಇಂದು ಚಡ್ಡಿ ತನಕ ಬಂದಿದೆ!!ಪ್ರೇಮವನ್ನು ಪವಿತ್ರದಿಂದ ಕಾಣುವ ಭಾರತೀಯರಿಗೆ ಈ ಚಡ್ಡಿ ಪ್ರೇಮ ಬೇಕೆ?

ಯಾವುದೇ ಕಾಲೇಜಿನ ಹುಡುಗ ಹುಡುಗಿ ಕಾಲೇಜಿನ ಮೆಟ್ಟಿಲನ್ನ ಹತ್ತುವಾಗಲೇ ಪ್ರೀತಿ-ಪ್ರೇಮದ ಬಲೆಯಲ್ಲಿ ತಾವು ಸಿಲುಕಬಾರದು ಎಂದೇ ಪ್ರತಿಜ್ನೆ ಗೈದಿರುತ್ತಾರೆ.ಆದರೆ ಮುಂದೆ ಅವರೇ ಅದರ ಬಲೆಯಲ್ಲಿ ಬಿದ್ದಿರುತ್ತಾರೆ!!ಹಿಂದೆ ಮನೆಯಲ್ಲೂ ಅಷ್ಟೆ ಈ ಪ್ರೀತಿ-ಪ್ರೇಮ ಎಂದರೆ ಹೌಹಾರುತ್ತಿದ್ದರು.ಹುಡುಗ-ಹುಡುಗಿ ಒಬ್ಬರೊಬ್ಬರು ಮಾತನಾಡುತ್ತಿದ್ದರೆ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದ್ದರು.ಆದರೆ ದಿನ ಕಳೆದಂತೆ ನೋಡುವ ದೃಷ್ಟಿ ಬದಲಾಗುತ್ತಿದೆ.ಟಿನೇಜ್ ಗೆ ಸ್ವಾತಂತ್ರ್ಯ ಸಿಗುತ್ತಿದೆ.ಮನೆಯವರೂ ಅಷ್ಟೆ ನಾವು ಹುಡುಕುವ ಬದಲು ಅವರವರ ಅಭಿರುಚಿಗೆ ತಕ್ಕಂತೆ ಅವರೇ ಹುಡುಕಿಕೊಂಡರೆ ತೋಂದರೆ ಇಲ್ಲ ಎಂಬಲ್ಲಿಗೆ ಬಂದರೆ,ಅತ್ತ ಹುಡುಗಿಯರ ಸಂಖ್ಯೆ ಕಡಿಮೆ ಆದ್ದರಿಂದ ಅದು ಒಂದು ಕಾರಣವಿರಬಹುದೆ ಮನೆಯವರ ಸಮ್ಮತಿಗೆ?!!

ಹಾಗೆ ಸುಮ್ಮನೆ ನಮ್ಮ ಮನೆಯಲ್ಲಿನ ಅಜ್ಜ-ಅಜ್ಜಿಯನ್ನೇ ನೋಡಿ.ಪಾಪ ಅಂದಿನ ಗಂಡು ಹೆಣ್ಣು ಪ್ರೀತಿ ಪ್ರೇಮ ಅರ್ಥವಾಗುವುದರೊಳಗೆ ಮದುವೆ ಆಗಿ ೨ ಮಕ್ಕಳಾಗಿರುತ್ತಿತ್ತು.!.೧೨-೧೩ ವರ್ಷಕ್ಕೆಲ್ಲಾ ಹಸೆಮಣೆಗೆರುತಿದ್ದ ಅವರು ಅಂದಿನ ಸಂಪ್ರದಾಯ ಅಥವಾ ಸಾಮಾಜಿಕ ಪರಿಸ್ಥಿತಿಯಿಂದ ಇಂಥ ಪ್ರೇಮ-ಪ್ರೀತಿ ದೂರವೇ ಉಳಿದಿತು!!.

