ಶುಕ್ರವಾರ, ಜನವರಿ 16, 2009

ಕುಮಾರಣ್ಣಾ ,ಅನೀತಕ್ಕನ್ನ ಬೇರೆ ಬೇರೆ ಮಾಡವ್ರಂತೆ!!


ಕುಮಾರಣ್ಣಾ ,ಅನೀತಕ್ಕನ್ನ ಬೇರೆ ಬೇರೆ ಮಾಡವ್ರಂತೆ!!


{ಚಿತ್ರ:ಊರೇ ಕೂಗಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ......!
ಕುಮಾರಸ್ವಾಮಿ ಮತ್ತು ಅನೀತಕುಮಾರಸ್ಚಾಮಿ
}
ಪಾ ಇವಾಗಷ್ಟೇ ಶಾನೆ ಕಷ್ಟಪಟ್ಟು ಎಂ.ಎಲ್.ಎ ಆದ ಗೌಡರ ಸೊಸೆ ಅಲಿಯಾಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನೀತಾ ಗೆ ಇದೆಂತ ಕಷ್ಟದ್ ದಿನಗಳಯ್ಯ ಅಂದನಂತೆ
ಸ್ಪೀಕರ್ ರೀಪೇರಿ ಮಾಡ್ತಿದ್ದ ಜಗ್ಯ.
ಮೊನ್ನೆ ಅಷ್ಟೆ ಪೇಪರ್ ನಾಗೆ ಆರೀತಿ "ಮಧುಗಿರಿಗೆ ಅನೀತಕ್ಕ ಮಧುಚಂದ್ರಕ್ಕೆ ಕುಮಾರಣ್ಣ" ಅಂತೆಲ್ಲ ಬರೆದು ಮನಸ್ಸಿನ ನೆಮ್ಮದಿನೆ ಕೆಡ್ಸಾವ್ರಂತೆ,ಹಿಂಗೆ ಹಂಗೆ ಅಂತೆಲ್ಲ ರೆಕ್ಕೆ ಪುಕ್ಕ ಹಾರ್ತಾ ಇದ್ರೆ ಪಾಪ ಅನೀತಕ್ಕಾನಾದ್ರು ಅದೇಂಗೆ ರಾಧಕ್ಕನ ಮನೆ ಕಡೆ ತಲೆ ಹಾಕಂಡ ಮಲಕ್ಕತ್ತಾಳ ಎಂದ ಅನಂತಣ್ಣ.

ಅಲ್ಲಾ,ಪಾಪ ಕುಮಾರಣ್ಣ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಆಗವ್ರೆ, ಹೆಂಡತಿ ಸಂಗಡ ಮರು ಇಲೇಕ್ಷಾನಾಗೆ ೩ ಸೀಟು ಗೆಲ್ಸಾವ್ರೆ ಇದೇನು ತಮಾಷೇನಾ? ಅಷ್ಟೇಲ್ಲ ಕಷ್ಟಪಟ್ಟು ೪ ದಿನಾ ಸ್ವಲ್ಪ ಆರಾಮಾಗಿ ನಮ್ಮ ದೇಶದ ಪಕ್ಕಕ್ಕೆ ಇರೋ ದೇಸಾನ ವಸಿ ನೋಡಕಂಡು ಬರುವಾ,ಅಲ್ಲೇನಾದ್ರು ನಮ್ಮ ಪಾರ್ಟಿ ನ ಸುರು ಹಚ್ಕಳಾಕೆ ಆಯ್ತದ್ಯ ಅಂತ ನೋಡಕಂಡು ಬರುವ,ಸಾಮ್ರಾಜ್ಯನ ವಸಿ ನನ್ನ ಕಾಲದಲ್ಲಿ ಪಕ್ಕದ ದೇಶದ ಕಡೆನೂ ವಿಸ್ತರಿಸುವ ಅಂತ ಹೋಗವ್ರೆ. ಜೊತೆಗೆ ಎನಕ್ಕೂ ವಸಿ ಅರ್ಜೇಂಟ್ ಲಿ ಏನಾದ್ರು ಪಾರ್ಟಿ ಸ್ಟಾರ್ಟ್ ಆಗ್ಬುಡ್ತು ಅಂದ್ರೇ ಅಲ್ಲಿನ ಜನ ವಸಿ ಪಾರ್ಟಿ ಸಿಂಬಾಲ್ ಹೆಂಗೆ ಇರ್ತದಣ್ಣಾ ಅಂತಾ ಕೇಳ್ ಬಿಟ್ರೆ ಕಷ್ಟಾಗ್ತದೆ ಅಂತಾ ಪಾರ್ಟಿ ಚಿಹ್ನೆ ತೆನೆ ಹೊತ್ತ ಮಹಿಳೆಯ ರೂಪದರ್ಷಿಗೆ ಏನಕ್ಕೂ ಇರ್ಲಿ ಅಂತ ಪಾಪ ರಾಧಕ್ಕ ಸೂಟ್ ಆವ್ತಾಳೆ ಅಂತ ಜೊತೆ ಕರ್ಕೊಂಡೊಂಗಿರ ಬೇಕು. ಅದನ್ನೇ ಏನೇನೋ ಅವ್ರವ್ರೆ ಇಮ್ಯಾಜಿನೆಸನ್ ಮಾಡಕಂಡು ಪಾಪ ಅವ್ರ ಮ್ಯಾಗೆ ಆ ರೀತಿ ಎಲ್ಲ ಹೇಳೊದು ತಪ್ಪಾಗಾಕಿಲ್ವ ಅಂದನಂತೆ ಪಕ್ಸದ ದತ್ತಣ್ಣ.
ಅಲ್ಲಾ ಸಾರ್ವಜನೀಕ ರಂಗದಲ್ಲಿ ವೇಸಾ ಕಟ್ಟಿ ಬದಕ್ತಾನೆ ಅಂದ್ರೆ ಅವನ ವಾಚ್ ಮಾಡಿ ಜನರ ಮುಂದೆ ಇಡೋದು ನಮ್ಮ ಧರ್ಮ,ಎಲ್ಲಾ ಪೊಸಿಟೀವ್ ಆಗಿ ತಕಲ್ರಲೆಆನ್ ಬುಟ್ಟ ಬೆಳಗೆರೆ. ವಿದೇಶಾದಾಗೆ ಹಿಂಗೆಲ್ಲಾ ನಡ್ಯಾಕಿಲ್ಲ.ಬಿಲ್ ಕ್ಲೀಂಟನ್ ನ್ನೆ ಸಾಣೆ ಗೋಳ ಹೊಯ್ಕಳ್ಲಿಲ್ವಾ? ಅದೇಂಗೆ ಸುಮ್ನೆ ಬಿಡಕಾಯ್ದದಪ್ಪ ಅಂದ್ರು ಭಟ್ರು. ಪಾಪ ಇವ್ರೆಲ್ಲ ಮಧ್ಯೆ ಸೇರಕಂಡ ಕುಮಾರಣ್ಣ ಹೋರ ದೇಸದಾಗೆ ಪಾರ್ಟಿ ಕಟ್ಟೋ ಕನಸನ್ನ ಬಿಟ್ಟಾವ್ರಂತೆ.ಒಸಿ ಸಾಮ್ರಾಜ್ಯಾನ ವಿಸ್ತಾರಾ ಮಾಡಕಳವ ಅಂದ್ರೆ ಎಲ್ಲಾ ಕಲ್ಲು ಹಾಕ್ತ ಇದ್ದವ್ರೆ ಏನಪ್ಪ ಮಾಡದು ಅಂತ ಚಿಂತೆ ಮಾಡೋ ಹೊತ್ತಿಗೆ ಮತ್ತೋಂದು ಕಾಟ ಸುರು ಆಗಿದ್ಯಂತೆ.
