ಬುಧವಾರ, ಜನವರಿ 28, 2009
ನೋಡುತ್ತಿದ್ದಂತೆ ಅದೇಷ್ಟು ಬದಲಾಗಿ ಬಿಟ್ಟಿಯಲ್ಲೇ ಹುಡುಗಿ!!
ಪ್ರೀತಿಯ ಅಕ್ಕ/ತಂಗಿ
ದೇವರು ಅದೇಷ್ಟು ಕ್ರೂರಿ ಅಂದು ಕೊಳ್ಳುತ್ತಿದ್ದೆ.ಎಲ್ಲ ಅಂದ ಚೆಂದವನ್ನು ನಿಮಗೆ ಆ ದೇವ ಮಹಾಶಯ ಧಾರೆ ಎರದು ಬಿಟ್ಟನಾ ಅಂತ ಮನದಲ್ಲೇ ಕೊರಗುತ್ತಿದ್ದೆ.ಮನೆಯಲ್ಲಿನ ಸಂಸ್ಕಾರದಿಂದ ನಿಮ್ಮ ಬಗ್ಗೆ ಇದಕ್ಕೂ ಹೆಚ್ಚಿನ ಕಲ್ಪನೆ ನನ್ನಲ್ಲಿ ಮೂಡಲೇ ಇಲ್ಲ.!!
ಯಾರನ್ನೇ ಆದರೂ ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂದು ಮೊದಲಿನಿಂದಲೂ ಕಲಿತಿದ್ದರಿಂದ ನೀವು ಎದುರಿಗೆ ಬಂದರೂ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದೆ ಹೈಸ್ಕೂಲ್ ಮುಗಿಯುವವರೆಗು!!.ಸಿನೇಮಾದಲ್ಲಿ ತೋರಿದುತ್ತಿದ್ದ ಅರೆಬೆತ್ತಲೆಯನ್ನು ಮನೆಯಲ್ಲಿ ಮುಜುಗರದಿಂದಲೇ,ಅಮ್ಮ-ಅಪ್ಪ ಇದ್ದರೆ ಕಣ್ಣುಮುಚ್ಚುವಂತೆ ನಾಟಕವಾಡಿ ನೋಡುತ್ತಿದ್ದೆ ಹೆಚ್ಚು.!! ಆದರೆ ಆ ಅರೆಬೆತ್ತಲೆಯನ್ನು ನಿಮ್ಮೊಂದಿಗೆ ಕಲ್ಪಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ!!.
ನೀವು ಅಷ್ಟೆ. ಮೈತುಂಬ ಬಟ್ಟೆಯನ್ನು ಹಾಕಿಕೊಂಡು,ಯಾವುದೇ ಎಕ್ಸ್ ಪೋಸ್ ಇಲ್ಲದೇ ಸ್ಕರ್ಟ್,ಚೂಡಿಯಲ್ಲಿ ಬರಿತ್ತಿದ್ದಿದ್ರಿ.ಅದೇಕ್ಕೆನೊ ನಿಮ್ಮ ನೋಡಿದಾಗ ಬೇರೆ ಭಾವ ಬರಲು ಸಾದ್ಯವೇ ಇರುತ್ತಿರಲಿಲ್ಲವೆನೋ? ಹೀಗಿರುವಾಗ ಪಕ್ಕದ ಮನೆಯವಳು ಅಥವಾ,ಸಂಬಂಧಿಕರ ಮನೆಯ ಹುಡುಗಿ ಬೆಂಗಳೂರು,ಇತರೆ ಕಡೆ ಓದಲು ಅಥವಾ ಕೆಲಸಕ್ಕೆ ಬರಲು ಆರಂಭವಾಯಿತು.ಬೇರೆ-ಬೇರೆ ಕಾರಣಗಳಿಂದ ನಿಮ್ಮಲ್ಲಿ "ಕ್ರಾಂತಿಕಾರಕ" ಬದಲಾವಣೆಗಳಾದವು.ಕಾಲ ಬದಲಾದಂತೆ ಮನೆಯಲ್ಲೂ ನೀತಿ ಸಡಿಲವಾಯಿತು."ಈಗೀನ ಮಾಡರ್ನ್ ಹುಡುಗಿ ಕಣ್ರಿ ,ಹೀಗೆಲ್ಲ ಹಾಕಿದರೆ ಏನು ಆಗಲ್ಲ" ಎಂದು ಅಮ್ಮ ಹೇಳಿದರೆ, ನಿಮ್ಮ ಬಟ್ಟೆ ನಿಧಾನವಾಗಿ ಕಡಿಮೆಯಾಗುತ್ತ ಹೋಯಿತು.ನೆಲದವರೆಗೆ ಅಲೆಯುತ್ತಿದ್ದ ಸ್ಕರ್ಟ್ ನಿಮ್ಮ ಕಾಲು ಮಂಡಿಯ ತನಕ ಬಂದರೂ ಎಲ್ಲ ಸುಮ್ಮನೆ ಇದ್ದರು. ಹಾಗೆ,ಕೈ ತೋಳು ಬಟ್ಟೆಯನ್ನು ಕಳೆದು ಕೊಂಡರೂ ಮಾಡರ್ನ್ ಹುಡುಗಿ ಎಂದೆ ಮತ್ತೆ ಸುಮ್ಮನಾದರು.ಅಷ್ಟರಲ್ಲಾಗಲೇ ಸಿನೇಮಾದಲ್ಲಿ ತುಂಡು ಬಟ್ಟೆ ಕಾಯಂ ಆಗಿತ್ತು!!.ನಿಮ್ಮ ಮೈಲೂ ಅದು ಕಾಣುತ್ತಿತ್ತು!!.
ನೀವು ಹೀಗೆ ಬದಲಾಗುತ್ತ ಹೋಗಿ ಎಲ್ಲ ಚಿಕ್ಕದಾಯಿತು.ನೋಡುಗರೂ ಎಲ್ಲೇಲ್ಲಿ ಮಾತ್ರ ಕಾಣುತ್ತಿಲ್ಲ ಎಂಬ ರೀಸರ್ಚ್ ಗೆ ಇಳಿದರು.ಪೋಲಿ ಎಂದು ಹೆಸರು ಮಾಡಿದವರಿಗೆ ಇನ್ನೂ ಸ್ವಲ್ಪ ಉತ್ತೇಜನ ಸಿಕ್ಕಿತೆನೋ. ನಿಮ್ಮ ಬಟ್ಟೆ ಕಡಿಮೆಯಾಗುತ್ತ ಹೋದಂತೆ ನೋಡುಗರ ದೃಷ್ಟಿನೂ ಬದಲಾಯಿತು."ಈ ಹುಡುಗಿ ಸೈಜ್ ನೋಡ್ಲಾ ಮಗ" ಎಂಬ ಮಾತು ನಿಮ್ಮ ಕಿವಿಗೆ ಕೇಳುವಂತೆ ಹೇಳುತ್ತಿದ್ದರೂ ನಿಮ್ಮ ಕಿವಿಗೆ ತಾಗಲೇ ಇಲ್ಲ.
ಹೀಗೆ ನಿಮಗೆ ಪತ್ರಬರೆಯುವಾಗ ಅಮ್ಮ ಹಳೆ ಕಪಾಟಿನಲ್ಲಿದ್ದಿದ್ದನು ಜೋಡಿಸಿ ಇಡುತ್ತಿದ್ದಳು.ಹಾಗೆ ತಟ್ಟನೆ ಕಣ್ಣೀಗೆ ಬಿದ್ದಿದ್ದು ಅಮ್ಮ-ಅಪ್ಪನ ಮದುವೆ ಫೋಟೊ!! ಅಲ್ಲಿ ಅಮ್ಮನ ಬಾಲ್ಯದ ದಿನಗಳ ಚಿತ್ರವೂ ಇತ್ತು.ಆ ಉದ್ದ ಜಡೆ,ನೆಲಕ್ಕೆ ಮುತ್ತಿಕ್ಕುತ್ತಿದ್ದ ಸ್ಕರ್ಟ್,ಮೈಗೆ ಕವಚದಂತಿದ್ದ ಬ್ಲೌಸ್!! ಹಾ!! ಅದೇಷ್ಟು ಸುಂದರ!!
