ಮಂಗಳವಾರ, ಜುಲೈ 28, 2009

ಹಳೆಗೂಡಿಂದ,ಹೊಸ ಹುಡುಗರಿಂದ ಬರುತ್ತಿದೆ ಹೊಸ ಐಡಿಯಾಗಳು



ಕಾಲಾನೆ ಹಾಗೆ. ಅದೇ ತನ್ನ ಮಹಿಮೆಯಿಂದ ಬುದ್ದಿ ಕಲಿಸತ್ತೆ.ಯಾವ ಯಾವ ಸಮಯದಲ್ಲಿ ಏನೇನ್ ಆಗಬೇಕೊ ಅದು ಆಗಲೇ ಬೇಕು. ಅದರಲ್ಲಂತೂ ನಮ್ಮ ಮಾಧ್ಯಮದಲ್ಲಿ ಬದಲಾಗಲೇ ಬೇಕು.ದಿನದಿಂದ ದಿನಕ್ಕೆ ಅಪಡೇಟ್ ಆಗುತ್ತ ಇರಲೇ ಬೇಕು.
ಅದೇ ಕಳೆದ ೧೦ ವರ್ಷದ ಹಿಂದಿನದಿಂದ ನಮ್ಮ ರಾಜ್ಯ ಮಟ್ಟದ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಅದಕ್ಕೂ ಜಿಲ್ಲಾ ಕೇಂದ್ರದಿಂದ,ತಾಲೂಕಾ ಕೇಂದ್ರ ದಿಂದ ಪ್ರಕಟವಾಗೊ ಪತ್ರಿಕೆಗಳ ವಿನ್ಯಾಸ ಹೆಚ್ಚು ಕಡಿಮೆ ಒಂದೇ ಇರುತ್ತಿದ್ದವು.ಅದೇ ಈಗ ನೋಡಿ?!, ಪ್ರತಿಯೊಂದು ಪತ್ರಿಕೆಗಳು ಅದೇಷ್ಟು ಚೆಂದವಾಗಿ (ಕೆಲವೊಂದು ಬಿಟ್ಟು!) ಒಪ್ಪವಾಗಿ ಬರಲು ಪ್ರಯತ್ನಿಸುತ್ತಿವೆ.
ಚಿಕ್ಕವನಿಂದ ಪತ್ರಿಕೆಗಳನ್ನು ನೋಡುತ್ತ ಬೆಳೆದ ನನಗೆ ಎಲ್ಲ ಪತ್ರಿಕೆಗಳು ಸಿದ್ಧ ಸೂತ್ರಕ್ಕೆ ಅಂಟಿಕೊಂಡಿದ್ದವು.ಏನೋ ಕಾಟಾಚಾರಕ್ಕೆ ಸುದ್ದಿ ಹಾಕುವಂತೆ,ಪೇಜ್ ತುಂಬಿಸುವಂತೆ ಇರುತ್ತಿತ್ತು.ಹಾಗಂತ ಆಗಿನ ಓದುಗ ವೃಂದಕ್ಕೆ ಹೇಗೆ ಬೇಕೊ ಹಾಗೇ ಕೊಡುತ್ತಿದ್ದರು ಅನ್ನಿ.ಏಕೆಂದರೆ ಸಾಮಾನ್ಯವಾಗಿ ಹಿರಿಯರೇ ಹೆಚ್ಚಿಗೆ ಓದುಗರಾಗಿದ್ದರು.ಪುಟ ವಿನ್ಯಾಸಕ್ಕೆ ಅಷ್ಟೋಂದು ಮಹತ್ವ ಇರಲಿಲ್ಲ ಬಿಡಿ. ಆದರೆ ಈಗ? ಅದೇ ಕಾಲ ಎಷ್ಟು ದಿನ ಅಂತ ಇರತ್ತೆ...ಕಳೆದ ೫ ವರ್ಷಗಳಿಂದಿಚಿಗೆ ಹುಟ ವಿನ್ಯಾಸದ ಸಕ್ಸಸ್ ಕನ್ನಡಪ್ರಭದಷ್ಟು ಬೇರೆ ಯಾವ ಪತ್ರಿಕೆಗಳಿಗೂ ಸಿಕ್ಕಿಲ್ಲ ಎನ್ನಬಹುದೇನೋ!!.ಸಂಪಾದಕರ ಹುದ್ದೆ ಬದಲಾದ ಕೂಡಲೇ ಅಲ್ಪ ಅವಧಿಯಲ್ಲೇ ಸಾಕಷ್ಟು ಬದಲಾವಣೆ ಪುಟದಲ್ಲಿ ಕಾಣತೊಡಗಿತು.ಅದು ಕೇವಲ ನಗರಕ್ಕೆ ಸೀಮಿತ ಗೊಳಿಸದೇ ಜಿಲ್ಲಾ ಪುಟಗಳಲ್ಲಿ ಅಮೂಲಾಗ್ರ ಬದಲಾವಣೆ ತಂದರು.ಪುಟದ ಮಧ್ಯದಲ್ಲಿ ವಿಶೇಷ ಚಿತ್ರಕ್ಕೆ ಅವಕಾಶ ಕಲ್ಪಿಸಿ ವರದಿಗಾರರಿಗೆ ಪ್ರೋತ್ಸಾಹ ಸಿಕ್ಕುವಂತೆ ಮಾಡಿತು. ೨ ಮತ್ತು ೩ ನೇ ಪುಟದ ಮೇಲ್ಗಡೆ ಕಾರ್ಯಕ್ರಮದ ಚಿತ್ರಕ್ಕೆ ಜಾಗ ಒದಗಿಸಿ ಪುಟಕ್ಕೆ ನೀಡಿದ ವಿನ್ಯಾಸ ಮೆಚ್ಚುವಂತದ್ದು.
