ಮಂಗಳವಾರ, ಫೆಬ್ರವರಿ 3, 2009
ಶಂಭು ಹೆಗಡೆ ಇನ್ನಿಲ್ಲ;ಕಲಾವಿದನಿಗೆ ಇಂಥ ಸಾವು ಸಿಗುವುದೇ?
ರಾಜ್ಯದ ಹೆಮ್ಮೆಯ ಯಕ್ಷಗಾನ ಕಲಾವಿದ ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಬೆಳಗಿನ ಜಾವ ತವರು ಜಿಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ನಿಧನರಾದರು.
ಯಕ್ಷಗಾನ ಸಾರಸ್ವತ ಲೋಕಕ್ಕೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದ ಶಂಭು ಹೆಗಡೆ ಅವರು,ತಮ್ಮ ನಿಧನದಲ್ಲೂ ಯಕ್ಷಗಾನ ಬಿಡಲಿಲ್ಲ.ದೇವರಿಗೂ ಅವರನ್ನು ಹಾಗೆ ಕರೆದುಕೊಂಡು ಹೋಗಲು ಮನಸಿರಲಿಲ್ಲವೇನೊ?. ನಿನ್ನೆ ರಥ ಸಪ್ತಮಿಯ ಅಂಗವಾಗಿ ತಮ್ಮ ಹುಟ್ಟೂರಿನ ಸನಿಹ ವಿರುವ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರೆ ನಡೆದ ಅವರದ್ದೇ ಮೇಳದ [ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ] ಯಕ್ಷಗಾನದಲ್ಲಿ ಪಾತ್ರ ಹಾಕಿ, ಯಕ್ಷಗಾನ ಕುಣಿಯುತ್ತಿದ್ದಾಗಲೇ ಕುಸಿದು ಬಿದ್ದು ತಮ್ಮ ಬದುಕಿಗೆ ಇತಿಶ್ರೀ ಹಾಡಿದರು.ಒಬ್ಬ ಕಲಾವಿದ ಇಂಥ ಸಾವನ್ನೇ ಅಲ್ಲವೇ ಅಪೇಕ್ಷೀಸುವುದು?ತಮ್ಮ ಜೀವವನ್ನೇ ಮುಡುಪಾಗಿಟ್ಟ ಕ್ಷೇತ್ರದಲ್ಲಿ ತನ್ಮಯತೆ ಯಿಂದ ಕೆಲ್ಸ ಮಾಡುತ್ತಿದ್ದಾಗ ಅದೇಷ್ಟು ಜನರಿಗೆ ಇಂಥ ಭಾಗ್ಯ ಸಿಕ್ಕಿತೊ?
ನಿನ್ನೆ ರಾತ್ರೆ ಇಡಗುಂಜಿಯಲ್ಲಿ ನಡೆದ ಯಕ್ಷಗಾನದಲ್ಲಿ "ಲವ-ಕುಶರ ಕಾಳಗ" ದಲ್ಲಿ ರಾಮನ ಪಾತ್ರವನ್ನು ಹಾಕಿದ್ದ ಅವರು ಕೊನೆಯ ೧೦ ನಿಮೀಷದಲ್ಲಿ ಪ್ರದರ್ಶನ ಮುಗಿಯ ಬೇಕೆಂದಾಗ ನಿಧನರಾದರು.ವಾಲ್ಮಿಕಿ ಯ ಪ್ರವೇಶವಾಗಿ, ರಾಮ ಲವ-ಕುಶರು ತನ್ನ ಮಕ್ಕಳು ,ಅವರ ಸಾಹಸ ಕೌಶಲ್ಯವನ್ನು ಬಣ್ಣಿಸುವಾಗ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು
ಶಂಬು ಹೆಗಡೆ ಅವರಿಗೆ ಯಕ್ಷಗಾನದ ಗೀಳು ರಕ್ತಗತವಾಗೇ ಬಂದಿದ್ದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಕೆರೆಮನೆಯಲ್ಲಿ ಜನನ.ಅವರ ತಂದೆ ಶಿವರಾಮ ಹೆಗಡೆ ಇಡಗುಂಜಿ ಮೆಳ ಕಟ್ಟಿ ಯಕ್ಷಗಾನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭದ್ರಬುನಾದಿ ಹಾಕಿದರು.