ಅಲ್ಲ ಅನೀತಕ್ಕ ಮಧುಗಿರಿಲಿ ಗೆದ್ದು ಗೌಡ್ರ ಅಳಿದುಳಿದ ಮಾನ ರಕ್ಷಿಸೌವ್ಳೆ.ಅಷ್ಟೆ ಅಲ್ದೆ ವಿಧಾನಸಭೆಗೆ ಗಂಡನ ಜೊತೆ ಹೆಜ್ಜೆ ಹಾಕಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು ಇವತ್ತು. ಇದು ದಾಖಲೆ ಅಲ್ವೆನ್ಲ .ಅಂತಾದ್ರಲ್ಲಿ ನಮ್ಮ ಗೌವ್ರ್ನಮೆಂಟ್ ಬೆಳಗಾವಿಲಿ ಅಧಿವೇಸನ ಕರದು ಪಾಪ ಗಂಡ ಹೆಂಡತಿನ ಬೇರೆ ಬೇರೆ ಮಾಡಿದ್ದು ನ್ಯಾಯಾನ ಕಣಣ್ಣ ಅಂತ ಕೇಲ್ದ ಒಂದಾನೋಂದು ಕಾಲದಲ್ಲಿ ಕುಮಾರಣ್ಣನ ಅರ್ಧಾಂಗಿ ಆಗಿದ್ದ ಧರ್ಮು,ಈ ಮಾತು ಅರ್ಥಾ ಆಗದ ಯಡ್ಡಿ ಪ್ರತಿ ಪಕ್ಸದವ್ರು ನಮ್ಮ ಒಳ್ಳೆ ಕೆಲ್ಸಾನ ನೋಡೋಕಾಗ್ದೆ ಕಾಲೇಳಿತಾವ್ರೆ ನಾವು ಸುಮ್ನಿರಾಕಿಲ್ಲ ಅಂತ ಗುಡುಗಿದ್ನಂತೆ.ಪಕ್ಕದಲ್ಲೆ ಇದ್ದ ಸೋಭಾಕ್ಕ ಏನೋ ನೆನಪಾದಂಗೆ ಆಗಿ ಪೇಪರ್ನವ್ರನ್ನ ಕೇಳುದ್ರು ಅದೇನಾಗೈತೆ ಧರ್ಮು ಹಂಗೆ ಹೇಳಾವ್ನಲ್ಲ. ನಾನೂ ಕಾಮೇಂಟ್ ಕೊಡ್ತಿನಿ ಸಿ.ಎಂ. ಪಾಪ ಬುಸಿ ಅವ್ರೆ ಅಂದ್ರಂತೆ.ಪೇಪರ್ನೋರು ಅಧಿವೆಸನಕ್ಕೆ ಕುಮಾರಸ್ವಾಮಿ ಗೆ ಅತಿಥಿ ಗೃಹ,ಅನೀತಾಗೆ ಹಾಸ್ಟೇಲ್ ನ ಅಲಾಟ್ ಮಾಡವ್ರಂತೆ ಅಧಿವೇಸನ ಮುಗ್ದು ಉಳ್ಕೊಳಾಕೆ ಇದನ್ನೇ ಧರ್ಮು ಸಾಹೇಬ್ರು ಹೆಳಿದ್ರು ಅಂದ್ರು.