ಈಗ ಇಂಥ ಪರಿಸ್ಥಿತಿ ಕಂಡಿತ ಇಲ್ಲ.ಪ್ರೀತಿಗೆ ಬೇಕಾದ ಕಮ್ಯೂನಿಕೆಶನ್ ಸುಲಭದಲ್ಲಿ ಲಭ್ಯ. ಅಂಗೈಯಲ್ಲಿನ ಮೊಬೈಲ್ ಕ್ಷಣಾರ್ಧದಲ್ಲಿ ತನ್ನ ಪ್ರೀಯಕರನ್ನು ಹುಡುಕಿಕೊಂಡು ಮೆಸೆಜ್ ಹೊಗುತ್ತದೆ.ಇನ್ನು ಕರೆ ದರ ಸಂಪೂರ್ಣ ನೆಲಕಚ್ಚಿದೆ!!ನಿಮಷಕ್ಕೆ ೨೦ ಪೈಸೆಯಂತೆಯೂ ಕರೆ ಮಾಡಬಹುದು.! ಇದು ಇಂದು ದೂರವಿದ್ದರೂ ಹತ್ತಿರ ಸೇರಿಸಲು ಸಹಕಾರಿ.ಕ್ಲೊಸ್ ಆದಮೇಲೆ ಅವರೊಡನೆ ಜೀವನ ನಡೆಸೋಣ ಎಂಬ ಮನಸ್ಸಿನ ದ್ವಂದ್ವ.ಇಬ್ಬರ ಮನಸ್ಸು ಬೇರೆತ ಮೇಲೆ ಲೋಕಕ್ಕೆ ಹೆದರುವುದುಂಟೆ?......

ವಿದೇಶದಲ್ಲಿ ಕಾಮನೆಗಳಿಗೆ ಮುಕ್ತ ಅವಕಾಶವಿದೆ.ಆದರೆ ನಮ್ಮ ಸಂಸ್ಕೃತಿ ನೇ ಬೇರೆ.ಎಲ್ಲವೂ ಕಾಮದಲ್ಲೇ ಅಂತ್ಯವಾದರೂ ಅದಕ್ಕೆ ಕೊನೆಯ ಪ್ರಾಮುಖ್ಯ.ಕಾಮಸೂತ್ರವನ್ನು ಹೇಳಿಕೊಟ್ಟಿದ್ದೇ ನಮ್ಮ ಪುರಾತನದವರು.ಅವರಿಗೂ ಗೊತ್ತಿತ್ತು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಕಾಮ ಇರಬೇಕೆಂದು ಅವರು ತಿಳಿದಿದ್ದರು. ಶ್ರೀಕೃಷ್ಣ ಅಷ್ಟೋಂದು ಫ್ಲರ್ಟ್ ಮಾಡುತ್ತಿಂದ ಎಂದು ಓದಿದರೂ ಪೂಜ್ಯ ಸ್ಥಾನದಲ್ಲಿ ನಿಲ್ಲುತ್ತಾನೆ.ಅವರ ಕಥೆಯೆಲ್ಲ ನಮ್ಮ ಸಂಸ್ಕೃತಿಯೊಳಗೆ ಧೈವತ್ವ ತೊರಿಸುತ್ತದೆ. ನಮ್ಮಲ್ಲಿ ಇನ್ನೂ ಒಂದು ನಂಬಿಕೆ ಇದೆ.ಪ್ರೀತಿ ಪ್ರೇಮ ಎಂದರೆ ಹುಡುಗ/ಹುಡುಗಿ ತುಂಬಾ ಮುಂದುವರೆದಿರುತ್ತರೆ ಎಂದು.ಇನ್ನೂ ಪ್ರೌಢಾವಸ್ಥೆಗೆ ಬರುವುದರೊಳಗೇ ಪ್ರೀತಿ-ಪ್ರೇಮಕ್ಕೆ ಬಿದ್ದು ಜೀವನ ಗೊತ್ತಾಗುವುದರೊಳಗೆ ಜೀವನ ಸಾಕಪ್ಪ ಸಾಕು ಅನಿಸುವಂತೆ ನಮ್ಮ ಯುವ ಜನಾಂಗ ಮಾಡುತ್ತಿರುವುದು ಸುಳ್ಳಲ್ಲ.ನಗರ ಪ್ರದೇಶದಲ್ಲಿ ಸುತ್ತಾಡಿದಷ್ಟು ಜೋಡಿಗಳ ದರ್ಶನ ಸಿಕ್ಕೇಸಿಕ್ಕುತ್ತದೆ.ಇಂದು ಪ್ರೀತಿ ಎನ್ನುವುದು ಸಾರ್ವಜನಿಕವಾಗಿ ಬಂದು ಬಿಟ್ಟಿದೆ.ಆಕೆಯ ಕಂಕುಳಲ್ಲಿ ಇತನ ಕೈ ಇದ್ದರೆ ಈಕೆಯ ಕೈ ಕೂಡ ಆತನ ಸೊಂಟದ ಮೇಲೆ ಇರುತ್ತದೆ.ಬಸ್ ನಲ್ಲಂತೂ ಜೋಡಿಗಳು ಬಂದು ಬಿಟ್ಟರೆ ಅದು ಅವರ ಮನೆಯ ಸ್ವತಂತ್ರ ಜಾಗ ಎಮ್ಬಂತೆ ವರ್ತಿಸುವುದು ಸುಳ್ಳಲ್ಲ.ಪ್ರೀತಿ ಪ್ರೇಮ ಬೇಕು.ಅದು ಜೀವನದ ಅಂಗ.ಆಕೆಯ ಮೌನ,ಈತನ ಕೋಪ,ಆಕೆಯ ನೋಟಕ್ಕೆ ಕಾದು ಸುಸ್ತಾದವನಿಗೆ ಅಮೃತಸಿಂಚನ ಸಿಂಪಡಿಸುವ ಆಕೆಯ ಭೇಟಿ,ರೋಮಾಂಚನದ ಒಗ್ಗರಣೆಗೆ ಹಾಗೆ ಸುಮ್ಮನೆ ಒಂದು ಸುಮ್ಮನೆ ಸ್ಪರ್ಶ ಇದೇಲ್ಲ ಬೇಕು.ಆದರೆ ನಮ್ಮ ಪ್ರೀತಿಯನ್ನು ಇಡೀ ಸಾರ್ವಜನಕಿವಾಗಿ ತೋರಿಸುತ್ತ ಹೋದರೆ ಅಸಹ್ಯಕ್ಕೆ ಒಳಗಾಗುವುದು ನಾವು ಮತ್ತು ನಮ್ಮ ಪ್ರೀತಿ ಅಲ್ಲವೇ? ಅದಕ್ಕೇನೊ ನಮ್ಮ ಹಿರಿಯರು ಪ್ರೀತಿ ಅಂದರೆ ಅದೇಕೊ ತಪ್ಪು ಅರ್ಥಮಾಡಿಕೊಳ್ಳುತ್ತಿರುವುದು.

