ಸೋಮವಾರ, ಜನವರಿ 26, 2009

ಅದೇಷ್ಟು ಬೇಗ ಬದಲಾಗಿ ಬಿಟ್ಟೆವಲ್ಲ!!


ಕೈಲಿ ಒಂದು ಕೋಲು,ತಲೆಗೆ ಟೊಪ್ಪಿ,ಬಿಳಿಯ ಅಂಗಿಗೆ ನೀಲಿ ಪ್ಯಾಂಟ್. ಈ ಡ್ರೇಸ್ ಕೋಡ್ ನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಮೈ ಮೇಲೆ ಅದೇಂಥಾ ದೇಶ ಪ್ರೇಮ ಕುಣಿಯುತ್ತಿತ್ತು.!!

ಹಂ..., ಇದು ಹೈ ಸ್ಕೂಲ್ ಗೆ ಹೋಗುತ್ತಿದ್ದಾಗ ಗಣರಾಜ್ಯೋತ್ಸವ ,ಸ್ವಾತಂತ್ರೋತ್ಸವ ಹೀಗೆ ರಾಷ್ಟ್ರೀಯ ಹಬ್ಬದಂದು ಸೇವಾದಳದ ವಿದ್ಯಾರ್ಥಿಗಳನ್ನು ಹೀಗೆ ತಯಾರು ಮಾಡಲಾಗುತ್ತಿತ್ತು.ರಾಷ್ಟ್ರೀಯ ಹಬ್ಬ ಇನ್ನೂ ೧೫ ದಿನ ಇರುವಂತೆಯೇ ಕ್ಲಾಸ್ ಎಲ್ಲ ಮುಗಿದ ಮೇಲೆ ೬-೬.೩೦ ತನಕ ವಿವಿಧ ಪ್ರಾಕ್ಟೀಸ್.ನಮ್ಮ ಸೇವಾದಳದ ಸರ್, ದೇಶದ ಮಹಾನ್ ನಾಯಕರ ಬಗ್ಗೆ,ದೇಶದ ಬಗ್ಗೆ ವಿವಿಧ ಕಥೆಗಳನ್ನು ಹೇಳುತ್ತಿದ್ದರಿಂದ ನಮ್ಮಲ್ಲೂ ಒಂಥರ ಉತ್ಸಾಹ.ದೇಶಕ್ಕೆ ಸೇವೆ ಮಾಡ ಬೇಕೆಂಬ ಹಂಬಲ.

ರಾಷ್ಟ್ರೀಯ ಹಬ್ಬದಂದು ಬೆಳ್-ಬೆಳಿಗ್ಗೆ ೬ ಗಂಟೆಗೆಲ್ಲಾ ಶಾಲೆಯಲ್ಲಿರುತ್ತಿದ್ದ ನಾವು, ಅಂದು ಮಾತ್ರ ಡ್ರೆಸ್ ಗೆ ಇಸ್ತ್ರಿ ಇರಲೇ ಬೇಕಿತ್ತು. ಸೇವಾದಳ ಅಂದರೆ ಶಿಸ್ತು ಅಲ್ವಾ, ಮತ್ತೆ ವಿವಿಧ ಕಾರ್ಯಕ್ರಮ ಇರುತ್ತಿದ್ದರಿಂದ ಎಲ್ಲರೂ ಒಂದೇ ತರ ಡ್ರೇಸ್ ಇರುತ್ತಿತ್ತು.

ಚೊಕಲೇಟ್ ಅಂದಿನ ವಿಶೇಷ ಇರುತಿತ್ತು.ಅದನ್ನು ಹಂಚಲು ದೊಡ್ಡ ಸಾಲೇ ಇರುತಿತ್ತು.ಕೊನೆಗೆ ಉಳಿದಿದ್ದು ಅವರಿಗೇ ಸಿಗುತ್ತಿದ್ದರಿಂದ!!.ಎಲ್ಲರಿಗೂ ಚಾಕಲೇಟ್ ಹಂಚಾದ ಮೇಲೆ ಧ್ವಜ ಇಳಿಸುವವರಿಗೆ ಹೆಡ್ ಮಾಸ್ಟರ್ ಟೆಬಲ್ ಕೆಳಗೆ ಇಟ್ಟು ೫ ಗಂಟೆಗೆ ಧ್ವಜ ಇಳಿಸಿ ತೆಗೆದುಕೊಂಡು ಹೋಗ ಬೇಕಾಗಿತ್ತು.