ಪಾಪ ಸೋಭಕ್ಕಂಗೆ ಏನು ಗೊತ್ತಯ್ತದೆ ಗಂಡ ಹೆಂಡರ ವಿಸಯ ಅಂದ್ರು ಅಲ್ಲೇ ಟೀ ಕೋಡ್ತಿದ್ದ ವರ್ತೂರು.ಅದಕ್ಕೆ ಸೋಭಕ್ಕ, ನೋ ಕಾಮೇಂಟ್ ಅಂದ್ರಂತೆ ಜೊತೆಗೆ ಹಂಗೇನಾದ್ರು ಅನೀತಾಕ್ಕಂಗೆ ಬೇಜರಾಯ್ತದೆ ಅಂದ್ರೆ ಕುಮಾರಣ್ಣ ನ ಅತಿಥಿ ಗೃಹಕ್ಕೆಹೋಗಾಕೆಫ್ರೀಪಾಸ್ ಕೊಡ್ಸ್ತಿನಿ ಅಂದ್ರು.ಅಲ್ಲ ವಿಧಾನ ಸಭೆ ಗೆ ಮೊದಲ ಸಲ ದಂಪತಿಗಳ ಪ್ರವೇಸ ಆಗೈತೆ.ಆಡಳಿತದಲ್ಲಿ ಇರೋರು ಪ್ರತಿ ಪಕ್ಸದವ್ರು ಅಂತ "ಗಂಡ ಹೆಂಡಿರ" ಮಧ್ಯೆ ಹೀಗೆ ಮೂಗು ತೂರ್ಸೊದು ನ್ಯಾಯನ,ಕುಮಾರಣ್ಣ ಯಡ್ಡಿಯ ಅರ್ಧಾಂಗಿ ಆಗಿದ್ದ ಒಂದಾನಂದು ಕಾಲ್ದಲ್ಲಿ ಅಂತ ಇವಾಗ ಹಿಂಗೆ ಮಾಡವ್ರೆ ಪಕ್ಸ ಬೇದ ಮರ್ತು ಅಧಿವೇಸನದಾಗೆ ಚಚ್ರೆ ಮಾಡ್ತಿವಿ.ನಾವು ಕೇಳ್ತಿವಿ ಅಂಥಾನೆ ಪ್ರಸ್ನೆ ಕೇಳಾಕೆ ಟೈಮ್ ಇಡ್ಲಿಲ್ಲ. ಇದನ್ನ ಹೀಂಗೆ ಬಿಟ್ರೆ ಮುಂದೆ ಇಲಾಕ್ಸಾನ್ನಗೆ ಯಾವ ಗಂಡ ಹೇಂಡ್ರು ನಿಲ್ಲಾಕಿಲ್ಲ. ಹಂಗಾಗಿ ಕುಮಾರಣ್ಣ ಜೆ.ಡಿ.ಎಸ್. ಆದ್ರು ಪಕ್ಸ ಬೇದ ಮರ್ತು ವಿರೊದಿಸ್ತ್ವಿ ಅಂದ್ರು ಜೋಳದ ರೋಟ್ಟಿ ತಿಂದು ಅಧಿವೇಸನಾದಾಗೆ ನಿದ್ರೆ ಮಾಡಿ ಎಚ್ಚರಾದ ದೇಸಪಾಂಡೆ, ಡಿ.ಕೆ.ಸಿ
ಇಸ್ಟೇಲ್ಲಾ ಆಗೋವರ್ಗೆ ಕುಮಾರಣ್ಣ-ಅನೀತಕ್ಕ ಅಧಿವೇಸನದಾಗೆ ಕಣ್ಣು ಮುಚ್ಚದೆ ನೋದ್ತಾ ಇದ್ರಂತೆ ಪಾಪ ಕ್ಯಾಮರಗಳೆಲ್ಲ ಅವ್ರ ಸುತ್ತುವರ್ದು ಲೈವ್ ಬರೋದು ಗೋತ್ತದ ಮೇಲೆ ಬಿಟ್ರಂತೆ.
ಗಂಡ ಹೆಂಡತಿನ ೮ ದಿನ ಬೇರೆ-ಬೇರೆ ಮಾಡಿದ ಸರಕಾರ ಅದೇಂಗೆ ೫ ವರ್ಷ ನಡಿತದ್ಲಾ ನಾನು ನೋಡ್ತಿನಿ ಅಂತಾ ಐತಂತೆ ಮುದಿ ಹುಲಿ.!!
ಒಂದೇ ಕಡೆ ಇದ್ರೂ ಬೇರೆ ಬೇರೆ ಕಡೆ ಇದ್ರಲ್ಲ ನಿಮ್ಮ ಅನಿಭವ ಒಸಿ ಹೇಳ್ತಿರಾ ಅಂತ ಕೇಳಾಕೆ ಎಲ್ಲಾ ಪ್ರೇಸ್ ನೊರು ರೇಡಿ ಆಗವ್ರಂತೆ. ನಾಳೆವ್ರು ಏನು ಹೆಳಿದ್ರು ನೋಡೋಣಾಂತೆ ಬಿಡ್ರುಲಾ...!!