ಗುರುವಾರ, ಫೆಬ್ರವರಿ 12, 2009

ಆ ಮಧುರ ಅನುಭೂತಿಗೆ ಹಾತೋರೆದು ಕಾಯುವ ಕ್ಷಣವೇ ಪ್ರೀತಿಯೇ?!




ವ್ಯಾಲೇಂಟೈನ್ಸ್ ಡೇ!
ಈ ಶಬ್ದ ಹದಿಹರಯದ ಹುಡುಗರಿಂದ ಹಿಡಿದು ವಯಸ್ಸಿನ ಅಜ್ಜ,ಅಜ್ಜಿ ತನಕದವರೆಗೂ ತಕ್ಷಣ ರೋಮಾಂಚನಗೊಳಿಸುತ್ತದೆ.!. ರಾಧಾ ಕೃಷ್ಣ,ದುಷ್ಯಂತ ಶಕುಂತಲಾ,ನಳ ದಮಯಂತಿ ಪ್ರೇಮದಿಂದ ಹಿಡಿದು ಪ್ರೀತಿ ಪ್ರೇಮ ಇಂದು ಚಡ್ಡಿ ತನಕ ಬಂದಿದೆ!!ಪ್ರೇಮವನ್ನು ಪವಿತ್ರದಿಂದ ಕಾಣುವ ಭಾರತೀಯರಿಗೆ ಈ ಚಡ್ಡಿ ಪ್ರೇಮ ಬೇಕೆ?

ಯಾವುದೇ ಕಾಲೇಜಿನ ಹುಡುಗ ಹುಡುಗಿ ಕಾಲೇಜಿನ ಮೆಟ್ಟಿಲನ್ನ ಹತ್ತುವಾಗಲೇ ಪ್ರೀತಿ-ಪ್ರೇಮದ ಬಲೆಯಲ್ಲಿ ತಾವು ಸಿಲುಕಬಾರದು ಎಂದೇ ಪ್ರತಿಜ್ನೆ ಗೈದಿರುತ್ತಾರೆ.ಆದರೆ ಮುಂದೆ ಅವರೇ ಅದರ ಬಲೆಯಲ್ಲಿ ಬಿದ್ದಿರುತ್ತಾರೆ!!ಹಿಂದೆ ಮನೆಯಲ್ಲೂ ಅಷ್ಟೆ ಈ ಪ್ರೀತಿ-ಪ್ರೇಮ ಎಂದರೆ ಹೌಹಾರುತ್ತಿದ್ದರು.ಹುಡುಗ-ಹುಡುಗಿ ಒಬ್ಬರೊಬ್ಬರು ಮಾತನಾಡುತ್ತಿದ್ದರೆ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದ್ದರು.ಆದರೆ ದಿನ ಕಳೆದಂತೆ ನೋಡುವ ದೃಷ್ಟಿ ಬದಲಾಗುತ್ತಿದೆ.ಟಿನೇಜ್ ಗೆ ಸ್ವಾತಂತ್ರ್ಯ ಸಿಗುತ್ತಿದೆ.ಮನೆಯವರೂ ಅಷ್ಟೆ ನಾವು ಹುಡುಕುವ ಬದಲು ಅವರವರ ಅಭಿರುಚಿಗೆ ತಕ್ಕಂತೆ ಅವರೇ ಹುಡುಕಿಕೊಂಡರೆ ತೋಂದರೆ ಇಲ್ಲ ಎಂಬಲ್ಲಿಗೆ ಬಂದರೆ,ಅತ್ತ ಹುಡುಗಿಯರ ಸಂಖ್ಯೆ ಕಡಿಮೆ ಆದ್ದರಿಂದ ಅದು ಒಂದು ಕಾರಣವಿರಬಹುದೆ ಮನೆಯವರ ಸಮ್ಮತಿಗೆ?!!

ಹಾಗೆ ಸುಮ್ಮನೆ ನಮ್ಮ ಮನೆಯಲ್ಲಿನ ಅಜ್ಜ-ಅಜ್ಜಿಯನ್ನೇ ನೋಡಿ.ಪಾಪ ಅಂದಿನ ಗಂಡು ಹೆಣ್ಣು ಪ್ರೀತಿ ಪ್ರೇಮ ಅರ್ಥವಾಗುವುದರೊಳಗೆ ಮದುವೆ ಆಗಿ ೨ ಮಕ್ಕಳಾಗಿರುತ್ತಿತ್ತು.!.೧೨-೧೩ ವರ್ಷಕ್ಕೆಲ್ಲಾ ಹಸೆಮಣೆಗೆರುತಿದ್ದ ಅವರು ಅಂದಿನ ಸಂಪ್ರದಾಯ ಅಥವಾ ಸಾಮಾಜಿಕ ಪರಿಸ್ಥಿತಿಯಿಂದ ಇಂಥ ಪ್ರೇಮ-ಪ್ರೀತಿ ದೂರವೇ ಉಳಿದಿತು!!.

ಈಗ ಇಂಥ ಪರಿಸ್ಥಿತಿ ಕಂಡಿತ ಇಲ್ಲ.ಪ್ರೀತಿಗೆ ಬೇಕಾದ ಕಮ್ಯೂನಿಕೆಶನ್ ಸುಲಭದಲ್ಲಿ ಲಭ್ಯ. ಅಂಗೈಯಲ್ಲಿನ ಮೊಬೈಲ್ ಕ್ಷಣಾರ್ಧದಲ್ಲಿ ತನ್ನ ಪ್ರೀಯಕರನ್ನು ಹುಡುಕಿಕೊಂಡು ಮೆಸೆಜ್ ಹೊಗುತ್ತದೆ.ಇನ್ನು ಕರೆ ದರ ಸಂಪೂರ್ಣ ನೆಲಕಚ್ಚಿದೆ!!ನಿಮಷಕ್ಕೆ ೨೦ ಪೈಸೆಯಂತೆಯೂ ಕರೆ ಮಾಡಬಹುದು.! ಇದು ಇಂದು ದೂರವಿದ್ದರೂ ಹತ್ತಿರ ಸೇರಿಸಲು ಸಹಕಾರಿ.ಕ್ಲೊಸ್ ಆದಮೇಲೆ ಅವರೊಡನೆ ಜೀವನ ನಡೆಸೋಣ ಎಂಬ ಮನಸ್ಸಿನ ದ್ವಂದ್ವ.ಇಬ್ಬರ ಮನಸ್ಸು ಬೇರೆತ ಮೇಲೆ ಲೋಕಕ್ಕೆ ಹೆದರುವುದುಂಟೆ?......

