ಬುಧವಾರ, ಫೆಬ್ರವರಿ 25, 2009

ಶೋಭಾ ಯಡ್ಡಿಯ ಹಸ್ತ ಮುಟ್ಟಲು ಹೋಗಿರಲಿಲ್ಲ!!ಆದರೆ...


ದಿನಾಂಕ ೨೪ ರ ದಿನ ಪತ್ರಿಕೆ ಓದಿದವರಿಗೆ ಖಂಡಿತ ಶಾಕ್ ಹೊಡೆಸಿಕೊಳ್ಳದೆ ಇದ್ದವರು ಕಡಿಮೆ!!.ಕಾರಣ ಗೋಕರ್ಣ ಶ್ರೀ ಮಹಾಭಲೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶೋಭಾ.. ಹಿಂದೂ ಸಂಪ್ರದಾಯದಲ್ಲಿ ಗಂಡ ಪೂಜೆ ಮಾಡುವಾಗ ಅದರ ಪಾಲು ತನಗೂ ಸಿಗಲಿ ಎಂದು ಹಸ್ತ ಮುಟ್ಟಿಕೊಳ್ಳುತ್ತಾಳೆ ಹೆಂಡತಿ.!ಫೋಟೊ ತೆಗೆಯುವಾಗಿನ "ಆ ಸೆಕೆಂಡಿಗೆ" ಸಿಕ್ಕಿ ಹಾಕಿಕೊಂಡ [?!] ಶೋಭಾ ಯಡಿಯೂರಪ್ಪನವರ ಹಸ್ತ ಮುಟ್ಟಲು ಹೋಗಿದ್ದು ಜಗಜ್ಜಾಹೀರಾಯಿತು!!

ಯಡಿಯೂರಪ್ಪನವರ ಪಕ್ಕ ಇದ್ದ ಶೋಭಾ ಆ ಗಂಗ ಜಲದ ಪಾತ್ರೆಯನ್ನು ಇತರರಂತೆ ಮುಟ್ಟಿ ಪಾವನ ಆಗಲು ಕೈ ಹಾಕಿದರು. ಕುಮಾರಿ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಎಂದರೆ ಎಲ್ಲರೂ ಏನೋ ಗುಸು ಗುಸು ಆರಂಭಿಸುತ್ತಾರೆ.ಆಗಾಗ ನಡೆಯುವ ವಿದ್ಯಮಾನಗಳು ಇದಕ್ಕೆ ಸಾಕ್ಷಿ ಒದಗಿಸಿರುತ್ತದೆ."ಏನಿಲ್ಲಾ... ಏನಿಲ್ಲಾ... ನಮ್ಮಿಬ್ಬರ ನಡುವೆ ಏನಿಲ್ಲ "ಎಂದು ಕಾಮೇಂಟ್ ಕೊಟ್ಟರೂ ಅಲ್ಲೊಂದು ಇಲ್ಲೊಂದು ನಿದರ್ಶನಗಳು ಸಿಗುತ್ತಲೆ ಇರುತ್ತದೆ.ಅವರಲ್ಲಿ ಅಂಥ ಭಾವನೆ ಇರದಿದ್ದರೂ ನೋಡುಗರ ಕಣ್ಣಿಗೆ ಹಾಗೆ ಕಾಣುತ್ತಾರೆ.!
ಇರ್ಲಿ ಬಿಡಿ ನೋಡಿ ನಮಗೂ ಅಭ್ಯಾಸ,ಕೇಳಿಸಿಕೊಂಡು ಅವರಿಗೂ ಅಭ್ಯಾಸವಾಗಿ ಬಿಟ್ಟಿದೆ!.ನಿನ್ನೆ ಆಗಿದ್ದು ಅದೇ.. ಪಾಪ ಶೋಭಾ ಕರಂದ್ಲಾಜೆ ಗೋಕರ್ಣದ ಮಹಾಬಲೇಶ್ವರನಿಗೆ ಯಡಿಯೂರಪ್ಪ ಇತರರು ಪೂಜೆ ಸಲ್ಲಿಸುತ್ತಿದ್ದಾಗ ಆತ್ಮ ಲಿಂಗಕ್ಕೆ ಗಂಗಾ ಜಲವನ್ನು ಅಭಿಷೇಕ ಮಾಡುವಾಗ ಯಡಿಯೂರಪ್ಪನವರ ಪಕ್ಕ ಇದ್ದ ಶೋಭಾ ಆ ಗಂಗ ಜಲದ ಪಾತ್ರೆಯನ್ನು ಇತರರಂತೆ ಮುಟ್ಟಿ ಪಾವನ ಆಗಲು ಕೈ ಹಾಕಿದರು.ಆದರೆ ಪೋಟೋ ಸ್ವಲ್ಪ ಬೇಗ ತೆಗೆದಿದ್ದರಿಂದ ಅಥವಾ ಅದೇ ಟೈಮ್ ಗೆ "ಕೈ" ಹಾಕಿದ್ದರಿಂದ ಯಡಿಯೂರಪ್ಪನವರ ಹಸ್ತ ಮುಟ್ಟಿದಂತೆ ಕಾಣಿಸಿಕೊಂಡಿತು!! ಬೆಳ್ ಬೆಳಿಗ್ಗೆ ಪೇಪರ್ ಓದಿದವರೆಲ್ಲಾ ನೋಡಿ ಏನೇನೊ ಹೇಳಿಕೊಂಡು ನಕ್ಕಿದ್ದು ಸುಳ್ಳಲ್ಲ!!

4 ಕಾಮೆಂಟ್‌ಗಳು:

  1. ಹ್ಹಾ...ಹ್ಹಾ...!

    ಹಸ್ತ ಆದ್ರೂ ಮುಟ್ಟುಕೊಳ್ಳಿ ಬಿಡಿ..

    ಹ್ಹೀ..ಹ್ಹೀ...!

    ಪ್ರತ್ಯುತ್ತರಅಳಿಸಿ
  2. ನಿತಿನ್,

    ಅಹ...ಅಹ....ಪಾಪ ಪೋಟೋಗ್ರಫರ್ ಅನ್ನಲೋ ಅಥವಾ ಪಾಪ ಯಡ್ಡಿ ಎನ್ನಲೋ ತಿಳಿಯುತ್ತಿಲ್ಲ.....

    ಪ್ರತ್ಯುತ್ತರಅಳಿಸಿ
  3. ಆ ಫೋಟೋಗ್ರಾಫರ್ ಅನ್ನು ಇನ್ನು ಆ ದೇವರೇ ಕಾಪಾಡಬೇಕು ಯಡಿಯೂರಪ್ಪನಿಂದ :) ಎಲ್ಲೋ ಶನಿ ದೆಸೆ ಶುರುವಾಗಿರಬೇಕು ನೋಡಿ..:)

    ಪ್ರತ್ಯುತ್ತರಅಳಿಸಿ