ಶನಿವಾರ, ಏಪ್ರಿಲ್ 4, 2009
ಜನರ ಉತ್ಸಾಹಕ್ಕೆ ತಡೆಯಾದ ವ್ಯವಸ್ಥೆ
ಚುನಾವಣಾ ಆಯೋಗ ಇದೇ ಮೊದಲ ಸಲ ವಿಧಾನಸಭ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೋದು ಮತದಾರ ಸೇವಾ ಕೇಂದ್ರ ತೆರೆದು ಮತದಾರರಿಗೆ ಒಂದೇ ಸೂರಿನಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿ,ಸಾಕಷ್ಟು ಪ್ರಚಾರ ಕೊಟ್ಟರೂ ಅಲ್ಲಿನ ವ್ಯವಸ್ಥೆಯ ಲೋಪದಿಂದ ಚುನಾವಣಾ ಆಯೋಗಕ್ಕೆ ಬಂದ ಹೋಗಳಿಕೆಯೂ ಮುಚ್ಚಿ ಹೋಯಿತು.
ನಿಜ, ಇಂಥದೊಂದು ವ್ಯವಸ್ಥೆ ಬೇಕಿತ್ತು.
ಜನ ಸಾಮಾನ್ಯರು ತಮ್ಮ ಕೆಲಸ ಎಲ್ಲ ಬಿಟ್ಟು ಮತದಾರರ ಗುರುತಿನ ಪತ್ರ ಪಡೆಯಲೂ ಖಂಡಿತ ಹೋಗಲಾರ.ಆದಷ್ಟು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಮತ್ತು ಎಲ್ಲರೂ ಚುನಾವಣಾ ಗುರುತು ಪತ್ರ ಹೊಂದುವುದರಿಂದ ಅಕ್ರಮ ಮತದಾನ ತಡೆಗಟ್ಟಬಹುದು ಎಂಬ ಮಹತ್ವಕಾಂಕ್ಷೆಯಿಂದ ಆರಂಭಿಸಿದ್ದ “ಮತದಾರರ ಸೇವಾ ಕೇಂದ್ರ” ಸಮರ್ಥವಾಗಿ ಕೆಲಸ ಮಾಡಿದವೆ?
ಚುನಾವಣಾ ಆಯೋಗ ಏನೋ ಜಾಹೀರಾತು ಮೂಲಕ ಜನರಲ್ಲಿ ಇದರ ಸದುಪಯೋಗ ಪಡೆಯುವಂತೆ ಜಾಗೃತಿ ಏನೋ ಮೂಡಿಸಿತು.ಜನ ಸಾಮಾನ್ಯರರಿಗೆ ಅನುಕೂಲವಾಗುವ ಸಮಯ,ಭಾನುವಾರವೂ ತೆರೆದಿದ್ದರಿಂದ ಬಹಳಷ್ಟು ಮಂದಿ ಇದರ ಸದುಪಯೋಗ ಪಡೆದುಕೊಂಡರು. ಇಂಥದೊಂದು ವ್ಯವಸ್ಥೆ ಮಾಡಿ ಜನ ಸಾಮಾನ್ಯರಿಗೆ ಸಾಕಷ್ಟು ಹತ್ತಿರವಾದರೂ ಮತದಾರರ ಸೇವ ಕೇಂದ್ರಗಳಲ್ಲಿನ ಕೆಲವೊಂದು ವ್ಯವಸ್ಥೆ ಜನರಿಂದ ಬಂದ ಹೋಗಳಿಕೆಯೂ ಕೇಳದಂತೆ ಮಾಡಿ ಬಿಟ್ಟಿತು.