ವಿದೇಶದಲ್ಲಿ ಕಾಮನೆಗಳಿಗೆ ಮುಕ್ತ ಅವಕಾಶವಿದೆ.ಆದರೆ ನಮ್ಮ ಸಂಸ್ಕೃತಿ ನೇ ಬೇರೆ.ಎಲ್ಲವೂ ಕಾಮದಲ್ಲೇ ಅಂತ್ಯವಾದರೂ ಅದಕ್ಕೆ ಕೊನೆಯ ಪ್ರಾಮುಖ್ಯ.ಕಾಮಸೂತ್ರವನ್ನು ಹೇಳಿಕೊಟ್ಟಿದ್ದೇ ನಮ್ಮ ಪುರಾತನದವರು.ಅವರಿಗೂ ಗೊತ್ತಿತ್ತು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಕಾಮ ಇರಬೇಕೆಂದು ಅವರು ತಿಳಿದಿದ್ದರು. ಶ್ರೀಕೃಷ್ಣ ಅಷ್ಟೋಂದು ಫ್ಲರ್ಟ್ ಮಾಡುತ್ತಿಂದ ಎಂದು ಓದಿದರೂ ಪೂಜ್ಯ ಸ್ಥಾನದಲ್ಲಿ ನಿಲ್ಲುತ್ತಾನೆ.ಅವರ ಕಥೆಯೆಲ್ಲ ನಮ್ಮ ಸಂಸ್ಕೃತಿಯೊಳಗೆ ಧೈವತ್ವ ತೊರಿಸುತ್ತದೆ. ನಮ್ಮಲ್ಲಿ ಇನ್ನೂ ಒಂದು ನಂಬಿಕೆ ಇದೆ.ಪ್ರೀತಿ ಪ್ರೇಮ ಎಂದರೆ ಹುಡುಗ/ಹುಡುಗಿ ತುಂಬಾ ಮುಂದುವರೆದಿರುತ್ತರೆ ಎಂದು.ಇನ್ನೂ ಪ್ರೌಢಾವಸ್ಥೆಗೆ ಬರುವುದರೊಳಗೇ ಪ್ರೀತಿ-ಪ್ರೇಮಕ್ಕೆ ಬಿದ್ದು ಜೀವನ ಗೊತ್ತಾಗುವುದರೊಳಗೆ ಜೀವನ ಸಾಕಪ್ಪ ಸಾಕು ಅನಿಸುವಂತೆ ನಮ್ಮ ಯುವ ಜನಾಂಗ ಮಾಡುತ್ತಿರುವುದು ಸುಳ್ಳಲ್ಲ.ನಗರ ಪ್ರದೇಶದಲ್ಲಿ ಸುತ್ತಾಡಿದಷ್ಟು ಜೋಡಿಗಳ ದರ್ಶನ ಸಿಕ್ಕೇಸಿಕ್ಕುತ್ತದೆ.ಇಂದು ಪ್ರೀತಿ ಎನ್ನುವುದು ಸಾರ್ವಜನಿಕವಾಗಿ ಬಂದು ಬಿಟ್ಟಿದೆ.ಆಕೆಯ ಕಂಕುಳಲ್ಲಿ ಇತನ ಕೈ ಇದ್ದರೆ ಈಕೆಯ ಕೈ ಕೂಡ ಆತನ ಸೊಂಟದ ಮೇಲೆ ಇರುತ್ತದೆ.ಬಸ್ ನಲ್ಲಂತೂ ಜೋಡಿಗಳು ಬಂದು ಬಿಟ್ಟರೆ ಅದು ಅವರ ಮನೆಯ ಸ್ವತಂತ್ರ ಜಾಗ ಎಮ್ಬಂತೆ ವರ್ತಿಸುವುದು ಸುಳ್ಳಲ್ಲ.ಪ್ರೀತಿ ಪ್ರೇಮ ಬೇಕು.ಅದು ಜೀವನದ ಅಂಗ.ಆಕೆಯ ಮೌನ,ಈತನ ಕೋಪ,ಆಕೆಯ ನೋಟಕ್ಕೆ ಕಾದು ಸುಸ್ತಾದವನಿಗೆ ಅಮೃತಸಿಂಚನ ಸಿಂಪಡಿಸುವ ಆಕೆಯ ಭೇಟಿ,ರೋಮಾಂಚನದ ಒಗ್ಗರಣೆಗೆ ಹಾಗೆ ಸುಮ್ಮನೆ ಒಂದು ಸುಮ್ಮನೆ ಸ್ಪರ್ಶ ಇದೇಲ್ಲ ಬೇಕು.ಆದರೆ ನಮ್ಮ ಪ್ರೀತಿಯನ್ನು ಇಡೀ ಸಾರ್ವಜನಕಿವಾಗಿ ತೋರಿಸುತ್ತ ಹೋದರೆ ಅಸಹ್ಯಕ್ಕೆ ಒಳಗಾಗುವುದು ನಾವು ಮತ್ತು ನಮ್ಮ ಪ್ರೀತಿ ಅಲ್ಲವೇ? ಅದಕ್ಕೇನೊ ನಮ್ಮ ಹಿರಿಯರು ಪ್ರೀತಿ ಅಂದರೆ ಅದೇಕೊ ತಪ್ಪು ಅರ್ಥಮಾಡಿಕೊಳ್ಳುತ್ತಿರುವುದು.

ಇಂದು ಪ್ರೇಮಿಗಳ ದಿನ ಕ್ಕೆ ವಿಶೇಷ ಅರ್ಥ ಬಂದು ಬಿಟ್ಟಿದೆ.ಅದಕ್ಕೆ ಕಾರಣವಾಗಿದ್ದು ಶ್ರೀರಾಮ ಸೇನೆ!. ಮಂಗಳೂರಿನ ಪಬ್ ದಾಳಿ ನಂತರ ಮತ್ತಷ್ಟು ಕೆಂಡಮುಂಡಾಲಾಗಿರುವ ಅದು ಪ್ರೇಮಿಗಳ ದಿನಾಚರಣೆಯಂದು ಶುದ್ಧ ಪ್ರೇಮಕ್ಕೆ ಕಂಕಣಬದ್ಧವಾಗಿ ಆಚರಿಸಲು ಕರೆ ನೀಡಿದರೆ,ನಿಮ್ಮಗಿಷ್ಟ ಬಂದಂತೆ ಆಚರಿಸಿ ನಿಮ್ಮ ಬೆಂಬಲಕ್ಕೆ ನಾವಿದ್ದೆವೆ ಎಂದು ಇನ್ನೋಂದು ಗುಂಪು "ಕಾಲ್ ಸೆಂಟರ್" ತೆರೆದು ಅನುಕೂಲ ಮಾಡಿಕೊಡುತ್ತಿದೆ.
ಅಷ್ಟೆ ಅಲ್ಲ.
ಮುತಾಲಿಕ್ ಗೆ ಮತ್ತು ಶ್ರೀರಾಮ ಸೇನೆಗೆ ಹೆಂಗಳೆಯರು ತೊಡುವ ಒಳಉಡುಪನ್ನು [ಚಡ್ಡಿ] ಉಡುಗೊರೆಯಾಗಿ ನೀಡಲು ಹೆಂಗಳೆಯರ ಗುಂಪು ರೇಡಿಯಾಗಿದೆ.ನಮ್ಮ ಭಾರತೀಯರ ಶುದ್ಧ ಪ್ರೀತಿ ಚಡ್ಡಿ ತನಕ ಬಂದಿದೆ.!!