ಹಾಗೆ ಕಾಲೇಜ್ ಮೇಟ್ಟಿಲು ಹತ್ತಾದ ಮೇಲೆ ಅಲ್ಲಿ ಆಚರಣೆಯೇ ಮಂಗಮಾಯ.ಆರಾಮಾಗಿ ಮನೆಯಲ್ಲಿ ಕುಳಿತು ಕೆಲಸ.ಅದೇ ಡಿಗ್ರಿ ಗೆ ಬಂದ ಮೇಲೆ ಎನ್.ಎಸ್.ಎಸ್. ಗೆ ಸೇರಿದ ಮೇಲೆ ಅಲ್ಲೂ ಸೇವಾದಳದಂತೆ ವಿಶೇಷ ದಿನದಂದು ಏನಾದರು ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು.ನಾವೇ ಏನಾದರೂ ಶ್ರಮದಾನ ಕಾರ್ಯಕ್ರಮ ಇತರೆ ಏನಾದರೂ ಕಾರ್ಯಕ್ರಮ ಇಟ್ಟು ದೇಶ ಪ್ರೇಮದ ನೆನಪನ್ನು ಮಾಡಿಕೊಳ್ಳಲಾಗುತಿತ್ತು.

ಆದರೆ ಡಿಗ್ರಿ ನೂ ಮುಗಿದ ಮೇಲೆ ಈ ಎಲ್ಲಾ ಆಚರಣೆ ಕೇವಲ ನೆನಪಲ್ಲೆ ಉಳಿದು ಬಿಟ್ಟಿದೆ.ಶಾಲೆಗೆ ಹೋಗುವಾಗ ರಾಷ್ಟಗೀತೆ ಕೇಳಿದರೆ ಎಲ್ಲೇ ಇದ್ದರೂ ನಿಂತು ಕೇಳಿಸಿಕೊಂಡು ಮುಗಿದ ಮೇಲೆ ಅಲ್ಲಾಡುವುದಾಗಿತ್ತು.ಈಗ ಮನೆ ಎದುರು ದಿನ ಬೆಳಿಗ್ಗೆ ಶಾಲಾ ಮಕ್ಕಳು ಹೇಳುವ ರಾಷ್ಟ್ರಗೀತೆ ಕೆಳಿದರೂ ಕೇಳಿಸದಂತೆ ಎಲ್ಲರೂ ಇರುವಾಗ ನಾನೊಬ್ಬ ಅದಕ್ಕೆ ಗೌರವ ಕೊಟ್ಟರೆ ಹುಚ್ಚನಾಗುವ ಭಯದಿಂದ ಅದಕ್ಕೂ ಎಳ್ಳು ನೀರು. ಸರಕಾರವೇ ರಜಾದಿನ ಎಂದು ಘೋಷಿಸಿರಬೇಕಾದರೆ ಮನೆ ಹಬ್ಬ ಎಂದು ರಜಾದಿನ ಯಾರು ತಾನೆ ಆಚರಿಸುತ್ತಾರೆ?


ಹೀಗೆ ಹಿಂದೆ ಎಲ್ಲ ಕಲಿತಿರುವ,ಹಿಂದೆ ಮಾಡಿದ ಕಾರ್ಯ ಎಲ್ಲ ಅಲ್ಲಿಗೇ ಮುಗಿಯಿತೆ?ನಾವು ಮಕ್ಕಳಿದ್ದಾಗ ದೇಶದ ಮೇಲೆ ಇಟ್ಟ ಪ್ರೀತಿಯನ್ನು ಹೊರಗೆ ತೊರಿಸಿಕೊಳ್ಳಲಾಗುತಿತ್ತು.ಈಗ ಅದೇಲ್ಲ ಕೇವಲ ಮನಸ್ಸಿನ ಒಳಗೆ ಮಾತ್ರ ಎಂದು ಬದಲಾಗಿರುವ ನಾವು ಮೊದಲಿನಂತಾದರೆ ಅದೇಷ್ಟು ಚೆಂದ ಅಲ್ಲವೇ?

ಇದೇಲ್ಲ ಹೀಗೆ ಸುಮ್ಮನೆ ಇಂದು ಗಣರಾಜ್ಯೋತ್ಸವದ ದಿನ ಏನು ಕೆಲಸವಿಲ್ಲದೆ ಮನೆಯಲ್ಲಿ ಅಡ್ಡಾಡುತ್ತಿದ್ದಾಗ ಎಲ್ಲ ನೆನಪಾಯಿತು.

ಕಾಮೆಂಟ್‌ಗಳಿಲ್ಲ: