ನಮ್ಮ ರಾಜಕೀಯ ನಾಯಕರೆನಿಸಿಕೊಂಡವರು ತಮ್ಮ ಅನುಕೂಲಕ್ಕೆ ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಹಾರುತ್ತ ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ತಾವು ಯಾವ ಪಕ್ಷದಲ್ಲಾದರೂ ಇದ್ದೇವೆ?ಅದರ ತತ್ವ ಸಿದ್ದಾಂತ ಏನು ಏನ್ನುವುದನ್ನು ಮರೆಯುತ್ತಿದ್ದಾರೆಯೇ?
ರಾಜಕೀಯ ಚದುರಂಗದಾಟದಲ್ಲಿ ಪಕ್ಷಾಂತರಕ್ಕೆ ಅಡೆತಡೆ ಇದ್ದರೂ ರಂಗೋಲಿ ಕೆಳಗೇ ನುಸುಳುವ ಅಭ್ಯಾಸ ಇರುವ ಮುಖಂಡರಿಗೆ ಅಧಿಕಾರ ಮತ್ತು ಪ್ರಚಾರ ಇಲ್ಲದಿದ್ದರೆ ಹಲ್ಲಿಲ್ಲದ ಹಾವು!.
ತಾವು ಹುಟ್ಟಿನಿಂದ ಒಂದು ಸಿದ್ಧಾಂತದಲ್ಲಿ ಬೆಳೆದು,ಅದರಲ್ಲಿ ಯಾವುದೇ ಲಾಭವಿಲ್ಲ ಎಂದು ಮತ್ತೊಂದು ಬೇರೆ ಸಿದ್ಧಾಂತ ಇರುವ ಪಕ್ಷಕ್ಕೆ ಹಾರುವ,ಅಲ್ಲೂ ಅದೇ ರೀತಿ ಆದರೆ ಮತ್ತೆ ಬೇರೆದಕ್ಕೆ ಹಾರುವ ಖ್ಯಾತಿ ನಮ್ಮ "ಮುಖಂಡರದ್ದು" ತಾವಿಟ್ಟಿರುವ ಸಿದ್ಧಾಂತದಲ್ಲೇ ಅವರಿಗೆ ನಂಬಿಕೆ ಇಲ್ಲ ಅಂದ ಮೇಲೆ ಅವರು ಯಾರ ಮೇಲೆ ತಾನೆ ಸಂಬಿಕೆ ಇಡ ಬಲ್ಲರು?
ತನಗೆ ಅಧಿಕಾರ ನೀಡಲಿಲ್ಲ,ಮೂಲೆಗುಂಪು ಮಾಡಿದರು ಎಂದೆಲ್ಲ ರಂಪ ಮಾಡಿದ ಸಿದ್ದರಾಮಯ್ಯನವರ ಉದಾಹರಣೆಯನ್ನೇ ತೆಗೆದುಕೊಂಡರೆ ನೀನ್ನೆ [೯/೦೩/೨೦೦೯] ಮೈಸೂರಿನಲ್ಲಿ ಕಾಂಗ್ರೆಸ್ ಪರ್ ಬಹಳ ದಿನದ ನಂತರ ಪ್ರಚಾರಕ್ಕೆ ಬಂದಾಗ ನೆರೆದ ಮತದಾರರೆದುರು ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಸೋಲಿಸಿ ಅಂದು ಬಿಟ್ಟರು!!. ನಂತರ ಎಲ್ಲರೂ ಗೊಳ್ಳ್ ಎಂದು ನಕ್ಕಾಗ ತಮ್ಮ ತಪ್ಪು ಅರಿವಾಗಿ ಬಿ.ಜೆ.ಪಿಯನ್ನು ಸೋಲಿಸಿ ಎಂದು ಪುನ: ನುಡಿದರು.ಈ ಹಿಂದೆ ಬೇರೆ ಬೇರೆ ಪಕ್ಷದಲ್ಲಿ ಇದ್ದಾಗ ಹೀಗೆ ಹೇಳುತ್ತಿದ್ದುದ್ದು ಬಾಯಿ ಪಾಠವಾಗಿ ಬಿಟ್ಟಿದೆ ಎಂದ ಒಗ್ಗರಣೆ ಅವರ ಬಾಯಲ್ಲೆ!.
ತಾವು ಯಾವ ಪಕ್ಷದಲ್ಲಿ ಇದ್ದೇವೆ ಎನ್ನುವಷ್ಟು ಮರೆತು ಬಿಡುವಾಗ ಅವರು ಏನಕ್ಕೆ ಬೇರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದೇ ಚಿಂತೆಗಿಡುಮಾದುತ್ತದೆ.