ಆದರೂ ಮನಸಲ್ಲಿ ಪ್ರೀತಿ ಎಂದರೆ ಇಷ್ಟೇನಾ ಎಂಬ ಪ್ರಶ್ನೆ ಉಳಿದು ಬಿಡುತ್ತದೆ.ಆಕೆಯ ಮುಗ್ದ ನಗು,ಬೊಗಸೆ ತುಂಬ ಪ್ರೀತಿ,ಅವಳೋಂದಿಗಿನ ವಿರಸದ ಗಳಿಗೆ,ಅವಳ ಮೇಲಿನ ಹುಸಿಗೋಪ ಹೀಗೆ ಪ್ರೀತಿಯ ಮಧುರ ಅನುಭೂತಿ ಜೀವನ ತುಂಬ ಉಳಿದು ಬಿಡುತ್ತದೆ.
ಪ್ರೀತಿಗೆ ಉತ್ತರ ಕೊಡುವವರಾರು?

3 ಕಾಮೆಂಟ್‌ಗಳು:

Ittigecement ಹೇಳಿದರು...

ನಿತಿನ್...

ಶುದ್ಧ ಪ್ರೇಮದ ದಿನ ಆಚರಿಸಿದರೆ ಎಲ್ಲರೂ ಬೆಂಬಲಿಸುತ್ತಾರೆ...

ಪ್ರೇಮ, ಕಾಮದ ವ್ಯತ್ಯಾಸ ತಿಳಿಯದೆ..

ಹದಿಹರೆಯದ.. ಮದಿರೆ, ನೀರೆಯ ಅಮಲಿನ

ಪ್ರೇಮದ ದಿನಾಚರಣೆ..

ಯಾರು ಬೆಂಬಲಿಸುತ್ತಾರೆ..?

ಪ್ರೇಮದ ಆಚರಣೆಯ ಹೆಸರಲ್ಲಿ ಅಸಹ್ಯ ಇರಬಾರದು

ಸಹ್ಯವಾಗಿರಬೇಕು..

ಚಂದವಾದ.. ಲೇಖನ..
ಇಷ್ಟವಾಯಿತು...

ಅಭಿನಂದನೆಗಳು...

Santhosh Rao ಹೇಳಿದರು...

ನಿತಿನ್ ,

ಬರಹ ತುಂಬ ಚೆನ್ನಾಗಿದೆ.. ಇಷ್ಟ ಆಯಿತು..

ಪ್ರೀತಿ ಒಂದು ಮೂಲಭೂತವಾದ ಇಚ್ಚಾ ಕ್ರಿಯೆ ಆಗಿರಬೇಕು.

ಈ ಪ್ರೀತಿ ಪ್ರೇಮ ಬರಿ ವ್ಯಾಲನ್ ಟೈನ್ಸ್ ಗೆ ಮಾತ್ರ ಸೀಮಿತವಾಗಿರಬಾರದಷ್ಟೇ .

ಇನ್ನು ಚಡ್ಡಿ ಪ್ರಸಂಗ ಅಸಹ್ಯ , ಅದು ಮನುಷ್ಯನ ಹುಚ್ಚಾಟದ ಅತಿರೇಖತನ. They have sick mentality

Unknown ಹೇಳಿದರು...

u r written very nicely i c say abt u these much only