ಈ ಹಿಂದೆ ಚುನಾವಣಾ ಸಮಯದಲ್ಲಿ ನೂತನ ಅರ್ಜಿ ಭರ್ತಿ,ಹೆಸರು,ವಿಳಾಸ ಬದಲಾವಣೆ ಗೆ ಹೀಗೆ ನಾನಾ ಸಲ ಓಡಾಡ ಬೇಕಿತ್ತು.ನಂತರ ಅರ್ಜಿಯಲ್ಲಿ ಪರಿಶಿಲಿಸಿ ಹೆಸರು ಬಂದ ಮೇಲೆ ಫೋಟೊ ತೆಗೆಸಿಕೊಂಡು ಕೈ ಗೆ ಗುರುತಿನ ಚಿಟಿ ಬಂದರೆ ಏನೋ ಪಡೆದ ಸಂತೋಷ. ಆದರೆ ಮತದಾರ ಸೇವಾ ಕೇಂದ್ರದಲ್ಲಿ ನೀವು ಒಮ್ಮೆ ಅರ್ಜಿ ತುಂಬಿ ಕೊಟ್ಟರೆ, ಒಂದುವಾರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಬಂದಿರುತ್ತದೆ.ಸೀದಾ ಫೋಟೊ ತೆಗೆಸಿಕೊಂಡು, ೫ ನಿಮಿಷ ಕಾಯ್ದರೆ ಕೈಯಲ್ಲಿ ಮತದಾರರ ಗುರುತಿನ ಪತ್ರ ಹಾಜರ್!!. ಇಂಥದೊಂದು ಮಹತ್ವಕಾಂಕ್ಷೆಯೋಂದಿಗೆ ಚುನಾವಣಾ ಅಯೋಗ ಆರಂಭಿಸಿತ್ತು ಈ “ಮತದಾರರ ಸೇವಾ ಕೇಂದ್ರ” ವನ್ನು.
ಆದರೆ ಈ ಮತದಾರರ ಸೇವಾ ಕೇಂದ್ರಗಳು ಮೊದಲಿಗೆ ಹೆಸರು ಮಾಡಿದರೂ ನಂತರ ಬರೀ ತೆಗಳಿಕೆಗೆ ಸೀಮಿತವಾಗಿಬಿಟ್ಟವು.ಮೊದ ಮೊದಲು ಜನರ ಸಂಖ್ಯೆಯೂ ಕಡಿಮೆ ಇತ್ತು.ಅಲ್ಲಿನ ಸೀಮಿತ ಸಿಬ್ಬಂಧಿಗಳ ಅನುಗುಣವಾಗೆ ಜನರು ಬರುತ್ತಿದ್ದರಿಂದ ಎಲ್ಲವೂ ನಿಗದಿ ಮಾಡಿದಂತೆ ಕೆಲಸ ಕಾರ್ಯ ನಡೆಯುತ್ತಿತ್ತು.ಪ್ರಚಾರ ಸಿಕ್ಕಂತೆ ಮತ್ತು ಕೊನೆಯ ದಿನ ಹತ್ತಿರ ಬಂದಂತೆ ಜನರ ಹರಿವು ಹೆಚ್ಚಿತು.ಇಲ್ಲೇ ಚುನಾವಣಾ ಆಯೋಗ ಹಾದಿ ತಪ್ಪಿದ್ದು. ಫೇ್ಬ್ರವರಿ ೧೮ ರಿಂದಲೇ ಸಾಕಷ್ಟು ಜನರು ಬರುತ್ತಿದ್ದರೂ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲಿಲ್ಲ.[ಮಾರ್ಚ ೩೧ ಕೊನೆಯ ದಿನಾಂಕ ಆಗಿತ್ತು.].
ತಂತ್ರಜ್ನಾನ ಸಾಕಷ್ಟು ಬೆಳೆಯುತ್ತಿದ್ದರೂ ಚುನಾವಣಾ ಆಯೋಗ ಇದರ ಬಗ್ಗೆ ತಲೆನೆ ಕೆಡಿಸಿಕೊಳ್ಳದೇ ಇದ್ದಿದ್ದು ಸಾಕಷ್ಟು ಪ್ರಮಾದಕ್ಕೆ ಕಾರಣವಾಯಿತು.ಇದರ ಬಿಸಿ ನೇರವಾಗಿ ಅನುಭವಿಸಿದ್ದು ಮತದಾರರ ಸೇವಾ ಕೇಂದ್ರದ ಅಧಿಕಾರಿಗಳು!!.