ಆದರೆ ಹೊಸ ಆವಿಷ್ಕಾರಗಳ ಸಂಗಮ ವಿಜಯಕರ್ನಾಟಕ ಇನ್ನೂವರೆಗೂ ಮುಖಪುಟದ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಿದೆ.ಟೈಮ್ಸ್ ಗೆ ಬಂದ ಮೇಲೆ ಟೈಮ್ಸ್ ಥರಾನೆ ಮಾಡಿ ನಂತರ ಅದನ್ನು ಕೈ ಬಿಟ್ಟು ಮತ್ತೆ ಬದಲಾವಣೆ ಮಾಡಿ ಈಗ ನಿಂತಿದೆ.ಪ್ರಜಾವಾಣಿಯೂ ಸಾಕಷ್ಟು ಬದಲಾವಣೆ ಕಂಡಿದೆ.ಆದರೆ ಎಲ್ಲರೂ ಕನ್ನಡಪ್ರಭ ದಂತೆ ಜಿಲ್ಲಾಪುಟ ವಿನ್ಯಾಸಗೊಳಿಸಲು ಹೋದರೂ ಸಕ್ಸಸ್ ಸಿಗಲಿಲ್ಲ.
ಆದರೆ ಕನ್ನಡದ ಇಷ್ಟೇಲ್ಲಾ ಪತ್ರಿಕೆಗಳು ಬದಲಾವಣೆ ಜಗದ ನಿಯಮ ಎಂದೂ ಗೊತ್ತಿದ್ದರೂ ಸಂಯುಕ್ತ ಕರ್ನಾಟಕ ಮತ್ತು ಉದಯವಾಣಿ ಅದೇಕೊ ಹಾಗೇ ಸುಮ್ಮನೆ ಕುಳಿತು ಬಿಟ್ಟಿದ್ದವು.ಕನ್ನಡ ಪತ್ರಿಕೆಗಳ ಸೀಮಿತ ಮಾರುಕಟ್ಟೆಗೆ ಪತ್ರಿಕೆಗಳ ವಿನ್ಯಾಸ ಮಾಡಿಸುವುದು ಕಷ್ಟ.ಆದರೂ ಕೈಯಲ್ಲಿರೋ ಸುದ್ದಿಯನ್ನು ಜನರಿಗೆ ತಲುಪಿಸಲು ಪ್ರೇಸೆಂಟೆಶನ್ ಮುಖ್ಯ.(ಪ್ರೇಸೆಂಟೆಶನ್ ಬಗ್ಗೆ ಈ ವಾರದ ಮೀಡಿಯಾ ಮಿರ್ಚಿ ನೋಡಿ)
ಇವರಿಬ್ಬರಲ್ಲಿ ಉದಯವಾಣಿ ಬೆಂಗಳೂರುವಿಭಾಗ ಅಲ್ಪ ಬದಲಾವಣೆಕಂಡರೂ ಮೊದಲಿನಿಗಿಂತ ಹೆಚ್ಚೆನೂ ಬದಲಾಗಿಲ್ಲ.ಆದರೆ ಸಂಯುಕ್ತ ಕರ್ನಾಟಕ ಇತ್ತೀಚಿಗೆ ಹೊಸ ಸಂಪಾದಕರನ್ನು ಕಂಡ ಮೇಲೆ ಅದೇಷ್ಟು ಬದಲಾವಣೆ ಕಂಡಿತು ನೋಡಿ!!.ಕನ್ನಡಪ್ರಭ ಮತ್ತು ವಿಜಯ ಕರ್ನಾಟಕದ ಒಳ್ಳೆ ಅಂಶಗಳ ಸಮ್ಮೀಳಿತ ಹೆಚ್ಚಿಗೆ ಕಂಡರೂ ವಿನ್ಯಾಸಕ್ಕೆ ಮಹತ್ವ ನೀಡಿದೆ.'ಬದಲಾವಣೆ ಜಗದ ನಿಯಮ" ಎಂಬ ಪ್ರೊಮೊ ಗಳು ಬರುತ್ತಿವೆ. ಅಗಷ್ಟ್ ಇಂದ ಒಳ ಪುಟಗಳೂ,ಇಡೀ ಸಂಚಿಕೆ ಬದಲಾಗುವ ಸೂಚನೆ ಪತ್ರಿಕೆಯಲ್ಲಿ ಬರುತ್ತಿವೆ.
ಅದೇ ರೀತಿ ಹೊಸದಿಗಂತ ಕೂಡ ಮರು ವಿನ್ಯಾಸದಲ್ಲಿ ಬರಲಿದೆ.
ಅಷ್ಟಕ್ಕೂ ಈ ವಿನ್ಯಾಸ ಏನಕ್ಕೆ? ೧೫ ವರ್ಷಗಳ ಹಿಂದಿನ ಜನಾಂಗ ಇಂದಿನ ಪ್ರಜೆಗಳು!!.ಅದಕ್ಕೇನೊ ಹಿರಿ ಸ್ಥಾನದಲ್ಲಿರುವ ಕಿರಿ (younger)ತಲೆಗಳು ಅರ್ಥ ಮಾಡಿಕೊಳ್ಳುತ್ತಿರುವುದು.!