ನೀವು ಹಾಗೇನೇ ಇರಬೇಕಂತ ಅಲ್ಲ. ಕಾಲ ನಿಧಾನವಾಗಿ ಬದಲಾಗುತ್ತದೆ/ತ್ತಿದೆ. ನಾವು ಬದಲಾಗ ಬೇಕು ನಿಂತ ನೀರಾಗಬಾರದು.ಆದರೆ, ನೀವು ಸಮಾಜ ಎಷ್ಟು ಬದಲಾಗುತ್ತಿದೆಯೋ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬದಲಾಗಿ ಬಿಟ್ಟಿದ್ದಿರಿ ಅಂತನ್ನಿಸುತ್ತಿದೆ.ನಮ್ಮ ಸಮಾಜ ನಿಮಗೆ ಸ್ವಾತಂತ್ರ್ಯ ನೀಡುವ ಮೊದಲೇ ಅದನ್ನು ಕಿತ್ತುಕೊಂಡು ಬಿಟ್ಟ್ರೆ ಅಂತನ್ನಿಸುತ್ತಿದೆ.ನೀಮ್ಮ ವೇಗಕ್ಕೆ ಸಮಾಜ ಬದಲಾಗಲು ಸಾಧ್ಯವಾಗಲೇ ಇಲ್ಲ.
ಹಾಗೆ ಸಮಾನತೆ ಅದು ಇದು ಎಂಬುವುದರ ಜೊತೆ ನಿಮಗೆ ನಗರ ಪ್ರದೇಷದಲ್ಲಿ ಸಂಪೂರ್ಣ ಸ್ವಾತಂತ್ರ್ಯವೇ ಇತ್ತು.ಹೀಗೆ ನೀವು ಬದಲಾದಂತೆ ನನ್ನಂತ ಹುಡುಗರಿಗೆ ನಿಮ್ಮ ಮೇಲಿನ ಭಾವನೆ ಕಡಿಮೆಯಾಗುತ್ತ ಹೋಯಿತು.ನಿಮ್ಮ ಜೊತೆ ಹೋರಗೆ ಹೊದರೆ ಎಲ್ಲ ನಿಮ್ಮನ್ನು ಗುರ್ರ್ ಅಂಥ ಗುರಾಯಿಸುತ್ತಿದ್ದರೆ ಅದೇಗೆ ಅವರನ್ನ ಎದುರಿಸಲಿ?ನಿಮ್ಮ ಬಟ್ಟೆ ಕಡಿಮೆ ಆದಷ್ಟು ನಿಮ್ಮ ಮೇಲೆ ದಾಳಿ ಕೂಡ ಹೆಚ್ಚಿತು. ಹೊರಗೀನ ಕ್ರೂರ ಪ್ರಾಣಿಗಳಿಗೆ ನಿಮ್ಮ ಬಿಚ್ಚುಡುಗೆ ತೋರಿಸಿದಂತೆ ಅವರು ಉಳಿದಿದ್ದನ್ನು ಬಿಚ್ಚಲು ರೇಡಿ ಆದರು.ಹಾಗೆ ದಾಳಿ ಸಂಖ್ಯೆ ಕೂಡ ಹೆಚ್ಚಿತು. ಅಷ್ಟಕ್ಕೂ ಎಲ್ಲ ತೋರಿಸಿ ತೋರಿಸದಂತಿದ ನೀವು ಪೇಟೆಯಲ್ಲಿ ಬಾಯ್ ಪ್ರೇಂಡ್ ಅಂತ ಅವನ ಸಂಗಡ ಸುತ್ತಿ ಬೇಜಾರಿಲ್ಲ.ಆದರೆ ಅವನೇ ಸರ್ವಸ್ವ ಅಂಥ ಸಾರ್ವಜನಿಕ ಸ್ಥಳದಲ್ಲೂ ಅವನ ಕೈ ಹಿಡಿದು ಅಪ್ಪಿಕೊಂಡು "ಫೇವಿಕಾಲ್" ತರ ಹೋದರೆ ನಿಮ್ಮ ಎದುರಿನವರಿಗೆ ಅಸಹ್ಯ ಹುಟ್ಟುವುದಿಲ್ಲವೇ? ಬಾಯ್ ಪ್ರೇಂಡ್ ಹಾಗೆ ಮಾಡೋಣ ಎಂದರೂ ನೀವಾದರೂ ಬುದ್ದಿ ಮಾತು ಹೇಳಬಾರದೆ?