ಇದು ಕೇವಲ ಸಿದ್ದರಾಮಯ್ಯ ಅವರೊಂದೆ ಅಲ್ಲ.ತಾವು ಮತ್ತೋಂದು ಪಕ್ಷದಲ್ಲಿದ್ದಾಗ ಬೇರೆ ಪಕ್ಷವನ್ನು ಬೈಯುವುದು ಸಾಮಾನ್ಯ.ಆದರೆ ನಾವು ಕೆಕ್ಕರಿಸಿ ಉಗಿದ ಮನೆಗೆ ಆಶ್ರಯಕ್ಕೆ ಹೋಗುತ್ತೆವೆ ಅಂದರೆ ನಮ್ಮಲ್ಲಿ ನೈತಿಕತೆಯೇ ಇಲ್ಲ ಎಂದರ್ಥ ಅಲ್ಲವೆ?
ಮತ್ತೆ ಲೋಕಸಭಾ ಚುನಾವಣೆ ಬಂದಿದೆ.ನಿದ್ರೆಯಿಂದ ಎಳುತ್ತಿದ್ದಾರೆ ನಮ್ಮ ಮುಖಂಡರು.ನೈತಿಕತೆ ಇಲ್ಲದ ರಾಜಕೀಯದಲ್ಲಿರುವ ನಮ್ಮ ರಾಜಕಾರಣಿಗಳಿಗೆ ನೈತಿಕತೆ ಅವಶ್ಯಕತೆ ಇಲ್ಲ ಬಿಡಿ.
5 ಕಾಮೆಂಟ್‌ಗಳು:
ಹಿಂದಿಯಲ್ಲಿ ಒಂದು ಗಾದೆಯಿದೆ.."ದೋಭಿ ಕಾ ಕುತ್ತಾ ನ ಘರಕಾ ನ ಘಾಟಕಾ" ಎಂದು (ಅಗಸನ ನಾಯಿ ಅತ್ತ ಮನೆಗೂ ಸಲ್ಲ ಇತ್ತ ಬಯಲಿಗೂ ಸಲ್ಲ.. ಎಂಬಂರ್ಥ) ಇದು ಇಂತಹ ಮಂಗನಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಾ, ಸಿದ್ಧಾಂತವನ್ನೇ ಮರೆತು ಮೆರೆಯುವ ರಾಜಕಾರಣಿಗಳಿಗೆ ಹೇಳಿ ಮಾಡಿಸಿದಂತಿದೆ... ಅಲ್ಲವೇ? ಸಕಾಲಿಕವಾಗಿದೆ ಲೇಖನ.
ನಿಜ, ನಿಜ. ನಾಳೆ ಯಾರು ಯಾವ ಪಕ್ಷ ಎಂದು ಊಹಿಸುವ ಗ್ಯಾಬ್ಲಿಂಗ್ ನಡೆಸಲೂ ಬಹುದು. ಬೆಟ್ಟಿಂಗ್ ಆಕರ್ಷಕವಾದೀತು!!
ನಿತಿನ್,
ನಿಮ್ಮ ಮಾತು ನಿಜ...ನಮ್ಮ ಎಲ್ಲಾ ರಾಜಕಾರಣಿಗಳು ಹೀಗೆ...ಯಾರಿಗೂ ನೈತಿಕತೆಯಿಲ್ಲ....
ನಿತಿನ್...
ಮೂರೂ ಬಿಟ್ಟವರು..
ಊರಿಗೆ ದೊಡ್ಡವರು...!
ಬಹಳ ಬೇಜಾರಾಗುತ್ತದೆ...
ಈ ಚುನಾವಣೆಯೆಂದರೆ..
ಅಸಹ್ಯ.., ಗಲೀಜು...
ದೂರ ಹೋಗಿಬಿಡೋಣ ಅನಿಸುತ್ತದೆ...
ಈಗ ಜಗಳ..
ಆಮೇಲೆ..ಹೊಂದಾಣಿಕೆ..
ಛೇ...!
ರಾಜಕೀಯದ ಹೊಲಸಿನ ಬಗ್ಗೆ ಮಾತನಾಡದಿರುವುದೇ ಒಳ್ಳೆದು ನಿತಿನ್. ನೋಡಿ ಈಗ ಬಂಗಾರಪ್ಪ ಕಾಂಗ್ರೆಸ್ಸಿನ ಅಭ್ಯರ್ಥೀ!
-ಧರಿತ್ರಿ
ಕಾಮೆಂಟ್ ಪೋಸ್ಟ್ ಮಾಡಿ