6 ಕಾಮೆಂಟ್‌ಗಳು:

ಜಲನಯನ ಹೇಳಿದರು...

ನಿತಿನ್ ಯಾವ ಕೋಟೆಗೆ ಮುತ್ತಿಗೆ ಹಾಕಹೊರಟಿರಿ...ನನ್ನ ಚಿಕ್ಕ ತಮ್ಮನ ವಯಸ್ಸಿಗೂ ಕಡಿಮೆ ವಯಸ್ಸಿನವನಾದ್ದರಿಂದ ಏಕವಚನ ಬಳಸಲೇ..?? ಒಳ್ಲೆಯ ಅಭಿರುಚಿಯ ಬೆಳೆ ಪ್ರಾರಂಭ ಆಗೋದು ನಿನ್ನ ವಯಸ್ಸಿನಲ್ಲೇ..ನಿನ್ನ ಕೃಷಿ ಬಹು ಉನ್ನತ ಫಲ ನೀಡಲಿ ಎಂದು ಆಶೀರ್ವಾದ...ಭಿನ್ನ ವಿಷಯ ಆದರೆ ಮಹತ್ವದ ವಿಷಯ..ಚನ್ನಾಗಿದೆ ಪ್ರಸ್ತಾವನೆ...ಮುಂದುವರೆಯಲಿ...ಶುಭಂ

ಜಲನಯನ ಹೇಳಿದರು...

