ಬುಧವಾರ, ಆಗಸ್ಟ್ 19, 2009
ಇವರಾ- ಅವರಾ? ಬಂತು ಉತ್ತರ!
ಸಂಸ್ಕೃತ ಉಪನ್ಯಾಸಕ ಗಣಪತಿ ಹೆಗಡೆ ಹೇಳುತ್ತಿದ್ದರು. ಅವರು ನಮಗಿಂತ ಗಟ್ಟಿ ೧೧೦ ವಯಸ್ಸಿಗಿಂತ ಹೆಚ್ಚಾಗಿದೆ. ಅವರ ಕೆಲಸಗಳನ್ನೇಲ್ಲಾ ಅವರೇ ಮಾಡಿಕೊಳ್ಳುತ್ತಾರೆ ಎಂದೆಲ್ಲಾ..ಕೆಲವು ವ್ಯಕ್ತಿಗಳನ್ನು ನೋಡದ ಹೊರತು ಬೇರೆಯವರು ಹೇಳಿದ್ದನ್ನು ನಂಬುವನಲ್ಲ.ಇರಲಿ ಯಾವುದಕ್ಕೂ ನೊಡೋಣ ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿದ್ದಂತೆ ಅವರ ಮನೆ ಎದುರು ಕಾರು ನಿಲ್ಲುತ್ತಿದ್ದಂತೆ ಮನೆಯಿಂದ ವೃದ್ಧರೊಬ್ಬರು ಬಂದು ಬಾಗಿಲು ತೆಗೆದರು.ಗಣಪತಿ ಹೆಗಡೆ ಇವರೇ ಅವರು ಹೇಳಿದಾಗ ನಂಬಲಾಗಲಿಲ್ಲ. ಅವರಿಗೆ ನಮಸ್ಕಾರ ಮಾಡಿ ಒಳಗೆ ಹೋಗಿ ಹರಟೆಗೆ ಕುಂತುಕೊಂಡೆವು.
ಅವರೇ ಸ್ವಾತಂತ್ರ್ಯ ಹೋರಾಟಗಾರ,ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಚರೀತ್ರೆಯಂತಿರುವ ಪಂಡೀತ ಸುಧಾಕರ ಚತುರ್ವೇದೀ.
ಹುಟ್ಟಿದ್ದು ೧೮೯೭ ರಾಮನವಮಿಯಂದು. ಅವರ ಪ್ರಕಾರ ೧೨೨ ನೇ ವರ್ಷ ನಡೆಯುತ್ತಿದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ೧೧೩ ವರ್ಷ. ಸ್ವಲ್ಪ ವಯಸ್ಸಿನಲ್ಲಿ ಗೊಂದಲವಿದ್ದರೂ ಅಂಥ ಮಹತ್ವದ್ದೆನಲ್ಲ.
ಸುಮಾರು ಒಂದು ತಾಸು ಮೂವತ್ತು ನಿಮಿಷ ಮಧ್ಯೆ ಬಿಡುವಿಲ್ಲದೆ ಹಳೆಯ ಘಟನೆಗಳೆಲ್ಲ ಮೆಲುಕು ಹಾಕಿದ್ದಲ್ಲದೇ ಅಂದು ನಡೆದ ಘಟನಾವಳಿಗಳ ದಿನಾಂಕ,ಇಸ್ವಿ ಸಮೇತ ಹೇಳುತ್ತಿದ್ದರೆ ಹೈಸ್ಕೂಲ್ ಲ್ಲಿ ಸಮಾಜ ವಿಷಯದಲ್ಲಿ ದಿನಾಂಕೇ ನೆನಪಿಲ್ಲದೇ ಒದ್ದಾಡಿದ್ದು ನೆನಪು ಸುಳಿದು ಹೋಯಿತು!.