ಕಳೆದವರ್ಷದವರೆಗೂ ಯಕ್ಷಗಾನ ಮತ್ತು ಜಾನಪದ ರಾಜ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಇವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ,೨೦೦೧-೦೨ ರಲ್ಲಿ ಪರ್ವ ಚಲನಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮುಂತಾದ ಪ್ರಶಸ್ತಿ ಬಂದಿತ್ತು.ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
ಯಕ್ಷಗಾನ ಜನರಿಂದ ದೂರವಾಗುತ್ತಿದ್ದ ಸಂದರ್ಭದಲ್ಲಿ ಸಾಂಪ್ರದಾಯಕತೆಯನ್ನು ಬಿಡದೆ ಯಕ್ಷಗಾನ ಜನರಿಗೆ ಮತ್ತೆ ರುಚಿಸುವಂತೆ ಮಾಡಿದ್ದರು.
ಯಕ್ಷಗಾನದ ಮತ್ತೊಂದು ಶ್ರೀಮಂತ ಕೊಂಡಿ ಕಳಚಿದೆ.ಕೌರವ,ಕಿಚಕ,ನಳ,ಬಲರಾಮ,ಜರಸಂಧ,ದುರ್ಯೋಧನ
ಸಂಧಾನ ಕ್ರುಷ್ಣ ಪಾತ್ರಗಳಲ್ಲಿ ಸಾಟಿ ಇಲ್ಲದ ಅಭಿನಯ ಇವರದಾಗಿತ್ತು.ಅದೇಕೊ ಶಂಭು ಹೆಗಡೆ ಅವರು ಇಲ್ಲದ ಯಕ್ಷಗಾನ ಬಡವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
5 ಕಾಮೆಂಟ್ಗಳು:
beLigge as usual eddu ammange call maadi maataado aaga, she told that "putta, shambu hegde satt hodru ".. i was shocked to the core by listening to that news...
Yakshagaana lokadalli mareyalaagada tanna cHaapanna moodisi mareyaadaru.... we will miss u taata....
i had got a chance to meet him last holidays when i had been to his place.. he is such a down to earth person to be knows. A very friendly person with kids and a very comfortable person to be with... i remember the moments i spent with him everyday... it was such a nice time meeting with him...
i really cant believe he is no more.. :( every yakshagaana fans will miss u.... Kaurava na aa gHaambHeerya,rosha, kIchakana aa kuTilate, balaraama na paurusha inn munde kaaNalu sigalaaradu..
yakshagaana rangadalli ellaa paatragaLigoo sai enisidda ivaru kaarantara agalikeya novannu yakshagaana kshetradalli maresiddaru. aadare ivara agalikeya novu bahudinagaLa kaala nammannu kaaduttalE iruttade....
miss u taata... miss u....
ನಿತಿನ್...
ನಾನಗೆ ಅವರ "ಅತಿಕಾಯ ಕಾಳಗದಲ್ಲಿ"ನ
ಅತಿಕಾಯನ ಪಾತ್ರ ಬಹಳ ನೆನಪಿದೆ..
ಸ್ವರ್ಣಲಂಕೆಯ ದುರಂತವನ್ನು ಮಾತಿನಲ್ಲಿ ಸೆರೆ ಹಿಡಿದ ಅವರ ವಾಕ್ ಚಾತುರ್ಯ, ಅಭಿನಯಕ್ಕೆ ಮಾರುಹೋಗಿದ್ದೇನೆ...
ಅವರು ಯಾವುದೇ ಪಾತ್ರವನ್ನು.. ಪೋಷಿಸಿ..,ಬೆಳೆಸಿ..,
ಪೌರಾಣಿಕ ಚೌಕಟ್ಟಿನಲ್ಲಿಯೇ ಇರುವ..
ಅಪರೂಪದ ಕಲಾವಿದ..
ಅದಕ್ಕೊಂದು ಶಾಸ್ತ್ರೀಯ ಸ್ಥಾನ ಕಲ್ಪಿಸುವಲ್ಲಿ ಅವರ ಸ್ಥಾನ ದೊಡ್ಡದು...
ಮೂಲ ಯಕ್ಷಗಾನ ಪದ್ಧತಿಯನ್ನು ಬಿಡದೆ ಅದರಲ್ಲೇ ಪ್ರಯೋಗ ಮಾಡಿದ ಹಿರಿಮೆ ಅವರದು..
ಯಾವುದೇ ಕಲಾವಿದ ಬಯಸುವ ಸಾವದು..!
ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ..!
ಮಹಾನ್ ಕಲಾವಿದರು ಸುಳ್ಯದಲ್ಲಿ ಮೊನ್ನೆ ನಡೆದ ಯಕ್ಷಗಾನ ಅಕಾಡೆಮಿಯ ಮೊದಲ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಡಿದ ಭಾಷಣ ಇನ್ನೂ ಕಿವಿಯೊಳಗೆ ಗುಂಯ್ಯ್ ಗುಟ್ಟುತ್ತಿದೆ.ಅವರ ಭಾಷಣದ ಆಳ ಅಗಾಧವಾಗಿತ್ತು ಹಾಗೂ ಮುಂದೆ ಆಗಬೇಕಾದ ಕಾರ್ಯಗಳು ಸ್ಪಷ್ಠವಾಗಿತ್ತು.
ಇಂದು ಬೆಳಗ್ಗೆ ಪ್ಲಾಶ್ ನ್ಯೂಸ್ ನೋಡಿ ಬೇಸರವಾಯಿತು.
ಅಗಲಿದ ಚೇತನಕ್ಕೆ ಚಿರಶಾಂತಿ ....
ಶ್ರೀ ರಾಮ ನಿರ್ಯಾಣದ ಕಥಾ ಪ್ರಸಂಗದಲ್ಲಿ ಶ್ರೀ ರಾಮನೇ ಸ್ವರ್ಗಕ್ಕೆ ಹೋಗುವಂತಹ ಹೃದಯ ವಿದ್ರಾವಕ ಸನ್ನಿವೇಶವದು.ಶ್ರೀ ರಾಮನ ಆಜ್ಞೆಯಂತೆ ಲಕ್ಷ್ಮಣನು ಆತ್ಮಾಹುತಿಗೆ ಹೋಗುವಂತಹ ಭಾವನಾತ್ಮಕ ಕಥಾ ಪ್ರಸಂಗವದು.ಇಂತಹ ಪ್ರಸಂಗದಲ್ಲಿ ಯಾವತ್ತು ಶ್ರೀರಾಮನ ಪತ್ರವನ್ನ ಮಾಡುತ್ತಿದ್ದ ನಮ್ಮ ಹವ್ಯಕ ಸಮಾಜದ ಕಲಾ ದಿಗ್ಗಜರಲ್ಲಿ ಒಬ್ಬರಾದ ಸನ್ಮಾನ್ಯ ಶಂಬು ಹೆಗಡೆ ಯವರು ಇ ಪಾತ್ರವನ್ನ ಮಾಡುತ್ತಿದ್ದ ಸಂಧರ್ಭದಲ್ಲಿ ತನ್ನ ಒಡನಾಡಿಗಳಿಗೆ ಹೇಳುತ್ತಿದ್ದರಂತೆ ಶ್ರೀರಾಮ ಸ್ವರ್ಗಕ್ಕೆ ಹೋಗುವಾಗ ನನಗು ಸ್ವರ್ಗಕ್ಕೆ ಹೋದಂತಾಗುತ್ತದೆ ಎಂದು.ಇದು ಅವರ ಜೀವನದ ವಿಪರ್ಯಾಸ.ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ಶ್ರೀರಾಮ ನಿರ್ಯಾಣದ ಪ್ರಸಂಗದ ಪಾತ್ರದಲ್ಲೇ ಶ್ರೀರಾಮನ ಅವತಾರ ಮುಗಿಯುತ್ತಿದ್ದಂತೆ ಅವನು ಸ್ವರ್ಗಕ್ಕೆ ಹೋಗುವಾಗ ಅವನ ಜೊತೆಗೆ ಶಂಭು ಹೆಗಡೆಯವರು ಅವರ ಪಾತ್ರದಲ್ಲಿ ತಲ್ಲೀನನಾಗಿ ಶ್ರೀ ರಾಮನ ಪಾದದಡಿಯಲ್ಲಿ ಸೇರಿದ್ದಾರೆ.ಅವರ ಕೊನೆಯ ಮಾತು ವೇದಿಕೆಯಲ್ಲಿ ಶ್ರೀರಾಮ ವೀರನಾಗಿಯೇ ಬಂದದ್ದು ವೀರನಾಗಿಯೇ ಹೋಗುತ್ತೇನೆ ಎಂದು.