ನಿತಿನ್ ಯಾವ ಕೋಟೆಗೆ ಮುತ್ತಿಗೆ ಹಾಕಹೊರಟಿರಿ...ನನ್ನ ಚಿಕ್ಕ ತಮ್ಮನ ವಯಸ್ಸಿಗೂ ಕಡಿಮೆ ವಯಸ್ಸಿನವನಾದ್ದರಿಂದ ಏಕವಚನ ಬಳಸಲೇ..?? ಒಳ್ಲೆಯ ಅಭಿರುಚಿಯ ಬೆಳೆ ಪ್ರಾರಂಭ ಆಗೋದು ನಿನ್ನ ವಯಸ್ಸಿನಲ್ಲೇ..ನಿನ್ನ ಕೃಷಿ ಬಹು ಉನ್ನತ ಫಲ ನೀಡಲಿ ಎಂದು ಆಶೀರ್ವಾದ...ಭಿನ್ನ ವಿಷಯ ಆದರೆ ಮಹತ್ವದ ವಿಷಯ..ಚನ್ನಾಗಿದೆ ಪ್ರಸ್ತಾವನೆ...ಮುಂದುವರೆಯಲಿ...ಶುಭಂ

shivu.k ಹೇಳಿದರು...

ನಿತಿನ್,

ಹೊಸ ವಿಚಾರದ ಹಿಂದೆ ಬಿದ್ದ ಆಗಿದೆ. ಅವುಗಳ ಅವಲೋಕನವೂ ಕುತೂಹಲಕಾರಿಯಾಗಿದೆ. ಮುಂದುವರಿಯಲಿ....

NiTiN Muttige ಹೇಳಿದರು...

ಜಲನಯನ ಅವರೇ,
ಏಕವಚನದಲ್ಲೇ ಸಂಬೋಧಿಸಿ ಅದರಲ್ಲೇನು ತೊಂದರೆ ಇಲ್ಲ.ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು.
ನೀವು ಹೇಳಿದಂತೆ ಈ ವಯಸ್ಸಲ್ಲೆ ಅಭಿರುಚಿ ಪ್ರಾರಂಭವಾಗೊದು.ಅದನ್ನು ಒಳ್ಳೆ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು...ಆಗಾಗ ಹೀಗೆ ಆಶೀರ್ವಾದ ಮಾಡುತ್ತಿರಿ ಮಾರ್ಗದರ್ಶನದೊಂದಿಗೆ...
ಧನ್ಯವಾದಗಳು..

NiTiN Muttige ಹೇಳಿದರು...

ಶಿವು,
ಬ್ಲಾಗ್ ಲೋಕದಲ್ಲಿ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದ್ದಿರಿ...ಧನ್ಯವಾದಗಳು..

Ittigecement ಹೇಳಿದರು...

ನಿತಿನ್....

ನೀವು ಬರೆದ ಗಂಗಜ್ಜಿಯ ವಿಚಾರವನ್ನು ಮೋಹನ್‍ರವರು ತಮ್ಮ ಮೀಡಿಯಾ ಮಿರ್ಚಿಯಲ್ಲಿ ಬರೆದಿದ್ದರು...
ಅವರ ಧಾಟಿ, ಓಘವೇ ಬೇರೆ..ಅದು ಬೇರೆ ವಿಷಯ...

ನಾನು ಗಮನಿಸಿದ್ದು ನೀವು ವಿಷಯವನ್ನು ಅವಲೋಕಿಸುವ ಸೂಕ್ಷ್ಮತೆಯನ್ನು...
ಒಬ್ಬ ಪತ್ರಕರ್ತನಿಗೆ ಇದು ಅವಶ್ಯವಾಗಿ ಇರಬೇಕಾದ ಕ್ವಾಲಿಟಿ ಇದು...

ಅಭಿನಂದನೆಗಳು...