ಇಂದು ಪ್ರೇಮಿಗಳ ದಿನ ಕ್ಕೆ ವಿಶೇಷ ಅರ್ಥ ಬಂದು ಬಿಟ್ಟಿದೆ.ಅದಕ್ಕೆ ಕಾರಣವಾಗಿದ್ದು ಶ್ರೀರಾಮ ಸೇನೆ!. ಮಂಗಳೂರಿನ ಪಬ್ ದಾಳಿ ನಂತರ ಮತ್ತಷ್ಟು ಕೆಂಡಮುಂಡಾಲಾಗಿರುವ ಅದು ಪ್ರೇಮಿಗಳ ದಿನಾಚರಣೆಯಂದು ಶುದ್ಧ ಪ್ರೇಮಕ್ಕೆ ಕಂಕಣಬದ್ಧವಾಗಿ ಆಚರಿಸಲು ಕರೆ ನೀಡಿದರೆ,ನಿಮ್ಮಗಿಷ್ಟ ಬಂದಂತೆ ಆಚರಿಸಿ ನಿಮ್ಮ ಬೆಂಬಲಕ್ಕೆ ನಾವಿದ್ದೆವೆ ಎಂದು ಇನ್ನೋಂದು ಗುಂಪು "ಕಾಲ್ ಸೆಂಟರ್" ತೆರೆದು ಅನುಕೂಲ ಮಾಡಿಕೊಡುತ್ತಿದೆ.
ಅಷ್ಟೆ ಅಲ್ಲ.
ಮುತಾಲಿಕ್ ಗೆ ಮತ್ತು ಶ್ರೀರಾಮ ಸೇನೆಗೆ ಹೆಂಗಳೆಯರು ತೊಡುವ ಒಳಉಡುಪನ್ನು [ಚಡ್ಡಿ] ಉಡುಗೊರೆಯಾಗಿ ನೀಡಲು ಹೆಂಗಳೆಯರ ಗುಂಪು ರೇಡಿಯಾಗಿದೆ.ನಮ್ಮ ಭಾರತೀಯರ ಶುದ್ಧ ಪ್ರೀತಿ ಚಡ್ಡಿ ತನಕ ಬಂದಿದೆ.!!

ಆದರೂ ಮನಸಲ್ಲಿ ಪ್ರೀತಿ ಎಂದರೆ ಇಷ್ಟೇನಾ ಎಂಬ ಪ್ರಶ್ನೆ ಉಳಿದು ಬಿಡುತ್ತದೆ.ಆಕೆಯ ಮುಗ್ದ ನಗು,ಬೊಗಸೆ ತುಂಬ ಪ್ರೀತಿ,ಅವಳೋಂದಿಗಿನ ವಿರಸದ ಗಳಿಗೆ,ಅವಳ ಮೇಲಿನ ಹುಸಿಗೋಪ ಹೀಗೆ ಪ್ರೀತಿಯ ಮಧುರ ಅನುಭೂತಿ ಜೀವನ ತುಂಬ ಉಳಿದು ಬಿಡುತ್ತದೆ.
ಪ್ರೀತಿಗೆ ಉತ್ತರ ಕೊಡುವವರಾರು?