ಇಂತಹ ಹವ್ಯಕ ಸಮುದಾಯದ ಹಿರಿಯ ತಲೆಮಾರಿನವರು ಈಗ ಇತಿಹಾಸ.ಈಗ ಅವರ ನೆನಪು ಮಾತ್ರ ಉಳಿದಿದೆ.ಮುಂದಿನ ಪೀಳಿಗೆಗೆ ಶಂಭು ಹೆಗಡೆ ಯಂತವರು ಶ್ರೀರಾಮನ ಪಾತ್ರದ ಅವತಾರದಲ್ಲಿ ಮತ್ತೆ ಹುಟ್ಟಿ ಬರಲಿ.ಹವ್ಯಕ ದಿಗ್ಗಜರಲ್ಲಿ ಒಬ್ಬರಾದ ಶ್ರೀ ರಾಮಕೃಷ್ಣ ಹೆಗಡೆ ಯಂತವರನ್ನು ಕಳೆದು ಕೊಂಡಿದ್ದೇವೆ.ಹೀಗೆ ಅನೇಕ ಹವ್ಯಕ ಸಮುದಾಯದ ದಿಗ್ಗಜರನ್ನು ಕಳೆದುಕೊಳ್ಳುತ್ತಿದ್ದೇವೆ.
ಮುಂದಿನ ಪೀಳಿಗೆಗೆ ಇಂತಹ ದಿಗ್ಗಜರು ಮತ್ತೆ ಹುಟ್ಟಿ ಬರಲಿ ಎಂದು ಅದೆವರಲ್ಲಿ ಕೇಳಿಕೊಳ್ಳುತ್ತೇನೆ .
ಹವ್ಯಕ ಸಮುದಾಯದ ಪ್ರತಿ ಒಬ್ಬ ಯುವಕರು ತಮ್ಮದೇ ಅದ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಹವ್ಯಕ ಯುವಕರನ್ನ ಹುರಿದುಂಬಿಸುತ್ತಾ................
ನಿತಿನ್,
ನೀವು ನನ್ನ ಬ್ಲಾಗಿಗೆ ಬಂದಾಗ ನನಗೆ ಖುಷಿಯಾಗಿತ್ತು...ನಿಮ್ಮ ಬ್ಲಾಗಿಗೆ ಬರಲು ಬಿಡುವಾಗಿರಲಿಲ್ಲ...ಇನ್ನು ಮುಂದೆ ನಿಮ್ಮ ಬ್ಲಾಗಿಗೆ ಬರುತ್ತಿರುತ್ತೇನೆ.....ಲಿಂಕಿಸಿಕೊಳ್ಳುತ್ತೇನೆ....
ಕೆರೆಮನೆ ಒಬ್ಬ ಮಹಾನ್ ಕಲಾವಿದ....ಅವರ ನಿಧನದಿಂದಾಗಿ ಯಕ್ಷಗಾನಕ್ಕೆ ತುಂಬಲಾರದ ನಷ್ಟವಾಗಿದೆ...
ಆಹಾಂ ! ನನ್ನ ಬ್ಲಾಗಿನಲ್ಲಿ ಪುಟ್ಟ ಪುಟ್ಟ ಸಂತೋಷಗಳ [ಭೂಪಟದ ನಂತ್ರ]ಹೊಸ ಲೇಖನವಿದೆ....ಬನ್ನಿ ಸಂತೋಷವನ್ನು ಹಂಚಿಕೊಳ್ಳಿ.....
ಕಾಮೆಂಟ್ ಪೋಸ್ಟ್ ಮಾಡಿ