ಜನರಿಂದ ಅರ್ಜಿ ತೆಗೆದುಕೊಂಡ ಮೇಲೆ ಅದನ್ನು ಪರಿಶೀಲಿಸಿ ,ಸಲ್ಲಿಸಿದ ದಾಖಲೆ ಸರಿಯಾಗಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಬರುತ್ತದೆ.ಅಲ್ಲಿ ಹೆಸರು ಬಂದ ಮೇಲೆ ಅಲ್ಲಿನ ಸೀರಿಯಲ್ ನಂಬರ್ ತೆಗೆದುಕೊಂಡು ಫೋಟೊ ತೆಗೆಸಿಕೊಳ್ಳ ಬೇಕು.ಅಲ್ಲಿನ ಅಧಿಕಾರಿಗಳು ಒಂದು ವಾರ ಬಿಟ್ಟು ಬಂದು ಪಟ್ಟಿಯನ್ನು ಪರಿಶೀಲಿಸಿ ಎಂದು ಹೇಳುತ್ತಿದ್ದರು.ಆದರೆ ವಾರದ ಬಳಿಕ ಹೋದರೆ ಬಹಳಷ್ಟು ಜನರ ಹೆಸರೆ ಬಂದಿರುತ್ತಿರಲಿಲ್ಲ.ಮತ್ತೆ ೪ ದಿನ ಬಿಟ್ಟು ಬನ್ನಿ ಎಂಬ ಉತ್ತರ.ಆಮೇಲೂ ಬಂದೇ ಬರುತ್ತಿತ್ತು ಎಂಬುದು ಗ್ಯಾರಂಟಿ ಇಲ್ಲ. ಆಮೇಲೆ ಮತ್ತೋಮ್ಮೆ ಅರ್ಜಿ ಸಲ್ಲಿಸಿ ಎಂಬ ಸಿದ್ಧ ಉತ್ತರ ಬರುತ್ತಿತ್ತು. ಅಲ್ಲಿನ ಅಧಿಕಾರಿಗಳು ಪ್ರಿಂಟ್ ಔಟ್ ತೆಗೆದ ಕಾಗದದಲಿ ಲೀಸ್ಟ್ ನಲ್ಲಿ ಹೆಸರು ಬಂದಿದೆಯೋ ಇಲ್ಲವೋ ಎಂದು ಹುಡುಕುತ್ತಿದ್ದರು.ಸಾವಿರಾರು ಹೆಸರಿರುವ ಲೀಸ್ಟ್ ನಲ್ಲಿ ಒಬ್ಬೋಬ್ಬರದ್ದೆ ಹುಡುಕುತಾ ಹೋದರೆ ಎಲ್ಲರದ್ದೂ ಹುಡುಕಲು ಅದೇಷ್ಟು ಸಮಯ ಬೇಕಾಗ ಬಹುದು? ಅದೇ ಯಾವುದಾದರೂ ಸಾಫ್ಟ್ ವೇರ್ ಬಳಿಸಿದ್ದರೆ ಮತದಾರರ ಹೆಸರು ಟೈಪ್ ಮಾಡಿದ ಕೂಡಲೆ ಅದರ ವಿವರ ಕೊಡುವಂತಿದ್ದರೆ ಜನರ ಸಮಯವೂ ಉಳಿತಾಯವಾಗುತ್ತಿತ್ತು.ಉರಿಬಿಸಿಲಿನಲ್ಲಿ ಲೈನ್ ನಲ್ಲಿ ಇದ ಜನ, ತಮ್ಮೇಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದರೆ ಇಲ್ಲಿನ ಹಳೆಯ ವ್ಯವಸ್ಥೆಗೆ ಬಲಿ ಆದರೆ ಸುಮ್ಮನಿರುತ್ತರೆಯೇ? ಕೆಲ ಸೇವಾ ಕೇಂದ್ರಗಳಿಗೆ ಕಲ್ಲನ್ನು ಹೋಡೆದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವೆಡೆ ವಿಳಾಸ ಬದಲಾದರೆ, ಚಿತ್ರವೂ ಬದಲಾಯಿತು.ಇಲ್ಲಿ ಜನರು ತಪ್ಪಿದರೆನೊ ಎಂಬ ಅನುಮಾನ.ಫೊಟೊ ತೆಗೆಯುವಾಗ ಕಂಪ್ಯೂಟರ್ ನಲ್ಲಿ ನಮ್ಮ ವಿವರ ಎಲ್ಲ ಇರುತ್ತದೆ. ಅಲ್ಲಿ ಪರಿಶಿಲಿಸಿದ್ದರೆ ಜನರು ಈ ಕಷ್ಟದಿಂದ ಪಾರಾಗಬಹುದಿತ್ತೆನೋ?!
ಮುಂದಿನ ಸಲವಾದರೂ ಎಲ್ಲ ಕಷ್ಟಕೋಟಲೆ ಗಳನ್ನು ಮೀರಿ ಮತದಾರರ ಗುರುತಿನ ಪತ್ರ ಎಲ್ಲರ ಬಳಿ ಅವರದ್ದೇ ಇರಲಿ ಎಂದು ಆಶಿಸೋಣವೆ?!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)