ಭಾನುವಾರ, ಮೇ 17, 2009

ಮೊದಲ ಹುಡುಗಿ, ಮೊದಲ ಮೊಬೈಲ್ ಕಳೆದರೆ ಅದೇಷ್ಟು ನೋವು!

ಹದಿಹರೆಯದಲ್ಲಿ ಆಕೆಯ ಮುಗಳ್ನಗೆ,ಕಿರುನೋಟ ಒಂದು ಮಾತು, ಸಾಕೇ ಸಾಕು ಅವಳಲ್ಲಿ ಅನುರಕ್ತನಾಗಲು!
ಆಕೆ ಈತನಲ್ಲಿ ಸ್ವಲ್ಪ ಸ್ಪೇಶಲ್ ಗೆಳೆತನ ಇಟ್ಟುಕೊಂಡು,ಈತನಿಗೆ ಮಹತ್ವ ಕೊಟ್ಟರೆ ಪಾರವೇ ಇಲ್ಲ.
ಆತನಿಗೆ ಆಕೆಯೂ ಮೊದಲಿಗಳು.ಆಕೆಗೂ ಆತ ಮೊದಲಿಗ.ಇಬ್ಬರಿಗೂ ಜೀವನದ ಏನೇನೊ ಕನಸು.
ಇಬ್ಬರಲ್ಲೂ ಖಂಡಿತ ಪ್ರೀತಿ-ಪ್ರೇಮ ಇರಬೇಕೆಂದಿಲ್ಲ.ಆದರೂ ಇಬ್ಬರಿಗೂ ಅವರದ್ದೇ ಲೋಕ.ಆಕೆ ಆತನ ಮಾತಿಗೆ ತಪ್ಪಿ ನಡೆಯಳು.ಈತನು ಅಷ್ಟೆ ಆಕೆಯ ಮಾತನ್ನು ಮೀರನು.ಅವರ ನಡುವಿನ ಗಾಸೀಪ್,ಹುಡುಗಾಟ,ರೇಗಾಟಾ ಎಲ್ಲಾ ಎಷ್ಟು ಮಜಾ!.ಆಕೆಯ ಸಮಾಧಾನ ಈತನಿಗೆ ಸಾಂತ್ವಾನ.
ಎಷ್ಟಂದರೂ ಹುಡುಗಿಗೆ ಬಹು ಬೇಗ ಮದುವೆ ಗೊತ್ತಾಗುತ್ತದೆ.ಖಂಡಿತ ಇವರು ಬೇರೆ ಬೇರೆ ಆಗುತ್ತಾರೆ.ಇಬ್ಬರಿಗೂ ಆ ಮೊದಲ ನೋಟ ಮತ್ತೆ ಬೇರೆಯವರಿಂದ ಸಿಗದು.ಆಕೆಗಿಂತ ಸುಂದರಾದವಳು, ಸಿಕ್ಕರೂ ಆಕೆಯಲ್ಲಿನ ಸಾಂತ್ವಾನ,ಸಿಗದು.ಆಕೆಗೆ ಮೊಗೆದು ಮೊಗೆದು ಕೊಟ್ಟ ಪ್ರೀತಿ ಈಗ ಕಡಿಮೆಯಾಗಿ ಬಿಡುತ್ತದೆ.
ಮೊದಲ ಮೊಬೈಲ್ ಕೂಡ ಮೊದಲ ಹುಡುಗಿಯಂತೆ.ಅದು ಹೇಗೆ ಇರಲಿ ಅದನ್ನ ಬಿಡಲು ಮನಸ್ಸು ಬರದು.ಅದು ಹೈ ರೇಟ್ ನದಾದರೂ,ಕಡಿಮೆ ರೇಟ್ ನದಾದರೂ ಅದು ಕೈಯಲ್ಲಿ ಇರಲೆ ಬೇಕು. ಬೇರೆ ಸೆಟ್ ಕೈಯಲ್ಲಿ ಓಡಾಡಿದರೆ ಹೃದಯ ಹುಡುಗಿಯನ್ನು ಮಿಸ್ ಮಾಡಿಕೊಂಡಂತೆ ಏನೋ ಮಿಸ್ ಮಾಡಿಕೊಳ್ಳುತ್ತಿರುತ್ತದೆ ಕೈ!.ಬೇರೆ ಸೆಟ್ ತೆಗೆದುಕೊಂಡರೂ ಮೊದಲ ಹುಡುಗಿ ಆಗಾಗ ನೆನಪು ಆಗಿ ಕಾಡಿದ ಹಾಗೆ ಮೊದಲ ಮೊಬೈಲ್ ಹಾಗಿತ್ತು ಅಂಥೆಲ್ಲಾ ಕಾಡದೆ ಇರದು.
ಮೊದಲ ಮೊಬೈಲ್ ನಲ್ಲಿ ಜೀವಿತದ ಕಾಲಕ್ಕೆ ಬೇಕೆಂದು ಸಂಗ್ರಹಿಸಿದ್ದ ಹುಡುಗಿ ಪ್ರಪೋಸ್ ಮಾಡಿದ್ದ ಮೆಸೆಜ್
,ತುಂಬಾ ಕಾಂಟೆಕ್ಟ್ ನಂಬರ್ ಇದ್ದರೆ ಆಕಾಶ ಅರ್ಧ ತಲೆ ಮೇಲೆ ಬಿದ್ದ ಹಾಗೆ!
ಸಿಮ್ ಡುಪ್ಲಿಕೇಟ್ ಆದರೂ ತೆಗೆದುಕೊಳ್ಳಬಹುದು, ಅದರೆ ಆ ಸೆಟ್,ಆ ಹುಡುಗಿ!!!
ಮೊದಲ ೨ ವರ್ಷ ಬಳಸಿದ್ದ ಸೋನಿ ವಾಕ್ ಮನ್ ಸೆಟ್ ಅನ್ನು ನಿನ್ನೆ ಕಳೆದುಕೊಂಡಾಗ ಮತ್ತೆ ನೆನಪಾಗಿದ್ದು ಆ ಸುಂದರ ಮುಗಳ್ನಗೆಯ ಆ ಮೊದಲ ಹುಡುಗಿ!!