ಹಾಗೇ ನೀವು ಪಬ್ಬು-ಗಿಬ್ಬು ಅಂಥ ಹೋಗಲು ಆರಂಭಿಸಿದಿರಿ.ಕೇವಲ ಹುಡುಗರೂ ಮಾತ್ರ ಹಾಳಾಗುತ್ತಿದ್ದ ದಿನಗಳಲ್ಲಿ ಅದರಲ್ಲೂ ಸಮಾನತೆ ಇರಲಿ ಎಂದು ನೀವು ಸ್ಪರ್ಧೆ ನೀಡಿದಿರಿ.ಅಲ್ಲಿ ಹೋಗ ಬಾರದೆಂದಲ್ಲ.ಆದರೆ ಸಮಾಜದ ದೃಷ್ಟಿಯಲ್ಲಿ ಅದು ನೀವು ಹೋಗ ಬಾರದ ಸ್ಥಳ!!ಅದಕ್ಕೇ ಹೇಳಿದ್ದು ಸಮಜ ಇನ್ನೂ ನಿಮ್ಮ ವೇಗದಲ್ಲಿ ಬದಲಾಗಿಲ್ಲ ಎಂದು.ಅಲ್ಲಿ ಹೋದವರೆಲ್ಲ ಕೆಟ್ಟವರೆಂದು ಏನು ಅಲ್ಲ.ಆದರೆ ಹೋದವರೇಲ್ಲ ಎಂಥವರು ಎಂದು ನಿಮಗೂ ಗೊತ್ತು.
ಮೊನ್ನೆ ಪೇಪರ್ ಮೇಲೆ ಕಣ್ಣಾಯಿಸುತ್ತಿದ್ದಾಗ ಮಂಗಳೂರಿನಲ್ಲಿ ನಿಮ್ಮ ಮೇಲೆ ದಾಳಿ ಮಾಡಿದರಂತೆ ಶ್ರೀರಾಮ ಸೇನೆಯವರು ಎಂದಿತ್ತು. ನಿಮಗೆ ಪಾಪ ಅದೇಗೆ ಹೊಡೆದರು ಅಂದು ಚಿತ್ರ ಮತ್ತು ವಿಡಿಯೋದಲ್ಲಿ ನೋಡಿ ಮನ ಮರುಗಿತು.ಅವರೆನೋ ನಮ್ಮ ಸಂಸ್ಕ್ರತಿ ರಕ್ಷಿಸಲು ಹೀಗೆ ಮಾಡಿದ್ದೆವೆ ಅಂದರೂ ಅವರು ಎಚ್ಚರಿಕೆ ಕೊಡಬಹುದಿತ್ತು.ಪಬ್ ನ ಮುಚ್ಚಬಹುದಿತ್ತು.ಆದರೆ ನಿಮ್ಮನ್ನ ಅವರೇ ಕಾನೂನು ಪರಿಪಾಲಕರು ಎನ್ನುವಂತೆ ಅಟ್ಟಾಡಿಸಿಕೊಂಡು ಹೊಡೆದರು.ಪಾಪ ಅದೇಷ್ಟು ನೋವಾಯಿತು ಉನ್ಮಾದದ ಸ್ಥಿತಿಯಲ್ಲಿದ್ದ ನಿಮಗೆ??!!
ದಿನ ನನಗಂತೂ ಸ್ವೀವ್ ಲೆಸ್,ಟೈಟ್ ಬಟ್ಟೆ, [ಕೇಲವೊಂದು ಸಲ ಬಟ್ಟೆ ಎಲ್ಲಿದೆ ಎಂದು ನೋಡಿದ್ದು ಇದೆ!!] ಅಬ್ಯಾಸ ಆದರೂ ನಮ್ಮ ಹಿಂದಿನ ತಲೆಮಾರಿನವರು ಮಹಾಭಾರತ-ರಾಮಾಯಣ ಎಂದು ಹೇಳುತ್ತ ,ಪತಿಯ ಪರೀಕ್ಷೆಗೆ ಒಳಗಾದ ಸೀತೆಯ ಕಥೆ ಹೇಳುತ್ತ ಇದ್ದವರು ಅದೇಷ್ಟು ಬೇಗ ಹೇಗೆ ತಾನೆ ನಿಮ್ಮ ವೇಗಕ್ಕೆ ಬದಲಾಗುತ್ತಾರೆ?