ವಯಸ್ಸು ನೂರಹತ್ತು ದಾಟಿದರೂ ಮಾತಿನಲ್ಲಿ ಇನ್ನೂ ಸ್ಪಷ್ಟವಾದ ಮಾತು ಕೇಳುತ್ತದೆ.ಮಧ್ಯೆ ಎಲ್ಲೂ ನಿಲ್ಲುವುದಿಲ್ಲ. ಅಂದಿನ ಸ್ವಾತಂತ್ರ್ಯಹೋರಾಟದ ನೆನಪು ಇನ್ನೂ ಹಸಿರಸಿರು.ಬೆಳಿಗ್ಗೆ ೩ ಕ್ಕೇ ಎದ್ದು ಧ್ಯಾನ ೬ರವರೆಗೆ.ನಂತರ ನಿತ್ಯ ಕೆಲಸ ಮುಗಿಸಿ ಸಾರ್ವಜನಿಕರಿಗೆ ಭೇಟಿ.ಸಾಯಂಕಾಲ ೮ಕ್ಕೆ ಏಕಾಂತಕ್ಕೆ.೧೨ ಕ್ಕೆ ನಿದ್ರೆ. ಇದು ಅವರ ನಿತ್ಯ ದಿನಚರಿ.
ಬಾಲ್ಯದಲ್ಲಿ ಕಡುಬಡತನದಲ್ಲಿ ಬೆಳೆದ ಇವರಿಗೆ ೩-೪ದಿನ ಹೊಟ್ಟೆಗೆ ಏನು ಇರುತ್ತಿರಲಿಲ್ವಂತೆ.ಒಂದೋಂದು ಸಲ ನೀರು ಸಿಗದೆ ಪರದಾಡಿದ್ದನ್ನು ಹೇಳುವಾಗ ಇಷ್ಟು ವರ್ಷ ಬದುಕಿದ್ದು ಹೆಮ್ಮೆ ಇತ್ತು.ಆಲೂಗಡ್ಡೆಯನ್ನು ಯಾರಾದರೂ ಕೊಟ್ಟರೂ ಬೇಯಿಸಿಕೊಳ್ಳಲು ಸಾಧನ ಇಲ್ಲದೇ ಪರದಾಡಿದ್ದು, ಬ್ರಿಟಿಷರ ಕಟ್ಟುನಿಟ್ಟಿನ ಕಾನೂನು, ಸಾವಿರ ಹೆಣಗಳನ್ನು ಅಂತ್ಯ ಸಂಸ್ಕಾರ ಮಾಡಿದ್ದು, ಗಾಂಧಿಜಿಯೊಂದಿಗಿನ ಬಾಂಧವ್ಯವನ್ನು ಅವರು ಹೇಳುತ್ತಿದ್ದರೆ ನಮಗೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋದ ಅನುಭವ.ಅವರೊಂದಿಗೆ ಮಾತನಾಡಿದ ಕೆಲ ಸ್ಯಾಂಪಲ್ಗಳು ಮುಂದಿನ ಪೋಸ್ಟ್ ಗೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
3 ಕಾಮೆಂಟ್ಗಳು:
ನಿತಿನ್ ,
ಹೀಗೊಬ್ಬರು ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಎಂಬುದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು .. ಮುಂದಿನ ಲೇಖನಕ್ಕೆ ಕಾಯುತ್ತಿರುವೆ .. ಅವರ ಅನುಭವಗಳನ್ನು ಅವರ ಮಾತಿನಲ್ಲೇ ಕೇಳುವ ಬಯಕೆ . ಅವರ ಬಗ್ಗೆ ಸ್ವಲ್ಪ ವಿವರ ತಿಳಿಸಲು ಸಾದ್ಯವೇ ...
ಶ್ರೀಧರ್ ಭಟ್
http://spbhat-haratemane.blogspot.com/
ನಿತಿನ್....
ಇಂಥಹವರೂ ಇನ್ನೂ ಇದ್ದಾರಲ್ಲ...
ಕೇಳಿ ತುಂಬಾ ಖುಷಿಯಾಯಿತು....
ಅವರ ಬಗೆಗೆ ಭಕ್ತಿ, ಗೌರವಗಳು ಮೂಡಿದವು....
ನೀವು ತುಂಬಾ ಲಕ್ಕಿ....
ಅವರ ಇನ್ನಷ್ಟು ಫೋಟೊಗಳು...
ವಿವರಗಳು...
ಅವರ ಅನುಭವಗಳು...
ದಯವಿಟ್ಟು ಹಾಕಿ....
ನಿತಿನ್,
ಅವರ ಜೊತೆ ಇದ್ದ ನೀವು ಅದೃಷ್ಟವಂತರು.
ಅವರ ಫೋಟೋನೋಡಿ ನನಗೆ ಖುಷಿಯಾಯ್ತು..
ಕಾಮೆಂಟ್ ಪೋಸ್ಟ್ ಮಾಡಿ