ಕಂಡಿತ ನೀವು ಬಹಳ ದೂರ ಸಾಗಿ ಬಿಟ್ಟಿದ್ದಿರಿ ಅನ್ನಿಸುತ್ತಿದೆ.ನಮ್ಮ ಸಮಾಜ ನಿಮ್ಮ ಸಮಾನಕ್ಕೆ ಬರುವವರೆಗಾದರೂ ಕಾಯುತ್ತೀರ?
ಯಾಕೋ ಇದೆಲ್ಲ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.ತಮ್ಮ/ಅಣ್ಣನಾಗಿ ಏನೇನೊ ಹೆಳಿದೆ ಎಂದು ಬೇಸರಿಸುವುದಿಲ್ಲ ತಾನೆ?!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
9 ಕಾಮೆಂಟ್ಗಳು:
ನಿತಿನ್.......ನಿಮ್ಮ ಆರ್ಟಿಕಲ್ ತುಂಬಾ ಚನ್ನಾಗಿ ಮೂಡಿ ಬಂದಿದೆ......keep up the good work.
cheers!!!!!!!!!!
ನಿತಿನ್.......ನಿಮ್ಮ ಆರ್ಟಿಕಲ್ ತುಂಬಾ ಚನ್ನಾಗಿ ಮೂಡಿ ಬಂದಿದೆ......keep up the good work.
Cheers!!!!!!!!!
Divya :)
Nitin,
Article tumba chennagide..
ondu anisike, adendare, Namma samaja aa kadege yavagalu hogadiruvante navu prayatna madona. Anta hudugiyara vegavannu kadime madidare anukoolavagabahudu.
Ashwini
ತುಂಬ ಚೆನ್ನಾಗಿ ಬರೆದಿದ್ದೀರ.ಅಭಿನಂದನೆಗಳು.
-ಪವನಜ
ತುಂಬ ಚೆನ್ನಾಗಿ ಬರೆದಿದ್ದೀರ.ಅಭಿನಂದನೆಗಳು.
-ಪವನಜ
Hi
Niitin,
article chennagi bandide....
idanu prathiyoba hudugiyaru oddi...
arthamadikodare bahala chennagiruthe alwa??????
ನಿತಿನ್,
ನೀವು ನನ್ನ ಬ್ಲಾಗಿನ ಹಿಂಬಾಲಿಸುತ್ತಿರುವುದು ನನಗೆ ಖುಷಿಯಾಯಿತು....ಹಾಗೆ ಹಾರಿಕೊಂಡು ನಿಮ್ಮ ಬ್ಲಾಗಿಗೆ ಬಂದರೆ....ನೀವು ನಾನು ಮೊದಲ ಲೇಖನದಲ್ಲೇ ನಿಮ್ಮ ವಯಸ್ಸಿಗೆ ತಕ್ಕಂತೆ ಸ್ವಲ್ಪ ಮುಗ್ಧತೆಯಿಂದ ಕೂಡಿದ ಲೇಖನ ಬರೆದಿದ್ದೀರಿ.... ಚೆನ್ನಾಗಿ ಬರೆಯುತ್ತೀರ ಅನ್ನಿಸಿತು...ಮುಂದುವರಿಸಿ....ನಿಮ್ಮ ಉಳಿದ ಲೇಖನಗಳನ್ನು ನಿದಾನವಾಗಿ ಓದುತ್ತೇನೆ....
ನನ್ನ ಬ್ಲಾಗಿಗೆ ಬರುತ್ತಿರಿ.....ಥ್ಯಾಂಕ್ಸ್.....
tumbaa chennagide, eshtu jana idannu arthaisikondaaru? naavu maryaade kodabekaadaddu samskrutige, samskaarakke allave?
hechchi na comments ge : http://vismayanagari.com/node/3456
ದಿವ್ಯಾ,ಪವನಜ,ಅಶ್ವೀನಿ,ವೀಣಾ,ಶಿವು,ಕಿರಣ ಎಲ್ಲರಿಗೂ ಧನ್ಯವಾದಗಳು.
ಶಿವು ಅವರೇ ಕಂಡಿತಾ ನಿಮ್ಮ "ಮನೆಗೆ" ಬರುತ್ತಿರುವೆ.ಅದಕ್ಕೆ ಹಿಂಬಾಲಕನಾಗಿದ್ದು!! :) ನೀವು ಆಗಗ ಬಿಡುವಾದಾಗ ಬರುತ್ತಿರಿ
ಕಾಮೆಂಟ್ ಪೋಸ್ಟ್ ಮಾಡಿ